ರಾಹುಲ್ ಜೊತೆ ಸಚಿನ್ ಪೈಲಟ್ ಮಾತುಕತೆ ಇಲ್ಲ
ನವದೆಹಲಿ: ರಾಜಸ್ಥಾನದಲ್ಲಿ ಬಂಡಾಯ ಎದ್ದಿರುವ ಕಾಂಗ್ರೆಸ್ ರಾಜ್ಯ ಮುಖ್ಯಸ್ಥ, ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ತಮಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಯೋಜನೆಗಳಿಲ್ಲ ಎಂದು 2020 ಜುಲೈ 13ರ ಸೋಮವಾರ ಸಂಜೆ ಸ್ಪಷ್ಟ ಪಡಿಸಿದರು.
ಇದರೊಂದಿಗೆ ರಾಜಿಗಾಗಿ ಪಕ್ಷ ನಡೆಸುತ್ತಿರುವ ಯತ್ನಗಳಿಗೆ ತಾವು ಸ್ಪಂದಿಸುವುದಿಲ್ಲ ಎಂಬ ಸುಳಿವನ್ನು ಪೈಲಟ್ ನೀಡಿದರು.
ಇದಕ್ಕೆ ಮುನ್ನ ರಾಹುಲ್ ಗಾಂಧಿಯವರ ನಿಕಟವರ್ತಿಗಳು ’ಸಚಿನ್ ಪೈಲಟ್ ಅವರು ರಾಹುಲ್ ಗಾಂಧಿಯವರ ಹೃದಯದಲ್ಲಿದ್ದಾರೆ. ಅವರು ಮುಕ್ತವಾಗಿ ಮಾತನಾಡುತ್ತಾರೆ ಮತ್ತು ಪರಸ್ಪರ ಗೌರವ ಹಾಗೂ ಒಲವು ಹೊಂದಿದ್ದಾರೆ’ ಎಂದು ಹೇಳಿದ್ದರು.
ಗಾಂಧಿ ಕುಟುಂಬದ ಯಾರ ಜೊತೆಗೂ ಪೈಲಟ್ ನೇರ ಸಂಪರ್ಕದಲ್ಲಿ ಇಲ್ಲ ಎಂದು ಪಕ್ಷದಲ್ಲಿನ ನಾಯಕರೊಬ್ಬರು ಕೂಡಾ ಸ್ಪಷ್ಟ ಪಡಿಸಿದರು.
ಈ ಮಧ್ಯೆ ಪೈಲಟ್ ಅವರ ಬಿಜೆಪಿ ಜೊತೆಗಿನ ಮಾತುಕತೆಗಳು ಮುಂದುವರೆದಿವೆ ಎಂದು ಕಾಂಗ್ರಸ್ ಮೂಲಗಳು ಪ್ರತಿಪಾದಿಸಿದವು.
ಮಧ್ಯವರ್ತಿಗಳ ಮೂಲಕ ಮಾತುಕತೆಗಳು ನಡೆಯುತ್ತಿವೆ ಎಂದು ನಾಯಕರೊಬ್ಬರು ಹೇಳಿದರು.
No comments:
Post a Comment