ಪ್ರಶಾಂತ ಭೂಷಣ್ಗೆ 2 ದಿನಗಳ ಸುಪ್ರೀಂ ಗಡುವು
ನವದೆಹಲಿ: ’ನೂರು ಒಳ್ಳೆಯ ಕೆಲಸಗಳನ್ನು ಮಾಡಿದ ಕಾರಣಕ್ಕಾಗಿ ಯಾರೇ ಒಬ್ಬ ವ್ಯಕ್ತಿಗೆ ಹತ್ತು ಅಪರಾಧಗಳನ್ನು ಮಾಡಲು ಪರವಾನಗಿ ನೀಡಲು ಸಾಧ್ಯವಿಲ್ಲ’ ಎಂದು 2020 ಆಗಸ್ಟ್ 20ರ ಗುರುವಾರ ಹೇಳಿದ ಸುಪ್ರೀಂಕೋರ್ಟ್ ಹೇಳಿಕೆ ಮರುಪರಿಶೀಲನೆಗೆ ವಕೀಲ ಪ್ರಶಾಂತ ಭೂಷಣ್ ಅವರಿಗೆ ಎರಡು ದಿನಗಳ ಗಡುವು ನೀಡಿತು.
’ಕ್ರಿಮಿನಲ್
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಯಾವುದೇ ದಂಡನೆಯನ್ನು ಹರ್ಷಚಿತ್ತದಿಂದ ಸ್ವೀಕರಿಸುವೆ’ ಎಂಬುದಾಗಿ
ಪ್ರಶಾಂತ ಭೂಷಣ್ ಅವರು ನೀಡಿದ ಹೇಳಿಕೆಗೆ ಸುಪ್ರೀಂಕೋರ್ಟ್ ಈ ಪ್ರತಿಕ್ರಿಯೆ ನೀಡಿತು.
ನ್ಯಾಯಮೂರ್ತಿಗಳಾದ
ಅರುಣ್ ಮಿಶ್ರಾ, ಬಿ.ಆರ್. ಗವಾಯಿ
ಮತ್ತು ಕೃಷ್ಣ ಮುರಾರಿ ಅವರ ನ್ಯಾಯಪೀಠವು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥ ಎಂಬುದಾಗಿ ಘೋಷಿತರಾಗಿರುವ ಪ್ರಶಾಂತ ಭೂಷಣ್ ಅವರಿಗೆ ವಿಧಿಸಬೇಕಾದ ಶಿಕ್ಷೆಯ ಬಗ್ಗೆ ಅಹವಾಲು ಆಲಿಸುತ್ತಿದ್ದ ಸಂದರ್ಭದಲ್ಲಿ, ಭೂಷಣ್ ಪರ ವಕೀಲರು ಭೂಷಣ್
ಹೇಳಿಕೆಯನ್ನು ಓದಿ ಹೇಳಿದರು.
ಕ್ಷಮೆ
ಯಾಚಿಸಲು ನಿರಾಕರಿಸಿದ ಭೂಷಣ್, ಎರಡು ವಿವಾದಾತ್ಮಕ ಟ್ವೀಟ್ಗಳು ತಮ್ಮ
ನಿಷ್ಠಾವಂತ ನಂಬಿಕೆಯನ್ನು ಆಧರಿಸಿವೆ ಮತ್ತು ನಾಗರಿಕನಾಗಿ ಹಾಗೂ ನ್ಯಾಯಾಲಯದ ಅಧಿಕಾರಿಯಾಗಿ ಇದು ತಮ್ಮ ಕರ್ತವ್ಯದ ಭಾಗವಾಗಿದೆ ಎಂದು ಸಮರ್ಥಿಸಿದರು.
ಈ
ಹೇಳಿಕೆಯನ್ನು ಮರುಪರಿಶೀಲಿಸುವಂತೆ ನ್ಯಾಯಪೀಠ ಭೂಷಣ್ ಅವರಿಗೆ ಸೂಚಿಸಿತು. ಸಂಬಂಧಪಟ್ಟ ವ್ಯಕ್ತಿಯು ಹೃತ್ಪೂರ್ವಕವಾಗಿ ಪಶ್ಚಾತ್ತಾಪದ ಭಾವವನ್ನು ತೋರಿಸಿದರೆ ಮಾತ್ರ ನ್ಯಾಯಪೀಠವು "ಅತ್ಯಂತ ಮೃದುವಾಗಿರುತ್ತದೆ"
ಎಂದು ನ್ಯಾಯಮೂರ್ತಿಗಳು ಹೇಳಿದರು.
"ಕ್ರಿಮಿನಲ್
ನ್ಯಾಯಾಂಗ ನಿಂದನೆಯು ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಆದದ್ದು ಆಗಿ ಹೋಗಿದೆ. ಆದರೆ ಸಂಬಂಧಪಟ್ಟ ವ್ಯಕ್ತಿಯು ಪಶ್ಚಾತ್ತಾ ಪಡಬೇಕು ನಾವು ಬಯಸುತ್ತೇವೆ. ವ್ಯಕ್ತಿಯು ಮರುಪರಿಶೀಲಿಸಬೇಕು’ ಎಂದು
ನ್ಯಾಯಮೂರ್ತಿ ಮಿಶ್ರ ಹೇಳಿದರು.
ಭೂಷಣ್
ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ರಾಜೀವ್ ಧವನ್ ಅವರು, ಭೂಷಣ್ ತಮ್ಮ ಟ್ವೀಟ್ಗಳಿಗೆ ಸಮರ್ಥನೀಯ
ಸಮರ್ಥನೆಯನ್ನು ನೀಡಿದ್ದಾರೆ ಮತ್ತು ಅವರ ಟ್ವೀಟ್ಗಳು ನ್ಯಾಯಾಂಗದ
ಗಾಂಭೀರ್ಯವನ್ನು ಹೇಗೆ ತಗ್ಗಿಸುತ್ತವೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದರು.
ತನ್ನ
ಮುಂದೆ ಇರುವ ವ್ಯಕ್ತಿಯು ಸಾರ್ವಜನಿಕ ಹಿತದೃಷ್ಟಿಯಿಂದ ಹಲವಾರು ಪ್ರಕರಣಗಳನ್ನು ದಾಖಲಿಸಿದ ವ್ಯಕ್ತಿ ಎಂಬುದನ್ನು
ನ್ಯಾಯಾಲಯವು ಗಮನದಲ್ಲಿರಿಸಿಕೊಳ್ಳಬೇಕು ಎಂದು ಧವನ್ ಒತ್ತಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು "ನೀವು ನೂರಾರು ಒಳ್ಳೆಯ ಕೆಲಸಗಳನ್ನು ಮಾಡಬಹುದು ಆದರೆ ಅದು ಹತ್ತು ಅಪರಾಧಗಳನ್ನು ಮಾಡಲು ನಿಮಗೆ ಪರವಾನಗಿ ನೀಡುವುದಿಲ್ಲ’ ಎಂದು
ಹೇಳಿತು.
"ಎಲ್ಲದರ
ಬಳಿಕ ಕ್ರಿಮಿನಲ್ ನ್ಯಾಯಾಂಗ ನಿಂದನೆಯನ್ನು ವರ್ಜಿಸಲು ವ್ಯಕ್ತಿಯು ಬಯಸುತ್ತಾನೆಯೇ ಎಂಬ ಪ್ರಶ್ನೆ ಇದು. ’ಲಕ್ಷ್ಮಣ ರೇಖೆ’ ಎಲ್ಲಿದೆ
ಎಂಬುದನ್ನು ವ್ಯಕ್ತಿಯು ಅರಿತುಕೊಳ್ಳಬೇಕು. ತಪ್ಪನ್ನು ಮಾqಲಾಗದ ಒಬ್ಬನೇ
ಒಬ್ಬ ವ್ಯಕ್ತಿ ಕೂಡಾ ಭೂಮಿಯ ಮೇಲೆ ಇಲ್ಲ. ಆದರೆ, ವ್ಯಕ್ತಿಗೆ ತಾನು ತಪ್ಪು ಮಾಡಿದ್ದೇನೆ ಎಂಬುದನ್ನು ತಿಳಿದುಕೊಳ್ಳಲು ವ್ಯಕ್ತಿಗೆ ಸಾಧ್ಯವಾಗಬೇಕು’ ಎಂದು
ಪೀಠ ಹೇಳಿತು.
"ಪ್ರತಿಯೊಂದಕ್ಕೂ
ಒಂದು ’ಲಕ್ಷ್ಮಣ ರೇಖೆ’ ಇದೆ.
ಅದನ್ನು ಏಕೆ ದಾಟಬೇಕು? ಸಾರ್ವಜನಿಕ ಹಿತದೃಷ್ಟಿಯಿಂದ ಒಳ್ಳೆಯ ಪ್ರಕರಣಗಳನ್ನು ಮುಂದುವರೆಸುವುದನ್ನು ನಾವು ಸ್ವಾಗತಿಸುತ್ತೇವೆ ಆದರೆ ನೆನಪಿಡಿ, ಇದು, ಈಗ ಅಪರಾಧ ಸಾಬೀತಾಗಿರುವ
ಪ್ರಕರಣ ಮತ್ತು ಗಂಭೀರ ವಿಷಯ. ನ್ಯಾಯಾಧೀಶರಾಗಿ ೨೪ ವರ್ಷಗಳಲ್ಲಿ ನಾನು
ಯಾರನ್ನೂ ನ್ಯಾಯಾಂಗ ನಿಂದನೆಗಾಗಿ ಶಿಕ್ಷೆಗೆ ಗುರಿಪಡಿಸಿಲ್ಲ, ಇದು ನನ್ನ ಮೊದಲ ಆದೇಶ’ ಎಂದು ನ್ಯಾಯಮೂರ್ತಿ ಮಿಶ್ರ ನುಡಿದರು.
’ನಿಮ್ಮ
ಹೇಳಿಕೆ ಬಗ್ಗೆ ಯೋಚಿಸಿ ಮತ್ತು ಎರಡು ದಿನಗಳ ಬಳಿಕ ಬನ್ನಿ’ ಎಂದು ಪೀಠ ಪ್ರಶಾಂತ ಭೂಷಣ್ ಅವರಿಗೆ ನಿರ್ದೇಶಿಸಿತು.
ಏತನ್ಮಧ್ಯೆ,
ಭೂಷಣ್ ವಕೀಲರಾಗಿ ಅವರು ಮಾಡಿದ ಉತ್ತಮ ಕಾರ್ಯವನ್ನು ಉಲ್ಲೇಖಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್
ಅವರು, ಭೂಷಣ್ ಅವರನ್ನು ಶಿಕ್ಷಿಸದಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು,
ಅಪರಾಧಕ್ಕೆ
ಕಾರಣವಾದ ಭೂಷಣ್ ಅವರ ಟ್ವೀಟ್ಗಳನ್ನು ಉಲ್ಲೇಖಿಸಿದ
ವೇಣುಗೋಪಾಲ್ ಅವರು, ’ಸುಪ್ರೀಂ ಕೋರ್ಟಿನಲ್ಲಿ
ಪ್ರಜಾಪ್ರಭುತ್ವದ ಕೊರತೆಯ ಬಗ್ಗೆ ಮಾತನಾಡಿದ ಐವರು ನ್ಯಾಯಾಧೀಶರ ಪಟ್ಟಿ ನನ್ನ ಬಳಿ ಇದೆ. ನ್ಯಾಯಾಂಗ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಒಂಬತ್ತು ನ್ಯಾಯಾಧೀಶರ ಪಟ್ಟಿಯೂ ನನ್ನ ಬಳಿ ಇದೆ. ಅನೇಕ ನ್ಯಾಯಾಧೀಶರು ಇದನ್ನು ಹೇಳಿದ್ದಾರೆ" ಎಂದು ಉನ್ನತ ಕಾನೂನು ಅಧಿಕಾರಿ ವಾದಿಸಿದರು.
ಆದರೆ
ಮರುಪರಿಶೀಲನಾ ಅರ್ಜಿಯನ್ನು ಆಲಿಸುತ್ತಿಲ್ಲ. ಭೂಷಣ್ ಅವರ ಅಪರಾಧ ಆದೇಶ ಊರ್ಜಿತದಲ್ಲಿದೆ ಎಂದು ನ್ಯಾಯಪೀಠವು ವೇಣುಗೋಪಾಲ್ ಅವರಿಗೆ ತಿಳಿಸಿತು.
ತನ್ನ
ಟ್ವೀಟ್ಗಳನ್ನು ಸಮರ್ಥಿಸಿ
ಭೂಷಣ್ ಅವರು ಸಲ್ಲಿಸಿರುವ ಪ್ರಮಾಣ ಪತ್ರವನ್ನು ಪರಿಶೀಲಿಸುವಂತೆ ಪೀಠವು ಅಟಾರ್ನಿ ಜನರಲ್ ಅವರನ್ನು ಕೋರಿತು. ಅವರ ಉತ್ತರವು ರಕ್ಷಣಾತ್ಮಕವಾದದ್ದೇ ಅಥವಾ ನ್ಯಾಯಾಂಗ ನಿಂದನೆಯನ್ನು ಉಲ್ಬಣಗೊಳಿಸುವಂತಹುದೇ ಎಂಬುದಾಗಿ ಪರಿಶೀಲಿಸಬೇಕಾಗಿದೆ ಎಂದು ಪೀಠ ಹೇಳಿತು.
ತೀರ್ಪಿಗಾಗಿ
ಕಾದಿರುವ ಪರಿಶೀಲನಾ ಅರ್ಜಿಯ ನಿರ್ಧಾರಕ್ಕಾಗಿ ವಿಚಾರಣೆಯನ್ನು ಮುಂದೂಡಲು ಆರಂಭದಲ್ಲಿ ನಿರಾಕರಿಸಿದ ನ್ಯಾಯಪೀಠ, ಸೋಮವಾರ ಈ ಪ್ರಕರಣವನ್ನು ಮತ್ತೆ
ಆಲಿಸುವ ನಿರೀಕ್ಷೆಯಿದೆ. "ನಾವು ಈ ವಿಚಾರಣೆಯನ್ನು ವಿಳಂಬಗೊಳಿಸಲು
ಬಯಸುವುದಿಲ್ಲ" ಎಂದು ನ್ಯಾಯಪೀಠ ಹೇಳಿತು.
No comments:
Post a Comment