Saturday, August 1, 2020

ಅಯೋಧ್ಯೆ: ಮೌನ ಮುರಿಯಲು ಪ್ರಿಯಾಂಕಾಗೆ ಆಗ್ರಹ

ಅಯೋಧ್ಯೆ: ಮೌನ ಮುರಿಯಲು ಪ್ರಿಯಾಂಕಾಗೆ ಆಗ್ರಹ

ನವದೆಹಲಿ/ ಲಕ್ನೋ: ಗಡಿಯಾರ ವೇಗವಾಗಿ ಓಡುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಭೂಮಿ ಪೂಜೆಯ ಭವ್ಯ ಸಮಾರಂಭದ ಸಿದ್ಧತೆಗಳು ಭರದಿಂದ ಸಾಗಿವೆ. ವೇಳೆಯಲ್ಲಿ ಕಾಂಗ್ರೆಸ್ ಪಕ್ಷವು ಮೌನ ಮುರಿದು ವಿಚಾರದಲ್ಲಿ ತನ್ನ ನಿಲುವನ್ನು ಸ್ಪಷ್ಟ ಪಡಿಸಬೇಕು ಎಂಬ ಆಗ್ರಹಗಳು ಕಾಂಗ್ರೆಸ್ ಪಕ್ಷದಲ್ಲಿ ಕೇಳಿ ಬರಲಾರಂಭಿಸಿವೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರು ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಿದ ವಿಡಿಯೋವೊಂದನ್ನು ಬಿಡುಗಡೆ ಮಾಡಿದರು ಮತ್ತು ಕೋವಿಡ್ -೧೯ ಸಾಂಕ್ರಾಮಿಕದ ನಡುವೆಯೇಭೂಮಿ ಪೂಜೆನಡೆಸುವ ನಿರ್ಧಾರವನ್ನು ಸಮರ್ಥಿಸಿದರು.
ನಾನು ಭೂಮಿ ಪೂಜೆಯನ್ನು ಸ್ವಾಗತಿಸುತ್ತೇನೆ. ಇದಕ್ಕಾಗಿ ಭಾರತೀಯರು ಕಾಯುತ್ತಿದ್ದಾರೆ ಮತ್ತು ನಾವೆಲ್ಲರೂ ಬಯಸುವುದು ಇದನ್ನೇ. ಇದು ಭಾರತದಲ್ಲಿ ಮಾತ್ರ ಸಾಧ್ಯಎಂದು ಆಗಸ್ಟ್ ಭವ್ಯ ಕಾರ್ಯಕ್ರಮವನ್ನು ಬೆಂಬಲಿಸಿ ಬಹಿರಂಗವಾಗಿ ಮಾತನಾಡಿದ ಕಾಂಗ್ರೆಸ್ಸಿನ ಮೊದಲ ಹಿರಿಯ ನಾಯಕ ಕಮಲನಾಥ್ ಹೇಳಿದರು.
ಆರೋಗ್ಯ ಬಿಕ್ಕಟ್ಟಿನ ಮಧ್ಯೆ ಭೂಮಿ ಪೂಜೆ ಕಾರ್ಯದ ಅಗತ್ಯವನ್ನು ಮಹಾರಾಷ್ಟ್ರದ ಕಾಂಗ್ರೆಸ್ ಮಿತ್ರ ಪಕ್ಷಗಳ ನಾಯಕರಾದ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಅವರಂತಹ ವಿರೋಧ ಪಕ್ಷದ ನಾಯಕರು ಪ್ರಶ್ನಿಸಿರುವ ಸಮಯದಲ್ಲಿ ಕಮಲನಾಥ್ ಹೇಳಿಕೆ ಅಚ್ಚರಿ ಮೂಡಿಸಿತು.
ದೀಪೇಂದ್ರ ಹೂಡಾ ಮತ್ತು ಜಿತಿನ್ ಪ್ರಸಾದ ಅವರಂತಹ ಕಾಂಗ್ರೆಸ್ಸಿನ ಅನೇಕ ಕಿರಿಯ ನಾಯಕರು ವಿಷಯದ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ಅಧಿಕೃತವಾಗಿ ಪ್ರಕಟಿಸಬೇಕು ಮತ್ತು ಕಮಲನಾಥ್ ಅವರ ನಿಲುವನ್ನು ಪಕ್ಷವು ಬೆಂಬಲಿಸಬೇಕು ಎಂದು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅನೇಕ ಕಾಂಗ್ರೆಸ್ ನಾಯಕರಂತೆ, ಗೋಡೆಯ ಮೇಲಿನ ಬರವಣಿಗೆಯನ್ನು ಕಮಲನಾಥ್ ಗಮನಿಸಿದ್ದಾರೆ.
೨೦೧೪ ಮತ್ತು ೨೦೧೯ರ ಲೋಕಸಭಾ ಚುನಾವಣೆಗಳಲ್ಲಿ ಇತರ ವಿಷಯಗಳ ಜೊತೆಗೆ ಹಿಂದುತ್ವವನ್ನು ಪ್ರಬಲವಾಗಿ ಪ್ರತಿಪಾದಿಸಿಕೊಂಡೇ ಬಿಜೆಪಿ ಅಧಿಕಾರಕ್ಕೆ ಏರಿದೆ. ಹಿಂದುತ್ವ ಕಾರ್ಯಸೂಚಿಯನ್ನು ಅಳವಡಿಸಿಕೊಳ್ಳಲು ಕಾಂಗ್ರೆಸ್ ಕೂಡಾ ತಡವಾಗಿ ಯತ್ನಿಸಿತು, ಆದರೆಅಲ್ಪಸಂಖ್ಯಾತರ ತುಷ್ಟೀಕರಣ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಅದಕ್ಕೆ ಸಾಧ್ಯವಾಗಲಿಲ್ಲ. ಇದನ್ನು ಬಿಜೆಪಿ ತನ್ನ ಅನುಕೂಲಕ್ಕೆ ತಕ್ಕಂತೆ ಸಮರ್ಥವಾಗಿಯೇ ಬಳಸಿಕೊಂಡಿತು.
ಉತ್ತರ ಪ್ರದೇಶದಲ್ಲಿ ಪಕ್ಷದ ಕಾರ್ಯತಂತ್ರ ಕುರಿತು ಇತ್ತೀಚೆಗೆ ನಡೆದ ಸಭೆಯಲ್ಲಿ ಪಕ್ಷದ ಉತ್ತರ ಪ್ರದೇಶದ ಉಸ್ತುವಾರಿ ವಹಿಸಿರುವ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಪಕ್ಷದ ಮುಖಂಡg ಅಭಿಪ್ರಾಯಗಳನ್ನು ಕೇಳಿದ್ದರು.
ಬಹುತೇಕ ಎಲ್ಲ ನಾಯಕರೂ ಕಾಂಗ್ರೆಸ್ ನೆಲದ ಮೇಲೆ ನಡೆಯುವ ಅಗತ್ಯವಿದೆ ಎಂದು ಹೇಳಿದರು. ಯೋಗಿ ಆದಿತ್ಯನಾಥ್ ಸರ್ಕಾರದ ಹಿಂದುತ್ವ ವರ್ಚಸ್ಸು, ಬಿಜೆಪಿಗೆ ಒಂದು ಆರಂಭ ನೀಡಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮುಂದುವರೆಯಲು ಬೇಕಾದಷ್ಟು ಅವಕಾಶವಿದೆ ಎಂದು ನಾಯಕರು ನುಡಿದರು.
ಸಮಾಜವಾದಿ ಪಕ್ಷವುಅಲ್ಪಸಂಖ್ಯಾತರ ತುಷ್ಟೀಕರಣದವರ್ಚಸ್ಸು ಬೆಳೆಸಿಕೊಂಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರವಾದ ಅಂಶ. ಅಲ್ಪಸಂಖ್ಯಾತರ ಮತಬ್ಯಾಂಕ್ ಕಳೆದುಕೊಳ್ಳುವ ಭೀತಿಯಿಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರಾಮಮಂದಿರ ವಿಚಾರವನ್ನು ಪ್ರಬಲವಾಗಿ ಸಮರ್ಥಿಸಿಕೊಳ್ಳಲು ಸಾಧ್ಯವಾಗದೇ ಇರುವುದು ಕಾಂಗ್ರೆಸ್ ಪಾಲಿಗೆ ವರದಾನವಾಗುತ್ತದೆ ಎಂಬ ಅಭಿಪ್ರಾಯವನ್ನು ಕಾಂಗ್ರೆಸ್ ನಾಯಕರು ನೀಡಿದರು. "ನಾವು ಅವಕಾಶವನ್ನು ಕಳೆದುಕೊಳ್ಳಬಾರದು ಮತ್ತು ರಾಮಮಂದಿರ ಭೂಮಿ ಪೂಜೆ ಬಗ್ಗೆ ನಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಬೇಕು. ಉತ್ತರ ಪ್ರದೇಶದಲ್ಲಿ ಪಕ್ಷವು ಚೇತರಿಸಿಕೊಳ್ಳಬೇಕು ಎಂಬುದಾಗಿ ಬಯಸುವುದಾದರೆ ಇದು ಅತ್ಯಂತ ಮುಖ್ಯವಾಗುತ್ತದೆ ಎಂದು ಯುವ ನಾಯಕರು ಪ್ರಿಯಾಂಕಾಗೆ ತಿಳಿಸಿದರು.
ವಾಸ್ತವವಾಗಿ, ಕಳೆದ ವರ್ಷ ಐತಿಹಾಸಿಕ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ದೇವಾಲಯದ ನಿರ್ಮಾಣವನ್ನು ಕಾಂಗ್ರೆಸ್ ಬಹಿರಂಗವಾಗಿ ಸ್ವಾಗತಿಸಿತ್ತು, ಆದರೆ ಭೂಮಿ ಪೂಜೆ ಬಗ್ಗೆ ಅದು ಮೌನವಾಗಿದೆ.
ಭೂಮಿ ಪೂಜೆಯ ಭವ್ಯ ಸಮಾರಂಭಕ್ಕೆ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಆಹ್ವಾನಿಸಲಾಗಿಲ್ಲ. ಆದರೆ, ಆಹ್ವಾನಿಸದಿದ್ದರೂ, ಅಯೋಧ್ಯೆಗೆ ಹೋಗುವ ಮೂಲಕ ಬಿಜೆಪಿ ಕಾರ್‍ಯತಂತ್ರವನ್ನು ವಿಫಲಗೊಳಿಸಬೇಕು ಎಂಬ ಅಭಿಪ್ರಾಯವನ್ನು ಜಿತಿನ್ ಪ್ರಸಾದ ಅವರಂತಹ ಅನೇಕ ಯುವ ನಾಯಕರು ವ್ಯಕ್ತ ಪಡಿಸಿದ್ದಾರೆ.
ಪಕ್ಷದಲ್ಲಿ ತಮಗಾಗಿ ಒಂದು ಸ್ಥಾನ ಸೃಷ್ಟಿಸಿಕೊಳ್ಳಲು ಯತ್ನಿಸುತ್ತಿರುವ ಹೂಡಾ ಮತ್ತು ಪ್ರಸಾದ ಅವರಂತಹ ಕಿರಿಯ ನಾಯಕರು, ಕಾಂಗ್ರೆಸ್ ಈಗ ತನ್ನ ಅಚ್ಚನ್ನು ಬದಲಾಯಿಸಬೇಕಾಗಿದೆ, ಮೌನವಾಗಿರುವುದು ಬಿಜೆಪಿಗೆ ಅನುಕೂಲಕರವಾಗುತ್ತದೆ ಎಂದು ಅರ್ಥಮಾಡಿಕೊಂಡಿದ್ದಾರೆ.
ವಾಸ್ತವವಾಗಿ, ಸೋನಿಯಾ ಗಾಂಧಿಯವರೊಂದಿಗಿನ ಸಭೆಯಲ್ಲಿ ಕೆಲವರು ರಾಮಮಂದಿರದ ಶ್ರೇಯಸ್ಸನ್ನು  ಪಡೆಯಲು ಕಾಂಗ್ರೆಸ್ ಹಿಂಜರಿಯಬಾರದು ಎಂದು ಅಭಿಪ್ರಾಯಪಟ್ಟರು. ಮೂಲತಃ ರಾಮಮಂದಿರದ ಬೀಗಗಳನ್ನು ತೆರೆದದ್ದು ರಾಜೀವ ಗಾಂಧಿಯವರೇ ಎಂದು ಕೆಲವು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಕಾರ್‍ಯದಲ್ಲಿ ಇದ್ದದ್ದು ಒಂದು ಸಣ್ಣ ಜನಸಮೂಹ ಎಂಬುದಾಗಿ ಹೇಳುವ ಮೂಲಕ ಇತಿಹಾಸಕಾರರು ಇದನ್ನು ನಿರಾಕರಿಸುತ್ತಾರಾದರೂ, ರಾಜೀವ ಗಾಂಧಿ ಅವರು ಮೌನವಾಗಿ ಇರುವ ಮೂಲಕ ಇದಕ್ಕೆ ಅವಕಾಶ ನೀಡಿದ್ದರು ಎಂದು ಯುವ ಕಾಂಗ್ರೆಸ್ಸಿಗರು ಪ್ರತಿಪಾದಿಸುತ್ತಾರೆ.
ಏನೇ ಇರಲಿ, ಕಾಂಗ್ರೆಸ್ ತನ್ನ ಬೆರಳುಗಳನ್ನು ಸುಟ್ಟುಕೊಂಡಿದೆ ಎಂಬುದು ಸತ್ಯ. ಪ್ರಿಯಾಂಕಾ ಅವರ ಉಸ್ತುವಾರಿಯೊಂದಿಗೆ, ಪಕ್ಷವು ಹತಾಶ ಸ್ಥಿತಿಯ ಬದಲಾವಣೆಗಾಗಿ ಪ್ರಯತ್ನಿಸುವುದು ಮುಖ್ಯವಾಗಿದೆ. ೨೦೧೯ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ, ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಅವರು ಕೂಡಾ ಅನೇಕ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಹಿಂದುತ್ವದ ಹಾದಿ ಹಿಡಿಯುವಲ್ಲಿ ತಾವೂ ಹಿಂದಿಲ್ಲ ಎಂದು ಬಿಂಬಿಸುವ ಯತ್ನ ಮಾಡಿದ್ದರು. ಆದರೆ ಫಲಿತಾಂಶಗಳು ತೋರಿಸಿದಂತೆ, ಇದು ಸ್ಪಷ್ಟವಾಗಿ ಸಾಕಾಗಲಿಲ್ಲ.
ಕಾಂಗ್ರೆಸ್ ಪಕ್ಷವು ಭೂಮಿ ಪೂಜೆಯನ್ನು ಬೆಂಬಲಿಸಬೇಕು. ನಾಯಕರು ಸಮಾರಂಭ ವೀಕ್ಷಿಸುವುದು ಟಿವಿಗಳಲ್ಲಿ ಮೂಡಿಬರಬೇಕು ಎಂದು ಪಕ್ಷದ ಯುವ ನಾಯಕರು ಭಾವಿಸುತ್ತಾರೆ. ಇಲ್ಲದೇ ಹೋದಲ್ಲಿ ಅವಕಾಶ ಬಳಕೆಯಲ್ಲಿ ಪಕ್ಷವು ತುಂಬಾ ಹಿಂದೆ ಬೀಳಲಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.

No comments:

Advertisement