Tuesday, August 4, 2020

ಉಕ್ಕು, ಕಬ್ಬಿಣ ಇಲ್ಲ, ಸಂಪೂರ್ಣ ಕಲ್ಲಿನ ದೇಗುಲ

ಉಕ್ಕು, ಕಬ್ಬಿಣ ಇಲ್ಲ, ಸಂಪೂರ್ಣ ಕಲ್ಲಿನ ದೇಗುಲ

ಅಯೋಧ್ಯೆಗೆ ವಾರಾಣಸಿಯಿಂದ ವಿಶೇಷ ಉಡುಗೊರೆ

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ರಾಮಮಂದಿರವು ಕಬ್ಬಿಣ ಉಕ್ಕು ರಹಿತವಾದ ಸಂಪೂರ್ಣ ಶಿಲಾ ದೇವಾಲಯವಾಗಲಿದ್ದು, ಮಂದಿರದ ಭೂಮಿಪೂಜೆಗೆ ಬಂದಿರುವ ಉಡುಗೊರೆಗಳಲ್ಲಿ ವಾರಾಣಸಿಯಿಂದ ಬಂದಿರುವ ಬೆಳ್ಳಿಯ ಅಶ್ವತ್ಥ/ ವೀಳ್ಯದ ಎಲೆಗಳು ಸೇರಿವೆ.

ಬೆಳ್ಳಿಯಿಂದ ಮಾಡಿದ ಐದು ಅಶ್ವತ್ಥ / ವೀಳ್ಯದ ಎಲೆಗಳನ್ನು ವಾರಾಣಸಿಯಿಂದ ಚೌರಾಸಿಯಾ ಸಮುದಾಯದ ಸದಸ್ಯರು ಅಯೋಧ್ಯೆಗೆ ಕಳುಹಿಸಿದ್ದಾರೆ. ಅಶ್ವತ್ಥ / ವೀಳ್ಯದ ಎಲೆಗಳನ್ನು ಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಹಿಂದೂ ಧರ್ಮದಲ್ಲಿ ಅನೇಕ ಪೂಜೆಗಳಲ್ಲಿ ಬಳಸಲಾಗುತ್ತದೆ.

ಅಯೋಧ್ಯೆಗೆ ಹೊರಟ ವೇದ, ಜ್ಯೋತಿಷ್ಯ, ಪಾಣಿನಿ ಮತ್ತು ಸಂಸ್ಕೃತ ವ್ಯಾಕರಣದ ವಿದ್ವಾಂಸರ ಸಂಘಟನೆಯಾದ ವಿದ್ವತ್ ಪರಿಷತ್ ಸದಸ್ಯರಿಗೆ ಬೆಳ್ಳಿ ಎಲೆಗಳಲ್ಲಿ ಕಾಶಿ ಚೌರಾಸಿಯಾ ಸಮುದಾಯದ ಅಧ್ಯಕ್ಷ ನಾಗೇಶ್ವರ ಚೌರಾಸಿಯಾ ನೀಡಿದರು.

ಜ್ಯೋತಿಷ್ಯ ಮತ್ತು ವ್ಯಾಕರಣದ ಮೂವರು ವಿದ್ವಾಂಸರು ರಾಮಮಂದಿರದ ಅಡಿಪಾಯ ಹಾಕುವಭೂಮಿ ಪೂಜೆಸಮಾರಂಭದ ಆಚರಣೆಗಳನ್ನು ನೋಡಿಕೊಳ್ಳಲಿದ್ದಾರೆ.

ಯಾವುದೇ ಕಬ್ಬಿಣ ಮತ್ತು ಉಕ್ಕು ರಹಿತವಾಗಿ ಇಡೀ ಮಂದಿರವನ್ನು ಶಿಲೆಗಳಿಂದ ನಿರ್ಮಿಸಲಾಗುವುದು ಎಂದು ದೇವಾಲಯ ನಿರ್ಮಾಣ ಕಾರ್ಯಾಗಾರದ ಮೇಲ್ವಿಚಾರಕರು ಹೇಳಿದ್ದಾರೆ.

ದೇವಾಲಯದ ನಿರ್ಮಾಣ ಕಾರ್ಯಾಗಾರದ ಮೇಲ್ವಿಚಾರಕ ಅನು ಭಾಯ್ ಸೊಂಪುರಾ, ‘ನಾನು ೩೦ ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಶಿಲೆಗಳು ಇಲ್ಲಿವೆ, ಇತರ ಶಿಲೆಗಳು ರಾಜಸ್ಥಾನದಿಂದ ಬರುತ್ತವೆ. ಸರಳ ಶಿಲೆಗಳು ಬರುತ್ತವೆ ಮತ್ತು ಕತ್ತರಿಸುವ ಕೆಲಸ ಇಲ್ಲಿ ನಡೆಯಲಿದೆ. ನಮ್ಮಲ್ಲಿ ಎರಡು ಯಂತ್ರಗಳಿವೆ, ಅದು ಕಲ್ಲು ಕತ್ತರಿಸುತ್ತz’ ಎಂದು ಹೇಳಿದರು.

"ಯಾವುದೇ ಕಬ್ಬಿಣವನ್ನು ಬಳಸಲಾಗುವುದಿಲ್ಲ, ಮರ, ತಾಮ್ರ ಮತ್ತು ಬಿಳಿ ಸಿಮೆಂಟ್ ಬಳಸಲಾಗುತ್ತದೆಎಂದು ಅವರು ಹೇಳಿದರು.

ಹನುಮಾನ್ ಗರ್ಹಿ ಮಂದಿರದ ಮಹಂತ ರಾಜು ದಾಸ್ ಅವರು, ’ಕಲ್ಲುಗಳು ದೀರ್ಘಕಾಲೀನವಾಗಿರುವುದರಿಂದ ದೇವಾಲಯವನ್ನು ಕಲ್ಲುಗಳಿಂದ ನಿರ್ಮಿಸಬೇಕು ಎಂದು ಟ್ರಸ್ಟ್ ನಿರ್ಧರಿಸಿದೆ. ಹನುಮಾನ್ ಗರ್ಹಿ ಮಂದಿರವನ್ನು ಕ್ರಿ. ೧೧೬೪ ರಲ್ಲಿ ಕಲ್ಲಿನಿಂದಲೇ ನಿರ್ಮಿಸಲಾಗಿದೆ. ಜನರು ನೀಡುವ ಚಿನ್ನ, ಬೆಳ್ಳಿ ಮತ್ತು ತಾಮ್ರವನ್ನು ದೇವಾಲಯದ ಅಡಿಪಾಯದಲ್ಲಿ ಇಡಲಾಗುತ್ತದೆಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ ರಂದು ಅಯೋಧ್ಯೆಯ ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಲಿದ್ದಾರೆ ಎಂದು ದೇವಾಲಯದ ಟ್ರಸ್ಟ್ ಅಧ್ಯಕ್ಷ ಮಹಂತ ನೃತ್ಯ ಗೋಪಾಲ್ ದಾಸ್ ತಿಳಿಸಿದ್ದಾರೆ.

ಸಮಾರಂಭದ ನಂತರ ನಿರ್ಮಾಣ ಪ್ರಾರಂಭವಾಗಲಿದ್ದು, ಇದರಲ್ಲಿ ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವ ಸಂಪುಟದ ಸಚಿವರು ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಇತರರು ಭಾಗವಹಿಸುವ ಸಾಧ್ಯತೆ ಇದೆ.

No comments:

Advertisement