My Blog List

Thursday, August 6, 2020

ರಾಮಮಂದಿರ ಭೂಮಿ ಪೂಜೆ: ವಿಶ್ವದಾದ್ಯಂತ ವ್ಯಾಪಕ ವೀಕ್ಷಣೆ

ರಾಮಮಂದಿರ ಭೂಮಿ ಪೂಜೆ: ವಿಶ್ವದಾದ್ಯಂತ ವ್ಯಾಪಕ ವೀಕ್ಷಣೆ

ನವದೆಹಲಿ: ಆಗಸ್ಟ್ ರಂದು ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದ ನೇರ ಪ್ರಸಾರವನ್ನು ವಿಶ್ವದಾದ್ಯಂತ ವ್ಯಾಪಕವಾಗಿ ವೀಕ್ಷಿಸಲಾಗಿದ್ದು, ಇಂಗ್ಲೆಂಡ್, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಥೈಲ್ಯಾಂಡ್, ನೇಪಾಳ ಮತ್ತು ಇತರ ಹಲವಾರು ದೇಶಗಳ ದೂರದರ್ಶನ ಕೇಂದ್ರಗಳು ಪ್ರಸಾರ ಮಾಡಿದ್ದವು.

ಅನೇಕ ಕ್ಯಾಮೆರಾಗಳು, ಹೊರಗಿನ ಪ್ರಸಾರ (ಒಬಿ) ಮತ್ತು ಡಿಜಿಟಲ್ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್ (ಡಿಜಿಟಲ್ ಉಪಗ್ರಹ ಸುದ್ದಿ ಸಂಗ್ರಹ- ಡಿಎಸ್‌ಎನ್‌ಜಿ) ವ್ಯಾನ್‌ಗಳ ಬಳಕೆಯ ಮೂಲಕ ಮುಖ್ಯ ಪ್ರಸಾರವನ್ನು ದೂರದರ್ಶನ ನಿರ್ವಹಿಸಿತ್ತು.

ಜನರು ಕಾರ್ಯಕ್ರಮವನ್ನು ಯೂಟ್ಯೂಬ್ ಮೂಲಕವೂ ವೀಕ್ಷಿಸಿದರು. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ನೆದರ್‌ಲ್ಯಾಂಡ್ಸ್, ಜಪಾನ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಎಇ, ಸೌದಿ ಅರೇಬಿಯಾ, ಒಮಾನ್, ಕುವೈತ್, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷ್ಯಾ, ಇಂಡೋನೇಷ್ಯಾ, ಥೈಲ್ಯಾಂಡ್, ಫಿಲಿಪೈನ್ಸ್, ಸಿಂಗಾಪುರ, ಶ್ರೀಲಂಕಾ ಮತ್ತು ಮಾರಿಷಸ್ ದೇಶಗಳಲ್ಲಿ ಅತ್ಯಂತ ಹೆಚ್ಚು ಮಂದಿ ಕಾರ್‍ಯಕ್ರಮ ವೀಕ್ಷಿಸಿದ್ದಾರೆ ಎಂದು ದೂರದರ್ಶನವು 2020 ಆಗಸ್ಟ್ 06ರ ಗುರುವಾರ ತಿಳಿಸಿತು.

ಭಾರತದಲ್ಲಿ, ೨೦೦ ಕ್ಕೂ ಹೆಚ್ಚು ಚಾನೆಲ್‌ಗಳು ಕಾರ್ಯಕ್ರಮವನ್ನು ಪ್ರಸಾರ ಮಾಡಿವೆ ಎಂದು ದೂರದರ್ಶನ ಹೇಳಿತು.

ಕಾರ್‍ಯಕ್ರಮದ ಸಿಗ್ನಲ್‌ಗಳನ್ನು ಸುದ್ದಿ ಸಂಸ್ಥೆ ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್ (ಎಎನ್‌ಐ) ಮೂಲಕ ಸುಮಾರು ೧೨೦೦ ಸ್ಟೇಷನ್‌ಗಳಿಗೆ ಮತ್ತು ಅಸೋಸಿಯೇಟೆಡ್ ಪ್ರೆಸ್ ಟೆಲಿವಿಷನ್ ನ್ಯೂಸ್ (ಎಪಿಟಿಎನ್) ಮೂಲಕ ವಿಶ್ವದ ೪೫೦ ಮಾಧ್ಯಮಗಳಿಗೆ ವಿತರಿಸಲಾಯಿತು. ದೂರದರ್ಶನದ ನ್ಯೂಸ್ ಆರ್ಮ್ ಡಿಡಿ ನ್ಯೂಸ್, ಏಷ್ಯಾ ಪೆಸಿಫಿಕ್ ರಾಷ್ಟ್ರಗಳೊಂದಿಗೆ ಪ್ರತ್ಯೇಕವಾಗಿ ದೃಶ್ಯಗಳನ್ನು ಹಂಚಿಕೊಂಡಿತು.

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಿಸುವ ಮೂಲಕ ಮೂರು ದಶಕಗಳ ಕಾಲ ತನ್ನ ರಾಜಕೀಯವನ್ನು ರೂಪಿಸಿದ್ದ ಬಿಜೆಪಿಯಮಂದಿರ ಆಂದೋಲನವನ್ನು ಫಲಪ್ರದಗೊಳಿಸಿದರು.

ವೇದಘೋಷ, ಶ್ಲೋಕಗಳ ಪಠಣದ ಮಧ್ಯೆ, ಪ್ರಧಾನಿ ಮೋದಿ ಶತಮಾನಗಳಿಂದ ಕಾಯಲಾಗಿರುವ ರಾಮಮಂದಿರಕ್ಕೆ ಮೊತ್ತು ಮೊದಲ ಇಟ್ಟಿಗೆಗಳನ್ನು ಶ್ರೀರಾಮನು ಜನ್ಮತಳೆದ ಸ್ಥಳ ಎಂಬುದಾಗಿ ಭಕ್ತರು ನಂಬುವ ಸ್ಥಳದಲ್ಲಿ ಇರಿಸಿ ಪೂಜೆ ನೆರವೇರಿಸಿದರು.

೧೯೯೨ ರಲ್ಲಿ ಬಾಬರಿ ಮಸೀದಿಯನ್ನು ಕರಸೇವಕರು ನೆಲಸಮಗೊಳಿಸಿದ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲು ಅನುಮತಿ ನೀಡಿ, ಸುಪ್ರೀಂಕೋರ್ಟ್ ಕಳೆದ ವರ್ಷ ತೀರ್ಪಿನಿಂದ ಸಾಧ್ಯವಾದ ಸಮಾರಂಭವು "ಶತಮಾನಗಳ ಕಾಯುವಿಕೆಯನ್ನು ಕೊನೆಗೊಳಿಸಿದೆ ಎಂದು ಪ್ರಧಾನಿ ಹೇಳಿದರು.

ಘಟನೆಯು ಭಾರತದ ಸಾಮಾಜಿಕ ಸಾಮರಸ್ಯ ಮತ್ತು ಜನರ ಉತ್ಸಾಹವನ್ನು ವ್ಯಾಖ್ಯಾನಿಸುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ರಾಮಮಂದಿರ ನಿರ್ಮಾಣವು ಧಾರ್ಮಿಕ ಸಂಬಂಧಕ್ಕಿಂತ ಹೆಚ್ಚಿನದಾಗಿದೆ ಮತ್ತು ನಿರ್ಮಾಣವು ಮಾನವೀಐ ಮೌಲ್ಯಗಳ ಅತ್ಯುತ್ತಮ ಗೌರವಾಗಿ ನಿಲ್ಲುತ್ತದೆ ಎಂದು ನುಡಿದರು.

ಉತ್ತರ ಪ್ರದೇಶದ ಅಯೋಧ್ಯಾ ದೇಗುಲ ನಗರಿಯಲ್ಲಿ ರಾಮಮಂದಿರ ಶಿಲಾನ್ಯಾಸ ಸಮಾರಂಭ ನಡೆಯಿತು. ಹನುಮಾನ್ ಗರ್ಹಿ ದೇವಸ್ಥಾನದಿಂದ ಸಮಾರಂಭದ ಸ್ಥಳಕ್ಕೆ (ರಾಮ ಜನ್ಮಭೂಮಿ) ಹೋಗುವ ರಸ್ತೆ ಸಂಜೆ ಪ್ರಕಾಶಮಾನವಾದ ದೀಪಗಳಿಂದ ಝಗಮಗಿಸಿತು. ಅಂಗಡಿಗಳು, ಮನೆಗಳು ಮತ್ತು ಅತಿಥಿ ಗೃಹಗಳ ಹೊರಗೆ ಹಣತೆಗಲ್ಲಿ ದೀಪಗಳನ್ನು ಬೆಳಗಿಸಲಾಯಿತು.

ಕೆಲವರು ದೇಗುಲ ನಗರಿಯಲ್ಲಿ ಪಟಾಕಿ ಸಿಡಿಸಿ ಸಂಬ್ರಮ ಆಚರಿಸಿದರು.

೧೯೯೦ರಲ್ಲಿ ರಾಮಮಂದಿರ ನಿರ್ಮಾಣಕ್ಕೆ ಜನ ಬೆಂಬಲ ಕ್ರೋಡೀಕರಿಸಲು ಅಂದಿನ ಬಿಜೆಪಿ ಅಧ್ಯಕ್ಷ ಲಾಲ್ ಕೃಷ್ಣ ಅಡ್ವಾಣಿ ಅವರು ಸೋಮನಾಥದಿಂದ ಅಯೋಧ್ಯೆಯವರೆಗೆ ರಾಮರಥ ಯಾತ್ರೆ ಕೈಗೊಂಡಿದ್ದರು.

No comments:

Advertisement