Saturday, August 8, 2020

ಸಹ ಪೈಲಟ್ ಪತ್ನಿಗೆ ಗೊತ್ತೇ ಇಲ್ಲ.. ಪತಿಯ ಸಾವಿನ ಸುದ್ದಿ..!

 ಸಹ ಪೈಲಟ್ ಪತ್ನಿಗೆ ಗೊತ್ತೇ ಇಲ್ಲ.. ಪತಿಯ ಸಾವಿನ ಸುದ್ದಿ..!

ಆಗ್ರಾ: ಕೇರಳದಲ್ಲಿ  2020 ಆಗಸ್ಟ್  08ರ ಶುಕ್ರವಾರ ಸಂಜೆ ಸಂಭವಿಸಿದ ಎರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರುವ ವಿಮಾನದ ಸಹ ಪೈಲಟ್ ೩೨ ವರ್ಷದ ಅಖಿಲೇಶ್ ಶರ್ಮಾ ಅವರ ಸಾವಿನ ಸುದ್ದಿಯಿಂದ ಇಡೀ ಕುಟುಂಬ ಆಘಾತಗೊಂಡಿದೆ. ಆದರೆ ಹದಿನೈದು ದಿನಗಳಲ್ಲಿ ಮಗುವನ್ನು ನಿರೀಕ್ಷಿಸುತ್ತಿರುವ ಶರ್ಮಾ ಅವರ ಪತ್ನಿ ಮೇಘಾ (೨೯), ಅವರಿಗೆ ತನ್ನ ಗಂಡನ ಸಾವಿನ ಬಗ್ಗೆ ಇನ್ನೂ ತಿಳಿಸಲಾಗಿಲ್ಲ.

ಕುಟುಂಬವು ಉತ್ತರ ಪ್ರದೇಶದ ಮಥುರಾದ ಗೋವಿಂದ್ ನಗರ ಪ್ರದೇಶದಲ್ಲಿ ವಾಸವಾಗಿದೆ.

"ವಿಮಾನ ಅಪಘಾತದ ನಂತರ ಭೈಯಾ (ಅಖಿಲೇಶ್) ಸ್ಥತಿ ಗಂಭೀರವಾಗಿದ್ದು ಮತ್ತು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಸುದ್ದಿ ನಮಗೆ ಸಿಕ್ಕಿತು. ಆದರೆ ಶುಕ್ರವಾರ ರಾತ್ರಿ ಅವರ ಸಾವಿನ ಬಗ್ಗೆ ನಮಗೆ ತಿಳಿಸಲಾಯಿತು. ನನ್ನ ಸಹೋದರ ಭುವನೇಶ್ ಮತ್ತು ಸೋದರ ಮಾವ ಸಂಜೀವ್ ಶರ್ಮಾ ದೆಹಲಿ ಮೂಲಕ ಕೋಯಿಕ್ಕೋಡಿಗೆ  ತೆರಳಿದ್ದಾರೆ ಎಂದು ಮಥುರಾದಲ್ಲಿ ವಾಸಿಸುವ ಲೋಕೇಶ್ ಶರ್ಮಾ  2020 ಆಗಸ್ಟ್ 08ರ ಶನಿವಾರ (೨೪) ಹೇಳಿದ್ದಾರೆ. ಲೋಕೇಶ್ ಕೂಡ ವಾಣಿಜ್ಯ ಪೈಲಟ್ ಆಗಲು ಬಯಸಿದ್ದಾರೆ.

 "ಇಂದಿನಿಂದ ಕೆಲವೇ ದಿನಗಳಲ್ಲಿ ಮಗುವನ್ನು ನಿರೀಕ್ಷಿಸುತ್ತಿರುವುದರಿಂದ ಪತಿ ಸಾವಿನ ಬಗ್ಗೆ ನಾವು ಭಾಭಿಗೆ (ಮೇಘಾ ಶರ್ಮಾ) ಹೇಳಿಲ್ಲ. ವಿಮಾನ ಅಪಘಾತದ ಬಗ್ಗೆ ಆಕೆಗೆ ತಿಳಿದಿz’ ಎಂದು ಲೋಕೇಶ್ ಶನಿವಾರ ಹೇಳಿದರು.

ಅಖಿಲೇಶ್ ಶರ್ಮಾ  ಅವರು ಭುವನೇಶ್ ಶರ್ಮಾ (೨೮) ಮತ್ತು ಲೋಕೇಶ್ ಶರ್ಮಾ (೨೪) ಅವರ ಹಿರಿಯ ಸಹೋದರರಾಗಿದ್ದರು ಮತ್ತು ಅವರಿಗೆ ಒಬ್ಬ ಅಕ್ಕ ಕೂಡ ಇದ್ದು ಅವರ ಮದುವೆಯಾಗಿದೆ. ಅವರ ತಂದೆ ತುಳಸಿ ರಾಮ್ ಶರ್ಮಾ ಮಥುರಾದಲ್ಲಿ ವ್ಯವಹಾರಸ್ಥರಾಗಿದ್ದು, ಅವರು ಮಥುರಾ ಜಿಲ್ಲೆಯ ತಮ್ಮ ಪಿತೃ ಗ್ರಾಮದಿಂದ ಮಥುರಾ ನಗರದ ಗೋವಿಂದ್ ನಗರಕ್ಕೆ ಬಂದಿದ್ದರು.

"ಅಖಿಲೇಶ್ ಮಥುರಾದ ಅಮರನಾಥ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು ಮತ್ತು ಪೈಲಟ್ ಆಗಿ ತರಬೇತಿ ಪಡೆಯಲು ಗೊಂಡಿಯಾದ (ಮಹಾರಾಷ್ಟ್ರ) ಸಿಎಇ ಆಕ್ಸ್‌ಫರ್ಡ್ ಏವಿಯೇಷನ್ ಅಕಾಡೆಮಿಗೆ ಸೇರಿದರು. ಅವರು ೨೦೧೭ ರಲ್ಲಿ ಏರ್ ಇಂಡಿಯಾಕ್ಕೆ ಸೇರಿದರು. ಅವರು ೨೦೧೮ ರಲ್ಲಿ ಮೇಘಾ ಅವರನ್ನು ವಿವಾಹವಾದರು ಮತ್ತು ದಂಪತಿ ಮಗುವನ್ನು ಪಡೆಯಲಿದ್ದಾರೆ ಆದರೆ ವಿಧಿಯು ಅವರನ್ನು ನಮ್ಮಿಂದ ಕಸಿದುಕೊಂಡಿತು ಎಂದು ಲೋಕೇಶ್ ಹೇಳಿದರು.

ಕೋಯಿಕ್ಕೋಡಿಗೆ ಹೋಗಿರುವ ಭುವನೇಶ್ ಗುರುಗ್ರಾಮದ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಖಿಲೇಶ್ ಅವರ ಪಾರ್ಥಿವ ಅವಶೇಷಗಳು ಮಥುರಾವನ್ನು ತಲುಪಲು ಕುಟುಂಬವು ಈಗ ಕಾಯುತ್ತಿದೆ, ಅಲ್ಲಿ ಅಂತ್ಯಕ್ರಿಯೆ ಶೀಘ್ರದಲ್ಲೇ ನಡೆಯಲಿದೆ.

 

No comments:

Advertisement