My Blog List

Saturday, August 8, 2020

ಸ್ವಚ್ಛ ಮಿಷನ್ ಪಾಠ ಕೊರೋನಾ ವಿರೋಧಿ ಸಮರಕ್ಕೆ ಮುಖ್ಯ: ಪ್ರಧಾನಿ ಮೋದಿ

 ಸ್ವಚ್ಛ ಮಿಷನ್ ಪಾಠ  ಕೊರೋನಾ ವಿರೋಧಿ ಸಮರಕ್ಕೆ
ಮುಖ್ಯ
: ಪ್ರಧಾನಿ ಮೋದಿ

ನವದೆಹಲಿ: ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು 2020 ಆಗಸ್ಟ್ 08ರ ಶನಿವಾರ ಇಲ್ಲಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ನೈರ್ಮಲ್ಯ ಬದುಕಿನ ಮಾರ್ಗವನ್ನು ಅಳವಡಿಕೊಳ್ಳುವಂತೆ ಶಾಲಾ ಮಕ್ಕಳಿಗೆ ಸೂಚಿಸಿದರು. ಕೊರೋನಾವೈರಸ್ ಸೋಂಕು ಮತ್ತು ಸ್ವಚ್ಚತೆಗೆ ಸಂಬಂಧ ಕಲ್ಪಿಸಿದ ಪ್ರಧಾನಿ, ಸೋಂಕನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸ್ವಚ್ಛ ಪರಿಸರ ಅತ್ಯಂತ ಅಗತ್ಯ ಎಂದು ಹೇಳಿದರು.

ದೆಹಲಿಯಲ್ಲಿ ಸ್ಥಾಪನೆಗೊಂಡಿರುವ ಸ್ವಚ್ಛ ಭಾರತ ಮಿಷನ್ ಕುರಿತ ಸಂವಹನ ಅನುಭವಕ್ಕಾಗಿ ರಾಷ್ಟ್ರೀಯ ಸ್ವಚ್ಚತಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ೨೦೧೪-೨೦೧೯ರ ನಡುವಣ ಮೊದಲ ಅವಧಿಯಲ್ಲಿ ಸಾಮಾಜಿಕ ಬದಲಾವಣೆಗಾಗಿ ಎನ್‌ಡಿಎ ಸರ್ಕಾರ ಹಮ್ಮಿಕೊಂಡ ಪ್ರಮುಖ ದಿಕ್ಸೂಚಿ ಕಾರ್ಯಕ್ರಮ ಇದಾಗಿತ್ತು.

ಸ್ವಚ್ಚತೆಯ ವಿಷಯಗಳಲ್ಲಿ ನೀವು ಆಸಕ್ತರಾಗಿರುವುದು ಕಂಡು ನನಗೆ ಸಂತಸವಾಗಿದೆ ಎಂದು ೩೬ ಮಂದಿ ಶಾಲಾ ಮಕ್ಕಳ ತಂಡವನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ನುಡಿದರು. ಭಾರತ ಒಕ್ಕೂಟದ ೩೬ ರಾಜ್ಯಗಳು ಮತ್ತು ಕೇಂದ್ರಾಡಳಿತಗಳನ್ನು ಪ್ರತಿನಿಧಿಸಿ ೩೬ ಮಕ್ಕಳ ತಂಡವನ್ನು ಆಯ್ಕೆ ಮಾಡಲಾಗಿತ್ತು.

ಕೊರೋನಾದಿಂದ ನಾವು ರಕ್ಷಣೆ ಪಡೆಯುವವರೆಗೂ ನಾವು ಹೊರಕ್ಕೆ ಬಂದು ನಮ್ಮ ಕೆಲಸವನ್ನು ಮಾಡಬೇಕು. ಇದಕ್ಕಾಗಿ ನಾವು ಮುಖಗವಸುಗಳನ್ನು (ಮಾಸ್ಕ್) ಧರಿಸಬೇಕು, ಸದಾಕಾಲವೂ ಪರಸ್ಪರ ಅಡಿಗಳ ಅಂತರವನ್ನು ಪಾಲಿಸಬೇಕು ಮತ್ತು ಬಹಿರಂಗವಾಗಿ ಉಗುಳುವುದನ್ನು ನಿವಾರಿಸಬೇಕು ಎಂದು ಮೋದಿ ಮಕ್ಕಳಿಗೆ ಹೇಳಿದರು.

ಇದಕ್ಕೆ ಮುನ್ನ ಪ್ರಧಾನಿಯವರು ರಾಷ್ಟ್ರೀಯ ಸ್ವಚ್ಛ ಕೇಂದ್ರದಲ್ಲಿಸ್ವಚ್ಛ ಭಾರತ ಮಿಷನ್ ಕುರಿತ ಪುಟ್ಟ ವಿಡಿಯೋ ಒಂದನ್ನು ವೀಕ್ಷಿಸಿದರು. ಕಥೆಯ ರೂಪದಲ್ಲಿ ಸ್ವಚ್ಛತಾ ಯಾನವನ್ನು ವಿವರಿಸಿದ ೩೬೦ ಡಿಗ್ರಿ ಆಡಿಯೋ ವಿಶುವಲ್ ಪ್ರದರ್ಶನವನ್ನು ಪ್ರಧಾನಿ ಪೂರ್ತಿಯಾಗಿ ನೋಡಿದರು.

ಕೇಂದ್ರದಲ್ಲಿನ ೧೧ ವಲಯಗಳೂ ಸ್ವಚ್ಛ ಭಾರತ ಮಿಷನ್‌ನ ೨೦೧೪ರಿಂದ ೨೦೧೯ರವರೆಗಿನ ವರ್ಷಗಳ ಪಯಣವನ್ನು ಪ್ರತಿನಿಧಿಸಿವೆ. ಲಕ್ಷ ಗ್ರಾಮಗಳಲ್ಲಿ ಬಯಲು ಶೌಚ ಮಾಡುವ ಅಭ್ಯಾಸದ ಬದಲಾವಣೆಯನ್ನು ಇವು ಚಿತ್ರಿಸಿವೆ. ಇದನ್ನು ವಿಶ್ವದ ಇತಿಹಾಸದಲ್ಲಿ ಅತಿದೊಡ್ಡ ನಡವಳಿಕೆ ಬದಲಾವಣೆಯ ಅಭಿಯಾನ ಎಂದು ವಿವರಿಸಲಾಗಿದೆ.

ಕೇಂದ್ರದಲ್ಲಿನ ಮೊದಲ ವಲಯವು ಮಹಾತ್ಮ ಗಾಂಧಿಯವರ ನೈರ್ಮಲ್ಯ ಮತ್ತು ಸ್ವಚ್ಛತೆಯ ಆಲೋಚನೆಗಳನ್ನು ಒಳಗೊಂಡಿದೆ, ಇದನ್ನು ಹೋಲೊಗ್ರಾಮ್ ತಂತ್ರಜ್ಞಾನ ಮತ್ತು ಆಡಿಯೊ ದೃಶ್ಯಗಳ ಮೂಲಕ ಸೆರೆಹಿಡಿಯಲಾಗಿದೆ.

ಅಭಿಯಾನ ಪ್ರಾರಂಭಕ್ಕೆ ಮುನ್ನ ಇದ್ದ ಬಯಲು ಶೌಚ ಸೇರಿದಂತೆ ಸ್ವಚ್ಚತೆ ಸಂಬಂಧಿತ ಸಮಸ್ಯೆಗಳು ಮತ್ತು ಕುಟುಂಬದ ಮಹಿಳೆಯರು, ಹಿರಿಯರು ಮತ್ತು ಮಕ್ಕಳು ಬಲವಂತವಾಗಿ ಬಯಲು ಶೌಚಕ್ಕೆ ಹೋಗಬೇಕಾಗಿ ಬರುತ್ತಿದ್ದುದರಿಂದ ಎದುರಿಸುತ್ತಿದ್ದ ನೈರ್ಮಲ್ಯ ಸಂಬಂಧಿತ ಅಪಾಯಗಳನ್ನು ಎರಡನೇ ವಲಯವು ಪ್ರಸ್ತುತ ಪಡಿಸಿದೆ.

ಸಂಪೂರ್ಣ ನೈರ್ಮಲ್ಯ ಸಾಧನೆಗಾಗಿ ಅನುಸರಿಸಬೇಕಾದ ಪ್ರಕ್ರಿಯೆಯನ್ನು ನಾಲ್ಕನೇ ವಲಯ ಪ್ರದರ್ಶಿಸಿದರೆ, ಅಭಿಯಾನಕ್ಕೆ ಸಂಬಂಧಿಸಿದ ವಿವಿಧ ಮೈಲಿಗಲ್ಲುಗಳನ್ನು ಐದನೇ ವಲಯ ಪ್ರದರ್ಶಿಸಿದೆ.

ಮಹಿಳಾ ಸರಪಂಚರು, ಆಶಾ ಕಾರ್‍ಯಕರ್ತೆಯರು ಸೇರಿದಂತೆ ಮಹಳೆಯರು ಜಾಗೃತಿ ಉಪಕ್ರಮಗಳ ಮೂಲಕ ಅಭಿಯಾನದ ಯಾಸ್ಸಿಗೆಸಲ್ಲಿಸಿದ ಕಾಣಿಕೆಗಳನ್ನು ಆರನೇ ವಲಯ ಪಟ್ಟಿ ಮಾಡಿದೆ.

ಇನ್ನೊಂದು ವಲಯವು ಕ್ಷೇತ್ರಕ್ಕೆ ಮಹತ್ವದ ಕಾಣಿಕೆಗಳನ್ನು ನೀಡಿದ ಸ್ವಚ್ಛತಾ ಚಾಂಪಿಯನ್‌ಗಳ ಸ್ಫೂರ್ತಿದಾಯಕ ಕಥೆಗಳನ್ನು ಪಟ್ಟಿ ಮಾಡಿದೆ.

ರಾಷ್ಟ್ರೀಯ ಸ್ವಚ್ಛ ಕೇಂದ್ರವು ಮಹಾತ್ಮ ಗಾಂಧಿಯವರಿಗೆ ಸಲ್ಲಿಸಿದ ಗೌರವವಾಗಿದೆ.

No comments:

Advertisement