My Blog List

Thursday, August 20, 2020

ಬಾಹ್ಯಾಕಾಶದ ಚಿನ್ನಕ್ಕೆ ಮನುಜನ ಕಣ್ಣು (ಕನ್ನ)?

 ಬಾಹ್ಯಾಕಾಶದ ಚಿನ್ನಕ್ಕೆ ಮನುಜನ ಕಣ್ಣು (ಕನ್ನ)?

ವಾಷಿಂಗ್ಟನ್:  ಹಲವಾರು ವರ್ಷಗಳಿಂದ, ಮಾನವರು ಬಾಹ್ಯಾಕಾಶದಲ್ಲಿ ಇರುವ ಅಪಾರ ಪ್ರಮಾಣದ ಅಮೂಲ್ಯ ಲೋಹಗಳ ಬಗ್ಗೆ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ವಿಜ್ಞಾನಿಗಳ ಪ್ರಕಾರ, , ಕ್ಷುದ್ರಗ್ರಹಗಳಲ್ಲಿ ಆಳವಾಗಿ ಹೂತುಹೋಗಿರುವ ಚಿನ್ನ, ಪ್ಲಾಟಿನಂ ವಜ್ರ, ಮತ್ತು ಬಾಹ್ಯಾಕಾಶ ಅವಶೇಷಗಳಂತಹ ಅಮೂಲ್ಯ ವಸ್ತುಗಳು ಶತಕೋಟಿ ಡಾಲರ್ ಮೌಲ್ಯದ್ದಾಗಿರಬಹುದು ಎಂದು ಊಹಿಸಿದ್ದಾರೆ.

ಈಗ, ಮಾನವರು ಅವುಗಳ ಪೈಕಿ ಕೆಲವು ಸಂಪತ್ತಿನ ಮೇಲೆ ಕಣ್ಣು ಹಾಕಿದ್ದು, ಅವುಗಳಿಗೆ ಕನ್ನ ಹಾಕುವ ಸಲುವಾಗಿ ಗಣಿಗಾರಿಕೆಯತ್ತ ಮುನ್ನುಗ್ಗುತ್ತಿದ್ದಾರೆ.

ನಾಸಾವು ಇತ್ತೀಚೆಗೆ ಮಿಷನ್ ಸೈಕೆ ಎಂಬ ಯೋಜನೆ ಹಮ್ಮಿಕೊಂಡಿದ್ದು, ೧೬ ಸೈಕ್ಎಂಬ ಲೋಹ ಕಲ್ಲು ಭರಿತ ಕ್ಷುದ್ರಗ್ರಹವನ್ನು ಅಧ್ಯಯನ ಮಾಡಲು ಕಾರ್ಯಕ್ರಮ ರೂಪಿಸಿದೆ.

೨೨೬ ಕಿಲೋಮೀಟರ್ ಅಗಲವಿರುವ ಕ್ಷುದ್ರಗ್ರಹವು ಮಂಗಳ ಮತ್ತು ಗುರುಗಳ ನಡುವಿನ ಸೌರವ್ಯೂಹದ ಕ್ಷುದ್ರಗ್ರಹ ಸಮೂಹದಲ್ಲಿದೆ.
ವಿಜ್ಞಾನಿಗಳಿಗೆ
ನಿರ್ದಿಷ್ಟ ಕ್ಷುದ್ರಗ್ರಹದ ಬಗ್ಗೆ ಆಸಕ್ತಿ ಏಕೆ? ಏಕೆಂದರೆ ಕ್ಷುದ್ರಗ್ರಹವು ಇಡೀ ಜಾಗತಿಕ ಆರ್ಥಿಕತೆಯ ಒಟ್ಟು ವೆಚ್ಚವನ್ನು ಮೀರಿಸುವ ಸಂಭಾವ್ಯ ಸಂಪತ್ತನ್ನು ಒಳಗೊಂಡಿರಬಹುದು ಎಂಬ ಕಾರಣಕ್ಕಾಗಿ ಈ ಆಸಕ್ತಿ.

ತಜ್ಞರ ಪ್ರಕಾರ, ಕ್ಷುದ್ರಗ್ರಹವು ಸಂಪೂರ್ಣವಾಗಿ ನಿಕ್ಕೆಲ್ ಮತ್ತು ಲೋಹೀಯ ಕಬ್ಬಿಣದಿಂದ ಘನ ಚಿನ್ನದ ನಿಕ್ಷೇಪವನ್ನು ಹೊಂದಿದೆ. ಕ್ಷುದ್ರಗ್ರಹದ ಅಂದಾಜು ಮೌಲ್ಯವು ಡಾಲರ್  ೧೦,೦೦೦ ಕ್ವಾಡ್ರಿಲಿಯನ್ ಹತ್ತಿರವಿರಬಹುದು. ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಯನ್ನು ಮಿಲಿಯನೇರ್ (ಲಕ್ಷಾಧೀಶರನ್ನಾಗಿ)  ಮಾಡಲು ಅದು ಸಾಕು.

ಆದಾಗ್ಯೂ, ಭೂಮಿಯ ರಚನೆಯ ಬಗ್ಗೆ ಹೆಚ್ಚಿನದನ್ನು ಕಂಡುಹಿಡಿಯಲು ಹೊಸ ಸಾಧನವು೧೬ ಸೈಕ್ಅನ್ನು ಅಧ್ಯಯನ ಮಾಡಲು ಉದ್ದೇಶಿಸಿದೆ  ಎಂದು ನಾಸಾ ಹೇಳಿದೆ.

"ನಾವು ಭೂಮಿಯ ತಿರುಳನ್ನು ಹತ್ತಿರದಿಂದ ಪರೀಕ್ಷಿಸಲು ಸಾಧ್ಯವಿಲ್ಲದ ಕಾರಣ, ಸೈಕೆ (ಸುಮಾರು ೧೪೦ ಮೈಲಿಗಳು, ಅಥವಾ ೨೨೬ ಕಿಲೋಮೀಟರ್ ಅಗಲ) ಎಂಬ ಕ್ಷುದ್ರಗ್ರಹವನ್ನು ಅನ್ವೇಷಿಸುವುದರಿಂದ ನಮ್ಮ ಗ್ರಹ ಮತ್ತು ಇತರ ಗ್ರಹಗಳು ಹೇಗೆ ರೂಪುಗೊಂಡವು ಎಂಬ ಬಗ್ಗೆ ಅಮೂಲ್ಯವಾದ ಒಳನೋಟವನ್ನು ನೀಡಬಹುದು" ಎಂದು ನಾಸಾ ಹಿಂದೆ ಜುಲೈನಲ್ಲಿ ಹೇಳಿತ್ತು.

ಇದನ್ನು ಸಾಧಿಸಲು, ಬಾಹ್ಯಾಕಾಶ ಸಂಸ್ಥೆಸೈಕೆ ಬಾಹ್ಯಾಕಾಶ ನೌಕೆಯನ್ನು ವಿನ್ಯಾಸಗೊಳಿಸಿದ್ದು, ಇದು ಕ್ಷುದ್ರಗ್ರಹದ ಕಾಂತಕ್ಷೇತ್ರವನ್ನು ಅಧ್ಯಯನ ಮಾಡುತ್ತದೆ ಮತ್ತು ಕ್ಷುದ್ರಗ್ರಹದ ಸ್ಥಳಾಕೃತಿ ಮತ್ತು ಸಂಯೋಜನೆಗೆ ಸಂಬಂಧಿಸಿದ ಚಿತ್ರಗಳು ಮತ್ತು ದತ್ತಾಂಶಗಳನ್ನು ಸೆರೆಹಿಡಿಯುತ್ತದೆ.

ಹಿಂದಿನ ವರದಿಗಳ ಪ್ರಕಾರ, ಎಲೋನ್ ಮಸ್ಕ್ ಸ್ಪೇಸ್ಎಕ್ಸ್ನ್ನು ಈ ಕಾರ್ಯಾಚರಣೆಯಲ್ಲಿ ಸಹಯೋಗಕ್ಕಾಗಿ ನಾಸಾ ಜೊತೆಗೆ ಸೇರಿಸಿಕೊಂಡಿದೆ. ಎಲ್ಲವೂ ಸರಿಯಾಗಿ ನಡೆದರೆ, ನಾಸಾ / ಸ್ಪೇಸ್ಎಕ್ಸ್ ಮಿಷನ್ ೨೦೨೨ ವೇಳೆಗೆ ಕ್ಷುದ್ರಗ್ರಹಕ್ಕೆ ತನ್ನ ಪ್ರಯಾಣವನ್ನು ಕೈಗೊಳ್ಳಲು ಸಿದ್ಧವಾಗಬಹುದು.

No comments:

Advertisement