My Blog List

Monday, September 28, 2020

ಭಾರತದಲ್ಲಿ ೨೦೨೧ ರ ಆರಂಭಕ್ಕೆ ಮೊದಲ ಕೋವಿಡ್-೧೯ ಲಸಿಕೆ

 ಭಾರತದಲ್ಲಿ ೨೦೨೧ ಆರಂಭಕ್ಕೆ ಮೊದಲ ಕೋವಿಡ್-೧೯ ಲಸಿಕೆ

ನವದೆಹಲಿ: ಕೊರೋನವೈರಸ್ (ಕೋವಿಡ್-೧೯) ವಿರುದ್ಧ ಸಂಭಾವ್ಯ ಲಸಿಕೆ ಅಭಿವೃದ್ಧಿಪಡಿಸಲು ವಿಶ್ವಾದ್ಯಂತ ವಿವಿಧ ದೇಶಗಳು ತೀವ್ರ ಯತ್ನ ನಡೆಸುತ್ತಿರುವುದರ ಮಧ್ಯೆಯೇ, ಭಾರತದಲ್ಲಿ ಮೊದಲ ಲಸಿಕೆ ೨೦೨೧ ಆರಂಭದಲ್ಲಿ ಲಭ್ಯವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 2020 ಸೆಪ್ಟೆಂಬರ 28ರ ಸೋಮವಾರ ಎಂದು ಹೇಳಿತು.

ಕೋವಿಡ್ -೧೯ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಶೋಧನೆಯನ್ನು "ತ್ವರಿvಗೊಳಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿತು..

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್, ‘ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನ ಸಂಶೋಧನೆ ತ್ವರಿತವಾಗಿ ನಡೆಯುತ್ತಿದೆ. ದೇಶದಲ್ಲಿ ಇದೀಗ ಪ್ರಾಯೋಗಿಕ ಪರೀಕ್ಷೆಗಳ ಹಂತದಲ್ಲಿರುವ ಕನಿಷ್ಠ ಕಾರ್ಯಸಾಧ್ಯವಾದ ಲಸಿಕೆ ತಯಾರಕರು ಇದ್ದಾರೆ. ೨೦೨೧ ಮೊದಲ ತ್ರೈಮಾಸಿಕದಲ್ಲಿ ಅದು ಲಭ್ಯವಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.

ಕಳೆದ ೨೪ ಗಂಟೆಗಳಲ್ಲಿ ೮೨,೧೭೦ ಹೊಸ ಕೊರೋನವೈರಸ್ ಸೋಂಕು ಪ್ರಕರಣಗಳ ಹೆಚ್ಚಳದೊಂದಿಗೆ, ಭಾರತದ ಕೋವಿಡ್ -೧೯ ಪ್ರಕರಣಗಳ ಸಂಖ್ಯೆ ಸೋಮವಾರ ೬೦ ಲಕ್ಷದ ಗಡಿ ದಾಟಿದೆ ಎಂದು ಆರೋಗ್ಯ ಸಚಿವಾಲಯ ನೀಡಿದ ಅಂಕಿ ಅಂಶಗಳು ತಿಳಿಸಿವೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ೧೦೦ ವರ್ಷಗಳ ಇತಿಹಾದ ಟೈಮ್ ಲೈನನ್ನೂ ಆರೋಗ್ಯ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿತು.

ಇಂದು ಐಸಿಎಂಆರ್‌ಗೆ ಒಂದು ಐತಿಹಾಸಿಕ ದಿನ. ಐಸಿಎಂಆರ್‌ನ ಇತಿಹಾಸದ ೧೦೦ ವರ್ಷಗಳ ಟೈಮ್‌ಲೈನನ್ನು ಈದಿನ ಬಿಡುಗಡೆ ಮಾಡುವುದು ನನಗೆ ನನಗೆ ಗೌರವವಾಗಿದೆ. ಇದಕ್ಕೆ ಸಂಬಂಧಿಸಿದ ವಿಜ್ಞಾನಿಗಳ ಕೊಡುಗೆಯ ಸ್ಮರಣೆಯು ಮುಂಬರುವ ವಿಜ್ಞಾನಿಗಳಿಗೆ ಸ್ಫೂರ್ತಿಯಾಗಲಿದೆ ಎಂದು ಡಾ ಹರ್ಷವರ್ಧನ್ ಮಾಧ್ಯಮಗಳಿಗೆ ತಿಳಿಸಿದರು.

No comments:

Advertisement