My Blog List

Wednesday, September 30, 2020

ಬಾಬರಿ ಮಸೀದಿ: ತೀರ್ಪಿಗೆ ಬಿಜೆಪಿ, ವಿಎಚ್ ಪಿ, ಶಿವಸೇನೆ ಸ್ವಾಗತ

 ಬಾಬರಿ ಮಸೀದಿ: ತೀರ್ಪಿಗೆ ಬಿಜೆಪಿ, ವಿಎಚ್ ಪಿ, ಶಿವಸೇನೆ ಸ್ವಾಗತ

ನವದೆಹಲಿ: ಬಾಬರಿ ಮಸೀದಿ ಧ್ವಂಶ ಪ್ರಕರಣ ಎಲ್ಲ ೩೨ ಆರೋಪಿಗಳನ್ನು ನಿರ್ಣಾಯಕ ಪುರಾವೆಗಳ ಕೊರತೆಯ ಕಾರಣ ಖುಲಾಸೆಗೊಳಿಸಿದ ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪನ್ನು ಹಲವಾರು ನಾಯಕರು 2020 ಸೆಪ್ಟೆಂಬರ್ 30ರ ಬುಧವಾರ ಸ್ವಾಗತಿಸಿದರು.

ತೀರ್ಪು ಹೊರಬಿದ್ದ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರುಸತ್ಯಮೇವ ಜಯತೆಎಂದು ಹೇಳಿಕೆ ನೀಡಿದರು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ, "ತಡವಾಗಿಯಾದರೂ ಅಂತಿಮವಾಗಿ ನ್ಯಾಯಕ್ಕೆ ಜಯ ಲಭಿಸಿರುವುದನ್ನು ಇದು ತೋರಿಸಿದೆಎಂದು ಹೇಳಿದರು.

ವಿಶೇಷ ಸಿಬಿಐ ನ್ಯಾಯಾಲಯದಿಂದ ಖುಲಾಸೆಗೊಂಡ ಆರೋಪಿಗಳಲ್ಲಿ ಒಬ್ಬರಾದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ತೀರ್ಪನ್ನು ಸ್ವಾಗತಿಸಿ, ’ಬಾಬರಿ ಮಸೀದಿ ಉರುಳಿಸುವಿಕೆಯ ಪ್ರಕರಣದ ವಿಶೇಷ ನ್ಯಾಯಾಲಯದ ತೀರ್ಪನ್ನು ನಾನು ಪೂರ್ಣ ಹೃದಯದಿಂದ ಸ್ವಾಗತಿಸುತ್ತೇನೆ. ತೀರ್ಪು ರಾಮ ಜನ್ಮಭೂಮಿ ಚಳವಳಿ ಬಗ್ಗೆ ನನ್ನ ವೈಯಕ್ತಿಕ ಮತ್ತು ಬಿಜೆಪಿಯ ನಂಬಿಕೆ ಮತ್ತು ಬದ್ಧತೆಯನ್ನು ಸಮರ್ಥಿಸುತ್ತದೆಎಂದು ಹೇಳಿದರು.

ಖುಲಾಸೆಗೊಂಡ ಆರೋಪಿಗಳಲ್ಲಿ ಒಬ್ಬರಾದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ವಿನಯ್ ಕಟಿಯಾರ್, ‘ನಾವು ತೀರ್ಪನ್ನು ಸ್ವಾಗತಿಸುತ್ತೇವೆ. ಇದು ಸತ್ಯದ ವಿಜಯ. ಧ್ವಂಸದಲ್ಲಿ ನಮ್ಮ ಯಾವ ಪಾತ್ರವೂ ಇರಲಿಲ್ಲ. ನಾವು ನಿಜವಾಗಿಯೂ ವೇದಿಕೆಯಲ್ಲಿದ್ದೆವು, ಅದು ನೆಲಸಮ ಸ್ಥಳದಿಂದ ದೂರ ಇತ್ತುಎಂದು ಹೇಳಿದರು.

ಆರೋಪಿಗಳಲ್ಲಿ ಒಬ್ಬರೂ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿನ ಮುಖ್ಯಸ್ಥರೂ ಆಗಿರುವ ಮಹಂತ ನೃತ್ಯ ಗೋಪಾಲದಾಸ್ ಅವರು ತೀರ್ಪನ್ನು ಸ್ವಾಗತಿಸಿ, ’ಹಿಂದೂ ಅಕ್ರೋಶದಿಂದಾಗಿಧಂಚ (ಕಟ್ಟಡ) ಕುಸಿಯಿತುಎಂದು ನುಡಿದರು.

ಯಾವುದೇ ಹಿಂದೂಗಳು ಫಿತೂರಿಗಳನ್ನು ಮಾಡುವುದಿಲ್ಲ. ಹಿಂದೂ ಅಕ್ರೋಶದಿಂದಾಗಿಧಂಚಬಿದ್ದಿತು. ತಡವಾಗಿಯಾದರೂ, ಈಗಲಾದರೂ, ನ್ಯಾಯಾಲಯದ ತೀರ್ಪು, ‘ಅಸ್ತಾಕ್ಕೆ (ನಂಬಿಕೆಗೆ) ಅನುಮೋದನೆಯ ಮುದ್ರೆ ಒತ್ತಿದೆಎಂದು ದಾಸ್ ಹೇಳಿದರು.

ಭಗವಾನ್ ರಾಮ ಎಲ್ಲರ ಪೂರ್ವಜ ಮತ್ತು ಅವನ ಜನ್ಮಸ್ಥಳವನ್ನು ಈಗ ಮುಕ್ತಗೊಳಿಸಲಾಗಿದೆ. ೧೯೯೨ರ ಡಿಸೆಂಬರ್ ಇತಿಹಾಸದ ಒಂದು ಭಾಗವಾಗಿದೆ. ಉರುಳಿಸುವಿಕೆಯ ಆರೋಪ ಹೊತ್ತವರೆಲ್ಲರೂ ಎಂದಿಗೂ ಸಮಾಜ ವಿರೋಧಿ ಕೃತ್ಯದಲ್ಲಿ ತೊಡಗಿರದ ಭಕ್ತರು. ಅವರನ್ನು ಆರೋಪಿಯನ್ನಾಗಿ ಮಾಡುವ ಮೂಲಕ ಅವರಿಗೆ ಮಾನಸಿಕ ಸಂಕಟ ಉಂಟು ಮಾಡಲಾಯಿತುಎಂದು ಅವರು ನುಡಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ‘ಆಗಿನ ಕಾಂಗ್ರೆಸ್ ಸರ್ಕಾರ ರಾಜಕೀಯ ಪಕ್ಷಪಾತದಿಂದ ವರ್ತಿಸಿ, ಮತ ಬ್ಯಾಂಕ್ ರಾಜಕೀಯದಲ್ಲಿ ತೊಡಗಿಸಿಕೊಂಡಿತ್ತು. ಬಿಜೆಪಿ ಮತ್ತು ವಿಎಚ್ಪಿ ನಾಯಕರು, ಸಂತರು ಮತ್ತು ಇತರ ಸಾಮಾಜಿಕ ಸಂಘಟನೆಗಳ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಅವಹೇಳನ ಮಾಡಿತು. ಫಿತೂರಿಯಲ್ಲಿ ಭಾಗಿಯಾಗಿರುವ ಜನರು ಈಗ ದೇಶದ ಕ್ಷಮೆಯಾಚಿಸಬೇಕುಎಂದು ಆಗ್ರಹಿಸಿದರು.

ಖುಲಾಸೆಗೊಂಡ ಆರೋಪಿಗಳಲ್ಲಿ ಒಬ್ಬರಾದ ಬಿಜೆಪಿಯ ಮಾಜಿ ಸಂಸದ ರಾಮ ವಿಲಾಸ ದಾಸ್ ವೇದಾಂತಿ, ‘ನ್ಯಾಯ ದೊರಕಿರುವುದು ಒಳ್ಳೆಯದು. ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ನ್ಯಾಯಾಲಯ ಒಪ್ಪಿಕೊಂಡಿತುಎಂದು ಹೇಳಿದರು.

ಉತ್ತರ ಪ್ರದೇಶದ ಸಚಿವ ಮೊಹ್ಸಿನ್ ರಝಾನಿರ್ಧಾರವು ಸ್ವಾಗತಾರ್ಹ ಮತ್ತು ಅದು ನ್ಯಾಯದ ವಿಜಯವಾಗಿದೆ. ಇದು ರಾಮ ರಾಜ್ಯ. ಇದನ್ನೇ ನಿಯಮ ಎಂದು ಕರೆಯಲಾಗುತ್ತದೆಎಂದು ನುಡಿದರು.

ವಿಶೇಷ ಸಿಬಿಐ ನ್ಯಾಯಾಲಯದಿಂದ ಖುಲಾಸೆಗೊಂಡ ಮತ್ತೊಬ್ಬ ಆರೋಪಿ ಮಹಂತ್ ಧರಮದಾಸ್, ‘ನಾವು ಏನು ಹೇಳಬಹುದು? ಉರುಳಿಸುವಿಕೆಯು ದೈವೀಕ ಕ್ರಿಯೆಯಾಗಿದೆ. ಅದರಲ್ಲಿ ಯಾವುದೇ ತಪ್ಪಿಲ್ಲ. ತೀರ್ಪು ಸ್ವಾಗತಾರ್ಹಎಂದರು.

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅರ್ಜಿದಾರ ಇಕ್ಬಾಲ್ ಅನ್ಸಾರಿ ತೀರ್ಪನ್ನು ಸ್ವಾಗತಿಸಿಅಯೋಧ್ಯೆ ಶಾಂತಿಯುತವಾಗಿ ಬದುಕಲು ಬಯಸುತ್ತದೆಎಂದು ಹೇಳಿದರು.

ಎಲ್ಲಾ ಅವ್ಯವಸ್ಥೆ ಮತ್ತು ತೊಂದರೆಗಳು ಕೊನೆಗೊಳ್ಳಬೇಕು. ಅಯೋಧ್ಯೆಯ ಶಾಂತಿಯುತವಾಗಿ ಬದುಕಲು ಬಯಸುತ್ತಾರೆ. ತೀರ್ಪನ್ನು ಎಲ್ಲರೂ ಸ್ವಾಗತಿಸಬೇಕು. ನಾವು ಹಿಂದೆ ನ್ಯಾಯಾಲಯದ ತೀರ್ಪನ್ನು ಪಾಲಿಸಿದ್ದೇವೆ ಮತ್ತು ಅದನ್ನು ಮುಂದುವರೆಸುತ್ತೇವೆ. ಇನ್ನು ಮುಂದೆ ಅಂತಹ ಸಮಸ್ಯೆಗಳಿರಬಾರದು ಎಂದು ನಾನು ಹಾರೈಸುತ್ತೇನೆಎಂದು ಅವರು ಹೇಳಿದರು.

ವಿಎಚ್ಪಿ ನಾಯಕ ಶರದ್ ಶರ್ಮಾಸಿಬಿಐ ನ್ಯಾಯಾಲಯದ ಇಂದಿನ ನಿರ್ಧಾರವು ಪ್ರಜಾಪ್ರಭುತ್ವ ಮತ್ತು ಕಾನೂನಿನ ನಿಯಮಗಳ ಬಗ್ಗೆ ಜನರ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿದೆ. ಇಂದು, ಭಗವಂತನ ಜನ್ಮಸ್ಥಳವು ಅಡೆತಡೆಗಳಿಂದ ಮುಕ್ತವಾಗಿದೆ ಮತ್ತು ಹಿಂದಿನ ಐತಿಹಾಸಿಕ ತಪ್ಪುಗಳನ್ನು ಸರಿಡಿಸಲಾಗಿದೆಎಂದು ಹೇಳಿದರು.

ಕೇಂದ್ರ ರಕ್ಷಣಾ ಸಚಿವ ಮತ್ತು ಲಕ್ನೋ ಸಂಸದ ರಾಜನಾಥ್ ಸಿಂಗ್ ಅವರು ಟ್ವೀಟ್ ಮಾಡಿ ಪ್ರಕರಣದ ಎಲ್ಲ ೩೨ ಆರೋಪಿಗಳನ್ನು ಖುಲಾಸೆಗೊಳಿಸುವುದನ್ನು ನಾನು ಸ್ವಾಗತಿಸುತ್ತೇನೆ. ವಿಳಂಬವಾದರೂ ನ್ಯಾಯವು ಅಂತಿಮವಾಗಿ ಜಯಗಳಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆಎಂದು ಬರೆದರು.

ಬಾಬರಿ ಮಸೀದಿ ಧ್ವಂಸ ಪ್ರಕರಣ:

ಕೋರ್ಟ್ ತೀರ್ಪಿಗೆ ಶಿವಸೇನಾ ಸ್ವಾಗತ

ಮುಂಬೈ: ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ನೀಡಿರುವುದನ್ನು ಶಿವಸೇನೆಯು 2020 ಸೆಪ್ಟೆಂಬರ್ 30ರ ಬುಧವಾರ ಸ್ವಾಗತಿಸಿತು.

ವಿಚಾರವಾಗಿ ಪ್ರತಿಕ್ರಿಯಿಸಿರುವ ಶಿವಸೇನಾ ನಾಯಕ ಸಂಜಯ್ ರಾವುತ್, ’ಶಿವಸೇನೆಯು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತದೆ. ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಸೇರಿದಂತೆ ಪ್ರಕರಣದಲ್ಲಿ ನಿರ್ದೋಷಿಗಳಾಗಿರುವ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆಎಂದು ತಿಳಿಸಿದ್ದಾರೆ.

ಮಸೀದಿ ಧ್ವಂಸ ಪ್ರಕರಣವು ಪಿತೂರಿ ಅಲ್ಲ ಮತ್ತು ಅದು ಆಯಾ ಕಾಲಘಟ್ಟದ ಫಲಿತಾಂಶವಾಗಿದೆ ಎಂಬ ತೀರ್ಪು ಹೊರಬಂದಿರುವುದು ನಿರೀಕ್ಷಿತವಾಗಿತ್ತು. ಪ್ರಸಂಗವನ್ನು ನಾವೀಗ ಮರೆಯಬೇಕು. ಬಾಬರಿ ಮಸೀದಿಯನ್ನು ಧ್ವಂಸ ಮಾಡದೇ ಇದ್ದರೆ, ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಭೂಮಿ ಪೂಜೆಯನ್ನು ನಾವು ನೋಡುತ್ತಿರಲಿಲ್ಲಎಂದು ಸಂಜಯ ರಾವುತ್ ಹೇಳಿದ್ದಾರೆ.

ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಆರೋಪಿಗಳು ದೋಷಮುಕ್ತರು ಎಂದು ಸಿಬಿಐ ವಿಶೇಷ ನ್ಯಾಯಾಲಯವು ಬುಧವಾರ ತೀರ್ಪು ನೀಡಿದೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಸೇರಿದಂತೆ ಪ್ರಕರಣದ ಎಲ್ಲ ೩೨ ಆರೋಪಿಗಳೂ ನಿರ್ದೋಷಿಗಳೆಂದು ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ.

No comments:

Advertisement