Wednesday, October 14, 2020

ತೆಲಂಗಾಣ, ಆಂಧ್ರಪ್ರದೇಶ: ಕುಂಭದ್ರೋಣ ಮಳೆ: 30 ಸಾವು

 ತೆಲಂಗಾಣಆಂಧ್ರಪ್ರದೇಶ: ಕುಂಭದ್ರೋಣ ಮಳೆ: 30 ಸಾವು

ಹೈದರಾಬಾದ್ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಮೂರು ದಿನಗಳಿಂದ ಭಾರೀ ಗಾಳಿಮಳೆಯಾಗುತ್ತಿದ್ದುಕಳೆದ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಕುಂಭ ದ್ರೋಣ ಮಳೆಗೆ ಹೈದರಾಬಾದ್ ಮತ್ತು ಹೊರವಲಯದಲಿ 2020 ಅಕ್ಟೋಬರ್ 14ರ ಬುಧವಾರ ಕನಿಷ್ಠ ೨೦ ಮಂದಿ ಹಾಗೂ ಆಂಧ್ರಪ್ರದೇಶದಲ್ಲಿ ೧೦ ಮಂದಿ ಸೇರಿ ಕನಿಷ್ಠ 30 ಮಂದಿ ಸಾವನ್ನಪ್ಪಿದರು.

ಹೈದರಾಬಾದಿನ ಶಂಶದಾಬಾದಿನ ಗಗನಪಹಾಡ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಮನೆಯ ಗೋಡೆ ಕುಸಿದು ಅವಶೇಷಗಳ ಅಡಿಯಲ್ಲಿ ಸಿಲುಕಿದ ೧೫ ಮಂದಿಯ ಪೈಕಿ ಮೂವರು ಮೃತರಾಗಿದ್ದಾರೆ.

ಮೂರು ದಿನಗಳಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕಾಂಪೌಂಡ್ ಗೋಡೆ ಕುಸಿದು ಹತ್ತು ಮನೆಗಳ ಮೇಲೆ ಬಿದ್ದು ಎರಡು ತಿಂಗಳ ಮಗು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ.

ತೆಲಂಗಾಣದ ಕನಿಷ್ಠ ೧೪ ಜಿಲ್ಲೆಗಳ ಮೇಲೆ ಅತಿವೃಷ್ಟಿ ಪರಿಣಾಮ ಬೀರಿದ್ದುಹೈದರಾಬಾದಿನ ಹಲವಾರು ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆನೀರು ತುಂಬಿದ ರಸ್ತೆಗಳ ಮಧ್ಯೆ ವಾಹನಗಳು ಸಿಲುಕಿಕೊಂಡಿವೆ.

ಕಳೆದ ೪೮ ಗಂಟೆಗಳಲ್ಲಿ ೧೨ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪ್ರವಾಹ ಉಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಹೈದರಾಬಾದಿಗೆ ನೀರು ಸರಬರಾಜು ಮಾಡುವ ಹಿಮಾಯತ್ ಸಾಗರ್ ಅಣೆಕಟ್ಟಿನ ಫ್ಲಡ್ ಗೇಟ್ಗಳನ್ನು ತೆರೆಯಲು ಅಧಿಕಾರಿಗಳಿಗೆ ಸೂಚಿಸಬೇಕಾಯಿತು ಎಂದು ವರದಿಗಳು ಹೇಳಿವೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರಹೈದರಾಬಾದಿನಲ್ಲಿ ಕಳೆದ ೨೪ ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ.

"ಗ್ರೇಟರ್ ಹೈದರಬಾದ್ ಮುನಿಸಿಪಲ್ ಕಾರ್ಪೋರೇಷನ್ (ಜಿಎಚ್ಎಂಸಿವ್ಯಾಪ್ತಿಯಲ್ಲಿ ಇದುವರೆಗೆಆಗಸ್ಟ್ ೨೦೦೦ ರಲ್ಲಿ ನಗರವು ಪ್ರವಾಹಕ್ಕೆ ಸಿಲುಕಿದಾಗ ಸುರಿದಿದ್ದ ೨೪ ಸೆಂಟಿ ಮೀಟರ್ ಮಳೆಯೇ ದಾಖಲೆಯ ಮಳೆಯಾಗಿತ್ತುಈಗ ಕಳೆದ ೨೪ ಗಂಟೆಗಳಲ್ಲಿ ಬೆಳಗ್ಗೆ .೦೦ ರವರೆಗೆ ೨೯. ಸೆಂಟಿಮೀಟರ್ ಮಳೆಯು ಹಯಾತ್ನಗರದಲ್ಲಿನ ಜಿಎಚ್ಎಂಸಿ ಮಿತಿಯಲ್ಲಿ ದಾಖಲಾಗಿದೆನಗರದ ಹೊರವಲಯದಲ್ಲಿ ಘಟ್ಕೇಶ್ವರದಲ್ಲಿ ಸುಮಾರು ೩೨. ಸೆಂಟಿಮೀಟರ್ ದಾಖಲಾಗಿದೆನಗರದ ಸುಮಾರು ೩೫ ಸ್ಥಳಗಳಲ್ಲಿ ೨೧ ಸೆಂಟಿಮೀಟರ್ಗಿಂತ ಹೆಚ್ಚು ಮಳೆ ದಾಖಲಾಗಿದೆಇದು ಹೈದರಾಬಾದಿನಲ್ಲಿ ಸಾರ್ವಕಾಲಿಕ ದಾಖಲೆಯ ಮಳೆ ಬೀಳುತ್ತಿದೆ ಎಂಬುದನ್ನು ಸೂಚಿಸಿದೆ ಎಂದು ಹೈದರಾಬಾದ್ ಹವಾಮಾನ ಕೇಂದ್ರದ ಹವಾಮಾನಶಾಸ್ತ್ರಜ್ಞ ಬಿ.ರಾಜರಾವ್ ಹೇಳಿದ್ದಾರೆ.

ಪ್ರವಾಹದಲ್ಲಿ ಕೊಚ್ಚಿ ಹೋದ ಸಹೋದರರು:

ನಾಗಿರೆಡ್ಡಿಪಳ್ಳಿ ಗ್ರಾಮದಲ್ಲಿ ಇಬ್ಬರು ಸಹೋದರರು ಪ್ರವಾಹದಿಂದ ಕೊಚ್ಚಿ ಹೋಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆಒಬ್ಬನನ್ನು ರಕ್ಷಿಸಲಾಗಿದ್ದುಇನ್ನೊಬ್ಬ ವ್ಯಕ್ತಿಗಾಗಿ ಶೋಧ ನಡೆಸಲಾಗುತ್ತಿದೆಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಕಿಂಗ್ ಮತ್ತು ಚಾಲನೆ ಮಾಡುವ ಮೂಲಕ ಅನಗತ್ಯ ಅಪಾಯಗಳನ್ನು ಆಹ್ವಾನಿಸಿಕೊಳ್ಳದಂತೆ ಆಡಳಿತವು ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ.

ಹೈದರಾಬಾದ್ ಅನೇಕ ಸ್ಥಳಗಳಲ್ಲಿ ಮಂಗಳವಾರ ಗೋಡೆಗಳು ಮತ್ತು ಕಟ್ಟಡಗಳ ಕುಸಿತ ವರದಿಯಾಗಿದೆಇದರಲ್ಲಿ ಅಂಬರಪೇಟ್ ಶಂಕರ ನಗರಚಂಚಲ್ಗುಡಾದ ಝಟ್ ಟ್ ನಗರಆದಿಕ್ ಮೆಟ್ಮತ್ತು ಧೂಲ್ಪೇಟ್ ಪ್ರದೇಶಗಳು ಸೇರಿವೆಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ಎಂಸಿಯಪಟ್ಟಣ ಯೋಜನಾ ವಿಭಾಗವು ಮೂಸಾ ಬೌಲಿಚಾರ್ಮಿನಾರ್ಲಾಲ್ ದರ್ವಾಜಾ ಮತ್ತು ಇತರ ಪ್ರದೇಶಗಳಲ್ಲಿ ಕಟ್ಟಡಗಳ ಅವಶೇಷ ತೆರವು ಕಾರ್ಯದಲ್ಲಿ ಮಗ್ನವಾಗಿದೆ ವರದಿ ತಿಳಿಸಿದೆ.

ಕನಿಷ್ಠ ೧೦ ಸೆಂಟಿ ಮೀಟರ್ ಮಳೆಯಾಗಿರುವ ವಿವಿಧ ಪ್ರದೇಶಗಳಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುವುದು ಮತ್ತು ಮುಸಿ ನದಿದಂಡೆಯ ಪ್ರದೇಶಗಳಲ್ಲಿ ಪ್ರವಾಹದ ಸಾಧ್ಯತೆ ಹೈದರಬಾದಿನಲ್ಲಿ ಸಾಮಾನ್ಯ ಕಳವಳಗಳಾಗಿವೆ.

ಬುಧವಾರದಿಂದ ಬೆಳಗ್ಗೆ ಸ್ವಲ್ಪ ಕಾಲ ಸುರಿದ ಮಳೆಅಲ್ಪ ವಿರಾಮದ ಬಳಿಕ ಮುಂದುವರಿದು ಗುಡುಗು ಮಿಂಚುಗಳೊಂದಿಗೆ ಸಂಜೆಯ ಕಡೆಗೆ ತೀವ್ರಗೊಂಡಿತು ಎಂದು ವರದಿಗಳು ಹೇಳಿವೆ.

ನಗರದಲ್ಲಿ ಸ್ಥಾಪಿಸಲಾದ ಸ್ವಯಂಚಾಲಿತ ಹವಾಮಾನ ಕೇಂದ್ರಗಳ ಮಾಹಿತಿಯ ಪ್ರಕಾರಮಂಗಳವಾರ ರಾತ್ರಿ  ಗಂಟೆಯ ಹೊತ್ತಿಗೆಎಲ್.ಬಿ.ನಗರದ ದಕ್ಷಿಣ ಹಸ್ತಿನಾಪುರಂ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ ೨೨. ಸೆಂಟಿಮೀಟರ್ ಮಳೆಯಾಗಿದ್ದು ಹಯತ್ ನಗರಮತ್ತು ರಾಜೀವನಗರದ ಕಪ್ರಾದಲ್ಲಿ ೨೧ ಸೆಂಟಿಮೀಟರ್ ಮಳೆ ಸುರಿದಿದೆ.

ಮಹಾರಾಷ್ಟ್ರದತ್ತ ಚಂಡಮಾರುತ

ಚಂಡಮಾರುತವು ಈಗ ಮಹಾರಾಷ್ಟ್ರದತ್ತ ಸಾಗುತ್ತಿದೆ ಎಂದು ತಿಳಿಸಿರುವ ಭಾರತೀಯ ಹವಾಮಾನ ಇಲಾಖೆ ಹೈದರಾಬಾದಿಗೆ ಹಳದಿ ಎಚ್ಚರಿಕೆ ನೀಡಿದೆ.

ತೆಲಂಗಾಣದ ವಿಕರಾಬಾದ್ಸಿದ್ದಿಪೇಟೆ ಮತ್ತು ಜಗಾಂವ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಬುಧವಾರ ಮತ್ತು ಗುರುವಾರ ರಜೆಯನ್ನು ಘೋಷಿಸಿದೆ.

ತೆಲಂಗಾಣ ಸಚಿವ ಕೆ.ಟಿ.ರಾಮರಾವ್ ಅವರು ಹೆಚ್ಚಿನ ಮಳೆಯ ನಿರೀಕ್ಷೆಯಿರುವುದರಿಂದ ಜನರು ಹೊರಹೋಗದಂತೆ ಮನವಿ ಮಾಡಿದರೆಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೆರೆ ಪೀಡಿತ ಪ್ರದೇಶಗಳ ಅಂದಾಜು ಮಾಡಿದ್ದಾರೆ.

No comments:

Advertisement