My Blog List

Wednesday, October 14, 2020

ಕೇಂದ್ರದಿಂದ ತ್ವರಿತ ಬಡ್ಡಿ ಮನ್ನಾಕ್ಕೆ ಸುಪ್ರೀಂ ಗಡುವು

 ಕೇಂದ್ರದಿಂದ ತ್ವರಿತ ಬಡ್ಡಿ ಮನ್ನಾಕ್ಕೆ ಸುಪ್ರೀಂ ಗಡುವು

ನವದೆಹಲಿಎಂಟು ವಿಭಾಗಗಳಿಗೆ  ಕೋಟಿ ರೂ.ವರೆಗಿನ ಸಾಲಗಳ ಚಕ್ರಬಡ್ಡಿಯನ್ನು (ಬಡ್ಡಿ ಮೇಲಿನ ಬಡ್ಡಿಮನ್ನಾ ಮಾಡುವ ನಿರ್ಧಾರವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಲು ಸರ್ಕಾರ ತ್ವರಿತ ಆದೇಶ ನೀಡಬೇಕು ಎಂದು 2020 ಅಕ್ಟೋಬರ್ 14ರ ಬುಧವಾರ ಕೋರಿದ ಸುಪ್ರೀಂಕೋರ್ಟ್ ಸಾಮಾನ್ಯ ಜನರ ದೀಪಾವಳಿ ಸರ್ಕಾರದ ಕೈಯಲ್ಲಿದೆ’ ಎಂದು ಹೇಳಿ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ನವೆಂಬರ್ ೨ರವರೆಗೆ ಗಡುವು ನೀಡಿತು

ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ನ್ಯಾಯಮೂರ್ತಿಗಳಾದ ಎಂ.ಆರ್ಶಾ ಮತ್ತು ಆರ್ ಸುಭಾಷ್ ರೆಡ್ಡಿ ಅವರ ನೇತೃತ್ವದ ನ್ಯಾಯಪೀಠವು ಕೇಂದ್ರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ  ಕೋಟಿ ರೂ.ವರೆಗಿನ ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ ಮಾಡುವ ನಿರ್ಧಾರ ಜಾರಿಗೆ ತರಲು ಸರ್ಕಾರ ಮೀನಾ-ಮೇಷ ಎಣಿಸುತ್ತಿರುವುದೇಕೆ? ಎಂದು ಪ್ರಶ್ನಿಸಿತು.

ಚಕ್ರಬಡ್ಡಿ ಮನ್ನಾ ಮಾಡುವ ನಿರ್ಧಾರವನ್ನು ಜಾರಿಗೆ ತರಲು ಒಂದು ತಿಂಗಳು ಅಗತ್ಯವಿಲ್ಲಇದು ಸರ್ಕಾರಕ್ಕೆ ಭೂಷಣವಲ್ಲ’ ಎಂದು ನ್ಯಾಯಮೂರ್ತಿ ಅಶೋಕ ಭೂಷಣ್ ಹೇಳಿದರು ವಿಷಯದಲ್ಲಿ ಕ್ರಮ ಕೈಗೊಳ್ಳಲು ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸಾಕಷ್ಟು ಸಮಯವನ್ನು ನೀಡಿದೆನೀವು ನಿರ್ಧಾರ ಕೈಗೊಂಡಿರುವಾಗ ಅದರ ಜಾರಿಗೆ ಸರ್ಕಾರ ಏಕೆ ಸಮಯ ತೆಗೆದುಕೊಳ್ಳುತ್ತಿದೆ? ಎಂದು ಅವರು ಕೇಳಿದರು.

ಕೇಂದ್ರವು ಸಾಮಾನ್ಯ ಜನರಿಗೆ ಪ್ರಯೋಜನ ಲಭಿಸುವಂತೆ ತನ್ನ ನಿರ್ಧಾರವನ್ನು ಆಧರಿಸಿ ಅಗತ್ಯ ಆದೇಶಗಳನ್ನು ನೀಡಬೇಕು ಎಂದು ನ್ಯಾಯಪೀಠ ಒತ್ತಾಯ ಪೂರ್ವಕವಾಗಿ ಹೇಳಿತು.

ಕೇಂದ್ರವು ತಮ್ಮ ಪರವಾಗಿ ನಿರ್ಧಾರ ತೆಗೆದುಕೊಂಡಿದೆ ಎಂಬುದು ಜನರಿಗೆ ತಿಳಿದಿದೆಯಾದರೂಸರ್ಕಾರವು ಸಾಮಾನ್ಯ ಜನರ ದುಃಸ್ಥಿತಿಯನ್ನು ನೋಡಬೇಕು ಎಂದು ನ್ಯಾಯಮೂರ್ತಿ ಶಾ ಅವರು ತುಷಾರ ಮೆಹ್ತಾ ಅವರಿಗೆ ಹೇಳಿದರುಸಾಮಾನ್ಯ ಜನರು ಕೆಲವು ದೃಢ ಫಲಿತಾಂಶವನ್ನು ಬಯಸುತ್ತಾರೆ’ ಎಂದು ಅವರು ನುಡಿದರು.

ಸರ್ಕಾರವು ಸಾಮಾನ್ಯ ಜನರ ದುಃಸ್ಥಿತಿಯನ್ನು ಪರಿಗಣಿಸಿದೆ ಮತ್ತು ಅನಗತ್ಯವಾಗಿ ತನ್ನ ನಿರ್ಧಾರವನ್ನು ವಿಳಂಬಗೊಳಿಸುವುದರಿಂದ ಅದು ಏನನ್ನೂ ಗಳಿಸುವುದಿಲ್ಲಆದರೆ ಕೆಲವು ವಿಧಿವಿಧಾನಗಳನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಮೆಹ್ತಾ ಹೇಳಿದರು.

ಸರ್ಕಾರ ತನ್ನ ನಿರ್ಧಾರವನ್ನು ಜಾರಿಗೆ ತರಲು ಸುತ್ತೋಲೆ ಹೊರಡಿಸಬೇಕಾಗಿತ್ತುಬ್ಯಾಂಕುಗಳು ಚಕ್ರಬಡ್ಡಿಯನ್ನು  ಮನ್ನಾ ಮಾಡಲಿದ್ದುನಂತರ ಅವರು ಎಂಟು ವಿಭಾಗಗಳ ಸಾಲದಲ್ಲಿ  ಕೋಟಿ ರೂ.ಗಳವರೆಗೆ ಮರುಪಾವತಿ ಪಡೆಯುತ್ತಾರೆ ಎಂದು ಮೆಹ್ತಾ ಉತ್ತರಿಸಿದರು.

"ಇದನ್ನು ಕಾರ್ಯಗತಗೊಳಿಸಲುಬ್ಯಾಂಕುಗಳು ಸರಿಯಾದ ವಿಧಿವಿಧಾನ ರೂಪಿಸಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕುಎಂದು ತುಷಾರ ಮೆಹ್ತ ಹೇಳಿದರು.

ನ್ಯಾಯಾಲಯವು  ವಿಷಯವನ್ನು ನವೆಂಬರ್ನಲ್ಲಿ ಆಲಿಸಲಿದೆ ಮತ್ತು ಅಷ್ಟರಲ್ಲಿ ಕೇಂದ್ರವು ತನ್ನ ನಿರ್ಧಾರವನ್ನು ಜಾರಿಗೆ ತರಲು ಕೈಗೊಂಡ ಕ್ರಮಗಳನ್ನು ತಿಳಿಸಬೇಕು ಎಂದು ನ್ಯಾಯಮೂರ್ತಿ ಭೂಷಣ್ ಹೇಳಿದರು. " ನಿರ್ಧಾರವನ್ನು ಅನುಷ್ಠಾನಗೊಳಿಸಲು ಸುತ್ತೋಲೆ ಹೊರಡಿಸಲು ಸರ್ಕಾರದಿಂದ ಆದೇಶವನ್ನು ನಾವು ಬಯಸುತ್ತೇವೆ’ ಎಂದು ಅವರು ಹೇಳಿದರು.

ಕೇಂದ್ರದ ನಿರ್ಧಾರವನ್ನು ಸ್ವಾಗತಿಸುವುದಾಗಿ ನ್ಯಾಯಪೀಠ ಪುನರುಚ್ಚರಿಸಿತುಆದರೆ ಒಂದೇ ವಿಷಯವೆಂದರೆ ಅದನ್ನು ಪ್ರಾಯೋಗಿಕವಾಗಿ ಜಾರಿಗೆ ತರಬೇಕುಸಾಮಾನ್ಯ ಜನರ ದೀಪಾವಳಿ ಸರ್ಕಾರದ ಕೈಯಲ್ಲಿದೆ’ ಎಂದು ನ್ಯಾಯಮೂರ್ತಿ ಶಾ ಹೇಳಿದರು.

ಹೆಚ್ಚಿನ ವಿಚಾರಣೆಯನ್ನು ನವೆಂಬರ್  ರಂದು ನಡೆಸಲು ಸುಪ್ರೀಕೋರ್ಟ್ ನಿಗದಿಪಡಿಸಿತು.

ಸಾಲಕಂತು ಮರುಪಾವತಿ ಸ್ಥಗಿತದ ಅವಧಿಯಲ್ಲಿ ಸಣ್ಣಸೂಕ್ಷ್ಮ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇಮತ್ತು ವೈಯಕ್ತಿಕ ಸಾಲಗಳ ಮೇಲಿನ ಚಕ್ರ ಬಡ್ಡಿಯನ್ನು  ಕೋಟಿ ರೂ.ಗಳವರೆಗೆ ಮನ್ನಾ ಮಾಡಲು ಸರ್ಕಾರ ಒಪ್ಪಿದೆ. 

No comments:

Advertisement