My Blog List

Monday, October 19, 2020

ಕೊರೋನಾ ಕಾರಣ ವಿಳಂಬ, ಶೀಘ್ರದಲ್ಲೇ ಬರಲಿದೆ ಸಿಎಎ: ಜೆ.ಪಿ.ನಡ್ಡಾ

 ಕೊರೋನಾ ಕಾರಣ ವಿಳಂಬ, ಶೀಘ್ರದಲ್ಲೇ ಬರಲಿದೆ ಸಿಎಎ: ಜೆ.ಪಿ.ನಡ್ಡಾ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕದ ಕಾರಣ (ಕೋವಿಡ್ -೧೯) ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನ ವಿಳಂಬವಾಗಿದೆ, ಶೀಘ್ರದಲ್ಲೇ ಅದನ್ನು ಜಾರಿಗೆ ತರಲಾಗುವುದು ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಜಗತ್ ಪ್ರಕಾಶ್ ನಡ್ಡಾ 2020 ಅಕ್ಟೋಬರ್ 19 ಸೋಮವಾರ ಹೇಳಿದರು.

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಸಾಮಾಜಿಕ ಗುಂಪುಗಳ ಜೊತೆಗಿನ ಸಭೆಯನ್ನುದ್ದೇಶಿಸಿ ನಡ್ಡಾ ಮಾತನಾಡುತ್ತಿದ್ದರು. ಮುಂದಿನ ವರ್ಷ ತಮಿಳುನಾಡು, ಕೇರಳ ಮತ್ತು ಅಸ್ಸಾಂ ಜೊತೆಗೆ ಪಶ್ಚಿಮ ಬಂಗಾದಲ್ಲಿಯೂ ಚುನಾವಣೆ ನಡೆಯಲಿದೆ.

ಬಿಜೆಪಿ ಮತ್ತು ಮೋದಿ ಜಿ ಅವರ ಮೂಲ ನೀತಿ ಒಳಗೊಳ್ಳುವಿಕೆ - ಸಬ್ಕಾ ಸಾಥ್, ಸಬ್ಕಾ ವಿಕಾಸ್. ಇತರ ಪಕ್ಷಗಳ ನೀತಿ ಸಮಾಜವನ್ನು ವಿಭಜಿಸಿ, ಪ್ರತ್ಯೇಕವಾಗಿ ಇರಿಸಿ ಆಳುವುದು ಎಂದು ನಡ್ಡಾ ಹೇಳಿದರು.

ಮಮತಾ ಸರ್ಕಾರದ ಅಡಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂದೂ ಸಮುದಾಯಕ್ಕೆ ದೊರೆತ ಏಟುಗಳನ್ನು ನೀವು ನೋಡಿರಬೇಕು. ಈಗ, ಇದನ್ನು ಅರಿತುಕೊಂಡಾಗ, ಸಮಾಜದ ಪ್ರತಿಯೊಬ್ಬ ಸದಸ್ಯರನ್ನು ಸೇರಿಸಲು ಪ್ರಯತ್ನಗಳು ನಡೆಯುತ್ತಿವೆ. ಇವರು ಮತ ಬ್ಯಾಂಕ್ ರಾಜಕೀಯವನ್ನು ಮಾತ್ರ ಮಾಡುತ್ತಾರೆ, ಅಧಿಕಾರದಲ್ಲಿರಲು ಮಾತ್ರ ರಾಜಕೀಯ ಮಾಡುತ್ತಾರೆ ಎಂದು ಅವರು ಹೇಳಿದರು.

ದೇಬೇಂದ್ರ ನಾಥ್ ರೇ ಘಟನೆಯಿಂದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೆ ನೋವುಂಟಾಗಿದೆ. ಅವರು ಸಾಮಾಜಿಕ ಪ್ರತಿನಿಧಿಯಾಗಿದ್ದರು. ಸರಿಯಾದ ತೀರ್ಮಾನಕ್ಕೆ ಬರಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ ಎಂದು ಅವರು ನುಡಿದರು.

ಪಶ್ಚಿಮ ಬಂಗಾಳದ ಸ್ಥಳೀಯ ಉತ್ಪನ್ನಗಳ ಪಟ್ಟಿಯನ್ನು ತಯಾರಿಸಲು, ಅವರಿಗೆ ಮಾರ್ಗಸೂಚಿ ಮತ್ತು ಯೋಜನೆಯನ್ನು ರೂಪಿಸಲು ನಾನು ನಮ್ಮ ಸಂಸದರಿಗೆ ಕರೆ ನೀಡುತ್ತೇನೆ ಮತ್ತು ಮೋದಿ ಸರ್ಕಾರವು ಅದನ್ನು ಸರಿಯಾಗಿ ಬ್ರಾಂಡ್ ಮಾಡುತ್ತದೆ ಮತ್ತು ರಾಜ್ಯದ ಸ್ಥಳೀಯ ವ್ಯಾಪಾರಿಗಳಿಗೆ ಸರಿಯಾದ ಮಾರುಕಟ್ಟೆಯನ್ನು ತರುತ್ತದೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ ಎಂದು ನಡ್ಡಾ ಹೇಳಿದರು.

ಆತ್ಮ ನಿರ್ಭರ ಭಾರತ ಪ್ಯಾಕೇಜ್ ಅಡಿಯಲ್ಲಿ ಎಫ್ಪಿಒ ಮತ್ತು ಕೃಷಿ ಮೂಲಸೌಕರ್ಯಗಳಿಗಾಗಿ ಲಕ್ಷ ಕೋಟಿ ರೂ. ಒದಗಿಸಲಾಗುವುದು ಅದರ ಅಡಿಯಲ್ಲಿ ನಮ್ಮ ರೈತರಿಗಾಗಿ ಶೈತ್ಯಾಗಾರಗಳು ಮತ್ತು ಸಾಮಾನ್ಯ ssssಸಂಗ್ರಹಾಗಾರಗಳನ್ನು ನಿರ್ಮಿಸಲಾಗುವುದು. ಪಶ್ಚಿಮ ಬಂಗಾಳದಲ್ಲಿ ಪಿಎಂ-ಕಿಸಾನ್ ಮ್ಮಾನ್ ನಿಧಿ ಯೋಜನೆ ಅನುಷ್ಠಾನಕ್ಕೆ ಮಮತಾ ಸರ್ಕಾರ ಅವಕಾಶ ನೀಡಿಲ್ಲ. ನಾವು ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ರೈತರಿಗೆ ಯೋಜನೆಯನ್ನು ಒದಗಿಸುತ್ತೇವೆ ಎಂದು ಬಿಜೆಪಿ ಅಧ್ಯಕ್ಷ ಭರವಸೆ ನೀಡಿದರು.

ದುಃಖಕರವೆಂದರೆ, ಕಿಸಾನ್ ಸಮ್ಮನ್ ನಿಧಿಯನ್ನು ಬಂಗಾಳದಲ್ಲಿ ಜಾರಿಗೆ ತರಲು ಮಮತಾ ಜಿ ಸರ್ಕಾರ ಅನುಮತಿ ನೀಡಲಿಲ್ಲ. ಬಂಗಾಳದ ಎಪ್ಪತ್ತಾರು ಲಕ್ಷ ರೈತರಿಗೆ ಸೌಲಭ್ಯಗಳನ್ನು ನಿರಾಕರಿಸಲಾಗಿದೆ ಎಂದು ಅವರು ಹೇಳಿದರು.

No comments:

Advertisement