My Blog List

Sunday, October 11, 2020

ಶ್ರೀರಾಮುಲು ಖಾತೆ ಬದಲು

 ಶ್ರೀರಾಮುಲು ಖಾತೆ ಬದಲು

ಬೆಂಗಳೂರು: ಕರ್ನಾಟಕ ರಾಜ್ಯ ಸಚಿವ ಸಂಪುಟದಲ್ಲಿ 2020 ಅಕ್ಟೋಬರ್ 11ರ ಭಾನುವಾರ
 
ಮಾಡಲಾದ ಮಹತ್ವದ ಬದಲಾವಣೆಯಲ್ಲಿ ಬಿ ಶ್ರೀರಾಮುಲು ಅವರ ಆರೋಗ್ಯ ಖಾತೆಯನ್ನು ಬದಲಾಯಿಸಿ ವೈದ್ಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಹೆಚ್ಚುವರಿಯಾಗಿ ವಹಿಸಲಾಯಿತು. ಸಚಿವ ಬಿ ಶ್ರೀರಾಮುಲು ಅವರಿಗೆ  ಸಮಾಜ ಕಲ್ಯಾಣ ಖಾತೆ ಜವಾಬ್ದಾರಿಯನ್ನು ನೀಡಲಾಯಿತು.

ಹಿಂದೆ ಸಮಾಜ ಕಲ್ಯಾಣ ಖಾತೆ ಸಚಿವ ಗೋವಿಂದ ಕಾರಜೋಳ ಬಳಿಯಿತ್ತು. ಈಗ ಡಿಸಿಎಂ ಅವರ ಬಳಿ ಕೇವಲ ಲೋಕೋಪಯೋಗಿ ಇಲಾಖೆ ಹೊಣೆ ಮಾತ್ರ ಇದೆ. ಬಹುದಿನಗಳಿಂದ ಶ್ರೀರಾಮುಲು ಅವರು ಖಾತೆ ಬದಲಾವಣೆ ಮಾಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರೆನ್ನಲಾಗಿದ್ದು, ಅವರ ಬೇಡಿಕೆ ಮಣಿದು ಖಾತೆ ಬದಲಾಯಿಸಲಾಯಿತು ಎನ್ನಲಾಯಿತು.

No comments:

Advertisement