My Blog List

Friday, October 9, 2020

ಚೀನಾದ ’ಟಿಕ್-ಟಾಕ್’ಗೆ ಪಾಕಿಸ್ತಾನ ನಿರ್ಬಂಧ

 ಚೀನಾದ ಟಿಕ್-ಟಾಕ್ಗೆ ಪಾಕಿಸ್ತಾನ ನಿರ್ಬಂಧ

ಭದ್ರತೆಗಾಗಿ ಅಲ್ಲ, ಅಶ್ಲೀಲ ವಿಷಯಕ್ಕಾಗಿ..!

ನವದೆಹಲಿ: ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರವು ಚೀನಾದ ವಿಡಿಯೋ ಹಂಚಿಕೆ ಅಪ್ಲಿಕೇಶನ್ ಟಿಕ್-ಟಾಕ್ನ್ನು 2020 ಅಕ್ಟೋಬರ್ 09ರ ಶುಕ್ರವಾರ ನಿರ್ಬಂಧಿಸಿತು. ಆದರೆ ಭಾರತ, ಅಮೆರಿಕ ದೇಶಗಳಂತೆ ಭದ್ರತೆಯ ಕಾರಣಕ್ಕಾಗಿ ಅಲ್ಲ, ಬದಲಿಗೆ ಅಶ್ಲೀಲ ವಿಷಯಗಳನ್ನು ಪ್ರಸಾರ ಮಾಡುತ್ತಿರುವ ಕಾರಣಕ್ಕಾಗಿ..!

ಪಾಕಿಸ್ತಾನದ ಸುದ್ದಿ ಚಾನೆಲ್ ಜಿಯೋ ನ್ಯೂಸ್ ವರದಿಯ ಪ್ರಕಾರ, ಕಾನೂನುಬಾಹಿರ ಆನ್ಲೈನ್ ವಿಷಯವನ್ನು ಪೂರ್ವಭಾವಿಯಾಗಿ ನಿಯಂತ್ರಿಸಲು ಪರಿಣಾಮಕಾರಿ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವಂತೆ ಸರ್ಕಾರ ನೀಡಿದ ಸೂಚನೆಗಳನ್ನು ಅನುಸರಿಸಲು ಚೀನಾದ ಅಪ್ಲಿಕೇಶನ್ ವಿಫಲವಾಗಿದೆ ಎನ್ನಲಾಯಿತು.

ಅಮೆರಿಕ, ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ವರ್ಷ ಸಮಸ್ಯೆಗಳನ್ನು ಎದುರಿಸುತ್ತಿರುವ ಟಿಕ್-ಟಾಕ್ ಆಪ್ಗೆ  ತನ್ನ ವೇದಿಕೆಯಲ್ಲಿ ಹಂಚಿಕೊಳ್ಳುವ ವಿಷಯಗಳನ್ನು ಅತಿರೇಕಗೊಳಿಸದಂತೆ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರವು ಜುಲೈ ತಿಂಗಳಲ್ಲಿ ಅಂತಿಮ ಎಚ್ಚರಿಕೆ ನೀಡಿತ್ತು.

"ವೀಡಿಯೊ-ಹಂಚಿಕೆ ಅಪ್ಲಿಕೇಶನ್ನಲ್ಲಿ ಅನೈತಿಕ ಮತ್ತು ಅಸಭ್ಯ ವಿಷಯ ಬಗ್ಗೆ ಸಮಾಜದ ಹಲವಾರು ವರ್ಗದ ಜನರು ತಮ್ಮ ದೂರುಗಳನ್ನು ನೀಡಿರುವುದರಿಂದ ನಿರ್ಬಂಧ ವಿಧಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.

ಜುಲೈ ತಿಂಗಳಲ್ಲಿ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ ನೀಡಿದ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಟಿಕ್-ಟಾಕ್, ೨೦೧೯ ಉತ್ತರಾರ್ಧದಲ್ಲಿ ಪಾಕಿಸ್ತಾನದ . ಮಿಲಿಯನ್ (೩೭ ಲಕ್ಷ) ವಿಡಿಯೋಗಳನ್ನು ನಿಯಮಾವಳಿ ಉಲ್ಲಂಘನೆಗಾಗಿ ಕಿತ್ತು ಹಾಕಲಾಗಿದೆ ಎಂದು ಹೇಳಿದೆ.

ಸಮಯದಲ್ಲಿ ಶೇಕಡಾ ೯೮ರಷ್ಟು ವಿಡಿಯೋಗಳನ್ನು ವರದಿ ಮಾಡುವ ಮೊದಲು ತೆಗೆದುಹಾಕಲಾಗಿತ್ತು ಮತ್ತು ಮತ್ತು ಶೇಕಡಾ ೮೯ ವಿಡಿಯೋಗಳನ್ನು "ಒಂದೇ ಒಂದು ವೀಕ್ಷಣೆಗೂ ಮುನ್ನ ತೆಗೆದುಹಾಕಲಾಗಿತ್ತು ಎಂದು ಟಿಕ್-ಟಾಕ್ ವಕ್ತಾರರು ಹೇಳಿದ್ದಾರೆ.

ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರವು ಟಿಕ್-ಟಾಕ್ಗೆ ಅಂತಿಮ ನೋಟಿಸ್ ನೀಡಿ, ದೂರುಗಳಿಗೆ ಸ್ಪಂದಿಸಲು ಅವಕಾಶ ನೀಡಲಾಗಿತ್ತು. ಆದರೂ ಆಪ್ನಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ನಿರಂತರವಾಗಿ ಪ್ರಕಟಿಸಲಾಗುತ್ತಿರುವುದು ಕಂಡು ಬಂದದ್ದರಿಂದ ಅದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ.

ಟಿಕ್-ಟಾಕ್ನಲ್ಲಿ ಸತತವಾಗಿ ಪ್ರಕಟಗೊಳ್ಳುತ್ತಿದ್ದ ವಿಷಯಗಳ ಬಗೆಗಿನ ದೂರುಗಳು ಮತ್ತು ವಿಷಯಗಳ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ ಅಂತಿಮ ಸೂಚನೆ ನೀಡಿತು ಮತ್ತು ಪರಿಣಾಮಕಾರಿಯಾಗಿ ಕಾನೂನುಬಾಹಿರ ಆನ್ಲೈನ್ ವಿಷಯದ ಪೂರ್ವಭಾವಿ ಮಿತಗೊಳಿಸುವಿಕೆಯ ಯಾಂತ್ರಿಕ ವ್ಯವಸ್ಥೆ ಅಭಿವೃದ್ಧಿ ಪಡಿಸುವಂತೆ ಪ್ರಾಧಿಕಾರ ನೀಡಿದ ಸೂಚನೆಗಳನ್ನು ಅನುಸರಿಸಲು ಸಾಕಷ್ಟು ಸಮಯವನ್ನು ನೀಡಿತು ಎಂದು  ಪ್ರಾಧಿಕಾರ ತಿಳಿಸಿದೆ.

ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರವು ತನ್ನ ಸೂಚನೆಯನ್ನು ಟಿಕ್-ಟಾಕ್ಗೆ ತಿಳಿಸಿದ್ದು, ಕಾನೂನುಬಾಹಿರ ವಿಷಯವನ್ನು ಮಿತಗೊಳಿಸಿ ತೃಪ್ತಿದಾಯಕ ಕಾರ್ಯವಿಧಾನವನ್ನು ಟಿಕ್-ಟಾಕ್ ಅಭಿವೃದ್ಧಿಪಡಿಸಿದರೆ ತಾನು ನಿರ್ಧಾರವನ್ನು ಮರು ಪರಿಶೀಲಿಸಬಹುದು ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.

No comments:

Advertisement