My Blog List

Monday, October 12, 2020

ಪಾಕಿಸ್ತಾನ, ಚೀನಾದಿಂದ ಗಡಿ ವಿವಾದ ಸೃಷ್ಟಿಗೆ ವ್ಯವಸ್ಥಿತ ಕಾರ್ಯತಂತ್ರ

 ಪಾಕಿಸ್ತಾನ, ಚೀನಾದಿಂದ ಗಡಿ ವಿವಾದ ಸೃಷ್ಟಿಗೆ ವ್ಯವಸ್ಥಿತ ಕಾರ್ಯತಂತ್ರ

ನವದೆಹಲಿ: ಭಾರತದ ಉತ್ತರ ಮತ್ತು ಪೂರ್ವ ಗಡಿನಾಡುಗಳು ಉದ್ವಿಗ್ನವಾಗಿರುವಂತೆ ನೋಡಿಕೊಳ್ಳಲು ಪಾಕಿಸ್ತಾನ ಮತ್ತು ಚೀನಾಗಳುಯೋಜನಾಬದ್ಧ ಕಾರ್ಯತಂತ್ರದ  ಅಡಿಯಲ್ಲಿ ಗಡಿ ವಿವಾದಗಳನ್ನು ಸೃಷ್ಟಿಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ೨೦೨೦ ಅಕ್ಟೋಬರ್ ೧೨ ರ ಸೋಮವಾರ ಹೇಳಿದರು.

"ನಮ್ಮ ಉತ್ತರ ಮತ್ತು ಪೂರ್ವ ಗಡಿಗಳಲ್ಲಿ ಸೃಷ್ಟಿಸಲಾದ ಪರಿಸ್ಥಿತಿಗಳ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ಮೊದಲನೆಯದಾಗಿ, ಇದು ಪಾಕಿಸ್ತಾನದ ತಂತ್ರವಾಗಿತ್ತು, ಈಗ ಚೀನಾ ಕೂಡಾ ಯೋಜನಾಬದ್ಧ ಕಾರ್‍ಯಾಚರಣೆಯ ಅಡಿಯಲ್ಲಿ ಗಡಿವಿವಾದವನ್ನು ಸೃಷ್ಟಿಸುತ್ತಿದೆಎಂದು ರಕ್ಷಣಾ ಸಚಿವರು ನುಡಿದರು.

ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ನಿರ್ಮಿಸಿದ ೪೪ ಸೇತುವೆಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ರಾಜನಾಥ್ ಸಿಂಗ್ಪಾಕಿಸ್ತಾನ ಮತ್ತು ಚೀನಾ ಜೊತೆಗೆ ನಾವು ಸುಮಾರು ,೦೦೦ ಕಿಲೋಮೀಟರ್ (ಕಿಮೀ) ಗಡಿಯನ್ನು ಹೊಂದಿದ್ದೇವೆ, ಅಲ್ಲಿ ಪ್ರತಿದಿನವೂ ಉದ್ವಿಗ್ನತೆ ಇರುತ್ತದೆ ಎಂದು ಹೇಳಿದರು.

ಗಡಿಯ ಮುಂಚೂಣಿ ಪ್ರದೇಶಗಳಿಗೆ ಸಂಪರ್ಕವನ್ನು ಒದಗಿಸಲು ಬಿಆರ್‌ಒ ಒಟ್ಟು ೧೦೨ ಸೇತುವೆಗಳ ನಿರ್ಮಾಣವನ್ನು ಮಾಡುತ್ತಿದೆ.

ಪಾಕಿಸ್ತಾನದ ಜೊತೆಗಿನ ಗಡಿ ನಿಯಂತ್ರಣ ರೇಖೆಯಲ್ಲಿ ಹೆಚ್ಚಿರುವ ಉದ್ವಿಗ್ನತೆ ಮತ್ತು ಚೀನಾದ ಜೊತೆಗಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮತ್ತು ಭಾರತೀಯ ಸೇನೆ ಮುಖಾಮುಖಿಯಾಗಿರುವ ಹೊತ್ತಿನಲ್ಲಿ ರಕ್ಷಣಾ ಸಚಿವರಿಂದ ಅಭಿಪ್ರಾಯಗಳು ಬಂದಿವೆ.

ಚೀನಾ ಜೊತೆಗಿನ ಉದ್ವಿಗ್ನತೆ ತಗ್ಗಿಸವ ಮತ್ತು ಘರ್ಷಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕಳೆದ ತಿಂಗಳುಗಳಿಂದ ನಡೆಸಲಾಗುತ್ತಿರುವ ಮಾತುಕತೆ ಪ್ರಯತ್ನಗಳು ಯಾವುದೇ ಮುನ್ನಡೆ ಸಾಧಿಸಿಲ್ಲ.

ಪಾಕಿಸ್ತಾನವು ಕದಡಿದ ನೀರಿನಲ್ಲಿ ಮೀನು ಹಿಡಿಯುವುದನ್ನು ತಡೆಯಲು ಮತ್ತು ಉಭಯ ರಂಗಗಳಲ್ಲಿ ಉದ್ವಿಗ್ನತೆಯು ಸಂಘರ್ಷವಾಗಿ ಪರಿಣಮಿಸುವುದನ್ನು ತಡೆಯಲು ಭಾರತೀಯ ಸಶಸ್ತ್ರ ಪಡೆಗಳು ಪಶ್ಚಿಮ ಭಾಗದಲ್ಲಿ  ಕಟ್ಟುನಿಟ್ಟಿನ ಜಾಗರೂಕತೆಯನ್ನು ಇಟ್ಟುಕೊಂಡಿವೆ.

"ಚೀನಾ ಮತ್ತು ಪಾಕಿಸ್ತಾನದ ನಡುವಿನ ಸಹಜೀವನದ ಸಂಬಂಧವನ್ನು ಗಮನಿಸಿದರೆ, ಭಾರತಕ್ಕೆ ಒಂದು ದೊಡ್ಡ ಬೆದರಿಕೆಯನ್ನು ತಳ್ಳಿಹಾಕಲಾಗುವುದಿಲ್ಲ. ಭಾರತದ ವಿರುದ್ಧ ಸಂಘರ್ಷವನ್ನು ಪ್ರಾರಂಭಿಸಲು ಅವರಿಗೆ ಕಾರ್‍ಯಸಾಧ್ಯವಾಗುವುದು ಯಾವಾಗ ಎಂಬುದು ಪ್ರಶ್ನೆ ಉತ್ತರ ಸೇನೆಯ ಮಾಜಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಬಿಎಸ್ ಜಸ್ವಾಲ್ (ನಿವೃತ್ತ) ಹೇಳಿದರು.

ಗಡಿ ಉದ್ವಿಗ್ನತೆಯ ಹೊರತಾಗಿಯೂ ಭಾರತ ತನ್ನ ಗಡಿ ಮೂಲಸೌಕರ್ಯವನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದೆ.

ಹಿನ್ನೆಲೆಯಲ್ಲಿ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಉದ್ಘಾಟಿಸಿದ ಸೇತುವೆಗಳು ದೇಶದ ಉತ್ತರದ ಅತ್ಯಂತ ಹೊರಠಾಣೆ ಡಿಬಿಒಗೆ ಸಂಪರ್ಕವನ್ನು ಒದಗಿಸುವ ಕಾರ್ಯತಂತ್ರದ ಡಾರ್ಬುಕ್-ಶ್ಯೋಕ್-ದೌಲತ್ ಬೇಗ್ ಓಲ್ಡಿ (ಡಿಎಸ್-ಡಿಬಿಒ) ರಸ್ತೆಯಲ್ಲಿ ಒಂದನ್ನು ಒಳಗೊಂಡಿದೆ. ಟ್ಯಾಂಕ್ ಸೇರಿದಂತೆ ೭೦ ಟನ್ ತೂಕದ ವಾಹನಗಳ ಚಲನೆಗೆ ಸೇತುವೆಗಳು ಸಮರ್ಥವಾಗಿವೆ.

ಅರುಣಾಚಲ ಪ್ರದೇಶದ ನೆಚಿಫು ಸುರಂಗಕ್ಕೆ ಅಡಿಪಾಯ ಹಾಕಿದ ಸಚಿವರು, ಗಡಿ ಮೂಲಸೌಕರ್ಯ ಯೋಜನೆಗಳು ಕಾರ್ಯತಂತ್ರz ನಿಟ್ಟಿನಿಂದ  ಮಹತ್ವದ್ದಾಗಿದ್ದು, ಈಶಾನ್ಯ ರಾಜ್ಯದ ದೂರದ ಪ್ರದೇಶಗಳಿಗೆ ಸಂಪರ್ಕವನ್ನು ಒದಗಿಸುತ್ತದೆ ಎಂದು ಹೇಳಿದರು.

ತವಾಂಗ್‌ಗೆ ಹೋಗುವ ರಸ್ತೆಯಲ್ಲಿರುವ ೪೫೦ ಮೀಟರ್ ದ್ವಿಪಥ ಸುರಂಗವು ನೆಚಿಫು Pಣಿವೆಯಾದ್ಯಂತ ಸರ್ವ ಋತು ಸಂಪರ್ಕವನ್ನು ಖಚಿತಪಡಿಸುತ್ತದೆ ಮತ್ತು ಅಪಘಾತ ಸಂಭಾವ್ಯ ಪ್ರದೇಶಗಳಲ್ಲಿ ಸುರಕ್ಷಿತ ಮಾರ್ಗವನ್ನು ಒದಗಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಕೊರೊನಾವೈರಸ್ ಕಾಯಿಲೆ (ಕೋವಿಡ್ -೧೯) ಸಾಂಕ್ರಾಮಿಕ ಮತ್ತು ಗಡಿ ಉದ್ವಿಗ್ನತೆ ಹಾಗೂ ಪಾಕಿಸ್ತಾನ ಮತ್ತು ಚೀನಾದಿಂದ ಉಂಟಾದ ವಿವಾದಗಳನ್ನು ದೇಶವು ದೃಢನಿಶ್ಚಯದಿಂದ ಎದುರಿಸಿದೆ ಆದರೆ ಅಭಿವೃದ್ಧಿಯ ಎಲ್ಲಾ ಕ್ಷೇತ್ರಗಳಲ್ಲಿಐತಿಹಾಸಿಕ ಬದಲಾವಣೆಗಳನ್ನು ತರುತ್ತಿದೆ ಎಂದು ಸಿಂಗ್ ಹೇಳಿದರು.

ಹೊಸ ಸೇತುವೆಗಳು  ಏಳು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿವೆ. ಪಶ್ಚಿಮ, ಉತ್ತರ ಮತ್ತು ಈಶಾನ್ಯ ವಲಯಗಳ ದೂರದ ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಸ್ಥಳೀಯ ಜನರ ಆಕಾಂಕ್ಷೆಗಳನ್ನು ಪೂರೈಸುತ್ತದೆ ಎಂದು ಸಿಂಗ್ ಹೇಳಿದರು. "ಅವುಗಳು ವರ್ಷಪೂರ್ತಿ ಸಶಸ್ತ್ರ ಪಡೆಗಳ ಸಾರಿಗೆ ಮತ್ತು ಜಾರಿ ಅಗತ್ಯತೆಗಳನ್ನು ಸಹ ಪೂರೈಸುತ್ತವೆ ಎಂದು ಸಚಿವರು ಹೇಳಿದರು.

ಬಿಆರ್‌ಒ ಅವರ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದ ಸಿಂಗ್, ದೇಶಕ್ಕೆ ೪೪ ಸೇತುವೆಗಳನ್ನು ಒಂದೇ ಸಮಯದಲ್ಲಿ ಸಮರ್ಪಿಸಿರುವುದು ಒಂದು ದಾಖಲೆಯಾಗಿದೆ ಎಂದು ಹೇಳಿದರು. ೨೦೦೮ ಮತ್ತು ೨೦೧೬ ನಡುವೆ ,೩೦೦ ಕೋಟಿ ರೂ.ಗಳಿಂದ ,೬೦೦ ಕೋಟಿ ರೂ.ಗಳಷ್ಟು ಇದ್ದ ಬಿಆರ್‌ಒ ವಾರ್ಷಿಕ ಬಜೆಟ್ ಸಾಂಕ್ರಾಮಿಕದ ಹೊರತಾಗಿಯೂ ೧೧,೦೦೦ ಕೋಟಿ ರೂ.Uಳಿಗೆ ಏರಿದೆ ಎಂದು ಅವರು ನುಡಿದರು.

ರಸ್ತೆ ನಿರ್ಮಾಣವನ್ನು ಚುರುಕುಗೊಳಿಸುವುದರ ಜೊತೆಗೆ, ೨೦೧೯ ರಲ್ಲಿ ೨೮ ಪ್ರಮುಖ ಸೇತುವೆಗಳನ್ನು ಪೂರ್ಣಗೊಳಿಸುವ ಮೂಲಕ ಸೇತುವೆಗಳ ನಿರ್ಮಾಣಕ್ಕೆ ಸಂಸ್ಥೆ ಒತ್ತು ನೀಡಿದೆ ಎಂದು ಬಿಆರ್‌ಒ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಸಿಂಗ್ ಹೇಳಿದರು. ವರ್ಷ ೧೦೨ ಪ್ರಮುಖ ಸೇತುವೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.

No comments:

Advertisement