My Blog List

Wednesday, October 28, 2020

ತೇಜಸ್ವಿ ಯಾದವ್ ‘ಜಂಗಲ್ ರಾಜ್‌ನ ಯುವರಾಜ’: ಮೋದಿ

 ತೇಜಸ್ವಿ ಯಾದವ್ಜಂಗಲ್ ರಾಜ್ ಯುವರಾಜ’: ಮೋದಿ

ಮೋತಿಪುರ (ಮುಜಾಫ್ಫರಪುರ): ಭವ್ಯ ಮೈತ್ರಿ ಅಥವಾ ಆರ್ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಮಹಾ ಘಟಬಂಧನ್ ಅಧಿಕಾರಕ್ಕೆ ಬಂದರೆ ಬಿಹಾರ ರಾಜ್ಯದ ಯುವಕರಿಗೆ ೧೦ ಲಕ್ಷ ( ಮಿಲಿಯನ್) ಉದ್ಯೋಗ ನೀಡುವುದಾಗಿ ರಾಷ್ಟ್ರೀಯ ಜನತಾದಳ (ಆರ್ಜೆಡಿ) ಕುಡಿ ತೇಜಸ್ವಿ ಯಾದವ್ ನೀಡಿದ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ 2020 ಅಕ್ಟೋಬರ್ 28 ಬುಧವಾರ ಅಪಹಾಸ್ಯ ಮಾಡಿದರು.

ಮೋತಿಪುರ ಸಕ್ಕರೆ ಕಾರ್ಖಾನೆ ಆವರಣದ ಕ್ರೀಡಾ ಮೈದಾನದಲ್ಲಿ ಭಾರೀ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ,  ತೇಜಸ್ವಿ ಅವರ ಭರವಸೆಯ ಮೇಲೆ ತೀವ್ರ ದಾಳಿ ನಡೆಸಿ ಅವರನ್ನುಯುವರಾಜ್ ಆಫ್ ಜಂಗಲ್ ರಾಜ್’ (ಅರಾಜಕತೆಯ ರಾಜಕುಮಾರ) ಎಂದು ಬಣ್ಣಿಸಿದರು.

ಭವ್ಯಮೈತ್ರಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಬಣ್ಣಿಸಲಾಗಿರುವ ತೇಜಸ್ವಿ ಅವರ ಕಾಲೆಳೆದ ಪ್ರಧಾನಿ ಜನರು ನಿಮಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ. ಆದರೆ ಬಿಹಾರದ ಜನರು ನನಗಿಂತ ಅವರನ್ನು ಚೆನ್ನಾಗಿ ಬಲ್ಲರು. ನಿಮಗಾಗಿ ಮೀಸಲಿಟ್ಟಿರುವ ಅಭಿವೃದ್ಧಿ ನಿಧಿಗಳೊಂದಿಗೆ ಹಗರಣಗಳಲ್ಲಿ ಪಾಲ್ಗೊಳ್ಳಲು ಅವರು ಅಧಿಕಾರಕ್ಕೆ ಬರಲು ಬಯಸುತ್ತಾರೆ. ಅವರ ಬಗ್ಗೆ ಜಾಗರೂಕರಾಗಿರಿ ಮತ್ತು ಅವರ ಭರವಸೆಗಳಿಂದ ವಿಮುಖರಾಗಬೇಡಿ. ಅರಾಜಕತೆ ಮತ್ತು ಬೂಟಾಟಿಕೆಯನ್ನು ರಾಜ್ಯದ ಆಡಳಿತದ ಹೆಸರಿನಲ್ಲಿ ಅವರು ನೀಡಬಹುದು. ಸುಲಿಗೆ, ಅಪಹರಣ ಮತ್ತು ಕೊಲೆಯಂತಹ ಅಪರಾಧ ಚಟುವಟಿಕೆಗಳಲ್ಲಿ ವ್ಯವಹರಿಸುವ ಕಾಟೇಜ್ ಕೈಗಾರಿಕೆಗಳನ್ನು ನಡೆಸಲು ಅವರಿಗೆ ಹಕ್ಕುಸ್ವಾಮ್ಯವಿದೆಎಂದು ಪ್ರಧಾನಿ ಗಡಚಿಕ್ಕುವ ಚಪ್ಪಾಳೆಗಳುಮೋದಿ’ ’ಮೋದಿಘೋಷಣೆಗಳ ಮಧ್ಯೆ ಹೇಳಿದರು.

ಮತದಾನದ ದಿನ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಕೋವಿಡ್-೧೯ರ ಮುಂಜಾಗರೂಕತಾ ಕ್ರಮಗಳೊಂದಿಗೆ ಬಂದು ಮುಖ್ಯಮಂತ್ರಿ ನಿತೀಶ ಕುಮಾರ್ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ ಅನುಭವಿ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಪ್ರಧಾನಿ ಜನರನ್ನು ಒತ್ತಾಯಿಸಿದರು.

"ಅವರು ನಿಮಗೆ ೧೦ ಲಕ್ಷ ಸರ್ಕಾರಿ ಉದ್ಯೋಗಗಳನ್ನು ನೀಡುವ ಭರವಸೆ ನೀಡುತ್ತಿದ್ದಾರೆ. ಆದರೆ ಅದು ಮರುಭೂಮಿಯಲ್ಲಿರುವ ಮರೀಚಿಕೆಯಂತೆ. ಅವರು ಅಧಿಕಾರಕ್ಕೆ ಮತ ಹಾಕಿದರೆ, ಸರ್ಕಾರಿ, ಅಥವಾ ಖಾಸಗಿ ಎಲ್ಲ ಕ್ಷೇತ್ರಗಳಲ್ಲಿನ ಉದ್ಯೋಗಗಳು ಕಣ್ಮರೆಯಾಗುತ್ತವೆ. ಏಕೆಂದರೆ ಅವರು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಂಪೆನಿಗಳು ಬಿಹಾರದಿಂದ ನಿರ್ಗಮಿಸುತ್ತವೆ.  ರಾಜ್ಯದ ಅಭಿವೃದ್ಧಿಗೆ ಅವರ ಬಳಿ ಯಾವುದೇ ಮಾರ್ಗ ನಕ್ಷೆ ಇಲ್ಲಎಂದು ಮೋದಿ ಹೇಳಿದರು.

ಸುಮಾರು ೨೩ ನಿಮಿಷಗಳ ಕಾಲ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಬರೂರಾಜ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಅರುಣ್ ಕುಮಾರ್ ಸಿಂಗ್ ಪರವಾಗಿ ಮತ ಯಾಚಿಸಿದರು.

ರಾಮಾಯಣ ಸರ್ಕ್ಯೂಟ್ ನಿರ್ಮಾಣ ಕಾರ್ಯಗಳ ಜೊತೆಗೆ ಮುಜಾಫ್ಫರಪುರ ಜಿಲ್ಲೆಯ ಪಕ್ಕದಲ್ಲಿರುವ ವೈಶಾಲಿ ಮತ್ತು ಕುಂಡಲ್ ಗ್ರಾಮದಲ್ಲಿ ಬುದ್ಧ ಮತ್ತು ಜೈನ್ ಸರ್ಕ್ಯೂಟ್ಗಳ ಅಭಿವೃದ್ಧಿ ನಡೆಯುತ್ತಿದೆ. ಎರಡು ಯೋಜನೆಗಳ ಕಾಮಗಾರಿಗಳು ಪೂರ್ಣಗೊಂಡ ನಂತರ, ವೈಶಾಲಿ, ಸಮಸ್ತಿಪುರ, ಮುಜಾಫ್ಫರಪುರ ಮತ್ತು ಪೂರ್ವ ಚಂಪಾರಣ್ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾವಿರಾರು ಯುವಕರಿಗೆ ಉದ್ಯೋಗ ಸಿಗಲಿದೆ" ಎಂದು ಪ್ರಧಾನಿ ಹೇಳಿದರು.

ಮುಜಾಫ್ಫರಪುರವನ್ನು ಗಂಗಾ ಉರ್ಜಾ ಯೋಜನೆಯೊಂದಿಗೆ ಜೋಡಿಸುವ ಬಗ್ಗೆ ಅವರು ಮಾತನಾಡಿದರು, ಇದು ರಾಷ್ಟ್ರೀಯ ಪ್ರಾಮುಖ್ಯತೆಯ ಅನಿಲ ಕೊಳವೆ ಯೋಜನೆಯಾಗಿದೆ, ಇದು ಪೂರ್ಣಗೊಳ್ಳುವ ಹಾದಿಯಲ್ಲಿದೆ ಎಂದು ಮೋದಿ ಹೇಳಿದರು.

ಚುನಾವಣೆಯು ಬಿಹಾರದ ಭವಿಷ್ಯವನ್ನು ನಿರ್ಧರಿಸುತ್ತದೆ. ನೀವು ಬುದ್ಧಿವಂತರು ಮತ್ತು ನಿಮಗೆ ಯಾವುದು ಉತ್ತಮ ಎಂದು ತಿಳಿಯಿರಿ. ‘ಸುಶಾಸನ್’ (ಉತ್ತಮ ಆಡಳಿತ) ರಾಜ್ಯದ ಅಭಿವೃದ್ಧಿಯ ಪ್ರಮುಖ ಮಾನದಂಡವಾಗಿದೆ. ಮತದಾನದ ದಿನದಂದು ನೀವು ಮತ ಚಲಾಯಿಸುವ ಮೊದಲು ಚೆನ್ನಾಗಿ ಯೋಚಿಸಿಎಂದು ಅವರು ಹೇಳಿದರು.

ಮತದಾನ

ಬಿಹಾರದ ೭೧ ಸ್ಥಾನಗಳಿಗೆ ಮೊದಲ ಹಂv ಮತದಾನ ಬುಧವಾರ ನಡೆಯಿತು.

೨೪೩ ಸದಸ್ಯರ ಬಿಹಾರ ವಿಧಾನಸಭೆಯ ಎರಡನೇ ಮತ್ತು ಮೂರನೇ ಹಂತ ಕ್ರಮವಾಗಿ ನವೆಂಬರ್ ಮತ್ತು ರಂದು ನಡೆಯಲಿದೆ.

ಚುನಾವಣಾ ಫಲಿತಾಂಶಗಳನ್ನು ನವೆಂಬರ್ ೧೦ ರಂದು ಪ್ರಕಟಿಸಲಾಗುವುದು.

ಕೆರಳಿದ ಕೋವಿಡ್ -೧೯ ಸಾಂಕ್ರಾಮಿಕದ ಮಧ್ಯೆ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ.

No comments:

Advertisement