My Blog List

Friday, October 16, 2020

ಕೃಷ್ಣ ’ಜನ್ಮಭೂಮಿ’ವಿವಾದ: ಅರ್ಜಿ ಅಂಗೀಕರಿಸಿದ ಮಥುರಾ ನ್ಯಾಯಾಲಯ

 ಕೃಷ್ಣ ಜನ್ಮಭೂಮಿವಿವಾದ: ಅರ್ಜಿ ಅಂಗೀಕರಿಸಿದ ಮಥುರಾ ನ್ಯಾಯಾಲಯ

ಮಥುರಾ: ಉತ್ತರ ಪ್ರದೇಶದ ಮಥುರಾ ನಗರದ ಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿರುವ ಮಸೀದಿಯನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮಥುರಾ ನ್ಯಾಯಾಲಯವು 2020 ಅಕ್ಟೋಬರ್ 16  ಶುಕ್ರವಾರ ವಿಚಾರಣೆಗೆ ಅಂಗೀಕರಿಸಿತು.

ಕಳೆದ ತಿಂಗಳು, ಮಥುರಾ ಸಿವಿಲ್ ನ್ಯಾಯಾಲಯವು ಈದ್ಗಾ ಮಸೀದಿಯನ್ನು ಕೃಷ್ಣ ಜನ್ಮಭೂಮಿಯ ಮೇಲೆ ನಿರ್ಮಿಸಲಾಗಿದೆ ಎಂದು ಆರೋಪಿಸಿ ಅದನ್ನು ಕಿತ್ತು ಹಾಕುವಂತೆ ಕೋರಿ ಸಲ್ಲಿಸಲಾಗಿದ್ದ ಖಟ್ಲೆಯನ್ನು ವಜಾಗೊಳಿಸಿತ್ತು.

ಜಿಲ್ಲಾ ನ್ಯಾಯಾಧೀಶ ಸಾಧನಾ ರಾಣಿ ಠಾಕೂರ್ ಅವರ ನ್ಯಾಯಾಲಯವು ಮೇಲ್ಮನವಿಯನ್ನು ಶುಕ್ರವಾರ ಅಂಗೀಕರಿಸಿದೆ. ನ್ಯಾಯಾಲಯವು ನವೆಂಬರ್ ೧೮ ರಂದು ಮುಂದಿನ ವಿಚಾರಣೆಯನ್ನು ನಡೆಸಲಿದೆ.

ಕತ್ರ ಕೇಶವ್ ದೇವ್ ದೇವಸ್ಥಾನದ ೧೩ ಎಕರೆ ಆವರಣದಲ್ಲಿರುವ ಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿರುವ ೧೭ ನೇ ಶತಮಾನದ ಶಾಹಿ ಈದ್ಗಾ ಮಸೀದಿನ್ನು ಕಿತ್ತು ಹಾಕುವಂತೆ ಕೋರಿ ಕೆಲವು ವ್ಯಕ್ತಿಗಳ ಸಮೂಹವೊಂದು ಮಥುರಾ ನ್ಯಾಯಾಲಯಕ್ಕೆ ಮೆಟ್ಟಿಲೇರಿದೆ.

ಹಿರಿಯ ಸಿವಿಲ್ ನ್ಯಾಯಾಧೀ ಛಾಯಾ ಶರ್ಮಾ ಅವರ ನ್ಯಾಯಾಲಯದಲ್ಲಿ ಹಿಂದೆ ಸಲ್ಲಿಸಿದ್ದ ಅರ್ಜಿಯಲ್ಲಿ, ಶ್ರೀ ಕೃಷ್ಣ ಜನ್ಮಸ್ಥಾನ್ ಸೇವಾ ಸಂಸ್ಥಾನ ಮತ್ತು ಶಾಹಿ ಈದ್ಗಾ ನಿರ್ವಹಣಾ ಸಮಿತಿ ನಡುವೆ ಮಾಡಿಕೊಳ್ಳಲಾದ ಭೂ ಒಪ್ಪಂದವನ್ನು ಅನುಮೋದಿಸಿ ೧೯೬೮gಲ್ಲಿ  ಮಥುರಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸುವಂತೆ ಕೋರಲಾಗಿತ್ತು.

"ಮುಂದಿನ ಸ್ನೇಹಿತ ಅಥವಾ ನೆಕ್ಸ್ಟ್ ಫ್ರೆಂಡ್ ರಂಜನಾ ಅಗ್ನಿಹೋತ್ರಿ ಮತ್ತು ಇತರ ಏಳು ಜನರ ಮೂಲಕ ಬಾಲ ದೇವತೆ ಭಗವಾನ್ ಶ್ರೀಕೃಷ್ಣ ವಿರಾಜಮಾನ್ ಪರವಾಗಿ ಕಳೆದ ತಿಂಗಳು ಮೊಕದ್ದಮೆ ಹೂಡಲಾಗಿತ್ತು. ಖಟ್ಲೆಯನ್ನು ನೇರವಾಗಿ ನಿರ್ವಹಿಸಲು ಸಾಧ್ಯವಾಗದ ವ್ಯಕ್ತಿಯನ್ನು ಪ್ರತಿನಿಧಿಸುವ ವ್ಯಕ್ತಿಗೆ ಕಾನೂನು ಪರಿಭಾಷೆಯಲ್ಲಿ ಮುಂದಿನ ಸ್ನೇಹಿತ ಅಥವಾ ನೆಕ್ಸ್ಟ್ ಫ್ರೆಂಡ್ ಪದವನ್ನು ಬಳಸಲಾಗುತ್ತದೆ. ಉತ್ತರ ಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿ, ಶಾಹಿ ಮಸೀದಿ ಈದ್ಗ್ಗಾ ಟ್ರಸ್ಟ್, ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಮತ್ತು ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥೆ ಇವರು ಖಟ್ಲೆಯಲ್ಲಿ ಪ್ರತಿವಾದಿಗಳಾಗಿದ್ದಾರೆ ಎಂದು ಜೈನ್ ಹೇಳಿದ್ದಾರೆ.

ಆದರೆ, ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕುವಂತೆ ಕೋರಿ ಅರ್ಜಿ ಸಲ್ಲಿಸಿದ್ದನ್ನು ಪುರೋಹಿತರ ಮತ್ತೊಂದು ಸಂಸ್ಥೆ ಖಂಡಿಸಿತ್ತು. "ಕೆಲವು ಹೊರಗಿನವರು" ಕ್ಷುಲ್ಲಕ ದೇವಾಲಯ-ಮಸೀದಿ ಸಮಸ್ಯೆಯನ್ನು ಎತ್ತುವ ಮೂಲಕ ಮಥುರಾದಲ್ಲಿ ಶಾಂತಿಯನ್ನು ಭಂಗಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಖಿಲ ಭಾರತೀಯ ತೀರ್ಥ ಪುರೋಹಿತ್ ಮಹಾಸಭಾ ಅಧ್ಯಕ್ಷ ಮಹೇಶ್ ಪಾಠಕ್ ಹೇಳಿದ್ದಾರೆ.

೨೦ ನೇ ಶತಮಾನದಲ್ಲಿ ಎರಡೂ ಪಕ್ಷಗಳ ನಡುವೆ ರಾಜಿ ಮಾಡಿಕೊಂಡ ನಂತರ ಶ್ರೀಕೃಷ್ಣ ಜನಸ್ಥಾನವಿರುವ ಮಥುರಾದಲ್ಲಿ ಯಾವುದೇ ದೇವಾಲಯ-ಮಸೀದಿ ವಿವಾದಗಳಿಲ್ಲ ಎಂದು ಅವರು ಹೇಳಿದ್ದಾರೆ.

ಪೂಜಾ ಸ್ಥಳಗಳು (ವಿಶೇಷ ನಿಬಂಧನೆಗಳು) ಕಾಯ್ದೆ, ೧೯೯೧ ಪ್ರಕಾರ ದೇಶಕ್ಕೆ ಸ್ವಾತಂತ್ರ್ಯ ಲಭಿಸುವ ಸಮಯದಲ್ಲಿ ಅಸ್ತಿತ್ವದಲ್ಲಿದ್ದಂತೆ ಧಾರ್ಮಿಕ ಸ್ಥಳಗಳ ಸ್ಥಿತಿಯನ್ನು s ಸ್ಥಿರಗೊಳಿಸಲಾಗಿತ್ತು. ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದಕ್ಕೆ ಮಾತ್ರ ಕಾನೂನಿನ ವ್ಯಾಪ್ತಿಯಿಂದ ವಿನಾಯಿತಿ ನೀಡಲಾಗಿತ್ತು.

No comments:

Advertisement