Monday, October 12, 2020

ಕೇಂದ್ರದಿಂದ ಆರ್ಥಿಕ ಚಟುವಟಿಕೆ ಉತ್ತೇಜನಕ್ಕೆ ೭೩,೦೦೦ ಕೋಟಿ ರೂ.

 ಕೇಂದ್ರದಿಂದ ಆರ್ಥಿಕ ಚಟುವಟಿಕೆ
ಉತ್ತೇಜನಕ್ಕೆ ೭೩
,೦೦೦ ಕೋಟಿ ರೂ.

ನವದೆಹಲಿ: ಹಬ್ಬದ ಅವಧಿಯಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನದ ಒಂದು ಭಾಗವನ್ನು ಮುಂಗಡವಾಗಿ ಪಾವತಿಸುವ ಮೂಲಕ ಗ್ರಾಹಕರ ಬೇಡಿಕೆಗೆ ಉತ್ತೇಜನ ಮತ್ತು ಮೂಲ ಸೌಕರ್ಯಗಳಿಗಾಗಿ ೨೫,೦೦೦ ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚ, ರಾಜ್ಯಗಳಿಗೆ ೫೦ ವರ್ಷಗಳ ೧೨,೦೦೦ ಕೋಟಿ ರೂಪಾಯಿಗಳ ಬಡ್ಡಿ ರಹಿತ ಸಾಲ ಒದಗಿಸುವ ಮೂಲಕ ಕೋವಿಡ್ ಹಿನ್ನೆಲೆಯಿಂದ ಕುಸಿತ ಆರ್ಥಿಕತೆಯ ಚೇತರಿಕೆಗೆ ವಿವಿಧ ಕ್ರಮಗಳನ್ನು ಭಾರತ ೨೦೨೦ ಅಕ್ಟೋಬರ್ ೧೨ ರ ಸೋಮವಾರ ಪ್ರಕಟಿಸಿತು.

ಗ್ರಾಹಕ ಬೇಡಿಕೆಗೆ ಉತ್ತೇಜನ ನೀಡುವ ಕ್ರಮಗಳನ್ನು ಪ್ರಕಟಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಸ್ತೆಗಳು, ಬಂದರುಗಳು ಮತ್ತು ರಕ್ಷಣಾ ಯೋಜನೆಗಳಿಗೆ ಹೆಚ್ಚುವರಿಯಾಗಿ ೨೫೦ ಬಿಲಿಯನ್ (೨೫,೦೦೦ ಕೋಟಿ) ರೂಪಾಯಿಗಳನ್ನು ವೆಚ್ಚ ಮಾಡಲಾಗುವುದು ಮತ್ತು ರಾಜ್ಯಗಳಿಗೆ ೨೦೨೧ರ ಮಾರ್ಚ್ ೩೧ರ ಮುನ್ನ ವೆಚ್ಚ ಮಾಡಲು ೫೦ ವರ್ಷಗಳ ಅವಧಿಯ ೧೨,೦೦೦ಕೋಟಿ ರೂಪಾಯಿಗಳ ಬಡ್ಡಿ ರಹಿತ ಸಾಲ ಒದಗಿಸಲಾಗುವುದು ಎಂದು ಹೇಳಿದರು.

ಸರಕು ಮತ್ತು ಸೇವೆಗಳಿಗೆ ತೆರಿಗೆ ವಿನಾಯಿತಿ ಪ್ರಯಾಣ ಭತ್ಯೆಯನ್ನು ಖರ್ಚು ಮಾಡಲು ಸರ್ಕಾರ ತನ್ನ ಉದ್ಯೋಗಿಗಳಿಗೆ ಅವಕಾಶ ನೀಡುತ್ತದೆ ಎಂದೂ ಸೀತಾರಾಮನ್ ನುಡಿದರು.

 " ಎಲ್ಲಾ ಕ್ರಮಗಳು ಒಟ್ಟು ೭೩೦ ಬಿಲಿಯನ್ (೭೩,೦೦೦ ಕೋಟಿ) ರೂಪಾಯಿಗಳ (.೯೬ ಬಿಲಿಯನ್ ಡಾಲರ್) ಹೆಚ್ಚುವರಿ ಬೇಡಿಕೆಯನ್ನು ಸೃಷ್ಟಿಸುವ ಸಾಧ್ಯತೆಯಿದೆ ಮತ್ತು ಪ್ರಸ್ತಾಪಗಳು ಬೇಡಿಕೆಯನ್ನು "ಹಣಕಾಸಿನ ವಿವೇಕಯುತ ರೀತಿಯಲ್ಲಿ ಉತ್ತೇಜಿಸುತ್ತದೆ’ ಎಂದು ಅವರು ನುಡಿದರು.

ರಾಜ್ಯಗಳಿಗೆ ಬಡ್ಡಿ ರಹಿತ ಸಾಲ

ಆರ್ಥಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಬಂಡವಾಳ ಯೋಜನೆಗಳಿಗಾಗಿ ಖರ್ಚು ಮಾಡಲು ರಾಜ್ಯಗಳಿಗೆ ೧೨,೦೦೦ ಕೋಟಿ ರೂಪಾಯಿಗಳ ಬಡ್ಡಿರಹಿತ ೫೦ ವರ್ಷಗಳ ಸಾಲವನ್ನು ಸೀತಾರಾಮನ್ ಘೋಷಿಸಿದರು. ೧೨,೦೦೦ ಕೋಟಿ ರೂಪಾಯಿಗಳಲ್ಲಿ ,೬೦೦ ಕೋಟಿ ರೂಪಾಯಿಗಳನ್ನು ಈಶಾನ್ಯ ರಾಜ್ಯಗಳಿಗೆ ನೀಡಲಾಗುವುದು ಮತ್ತು ೯೦೦ ಕೋಟಿ ರೂಪಾಯಿಗಳನ್ನು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಕ್ಕೆ ನೀಡಲಾಗುವುದು ಎಂದು ಸಚಿವೆ ಹೇಳಿದರು.

ಉಳಿದ ರಾಜ್ಯಗಳಿಗೆ ,೫೦೦ ಕೋಟಿ ರೂ. ಪೂರ್ವ ಘೋಷಿತ ಸುಧಾರಣೆಗಳನ್ನು ಪೂರೈಸುವ ರಾಜ್ಯಗಳಿಗೆ ,೦೦೦ ಕೋಟಿ ರೂಪಾಯಿಗಳ ಸಾಲವನ್ನು ಸಂಪೂರ್ಣವಾಗಿ ಹೊಸ ಅಥವಾ ನಡೆಯುತ್ತಿರುವ ಬಂಡವಾಳ ಯೋಜನೆಗಳಿಗೆ ಖರ್ಚು ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯಗಳು ಗುತ್ತಿಗೆದಾರರು ಮತ್ತು ಪೂರೈಕೆದಾರರ ಬಾಕಿಗಳನ್ನು ಪಾವತಿ ಮಾಡಬಹುದು, ಆದರೆ ೨೦೨೧ ಮಾರ್ಚ್ ೩೧ ಮೊದಲು ಎಲ್ಲಾ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಸಾಲವು ರಾಜ್ಯಗಳ ಪಡೆಯುವ ಮಿತಿಗಳನ್ನು ಮೀರಿರುತ್ತದೆ ಮತ್ತು ಮರುಪಾವತಿಯನ್ನು ೫೦ ವರ್ಷಗಳ ನಂತರ ಏಕಗಂಟಿಗೆ ಮಾಡಬೇಕು ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರದಿಂದ ೨೫ ಸಾವಿರ ಕೋಟಿ ರೂಪಾಯಿಗಳ ಹೆಚ್ಚುವರಿ ಬಂಡವಾಳ ವೆಚ್ಚವನ್ನು ಕೂಡಾ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಇದು .೧೩ ಲಕ್ಷ ಕೋಟಿ ರೂಪಾಯಿಗಳ ಮುಂಗಡಪತ್ರಕ್ಕೆ ಹೆಚ್ಚುವರಿಯಾಗಿ ಇರುತ್ತದೆ. ಹೆಚ್ಚುವರಿ ಹಣವನ್ನು ರಸ್ತೆಗಳು, ರಕ್ಷಣಾ ಮೂಲಸೌಕರ್ಯ, ನೀರು ಸರಬರಾಜು ಮತ್ತು ನಗರಾಭಿವೃದ್ಧಿಗಾಗಿ ಖರ್ಚು ಮಾಡಲಾಗುವುದು ಎಂದು ಸಚಿವರು ಹೇಳಿದರು.

No comments:

Advertisement