Thursday, October 8, 2020

೧೨ ರಾಜ್ಯಗಳಲ್ಲಿ ರಾಜಕೀಯ ಪ್ರಚಾರ ಸಭೆಗಳಿಗೆ ಅವಕಾಶ

 ೧೨ ರಾಜ್ಯಗಳಲ್ಲಿ ರಾಜಕೀಯ ಪ್ರಚಾರ ಸಭೆಗಳಿಗೆ  ಅವಕಾಶ

ನವದೆಹಲಿ: ಚುನಾವಣೆ ನಡೆಯಲಿರುವ ೧೨ ರಾಜ್ಯಗಳ ಸಲುವಾಗಿ ಸೆಪ್ಟೆಂಬರ್ ೩೦ ರಂದು ಹೊರಡಿಸಲಾಗಿದ್ದ ಕೋವಿಡ್ -೧೯ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯವು 2020 ಅಕ್ಟೋಬರ್ 08ರ ಗುರುವಾರ ಪರಿಷ್ಕರಿಸಿತು.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಪರಿಷ್ಕೃತ ಆದೇಶವು ಚುನಾವಣೆ ನಡೆಯಲಿರುವ ೧೨ ರಾಜ್ಯಗಳಲ್ಲಿ ರಾಜಕೀಯ ರಾಲಿಗಳನ್ನು ನಡೆಸಲು ತತ್ ಕ್ಷಣದಿಂದ ಅನುವು ಮಾಡಿಕೊಡುತ್ತದೆ.

ಮೂಲ ಕೋವಿಡ್-೧೯ ಮಾರ್ಗಸೂಚಿ ಪ್ರಕಾರ, ಅಕ್ಟೋಬರ್ ೧೫ರವರೆಗೆ ರಾಲಿಗಳನ್ನು ನಿಷೇಧಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆಯು ಬಿಹಾರದ ಚುನಾವಣಾ ಸಿದ್ಧತೆಗಳ ಮೇಲೆ ಪರಿಣಾಮ ಬೀರುತ್ತದೆ ಏಕೆಂದರೆ ಕೋವಿಡ್ -೧೯ ತಡೆಗಟ್ಟುವ ನಿಯಮಗಳ ಅಡಿಯಲ್ಲಿ ದೊಡ್ಡ ಸಭೆಗಳಿಗೆ ಅನುಮತಿ ನೀಡಲಾಗಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳು ಚುನಾವಣಾ ರ್ಯಾಲಿ ಮತ್ತು ಸಭೆಗಳನ್ನು ನಡೆಸಲು ಸಾಧ್ಯವಿರಲಿಲ್ಲ.

ಬಿಹಾರದ ಹೊರತಾಗಿ, ಚುನಾವಣೆ (ಉಪಚುನಾವಣೆ) ನಡೆಯಲಿರುವ ಇತರ ರಾಜ್ಯಗಳು ತೆಲಂಗಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಕರ್ನಾಟಕ, ಹರಿಯಾಣ, ಜಾರ್ಖಂಡ್, ಛತ್ತೀಸ್ಗಢ, ಮಣಿಪುರ, ನಾಗಾಲ್ಯಾಂಡ್ ಮತ್ತು ಒಡಿಶಾ. ೨೮ ಸ್ಥಾನಗಳಲ್ಲಿ ಉಪ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಕೂಡಾ ಮತದಾನದ ಸಿದ್ಧತೆಗಳು ನಡೆಯುತ್ತಿವೆ.

ಕೋವಿಡ್ -೧೯ ಪ್ರಸರಣ ತಡೆಗಾಗಿ ಕೈಗೊಳ್ಳಲಾಗಿರುವ ನಿರ್ಬಂಧ ಕ್ರಮಗಳನ್ನು ಅನುಸರಿಸುವಂತೆ ಗೃಹ ಸಚಿವಾಲಯವು ಎಲ್ಲಾ ರಾಜಕೀಯ ಪಕ್ಷಗಳನ್ನು ಕೋರಿದೆ. ಸೆಪ್ಟೆಂಬರ್ ೩೦ ರಂದು ಹೊರಡಿಸಲಾದ ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು ಎಂದು ಅದು ಹೇಳಿದೆ.

ಬಿಹಾರ ಮೂರು ಹಂತಗಳಲ್ಲಿ ಮತ ಚಲಾಯಿಸಲಿದೆ. ಮೊದಲ ಹಂತದ ಮತದಾನ ಅಕ್ಟೋಬರ್ ೨೮ರಂದು, ಎರಡನೇ ಹಂತದ ಮತದಾನ ನವೆಂಬರ್ ಮತ್ತು ಮೂರನೇ ಹಂತದ ಮತದಾನ ನವೆಂಬರ್ ರಂದು ನಡೆಯಲಿದೆ. ಚುನಾವಣೆಯ ಫಲಿತಾಂಶಗಳನ್ನು ನವೆಂಬರ್ ೧೦ ರಂದು ಪ್ರಕಟಿಸಲಾಗುವುದು.

No comments:

Advertisement