My Blog List

Saturday, October 31, 2020

‘ತಾರಾ ಪ್ರಚಾರಕ’ ಸ್ಥಾನಮಾನ ರದ್ದು: ಸುಪ್ರೀಂಗೆ ಕಮಲನಾಥ್

 ‘ತಾರಾ ಪ್ರಚಾರಕ ಸ್ಥಾನಮಾನ ರದ್ದು: ಸುಪ್ರೀಂಗೆ ಕಮಲನಾಥ್

ನವದೆಹಲಿ: ಚುನಾವಣಾ ಆಯೋಗವು ತಮ್ಮ ತಾರಾ ಪ್ರಚಾರಕ ಸ್ಥಾನಮಾನ ರದ್ದು ಪಡಿಸಿದ್ದನ್ನು ಪ್ರಶ್ನಿಸಿ, ಕಾಂಗ್ರೆಸ್ ನಾಯಕ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ 2020 ಅಕ್ಟೋಬರ್ 31ರ ಶನಿವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು.

ಇತ್ತೀಚೆಗೆ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ರಾಜಕೀಯ ಪ್ರತಿಸ್ಪರ್ಧಿ ವಿರುದ್ಧ ಕಮಲನಾಥ್ ಅವರು "ಮಾಫಿಯಾ" ಮತ್ತು "ಮಿಲಾವತ್ ಖೋರ್ ಪದಗಳನ್ನು ಬಳಸಿದ್ದರು. ಕಳೆದ ವಾರ, ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಸಚಿವೆ ಇಮಾರ್ತಿ ದೇವಿ ವಿರುದ್ಧ "ಐಟಂ ಪದ ಬಳಸಿದ್ದರು.

ಇಂತಹ ಪದಗಳನ್ನು ಬಳಸಬೇಡಿ ಎಂದು ಚುನಾವಣಾ ಆಯೋಗ ಕಮಲನಾಥ್ ಅವರಿಗೆ ಸೂಚಿಸಿತ್ತು.

ಆದರೂ ಕಮಲನಾಥ್ ವರಸೆ ಬದಲಾಗಿರಲಿಲ್ಲ.  ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು, ಮಾದರಿ ನೀತಿ ಸಂಹಿತೆಯನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕಾಗಿ ಮತ್ತು ನೀಡಲಾದ ಸಲಹೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಕ್ಕಾಗಿ, ಕಮಲನಾಥ್ ಅವರ ತಾರಾ ಪ್ರಚಾರಕ (ಸ್ಟಾರ್ ಕ್ಯಾಂಪೇನರ್) ಸ್ಥಾನಮಾನವನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ ತಾರಾ ಪ್ರಚಾರಕ (ಸ್ಟಾರ್ ಕ್ಯಾಂಪೇನರ್) ಸ್ಥಾನಮಾನವನ್ನು ತತ್ ಕ್ಷಣದಿಂದ ರದ್ದು ಪಡಿಸಲಾಗಿದೆ. ಇಂದಿನಿಂದ ಯಾವುದೇ ಪ್ರಚಾರ ಅಭಿಯಾನವನ್ನು ಕಮಲನಾಥ್ ಕೈಗೊಂಡರೆ, ಅವರ ಪಯಣ, ವಾಸ್ತವ್ಯ ಮತ್ತು ಭೇಟಿಗೆ ಸಂಬಂಧಿಸಿದ ಸಂಪೂರ್ಣ ವೆಚ್ಚವನ್ನು ಆಯಾ ಕ್ಷೇತ್ರದ ಅಭ್ಯರ್ಥಿಯು ಭರಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ತಿಳಿಸಿತ್ತು.

ಹೇಳಿತ್ತು.

ಕಮಲನಾಥ್ ಅವರ ೧೫ ತಿಂಗಳುಗಳ ಸರ್ಕಾರ ೨೦೨೦ರ ಮಾರ್ಚ್ ತಿಂಗಳಲ್ಲಿ ಪತನಗೊಂಡು, ಬಿಜೆಪಿಗೆ ಮತ್ತೆ ಅಧಿಕಾರಕ್ಕೆ ಮರಳಲು ಮಾರ್ಗ ಸುಗಮಗೊಂಡಿತ್ತು.

ರಾಜ್ಯದ ಮತದಾರರು ಸರಳ, ನಿಷ್ಕಪಟ ಮತ್ತು ಬಡವರು, ಆದರೆ ಅವರು ಬುದ್ಧಿವಂತರಾಗಿದ್ದಾರೆ. ಮುಂಬರುವ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂದು ಕಮಲನಾಥ್ ಹೇಳಿದರು. ನವೆಂಬರ್ ರಂದು ರಾಜ್ಯದ ೨೮ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

೨೩೦ ಸದಸ್ಯ ಬಲದ ರಾಜ್ಯ ವಿಧಾನಸಭೆಯ ೨೮ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಅಧಿಕಾರಕ್ಕೆ ಮರಳಲು ಕಾಂಗ್ರೆಸ್ ಎಲ್ಲ ೨೮ ಸ್ಥಾನಗಳನ್ನು ಗೆಲ್ಲಬೇಕಾಗಿದೆ, ಆಡಳಿತಾರೂಢ ಬಿಜೆಪಿಗೆ ಕೇವಲ ಬಹುಮತದ ಮಾಂತ್ರಿಕ ಸಂಖ್ಯೆಯಾದ ೧೧೬ನ್ನು ತಲುಪಲು ಕೇವಲ ಒಂಬತ್ತು ಸ್ಥಾನಗಳು ಬೇಕಾಗುತ್ತವೆ.

"ರಾಜ್ಯದ ಜನರು ವಿಶೇಷವಾಗಿ ೨೮ ಕ್ಷೇತ್ರಗಳ ಮತದಾರರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ,

ಜನರ ಆದೇಶವನ್ನು ವ್ಯಾಪಾರ ಮಾಡುವ ಮೂಲಕ ಅಧಿಕಾರಕ್ಕೆ ಬಂದ (ಬಿಜೆಪಿ) ಸರ್ಕಾರವು ಕಳೆದ ಏಳು ತಿಂಗಳಲ್ಲಿ ಏನನ್ನೂ ಬದಲಾಯಿಸಲು ಸಾಧ್ಯವಾಗಲಿಲ್ಲ ಎಂಬುದು ಅವರಿಗೆ ತಿಳಿದಿದೆ. ರೈತರ ಸ್ಥಿತಿ ಹದಗೆಟ್ಟಿದೆ ಮತ್ತು ನಿರುದ್ಯೋಗ ಹೆಚ್ಚಾಗಿದೆ. ಜನರು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ ಎಂದು ಕಮಲನಾಥ್ ಹೇಳಿದರು.

No comments:

Advertisement