Thursday, October 22, 2020

ಜೆಡಿಯು ಭರವಸೆ: ಯುವಕರು, ಮಹಿಳೆಯರ ಸಬಲೀಕರಣ

 ಜೆಡಿಯು ಭರವಸೆ: ಯುವಕರು, ಮಹಿಳೆಯರ ಸಬಲೀಕರಣ

ಪಾಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗಾಗಿ ಆಡಳಿತಾರೂಢ ಜನತಾದವು (ಯುನೈಟೆಡ್) 2020 ಅಕ್ಟೋಬರ್ 22ರ ಗುರುವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಪಕ್ಷದ ದೃಷ್ಟಿ ದಾಖಲೆಯನ್ನು ಜೆಡಿಯು ರಾಜ್ಯ ಘಟಕ ಅಧ್ಯಕ್ಷ ಬಶಿಷ್ಠ ನರೈನ್ ಸಿಂಗ್ ಬಿಡುಗಡೆ ಮಾಡಿದರು.

"ಬಡ ಹೊಟೆ ವಾಡೆ, ಅಬ್ ಹೈಂ ನಾಯ್ ಇರೇಡ್ (ಭರವಸೆಗಳು ಈಡೇರುತ್ತಿವೆ, ಈಗ ಹೊಸ ಉದ್ದೇಶಗಳು) ಎಂಬ ಘೋಷಣೆಯೊಂದಿಗೆ ಜನತಾದಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.

ರಾಜ್ಯದ ಯುವಕರ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು, ಆರ್ಥಿಕ ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ಬಿಹಾರದ ಯುವಕರು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸಲು ಪಕ್ಷವು ಸಂಕಲ್ಪಿಸಿದೆ ಎಂದು ಸಿಂಗ್ ಹೇಳಿದರು. "ಸಾತ್ ನಿಶ್ಚಯ್ ( ಭರವಸೆಗಳು) ಯೋಜನೆಯ ಎರಡನೇ ಪುನರಾವರ್ತನೆಯನ್ನೂ ಅವರು ಘೋಷಿಸಿದರು.

ತಮ್ಮ ಪಕ್ಷ ಚುನಾವಣೆಯಲ್ಲಿ ಗೆದ್ದರೆ ೧೦ ಲಕ್ಷ ಜನರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದಕ್ಕಾಗಿ ಜೆಡಿಯು ಮುಖಂಡ ರಾಷ್ಟ್ರೀಯ ಜನತಾದಳ (ಆರ್ಜೆಡಿ) ಮುಖಂಡ ತೇಜಸ್ವಿ ಯಾದವ್ ಅವರನ್ನು ಟೀಕಿಸಿದರು.

ಜೆಡಿಯು ಮತ್ತು ಅದರ ನಾಯಕ ನಿತೀಶ್ ಕುಮಾರ್ ಸುಳ್ಳು ಭರವಸೆ ನೀಡುವುದಿಲ ಎಂದು ಸಿಂಗ್ ಹೇಳಿದರು. "ನಾವು ಏನೇ ಭರವಸೆ ನೀಡಿದ್ದರೂ ಅದನ್ನು ಈಡೇರಿಸುತ್ತೇವೆ. ಅನನುಭವಿ ನಾಯಕರು ಇಂತಹ ಭರವಸೆಗಳನ್ನು ನೀಡುತ್ತಾರೆ. ೧೦ ಲಕ್ಷ ಉದ್ಯೋಗಗಳಿಗೆ ಬೇಕಾದ ೫೮,೦೦೦ ಕೋಟಿ ರೂ.ಗಳನ್ನು ಹೇಗೆ ವ್ಯವಸ್ಥೆ ಮಾಡುತ್ತಾರೆ ಎಂದು ಅವರು ನಮಗೆ ತಿಳಿಸಬೇಕು. ಜನರು ಬಿಹಾರದ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಇಂತಹ ಭರವಸೆಗಳನ್ನು ನೀಡುತ್ತಾರೆ ಎಂದು ಸಿಂಗ್ ಹೇಳಿದರು.

ತೇಜಸ್ವಿ ಯಾದವ್ ಅವರು ಬಿಹಾರ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟಕ್ಕೆ ಮುಖ್ಯ ಎದುರಾಳಿಯಾಗಿರುವ ಐದು ಪಕ್ಷಗಳ ಮಹಾ ಘಟಬಂಧನ್ (ಮಹಾ ಮೈತ್ರಿ) ಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ.

ಇದಕ್ಕೆ ಮುನ್ನ ಗುರುವಾರ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಡುಗಡೆ ಮಾಡಿದ ಬಿಜೆಪಿ ಪ್ರಣಾಳಿಕೆಯು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ (ಐಸಿಎಂಆರ್) ಕೊರೋನವೈರಸ್ ಲಸಿಕೆಗೆ ಅನುಮೋದನೆ ಲಭಿಸಿದ ತತ್ ಕ್ಷಣವೇ ಬಿಹಾರದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಭರವಸೆ ನೀಡಿತು.

ಬಿಹಾರದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಎನ್ಡಿಎ ಆಳ್ವಿಕೆಯಲ್ಲಿ ತೀವ್ರ ಏರಿಕೆ ಕಂಡಿದೆ ಎಂದು ಸೀತಾರಾಮನ್ ಹೇಳಿದರು. "ಎನ್ಡಿಎ ಸರ್ಕಾರದ ಅವಧಿಯಲ್ಲಿ ರಾಜ್ಯದ ಜಿಡಿಪಿ ಇದೇ ಮೊದಲ ಬಾರಿಗೆ ಶೇಕಡಾ ೩ರಿಂದ ೧೧.೩ಕ್ಕೆ ಏರಿದೆ. ಏರಿಕೆ ಆದದ್ದು ೧೫ ವರ್ಷಗಳ ಜಂಗಲ್ ರಾಜ್ ಅವಧಿಯಲ್ಲಿ ಅಲ್ಲ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರಕ್ಕೆ ಆಗಮಿಸುವುದಕ್ಕೆ ಒಂದು ದಿನ ಮೊದಲು ಬಿಜೆಪಿ, ಜೆಡಿಯು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಲಾಗಿದೆ. ಬಿಜೆಪಿಯ ಪ್ರಣಾಳಿಕೆಯು ಆತ್ಮನಿರ್ಭರ್ (ಸ್ವಾವಲಂಬಿ) ಬಿಹಾರ ಮಾಡುವ ಪ್ರಧಾನ ಮಂತ್ರಿಯ ದೂರದೃಷ್ಟಿಯ ಬಗ್ಗೆ ಹೇಳುತ್ತದೆ.

ಭವ್ಯ ಮೈತ್ರಿ (ಮಹಾ ಘಟ ಬಂಧನ್) ಈಗಾಗಲೇ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ) ತನ್ನ ಪ್ರಣಾಳಿಕೆಯನ್ನು ಪಾಟ್ನಾದಲ್ಲಿ ಬುಧವಾರ ಬಿಡುಗಡೆ ಮಾಡಿತು.

No comments:

Advertisement