My Blog List

Friday, October 9, 2020

ವಿಶ್ವ ಆಹಾರ ಯೋಜನೆಗೆ ೨೦೨೦ರ ನೊಬೆಲ್ ಶಾಂತಿ ಪ್ರಶಸ್ತಿ

 ವಿಶ್ವ ಆಹಾರ ಯೋಜನೆಗೆ ೨೦೨೦ರ ನೊಬೆಲ್ ಶಾಂತಿ ಪ್ರಶಸ್ತಿ

ಸ್ಟಾಕ್ ಹೋಮ್: ೨೦೨೦ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ವಿಶ್ವ ಸಂಸ್ಥೆಯ ಭಾಗವಾಗಿರುವ ವಿಶ್ವ ಆಹಾರ ಯೋಜನೆಯನ್ನು (ಡಬ್ಲ್ಯುಎಫ್ಪಿ) 2020 ಅಕ್ಟೋಬರ್ 09ರ ಶುಕ್ರವಾರ ಆಯ್ಕೆ ಮಾಡಲಾಯಿತು.

ಹಸಿವು ನೀಗಿಸುವ ನಿಟ್ಟಿನಲ್ಲಿ ಡಬ್ಲ್ಯುಎಫ್ಪಿ ನಡೆಸಿರುವ ಕಾರ್ಯಕ್ರಮಗಳು, ಪ್ರಯತ್ನಗಳನ್ನು ಪರಿಗಣಿಸಿ ನೊಬೆಲ್ ಸಮಿತಿಯು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಘರ್ಷಣೆ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಸಂಸ್ಥೆ ಶ್ರಮಿಸಿದೆ ಹಾಗೂ ಹಸಿವನ್ನು ಯುದ್ಧಕ್ಕೆ ಅಸ್ತ್ರವಾಗಿ ಬಳಸುವುದನ್ನು ತಪ್ಪಿಸುವ ಪ್ರಯತ್ನಗಳನ್ನು ಮಾಡಿದೆ.

ಬಾರಿ ನೊಬೆಲ್ ಶಾಂತಿ ಪ್ರಶಸ್ತಿಗೆ ೨೧೧ ವ್ಯಕ್ತಿಗಳು ಹಾಗೂ ೧೦೭ ಸಂಸ್ಥೆಗಳು ನಾಮನಿರ್ದೇಶನವಾಗಿದ್ದವು.

ಪ್ರಶಸ್ತಿಯು ೧೦ ಮಿಲಿಯನ್ ಕ್ರೋನಾ (ಅಂದಾಜು ಕೋಟಿ ರೂಪಾಯಿ) ನಗದು ಬಹುಮಾನ ಮತ್ತು ಚಿನ್ನದ ಪದವನ್ನು ಒಳಗೊಂಡಿರಲಿದೆ. ಡಿಸೆಂಬರ್ ೧೦ರಂದು ನಾರ್ವೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

No comments:

Advertisement