My Blog List

Friday, October 30, 2020

ಮುಂಬೈಯಲ್ಲಿ ಫ್ರಾನ್ಸ್ ವಿರೋಧಿ ಪ್ರತಿಭಟನೆ

 ಮುಂಬೈಯಲ್ಲಿ  ಫ್ರಾನ್ಸ್ ವಿರೋಧಿ ಪ್ರತಿಭಟನೆ

ನವದೆಹಲಿ: ಶಿಕ್ಷಕನೊಬ್ಬನ ಶಿರಚ್ಛೇದ ಘಟನೆಯ ಬಳಿಕ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರ ಮೇಲೆ ವೈಯಕ್ತಿಕ ದಾಳಿಗಳು ನಡೆದುದನ್ನು ಅನುಸರಿಸಿ ಭಾರತವು ಫ್ರಾನ್ಸ್ ಜೊತೆ ಒಗ್ಗಟ್ಟು ವ್ಯಕ್ತ ಪಡಿಸಿದ ಒಂದು ದಿನದ ಬಳಿಕ ಮುಂಬೈ ಮತ್ತು ಭೋಪಾಲ್ನಲ್ಲಿ ಪ್ರತಿಭಟನೆಗಳು ನಡೆದಿದ್ದು, ಪ್ರತಿಭಟನಕಾರರ ತುಳಿತಕ್ಕೆ ಒಳಗಾಗಿದ್ದ ಮ್ಯಾಕ್ರೋನ್ ಪೋಸ್ಟರುಗಳನ್ನು ಪೊಲೀಸರು 2020 ಅಕ್ಟೋಬರ್ 30 ಶುಕ್ರವಾರ ರಸ್ತೆಗಳಿಂದ ತೆಗೆದುಹಾಕಿದರು.

ಮ್ಯಾಕ್ರೋನ್ ಪೋಸ್ಟರುಗಳ ಮೇಲೆ ಜನರು ವಾಕಿಂಗ್ ಮಾಡುವ, ವಾಹನಗಳು ಸಂಚರಿಸುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪ್ರತಿಭಟನೆಯ ಹಿಂದೆ ರಝಾ ಅಕಾಡೆಮಿ ಮುಸ್ಲಿಂ ಸಂಘಟನೆ ಇದೆ ಎಂದು ವರದಿಗಳು ತಿಳಿಸಿದವು.

ಫ್ರೆಂಚ್ ಶಿಕ್ಷಕನ ಹತ್ಯೆ ಮತ್ತು ಮ್ಯಾಕ್ರೋನ್ ಮೇಲೆ ವೈಯಕ್ತಿಕ ದಾಳಿಯನ್ನು ಖಂಡಿಸಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, "ಅಂತಾರಾಷ್ಟ್ರೀಯ ಭಾಷಣದ ಅತ್ಯಂತ ಮೂಲಭೂತ ಮಾನದಂಡಗಳನ್ನು ಉಲ್ಲಂಘಿಸಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಮೇಲೆ ಸ್ವೀಕಾರಾರ್ಹವಲ್ಲದ ಭಾಷೆಯಲ್ಲಿ ನಡೆದಿರುವ ವೈಯಕ್ತಿಕ ದಾಳಿಯನ್ನು ನಾವು ಬಲವಾಗಿ ವಿವರಿಸುತ್ತೇವೆ ಎಂದು ಹೇಳಿದೆ.

"ಫ್ರೆಂಚ್ ಶಿಕ್ಷಕನ ಪ್ರಾಣವನ್ನು ಭಯಂಕರ ರೀತಿಯಲ್ಲಿ ತೆಗೆದ ಕ್ರೂರ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ, ಅದು ಜಗತ್ತನ್ನು ಬೆಚ್ಚಿಬೀಳಿಸಿದೆ. ಯಾವುದೇ ಕಾರಣಕ್ಕೂ ಅಥವಾ ಯಾವುದೇ ಸಂದರ್ಭದಲ್ಲೂ ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ ಎಂದು ಹೇಳಿಕೆ ತಿಳಿಸಿದೆ.

ನೈಸ್ನಲ್ಲಿ ಗುರುವಾರ ನಡೆದ ಭಯೋತ್ಪಾದಕ ಕೃತ್ಯದಲ್ಲಿ ಮಹಿಳೆಯ ಶಿರಚ್ಛೇದ ನಡೆದಿದ್ದು ಇದೇ ವೇಳೆಗೆ ಇನ್ನಿಬ್ಬರು ಚೂರಿ ಇರಿತದಿಂದ ಸಾವನ್ನಪ್ಪಿದ್ದಾರೆ. ಪ್ರತ್ಯೇಕ ಘಟನೆಯೊಂದರಲ್ಲಿ, ಫ್ರೆಂಚ್ ನಗರ ಅವಿಗ್ನಾನ್ನಲ್ಲಿ ಬಂದೂಕು ಚಲಾಯಿಸುವ ವ್ಯಕ್ತಿಯನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದಾಳಿಯನ್ನು ಖಂಡಿಸಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಫ್ರಾನ್ಸಿಗೆ ಭಾರತದ ಬೆಂಬಲವನ್ನು ಪ್ರತಿಪಾದಿಸಿದರು.

ನೈಸ್ ನಗರದ ಚರ್ಚ್ನೊಳಗೆ ನಡೆದ ಭೀಕರ ದಾಳಿ ಸೇರಿದಂತೆ ಫ್ರಾನ್ಸ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ, ದಾಳಿ ಸಂತ್ರಸ್ತರ ಕುಟುಂಬಗಳಿಗೆ ಮತ್ತು ಫ್ರಾನ್ಸ್ ಜನರಿಗೆ ನಮ್ಮ ಆಳವಾದ ಮತ್ತು ಹೃತ್ಪೂರ್ವಕ ಸಂತಾಪಗಳು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಫ್ರಾನ್ಸ್ ಜೊತೆ ನಿಂತಿದೆ ಎಂದು ಪ್ರಧಾನಿ ಮೋದಿ ಗುರುವಾರ ಟ್ವೀಟ್ ಮಾಡಿದ್ದರು.

ಅಕ್ಟೋಬರ್ ೧೬ ರಂದು, ಫ್ರೆಂಚ್ ಶಿಕ್ಷಕ ಸ್ಯಾಮ್ಯುಯೆಲ್ ಪ್ಯಾಟಿ ತಮ್ಮ ತರಗತಿಯಲ್ಲಿ ಪ್ರವಾದಿಯ ವ್ಯಂಗ್ಯಚಿತ್ರವನ್ನು ತೋರಿಸಿದ ಆರೋಪದ ಮೇಲೆ ಅವರ ಶಿರಚ್ಛೇದನ ಮಾಡಲಾಯಿತು. ಶೋಕಾಚರಣೆಯಲ್ಲಿ ಪಾಲ್ಗೊಂಡ ಮ್ಯಾಕ್ರೋನ್ , ಫ್ರಾನ್ಸ್ ವ್ಯಂಗ್ಯಚಿತ್ರಗ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ ಎಂಬುದಾಗಿ ಹೇಳಿದ್ದು, ಪಾಕಿಸ್ತಾನ ಸೇರಿದಂತೆ ವಿಶ್ವನಾಯಕರ ವಿಭಜನೆಗೆ ಕಾರಣವಾಗಿದೆ. ಟರ್ಕಿಯು ಮ್ಯಾಕ್ರೋನ್ ಅವರನ್ನು ತೀವ್ರವಾಗಿ ಖಂಡಿಸಿದೆ.

No comments:

Advertisement