ಅಮಿತ್ ಶಾ ಚೆನ್ನೈಯಲ್ಲಿ , ಎಐಎಡಿಎಂಕೆ-ಬಿಜೆಪಿ ಮೈತ್ರಿ ಅಬಾಧಿತ
ಚೆನ್ನೈ: ೨೦೨೧ ರ ವಿಧಾನಸಭಾ ಚುನಾವಣೆಯಲ್ಲೂ ತಮ್ಮ ಪಕ್ಷವಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಮತ್ತು ಭಾರತಿಯ ಜನತಾ ಪಕ್ಷದ (ಬಿಜೆಪಿ) ಮೈತ್ರಿ ಮುಂದುವರೆಯಲಿದೆ ಎಂದು ಎಂದು ತಮಿಳುನಾಡು ಉಪಮುಖ್ಯಮಂತ್ರಿ ಒ ಪನ್ನೀರಸೆಲ್ವ 2020 ನವೆಂಬರ್ 21ರ ಶನಿವಾರ ಸಂಜೆ ಹೇಳಿದರು.
"ಎಐಎಡಿಎಂಕೆ-ಬಿಜೆಪಿ ಮೈತ್ರಿ ೨೦೨೧ ವಿಧಾನಸಭಾ ಚುನಾವಣೆಯಲ್ಲೂ ಮುಂದುವರೆಯಲಿದೆ" ಎಂದು ಪನ್ನೀರ ಸೆಲ್ವಂ ಅವರು ಚೆನ್ನೈಯಲ್ಲಿ ಅಮಿತ್ ಶಾ ಸಲುವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಹೇಳಿದರು. ಕೇಂದ್ರ ಗೃಹ ಸಚಿವರು ಈ ಸಮಾರಂಭದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ.
ಶಾ ಅವರು ಚೆನ್ನೈಗೆ ಎರಡು ದಿನಗಳ ಭೇಟಿ ನೀಡಿದ್ದು, ಅಲ್ಲಿ ಅವರು ಬಿಜೆಪಿ ಪದಾಧಿಕಾರಿಗಳು ಮತ್ತು ಪಕ್ಷದ ಜಿಲ್ಲಾ ಮಟ್ಟದ ಅಧ್ಯಕ್ಷರೊಂದಿಗೆ ನಿರ್ಣಾಯಕ ಸಭೆ ನಡೆಸಲಿದ್ದಾರೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಬಿಜೆಪಿಯ ವಿಜಯಯಾತ್ರೆಯ ಬಳಿಕ ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿ ಬಿಗಡಾಯಿಸಿತ್ತು. ಕೋವಿಡ್ -೧೯ ಸಾಂಕ್ರಾಮಿಕ ನಿರ್ಬಂಧಗಳನ್ನು ಉಲ್ಲೇಖಿಸಿ ರಾಜ್ಯ ಸರ್ಕಾರ ಯಾತ್ರೆಗೆ ಅನುಮತಿ ನಿರಾಕರಿಸಿತ್ತು ಮತ್ತು ಎಐಎಡಿಎಂಕೆ ಮುಖವಾಣಿಯು ಯಾತ್ರೆಗಳನ್ನು ‘ವಿಭಜಕ’ ಎಂದು ಕರೆದಿತ್ತು. ಆದರೆ, ಬಿಜೆಪಿ ಸದಸ್ಯರು ನವೆಂಬರ್ ೬ ರಿಂದ ತಮಿಳುನಾಡಿನಾದ್ಯಂತ ಯಾತ್ರೆಯನ್ನು ಮುಂದುವರೆಸಿ ಬಂಧನಗಳಿಗೆ ಒಳಗಾಗಿದ್ದಾರೆ ಮತ್ತು ಬಿಡುಗಡೆಗೊಂಡಿದ್ದಾರೆ.
ಶಾ ಭೇಟಿಗೆ ಒಂದು ದಿನ ಮುಂಚಿತವಾಗಿ ಶುಕ್ರವಾರ ನಡೆದ ನಿರ್ಣಾಯಕ ಸಮಾಲೋಚನಾ ಸಭೆಯಲ್ಲಿ ೨೦೨೧ ರ ವಿಧಾನಸಭಾ ಚುನಾವಣೆಯಲ್ಲಿ ಉನ್ನತ ಹುದ್ದೆಗೆ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಅವರನ್ನು ಸ್ವೀಕರಿಸಲು ಬಿಜೆಪಿ ಹಿಂದೇಟು ಹಾಕಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಪಕ್ಷದ ಮುಖಂಡರೊಬ್ಬರು ಹೇಳಿದರು.
ಕಳೆದ ತಿಂಗಳು, ಆಂತರಿಕ ಅಧಿಕಾರದ ಜಗಳದ ನಂತರ, ಪನ್ನೀರಸೆಲ್ವಂ ಅವರು ಪಳನಿಸ್ವಾಮಿಯನ್ನು ಎಐಎಡಿಎಂಕೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಿದ್ದರು.
ಏತನ್ಮಧ್ಯೆ, ನಗರದ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದ ಹೇಳಲು ಶಾ ಟ್ವಿಟ್ಟರ್ ಖಾತೆಯನ್ನು ಅವಲಂಬಿಸಿದರು.
‘ತಮಿಳುನಾಡಿನಲ್ಲಿರುವುದು ಯಾವಾಗಲೂ ಅದ್ಭುತವಾಗಿದೆ. ಈ ಪ್ರೀತಿ ಮತ್ತು ಬೆಂಬಲಕ್ಕಾಗಿ ಚೆನ್ನೈಗೆ ಧನ್ಯವಾದಗಳು’ ಎಂದು ಜಿಎಸ್‌ಟಿ ರಸ್ತೆಯಲ್ಲಿನ ತಮ್ಮ ಪಾದಯಾತ್ರೆಯ ಚಿತ್ರವನ್ನು ಲಗತ್ತಿಸಿದ ಟ್ವೀಟಿನಲ್ಲಿ ಶಾ
’ಎರಡು ವರ್ಷಗಳ ಹಿಂದೆ, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಪುಸ್ತಕವನ್ನು ಬಿಡುಗಡೆ ಮಾಡಲು ೨೦೧೯ರ ಆಗಸ್ಟ್ ತಿಂಗಳಲ್ಲಿ ಇಲ್ಲಿಗೆ ಬಂದಿದ್ದೆ’ ಎಂದು ಶಾ ಬರೆದರು.
No comments:
Post a Comment