My Blog List

Tuesday, November 10, 2020

೧೧ ರಾಜ್ಯಗಳಲ್ಲಿನ ಉಪಚುನಾವಣೆ: ಬಹುತೇಕ ಕಡೆ ಎನ್‌ಡಿಎ ಮುಂದೆ

 ೧೧ ರಾಜ್ಯಗಳಲ್ಲಿನ ಉಪಚುನಾವಣೆ: ಬಹುತೇಕ ಕಡೆ ಎನ್ಡಿಎ ಮುಂದೆ

ನವದೆಹಲಿ: ಬಿಹಾರ ವಿಧಾನಸಭೆಗೆ ಚುನಾವಣೆ ನಡೆದ ವೇಳೆಯಲ್ಲಿಯೇ ದೇಶದ ೧೧ ರಾಜ್ಯಗಳಲ್ಲಿನ ೫೮ ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಗಳ ಮತಗಳ ಎಣಿಕೆ 2020 ನವೆಂಬರ್ 11ರ ಮಂಗಳವಾರ ನಡೆದಿದ್ದು, ಕರ್ನಾಟಕ, ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೇಲುಗೈ ಸಾಧಿಸಿದೆ. ಹರಿಯಾಣ, ಜಾರ್ಖಂಡ್ನಲ್ಲಿ ಬಿಜೆಪಿ ವಿರೋಧಿಗಳು ಜಯ ಗಳಿಸಿದ್ದಾರೆ.

ಮಧ್ಯಪ್ರದೇಶ:

ಬಿಜೆಪಿ ಮಧ್ಯಪ್ರದೇಶದ ೨೮ ಸ್ಥಾನಗಳಲ್ಲಿ ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ. ಬಿಜೆಪಿ ಅಭ್ಯರ್ಥಿ, ಆರೋಗ್ಯ ಸಚಿವ ಡಾ.ಪ್ರಭುರಾಮ್ ಚೌಧರಿ ಸಾಂಚಿಯ ಉಪಚುನಾವಣೆಯಲ್ಲಿ ೬೩,೮೦೯ ಮತಗಳಿಂದ ಜಯಗಳಿಸಿದ್ದಾರೆ.

ಬಿಜೆಪಿಯ ನಾರಾಯಣ್ ಪಟೇಲ್ ಅವರು ವಿಧಾನಸಭೆ ಉಪಚುನಾವಣೆಯಲ್ಲಿ ಮಧ್ಯಪ್ರದೇಶದ ಮಾಂಧತದಿಂದ ೨೨,೧೨೯ ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಆರಂಭಿಕ ಪ್ರವೃತ್ತಿಗಳ ಪ್ರಕಾರ ೧೪ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಕಾಂಗ್ರೆಸ್ ಐದು ಸ್ಥಾನಗಳಲ್ಲಿ ಮುಂದಿತ್ತು.

 

ಉತ್ತರ ಪ್ರದೇಶ:

ಉತ್ತರಪ್ರದೇಶದಲ್ಲಿ ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ ಮತ್ತು ಮತಗಳ ಎಣಿಕೆ ಮುಂದುವರೆದಂತೆ ಇತರ ಎರಡು ಸ್ಥಾನಗಳಲ್ಲಿ ಹಿಂದುಳಿದಿದೆ.

 

ಹರಿಯಾಣ ಕಾಂಗ್ರೆಸ್ ಪಾಲು

ಹರಿಯಾಣದ ಬರೋಡಾದಲ್ಲಿ ಕಾಂಗ್ರೆಸ್ ವಿಜಯಸಾಧಿಸಿದೆ. ಕಾಂಗ್ರೆಸ್ಸಿನ ಇಂದೂ ರಾಜ್ ನರ್ವಾಲ್ ಅವರು ಹರಿಯಾಣದ ಬರೋಡಾದಲ್ಲಿ ಬಿಜೆಪಿಯ ಯೋಗೇಶ್ವರ ದತ್ ಅವರನ್ನು ಸೋಲಿಸಿದ್ದಾರೆ.

 

ನಾಗಾಲ್ಯಾಂಡ್:

ನಾಗಾಲ್ಯಾಂಡ್ ಉಪಚುನಾವಣೆಯಲ್ಲಿ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ (ಎನ್ಡಿಪಿಪಿ) ಮತ್ತು ಸ್ವತಂತ್ರ ಅಭ್ಯರ್ಥಿಗಳು ತಲಾ ಸ್ಥಾನಗಳನ್ನು ಗೆದ್ದಿದ್ದಾರೆ.

 

ಗುಜರಾತ್:

ಗುಜರಾತಿನಲ್ಲಿ ಕಾಂಗ್ರೆಸ್ಸಿನಿಂದ ಬಿಜೆಪಿ ಸೇರಿ, ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಿದ ಅಭ್ಯರ್ಥಿ ಅಬ್ದಾಸ ಸ್ಥಾನವನ್ನು ಗೆದ್ದಿದ್ದಾರೆ. ಗುಜರಾತಿನ ಕಚ್ ಜಿಲ್ಲೆಯ ಅಬ್ದಾಸ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರಧುಮಾನ್ಸಿನ್ ಜಡೇಜಾ ಮಂಗಳವಾರ ತಮ್ಮ ಹತ್ತಿರದ ಕಾಂಗ್ರೆಸ್ ಪ್ರತಿಸ್ಪರ್ಧಿ ಶಾಂತಿಲಾಲ್ ಸೆಂಗಾನಿಯನ್ನು ೩೬,೭೭೮ ಮತಗಳ ಅಂತರದಿಂದ ಸೋಲಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿತು.

ನವೆಂಬರ್ ರಂದು ಉಪಚುನಾವಣೆ ನಡೆದಿದ್ದು, ಉಳಿದ ಏಳು ಸ್ಥಾನಗಳಿಗೆ ಮತಗಳ ಎಣಿಕೆ ಮುಂದುವರೆದಿದ್ದು ಬಿಜೆಪಿ ಮುನ್ನಡೆಯಲ್ಲಿದೆ.

 

ಜಾರ್ಖಂಡ್:

ಆಡಳಿತಾರೂಢ ಮೈತ್ರಿಕೂಟವು ಒಕ್ಕೂಟವು ಜಾರ್ಖಂಡ್ ಎರಡೂ ಸ್ಥಾನಗಳನ್ನು ಉಳಿಸಿಕೊಂಡಿದೆ. ಜಾರ್ಖಂಡಿನಲ್ಲಿ ಜೆಎಂಎಂ ಡುಮ್ಕಾದಿಂದ ಗೆದ್ದಿದ್ದರೆ, ಕಾಂಗ್ರೆಸ್ ಬೆರ್ಮೊದಿಂದ ವಿಜಯಶಾಲಿಯಾಗಿದೆ.

 

ಕರ್ನಾಟಕ:

ಬಿಜೆಪಿಯ ಸಿಎಂ ರಾಜೇಶ್ ಗೌಡ ಅವರು ಕರ್ನಾಟಕದ ಸಿರಾ ವಿಧಾನಸಭಾ ಕ್ಷೇತ್ರವನ್ನು

ಉಪಚುನಾವಣೆಯಲ್ಲಿ ೧೨,೦೦೦ ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಕರ್ನಾಟಕದ ಆರ್.ಆರ್.ನಗರ ವಿಧಾನಸಭಾ ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿತು. ಮುನಿರತ್ನ ಅವರು ಹೆಚ್ ಕುಸುಮಾ ಅವರನ್ನು ೫೭೯೩೬ ಮತಗಳ ಅಂತರದಿಂದ ಸೋಲಿಸಿದರು. ಜೆಡಿಎಸ್ ಕೃಷ್ಣಮೂರ್ತಿ ೧೦,೨೫೧ ಮತಗಳನ್ನು ಮಾತ್ರ ಪಡೆದರು.

 

ಮಣಿಪುರ:

ಮಣಿಪುರದಲ್ಲಿ ಬಿಜೆಪಿ ಸ್ಥಾನ, ಬಿಜೆಪಿ ಬೆಂಬಲಿತ ಸ್ವತಂತ್ರ ಸ್ಥಾನ ಗೆದ್ದಿದೆ. ವಾಂಗೋಯಿ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಓನಮ್ ಲುಖೋಯ್ ಸಿಂಗ್ ಗೆದ್ದರೆ, ಕೇಸರಿ ಪಕ್ಷದ ಬೆಂಬಲದ ಸ್ವತಂತ್ರ ಅಭ್ಯರ್ಥಿ ವೈ ಆಂಟಾಸ್ ಖಾನ್ ಮಣಿಪುರದ ಲಿಲಾಂಗ್ ಸ್ಥಾನವನ್ನು ಪಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ತೆಲಂಗಾಣ:

ತೆಲಂಗಾಣದ ಡಬ್ಬಾಕ್ನಲ್ಲಿ ಬಿಜೆಪಿಯ ಎಂ. ರಘುನಂದನ ರಾವ್ ಅವರು ಟಿಆರ್ಎಸ್ ಸೋಲಿಪೇಟ ಸುಜಾತ ಅವರನ್ನು ೧೦೭೯ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

 

ಮಧ್ಯಪ್ರದೇಶದ ೨೮ ವಿಧಾನಸಭಾ ಕ್ಷೇತ್ರಗಳಿಗೆ ಮತ ಎಣಿಸಲಾಗುತ್ತಿದೆ, ಅಲ್ಲಿ ಆಡಳಿತಾರೂಢ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ  ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಪಡೆಯಲು ಕನಿಷ್ಠ ಎಂಟು ಶಾಸಕರ ಅಗತ್ಯವಿದೆ.

 

ಜೌರಾ, ಸುಮಾಲಿ, ಮೊರೆನಾ, ಡಿಮಾನಿ, ಅಂಬಾ, ಮೆಹಗಾಂವ್, ಗೋಹಾದ್, ಗ್ವಾಲಿಯರ್, ಗ್ವಾಲಿಯರ್ ಈಸ್ಟ್, ದಬ್ರಾ, ಭಂದರ್, ಕರೇರಾ, ಪೊಹಾರಿ, ಬಮೋರಿ, ಅಶೋಕ್ ನಗರ, ಮುಂಗಾವೋಲಿ, ಸುರ್ಖಿ, ಮಲ್ಹರಾ, ಅನುಪ್ಪೂ, ಸಾಂಚಿ ಅಗರ್, ಹಟ್ಪಿಪ್ಲಿಯಾ, ಮಾಂಧತ, ನೇಪನಗರ, ಬಡ್ನವಾರ್, ಸಾನ್ವರ್ ಮತ್ತು ಸುವಸ್ರಾ.

ಗುಜರಾತ್ ಅಬ್ದಾಸಾ, ಲಿಮ್ಡಿ, ಮೊರ್ಬಿ, ಧಾರಿ, ಗಡಾಡಾ (ಎಸ್ಟಿ), ಕಾರ್ಜನ್, ಡ್ಯಾಂಗ್ಸ್ (ಎಸ್ಟಿ) ಮತ್ತು ಕಪ್ರಡಾ (ಎಸ್ಟಿ) ಎಂಟು ವಿಧಾನಸಭಾ ಸ್ಥಾನಗಳಿಗೆ ಎಣಿಕೆ ನಡೆಯುತ್ತಿದ್ದರೆ, ಉತ್ತರ ಪ್ರದೇಶದ ಏಳು ವಿಧಾನಸಭಾ ಸ್ಥಾನಗಳಿಗೆ ಮತಗಳನ್ನು ಎಣಿಸಲಾಗುತ್ತಿದೆ. ನೌಗಾಂವ್, ಘಟಂಪೂರ್ (ಕಾನ್ಪುರ್), ಬುಲಂದ್ಶಹರ್, ತುಂಡ್ಲಾ (ಫಿರೋಜಾಬಾದ್), ಬಂಗರ್ಮೌ (ಉನ್ನಾವೊ), ಡಿಯೋರಿಯಾ ಮತ್ತು ಮಲ್ಹಾನಿ ಸ್ಥಾನಗಳು ಉತ್ತರ ರಾಜ್ಯದಲ್ಲಿ ಖಾಲಿಯಾಗಿವೆ.

No comments:

Advertisement