My Blog List

Tuesday, November 17, 2020

ಅಮಿತ್ ಶಾ ತರಾಟೆ: ‘ಗುಪ್ಕರ್ ಗ್ಯಾಂಗ್’ಒಂದು ’ಅಪವಿತ್ರ ಜಾಗತಿಕ ಮೈತ್ರಿ’

 ಅಮಿತ್ ಶಾ ತರಾಟೆ:ಗುಪ್ಕರ್ ಗ್ಯಾಂಗ್ಒಂದುಅಪವಿತ್ರ ಜಾಗತಿಕ ಮೈತ್ರಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳ ಸಂಘಟನೆಯಾದ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್ಯನ್ನು (ಪಿಎಜಿಡಿ) "ಅಪವಿತ್ರ ಜಾಗತಿಕ ಮೈತ್ರಿ" ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ 2020 ನವೆಂಬರ್ 17ರ ಮಂಗಳವಾರ ಟೀಕಿಸಿದರು.

ಕಾಂಗ್ರೆಸ್ ಪಕ್ಷವನ್ನೂ ತನ್ನ ಜೊತೆಗೂಡಿಸಿಕೊಂಡಿರುವ ಅಪವಿತ್ರ ಮೈತ್ರಿಯು ಜಮ್ಮು ಮತ್ತು ಕಾಶ್ಮೀರವನ್ನು ಹಿಂದಿನ ಪುನಃ ಭಯೋತ್ಪಾದನೆ ಮತ್ತು ಪ್ರಕ್ಷುಬ್ದತೆಯ ಯುಗಕ್ಕೆ ಒಯ್ಯಲು ಬಯಸಿದೆ ಎಂದು ಅವರು ಆಪಾದಿಸಿದರು.

ಸರಣಿ ಟ್ವೀಟ್ಗಳನ್ನು ಪ್ರಕಟಿಸಿದ ಶಾಗುಪ್ಕರ್ ಗ್ಯಾಂಗ್ ಜಾಗತಿಕ ಮಟ್ಟಕ್ಕೆ ಹೋಗುತ್ತಿದ್ದು, ಜಮ್ಮು ಮತ್ತು ಕಾಶ್ಮೀರ ವಿಷಯಕ್ಕೆ ವಿದೇಶೀ ಪಡೆಗಳು ಮಧ್ಯಪ್ರವೇಶ ಮಾಡಬೇಕು ಎಂದು ಬಯಸಿದೆ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಪ್ರಾದೇಶಿಕ ಮತ್ತು ರಾಷ್ಟ್ರೀಯ ರಾಜಕೀಯ ಪಕ್ಷಗಳ ಸಂಘಟನೆಯು ಕಳೆದ ವರ್ಷ ರದ್ದುಗೊಂಡಿರುವ ೩೭೦ ನೇ ವಿಧಿಯ ಪುನಃಸ್ಥಾಪನೆಯನ್ನು ಸಮರ್ಥಿಸುತ್ತದೆ. "ಕಾಂಗ್ರೆಸ್ ಮತ್ತು ಗುಪ್ಕರ್ ಗ್ಯಾಂಗ್ ಭಯೋತ್ಪಾದನೆ ಮತ್ತು ಪ್ರಕ್ಷುಬ್ಧತೆಯ ಯುಗಕ್ಕೆ ಜಮ್ಮು ಮತ್ತು ಕಾಶ್ಮೀರವನ್ನು ಮರಳಿ ಕರೆದೊಯ್ಯಲು ಬಯಸಿದೆ. ೩೭೦ ನೇ ವಿಧಿಯನ್ನು ತೆಗೆದುಹಾಕುವ ಮೂಲಕ ನಾವು ಖಾತರಿಪಡಿಸಿದ ದಲಿತರು, ಮಹಿಳೆಯರು ಮತ್ತು ಬುಡಕಟ್ಟು ಜನಾಂಗದವರ ಹಕ್ಕುಗಳನ್ನು ಕಸಿದುಕೊಳ್ಳಲು ಅವರು ಬಯಸುತ್ತಾರೆ. ಹೀಗಾಗಿಯೇ ಎಲ್ಲೆಡೆ ಜನರು ಅವರನ್ನು ತಿರಸ್ಕರಿಸುತ್ತಿದ್ದಾರೆಎಂದು ಶಾ ನುಡಿದರು.

ಜಮ್ಮು ಮತ್ತು ಕಾಶ್ಮೀರವು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುತ್ತದೆ ಮತ್ತು ದೇಶದ ಜನರು ಇನ್ನು ಮುಂದೆ ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಅಪವಿತ್ರವಾದಜಾಗತಿಕ ಮೈತ್ರಿಯನ್ನು  ಸಹಿಸುವುದಿಲ್ಲ ಎಂದು ಶಾ ಹೇಳಿದರು.

"ಗುಪ್ಕರ್ ಗ್ಯಾಂಗ್ ರಾಷ್ಟ್ರೀಯ ಮನಸ್ಥಿತಿಯೊಂದಿಗೆ ಈಜಬೇಕು, ಇಲ್ಲದಿದ್ದರೆ ಜನರು ಅದನ್ನು ಮುಳುಗಿಸುತ್ತಾರೆಎಂದು ಗೃಹ ಸಚಿವರು ನುಡಿದರು.

ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಪಿಎಜಿಡಿಯನ್ನು ಬೆಂಬಲಿಸುತ್ತಾರೆಯೇ ಎಂದು ಗೃಹ ಸಚಿವರು ಪ್ರಶ್ನಿಸಿದರು.

"ಗುಪ್ಕರ್ ಗ್ಯಾಂಗ್ ಭಾರತದ ತ್ರಿವರ್ಣ ಧ್ವಜವನ್ನು ಅವಮಾನಿಸುತ್ತದೆ. ಗುಪ್ಕರ್ ಗ್ಯಾಂಗಿನ ಇಂತಹ ನಡೆಗಳನ್ನು ಸೋನಿಯಾ ಜಿ ಮತ್ತು ರಾಹುಲ್ ಜಿ ಬೆಂಬಲಿಸುತ್ತಾರೆಯೇ? ಅವರು ತಮ್ಮ ನಿಲುವನ್ನು ಭಾರತದ ಜನರಿಗೆ ಸ್ಪಷ್ಟಪಡಿಸಬೇಕು" ಎಂದು ಶಾ ಆಗ್ರಹಿಸಿದರು.

೨೦೧೯ರ ಆಗಸ್ಟ್ ೪ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ೩೭೦ ನೇ ವಿಧಿಯನ್ನು ರದ್ದುಪಡಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸುವ ಒಂದು ದಿನ ಮೊದಲು, ಬಿಜೆಪಿಯನ್ನು ಹೊರತು ಪಡಿಸಿ ಕಾಶ್ಮೀರದ ರಾಜಕೀಯ ಪಕ್ಷಗಳು ಶ್ರೀನಗರ ರಸ್ತೆಯ ಗುಪ್ಕರ್ನಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ನಿವಾಸದಲ್ಲಿ ಸಭೆ ಸೇರಿದ್ದವು.

ಪಕ್ಷಗಳು ೩೭೦ನೇ  ವಿಧಿಯನ್ನು ಸಮರ್ಥಿಸುವ ಜಂಟಿ ಹೇಳಿಕೆಯನ್ನು ಸಹ ಬಿಡುಗಡೆ ಮಾಡಿದ್ದವು. ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಸಿಪಿಐ-ಎಂ, ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ಮತ್ತು ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ಸಂಘಟನೆಗಳು ಗುಪ್ಕರ್ ಸಮಾವೇಶದಲ್ಲಿ ಸೇರಿದ್ದವು.

ಜಮ್ಮು ಮತ್ತು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿಗೆ ಮುಂಬರುವ ಚುನಾವಣೆಗೆ ಪಿಎಜಿಡಿಯೊಂದಿಗೆ ಸೀಟು ಹಂಚಿಕೆ ವ್ಯವಸ್ಥೆ ಮಾಡುವುದಾಗಿ ಕಾಂಗ್ರೆಸ್ ಇತ್ತೀಚೆಗೆ ಘೋಷಿಸಿತು. ನ್ಯಾಷನಲ್ ಕಾನ್ಫರೆನ್ಸ್ ಫಾರೂಕ್ ಅಬ್ದುಲ್ಲಾ ಇದರ ಅಧ್ಯಕ್ಷರಾಗಿದ್ದು, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಉಪಾಧ್ಯಕ್ಷರಾಗಿದ್ದಾರೆ. ಹಿರಿಯ ಸಿಪಿಐ-ಎಂ ನಾಯಕ ಎಂ ವೈ ತಾರಿಗಾಮಿ ಇದರ ಸಂಚಾಲಕರಾಗಿದ್ದರೆ, ಪೀಪಲ್ಸ್ ಕಾನ್ಫರೆನ್ಸ್ ನಾಯಕ ಸಜ್ಜದ್ ಗಣಿ ಲೋನ್ ವಕ್ತಾರರಾಗಿದ್ದಾರೆ.

ಪಿಎಜಿಡಿ ೩೭೦ ನೇ ವಿಧಿಯನ್ನು ಪುನಃಸ್ಥಾಪಿಸಲು ಮುಂದಾಗಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಗುಪ್ಕರ್ ಗ್ಯಾಂಗಿನ ಅಭಿಪ್ರಾಯಗಳು ಚೀನಾದ ಬೆಂಬಲವನ್ನು ಪಡೆಯುತ್ತವೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ನಾಯಕ ಮೆಹಬೂಬಾ ಮುಫ್ತಿ ಅವರು ಹಿಂದಿನ ರಾಜ್ಯದ ಧ್ವಜವನ್ನು ಪುನಃಸ್ಥಾಪಿಸಿದಾಗ ಮಾತ್ರ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಧ್ವಜವನ್ನು ಅರಳಿಸುವುದಾಗಿ ಹೇಳಿದ್ದಾರೆ.

ಏಳು ಪಕ್ಷಗಳ ಒಕ್ಕೂಟವಾದ ಪಿಎಜಿಡಿ ಕೇಂದ್ರಾಡಳಿತ ಪ್ರದೇಶದಲ್ಲಿ ಮುಂಬರುವ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜಂಟಿಯಾಗಿ ಸ್ಪರ್ಧಿಸಲಿದೆ.

ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲ ಪ್ರತಿಕ್ರಿಯೆ

ಆದಾಗ್ಯೂ, ಸ್ಥಳೀಯ ಚುನಾವಣೆಗಳಲ್ಲಿ ಸುಲಭ ಜಯದ ನಿರೀಕ್ಷೆಯಲ್ಲಿದ ಬಿಜೆಪಿ ಮೈತ್ರಿಕೂಟವು ಈಗ ಅದು ಸರಳವಲ್ಲ ಎಂದು ಅಸಮಾಧಾನಗೊಂಡಿದೆ ಎಂದು ಗುಪ್ಕರ್ ಮೈತ್ರಿಯ ಸದಸ್ಯರು ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಶಾ ಅವರ ಟ್ವೀಟ್ಗಳಿಗೆ ಪ್ರತಿಕ್ರಿಯಿಸಿದ ಮೆಹಬೂಬಾ ಮುಫ್ತಿ, ‘ಹಳೆಯ ಅಭ್ಯಾಸಗಳು ಸಾಯುವುದು ಕಷ್ಟ. ಹಿಂದೆ ತುಕ್ಡೆ ತುಕ್ಡೆ ಗ್ಯಾಂಗ್ ಭಾರತದ ಸಾರ್ವಭೌಮತ್ವಕ್ಕೆ ಬೆದರಿಕೆ ಹಾಕಿದೆ ಎಂದು ಬಿಜೆಪಿ ಹಿಂದೆ ಹೇಳುತ್ತಿತ್ತು. ಈಗ ಅವರು  ನಮಗೆಗುಪ್ಕರ್ ಗ್ಯಾಂಗ್ಸೌಮ್ಯೋಕ್ತಿ ಬಳಸುತ್ತಿದ್ದಾರೆ. ಸಂವಿಧಾವನ್ನು ಪ್ರತಿದಿನವೂ ಹಗಲೂ ರಾತ್ರಿ ಉಲ್ಲಂಘಿಸುವ ಬಿಜೆಪಿಯಿಂದಲೇ ೧೦ ಲಕ್ಷ ಸಾವುಗಳು ಸಂಭವಿಸಿವೆ ಎಂಬುದು ಒಂದು ವ್ಯಂಗ್ಯವಾಗಿದೆಎಂದು ಹೇಳಿದರು.

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲ್ಲ ಕೂಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಚುನಾವಣೆಗಳಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬೆಂಬಲಿಸಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ನಾಯಕರನ್ನು ಬಂಧಿಸಿ ರಾಷ್ಟ್ರ ವಿರೋಧಿಗಳು ಎಂದು ಕರೆಯಬಹುದು .. ಸತ್ಯವೆಂದರೆ ಬಿಜೆಪಿಯ ಸಿದ್ಧಾಂತವನ್ನು ವಿರೋಧಿಸುವವರೆಲ್ಲರನ್ನುಭ್ರಷ್ಟ ಮತ್ತು ರಾಷ್ಟ್ರ ವಿರೋಧಿ "ಎಂದು ಹಣೆಪಟ್ಟಿ ಕಟ್ಟಲಾಗಿದೆಎಂದು ಒಮರ್ ಟ್ವೀಟ್ ಮಾಡಿದರು.

ಮೈತ್ರಿಯು "ಗ್ಯಾಂಗ್ಅಲ್ಲ ಆದರೆ "ಕಾನೂನುಬದ್ಧ ರಾಜಕೀಯ ಮೈತ್ರಿ" ಎಂದು ಅಬ್ದುಲ್ಲಾ ಹೇಳಿದರು.

ಮಾನ್ಯ ಗೃಹ ಸಚಿವರ ದಾಳಿಯ ಹಿಂದಿನ ಹತಾಶೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಪೀಪಲ್ಸ್ ಅಲೈಯನ್ಸ್ ಚುನಾವಣೆಯನ್ನು ಬಹಿಷ್ಕರಿಸಲು ಸಿದ್ಧತೆ ನಡೆಸುತ್ತಿದೆ ಎಂದು ಅವರಿಗೆ ವರದಿಗಳು ತಿಳಿಸಿದ್ದವು.  ಇದು ಬಿಜೆಪಿ ಮತ್ತು ಹೊಸದಾಗಿ ರೂಪುಗೊಂಡ ದೊರೆಯ ಪಕ್ಷಕ್ಕೆ ಸುಲಭ ಜಯದ ಅವಕಾಶ ಒದಗಿಸಿತ್ತು. ಆದರೆ ನಾವು ಅದನ್ನು ಒಪ್ಪಲಿಲ್ಲಎಂದು ಅಬ್ದುಲ್ಲ ಟ್ವೀಟ್ ಮಾಡಿದರು.

ಮಂಗಳವಾರ, ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ೩೭೦ ನೇ ವಿಧಿ ಪುನಃಸ್ಥಾಪನೆ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿದ್ದರು.

No comments:

Advertisement