My Blog List

Tuesday, November 17, 2020

‘ಲವ್ ಜಿಹಾದ್’ ವಿರುದ್ಧ ಮಧ್ಯಪ್ರದೇಶದಲ್ಲೂ ಕಾನೂನು

 ‘ಲವ್ ಜಿಹಾದ್’ ವಿರುದ್ಧ ಮಧ್ಯಪ್ರದೇಶದಲ್ಲೂ ಕಾನೂನು

ಭೋಪಾಲ್: ಬಿಜೆಪಿ ಆಳ್ವಿಕೆ ಇರುವ ಹರಿಯಾಣ ಮತ್ತು ಕರ್ನಾಟಕ ಸರ್ಕಾರಗಳುಲವ್ ಜಿಹಾದ್ವಿರುದ್ಧ ಕಾನೂನು ರೂಪಿಸುವ ಬಗ್ಗೆ ಪರಿಗಣಿಸುತ್ತಿರುವುದಾಗಿ ಪ್ರಕಟಿಸಿದ ವಾರಗಳ ಬಳಿಕ ಇದೀಗ ಮಧ್ಯಪ್ರದೇಶ ಸರ್ಕಾರ ಕೂಡಾ ಸಾಲಿಗೆ ಸೇರುತ್ತಿದ್ದು, ’ಲವ್ ಜಿಹಾದ್ ತಡೆಗಟ್ಟಲು ಕಾನೂನು ರೂಪಿಸುವ ಬಗ್ಗೆ ಯೋಜಿಸುತ್ತಿದೆಎಂದು ಪ್ರಕಟಿಸಿದೆ.

ಲವ್ ಜಿಹಾದ್ತಡೆಯಲು ಶೀಘ್ರದಲ್ಲೇ ಕಾನೂನನ್ನು ರೂಪಿಸುವ ಯೋಜನೆ ನಡೆಯುತ್ತಿದೆ, ಸದರಿ ಶಾಸನವು ಮತಾಂತರಗಳನ್ನು ಕಠಿಣವಾದ ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲಿದೆ ಎಂದು ಸಂಸದ ಗೃಹ ಸಚಿವ ನರೋತ್ತಮ್ ಮಿಶ್ರಾ 2020 ನವೆಂಬರ್ 17ರ ಮಂಗಳವಾರ ಹೇಳಿದರು.

ಲವ್ ಜಿಹಾದ್ ಎನ್ನುವುದು ಬಲಪಂಥೀಯ ಗುಂಪುಗಳು ಹೇಳುವ ಪ್ರತಿಪಾದಿಸುವಫಿತೂರಿ ಸಿದ್ಧಾಂತವಾಗಿದ್ದು, ಇದರಲ್ಲಿ ಮುಸ್ಲಿಂ ಪುರುಷರು ಮುಸ್ಲಿಮೇತರ ಸಮುದಾಯಗಳಿಗೆ ಸೇರಿದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಇಸ್ಲಾಮಿಗೆ ಮತಾಂತರ ಮಾಡುವುದನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬ ಆಪಾದನೆ ಇದೆ.

"ನಾವು ಮಧ್ಯಪ್ರದೇಶದ ಧರ್ಮ ಸ್ವಾತಂತ್ರ ಮಸೂದೆ, ೨೦೨೦ (ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಮಸೂದೆ, ೨೦೨೦) ಅನ್ನು ವಿಧಾನಸಭೆಯಲ್ಲಿ ಮಂಡಿಸಲು ಯೋಜಿಸುತ್ತಿದ್ದೇವೆಎಂದು ಮಿಶ್ರಾ ಹೇಳಿದರು. ಮಸೂದೆಯುಲವ್ ಜಿಹಾದ್ವಿಷಯವನ್ನು ಒಳಗೊಂಡಿರುತ್ತದೆ ಎಂದು ಅವರು ನುಡಿದರು.

ಕಾನೂನು ಪ್ರಕಾರ ಪೋಷಕರಿಂದ ಕಡ್ಡಾಯ ದೂರು ಅಗತ್ಯವಿರುತ್ತದೆ ಮತ್ತು ಐದು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುವುದರೊಂದಿಗೆ ಉದ್ದೇಶಿತ ಅಪರಾಧವನ್ನು ಅದು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡುತ್ತದೆ.

ಬಲವಂತದ ಮತಾಂತರಕ್ಕೆ ಸೆರೆವಾಸದ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಸಚಿವರು ಹೇಳಿದರು.

ಮದುವೆಗಾಗಿ ಮತಾಂತರಕ್ಕೆ ಪ್ರಚೋದನೆ ನೀಡುವವರನ್ನು ಕೂಡಾ ಕಾಯ್ದೆಯ ವ್ಯಾಪ್ತಿಗೆ ತರಲಾಗುತ್ತದೆ. ಸ್ವ ಇಚ್ಚೆಯಿಂದ ಮದುವೆಯಾಗಲು ಬಯಸುವವರು ಮದುವೆಗಿಂತ ಒಂದು ತಿಂಗಳು ಮುಂಚಿತವಾಗಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಅವರು ವಿವರಿಸಿದರು.

ಮಸೂದೆಯ ಹೊಸ ನಿಬಂಧನೆಗಳು "ಬಲವಂತದ ಮತ್ತು ಮೋಸದಮದುವೆಯನ್ನು ನಿಷ್ಫಲ ಮತ್ತು ಅನೂರ್ಜಿತಗೊಳಿಸುತ್ತವೆ ಎಂದು ಸಚಿವರು ಹೇಳಿದರು.

ಲವ್ ಜಿಹಾದ್ಪ್ರಕರಣಗಳನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚೆಗೆ ಹೇಳಿದ್ದರು ಮತ್ತು ಅಂತಹ ಪ್ರಕರಣಗಳನ್ನು ತಡೆಗಟ್ಟುವ ಕ್ರಮಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು.

ಬಲವಂತದ ಮತಾಂತರದಲ್ಲಿ ಭಾಗಿಯಾಗಿರುವವರನ್ನು ತಮ್ಮರಾಮ್ ನಾಮ್ ಸತ್ಯಪ್ರಯಾಣಕ್ಕೆ ಕಳುಹಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘೋಷಿಸಿದ್ದರು. ’ಲವ್ ಜಿಹಾದ್ನಿಗ್ರಹಕ್ಕಾಗಿ ಮತ್ತು ನಿಟ್ಟಿನಲ್ಲಿ ಕಾನೂನು ರೂಪಿಸಲು ರಾಜ್ಯ ಸರ್ಕಾರ ಕೆಲಸ ಮಾಡುತ್ತದೆ ಎಂದು ಅವರು ಹೇಳಿದ್ದರು.

No comments:

Advertisement