ಗ್ರಾಹಕರ ಸುಖ-ದುಃಖ

My Blog List

Saturday, November 21, 2020

ಪಾಕ್ ರಾಜತಾಂತ್ರಿಕರಿಗೆ ಭಾರತ್ ಬುಲಾವ್, ಪ್ರಬಲ ಪ್ರತಿಭಟನೆ

 ಪಾಕ್ ರಾಜತಾಂತ್ರಿಕರಿಗೆ ಭಾರತ್ ಬುಲಾವ್, ಪ್ರಬಲ ಪ್ರತಿಭಟನೆ

ನವದೆಹಲಿ:  ಜಮ್ಮು-ಕಾಶ್ಮೀರದ ನಾಗ್ರೋಟಾದಲ್ಲಿ ಭಯೋತ್ಪಾದಕರ ಜೊತೆಗೆ ನಡೆದ ಭೀಕರ ಗುಂಡಿನ ಘರ್ಷಣೆಯ ಬಳಿಕ ಭಾರತದಲ್ಲಿ ಭಾರೀ ಭಯೋತ್ಪಾದಕ ದಾಳಿ ನಡೆಸಲು ನಡೆದಿದ್ದ ಪಿತೂರಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಭಾರತವು 2020 ನವೆಂಬರ್ 21ರ ಶನಿವಾರ ಪಾಕಿಸ್ತಾನ ಹೈಕಮೀಷನ್ ಅಧಿಕಾರಿಯನ್ನು ಕರೆಸಿಕೊಂಡು ತೀವ್ರ ಪ್ರತಿಭಟನೆ ಸಲ್ಲಿಸಿತು.

ಗುಂಡಿನ ಘರ್ಷಣೆಯಲ್ಲಿ ಹತರಾದ ನಾಲ್ವರು ಭಯೋತ್ಪಾದಕರ ಬಳಿ ಪತ್ತೆಯಾದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ವೈರ್‌ಲೆಸ್ ಸೆಟ್‌ಗಳು, ಬಟ್ಟೆ ಮತ್ತು ಔಷಧ ಸಂಗ್ರಹಗಳು ಪಾಕಿಸ್ತಾನದ ಲಾಹೋರ್ ಮತ್ತು ಖೈಬರ್ ಫಕ್ತೂನ್ ಕ್ವಾ ಪ್ರಾಂತ್ಯದ ಗುರುತುಗಳನ್ನು ತೋರಿಸುತ್ತವೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಕಿಸ್ತಾನ ಹೈಕಮಿಷನ್‌ನ ಚಾರ್ಜ್ ಡಿ ಅಫೈರ್‌ಗಳಾದ ಅಫ್ತಾಬ್ ಹಸನ್ ಖಾನ್ ಅವರನ್ನು ಕರೆಸಿ, "ಪಾಕಿಸ್ತಾನವು ತನ್ನ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರು ಮತ್ತು ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವ ನೀತಿಯಿಂದ ದೂರವಿರಬೇಕು ಮತ್ತು ಭಯೋತ್ಪಾದಕರಿಗೆ ಒದಗಿಸಲಾಗುತ್ತಿರುವ ಎಲ್ಲ ಮೂಲ ಸೌಕರ್ಯಗಳನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿತು.

"ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ತನ್ನ ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಭಾರತ ಸರ್ಕಾರ ಕಟಿಬದ್ಧವಾಗಿದೆ" ಎಂದು ಖಾನ್ ಅವರಿಗೆ ತಿಳಿಸಲಾಯಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಜೈಶ್--ಮೊಹಮ್ಮದ್ (ಜೆಇಎಂ) ನಡೆಸಲು ಯೋಜಿಸಿದ್ದ ಭಯೋತ್ಪಾದಕ ದಾಳಿಯ ಸಂಚು ಘಟನೆಯಿಂದ ಬೆಳಕಿಗೆ ಬಂದಿದ್ದು, ಬಗ್ಗೆ ಭಾರತವು ಪಾಕಿಸ್ತಾನಕ್ಕೆ ತನ್ನ ತೀವ್ರ ಕಳವಳವನ್ನೂ ವ್ಯಕ್ತ ಪಡಿಸಿತು.

ಪಾಕಿಸ್ತಾನವು ತನ್ನ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕೆಂದು ಭಾರತ ಆಗ್ರಹಿಸಿತು. ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಭಾರತ ಸರ್ಕಾರ ದೃಢ ನಿಶ್ಚಯವನ್ನು ಹೊಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ಹೇಳಿದೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಶಂಕಿತ ಜೈಶ್--ಮೊಹಮ್ಮದ್ ಭಯೋತ್ಪಾದಕರು ಹತರಾಗಿದ್ದಾರೆ ಮತ್ತು ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.

ಮುಂಬೈ ಮೇಲೆ ನಡೆದ ನವೆಂಬರ್ ೨೬ರ ದಾಳಿಯ ವಾರ್ಷಿಕೋತ್ಸವದಂದು ಜೈಶ್ ಭಯೋತ್ಪಾದಕರು ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿ ಕಾರ್ಯಾಚರಣೆಯನ್ನು ನಡೆಸಲು ಯೋಜಿಸಿದ್ದು ಬೆಳಕಿಗೆ ಬಂದುದನ್ನು ಅನುಸರಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಉನ್ನತ ಭದ್ರತಾ ಅಧಿಕಾರಿಗಳೊಂದಿಗೆ ಶುಕ್ರವಾರ ಪರಿಶೀಲನಾ ಸಭೆ ನಡೆಸಿದ್ದರು.

ಕಾಶ್ಮೀg ಐಜಿಪಿ ವಿಜಯ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಗುಂಡಿನ ಘರ್ಷಣೆಯ ವಿವರಗಳನ್ನು ನೀಡಿದ್ದಾರೆ. ಗುರುವಾರ ಬೆಳಿಗ್ಗೆ ಗಂಟೆಗೆ ನಾಗ್ರೋಟಾ ಪ್ರದೇಶದ ಬಾನ್ ಟೋಲ್ ಪ್ಲಾಜಾದಲ್ಲಿ ಟ್ರಕ್ ಅನ್ನು ತಡೆಯಲಾಯಿತು. ಆಗ ಚಾಲಕ ಸ್ಥಳದಿಂದ ಪರಾರಿಯಾದ. ಸಿಆರ್‌ಪಿಎಫ್ ಮತ್ತು ಪೊಲೀಸ್ ಸಿಬ್ಬಂದಿ ವಾಹನವನ್ನು ಶೋಧಿಸಲು ಆರಂಭಿಸಿದಾಗ ಟ್ರಕ್ಕಿನಲ್ಲಿ ಅಡಗಿದ್ದ ಭಯೋತ್ಪಾದಕರು ಗುಂಡು ಹಾರಿಸಿದರು.

ಯೋಧರು ಪ್ರತಿಗುಂಡು ಹಾರಿಸಿದಾಗ ಆರಂಭವಾದ ಗುಂಡಿನ ಚಕಮಕಿ ಸುಮಾರು ಗಂಟೆಗೂ ಹೆಚ್ಚು ಕಾಲ ಮುಂದುವರೆಯಿತು.

ಭಯೋತ್ಪಾದಕರು ಗ್ರೆನೇಡ್ ಮತ್ತು ಶಸ್ತ್ರಾಸ್ತ್ರಗಳನ್ನು ಬಳಸಿ ಭೀಕರ ಗುಂಡಿನ ದಾಳಿ ನಡೆಸಿದಾಗ ಸ್ಥಳಕ್ಕೆ ಸೇನೆಯು ಹೆಚ್ಚಿನ ಪಡೆಗಳನ್ನು ಸ್ಥಳಕ್ಕೆ ಕರೆಸಿಕೊಂಡಿತು ಎಂದು ಐಜಿಪಿ ಹೇಳಿದರು.

ಮೂರು ಗಂಟೆಗಳ ಗುಂಡಿನ ಕಾಳಗದಲ್ಲಿ ನಾಲ್ವರು ಭಯೋತ್ಪಾದಕರು ಹತರಾದರು ಮತ್ತು ಇಬ್ಬರು ಪೊಲೀಸರು ಗಾಯಗೊಂಡರು ಎಂದು ಅವರು ನುಡಿದರು.

ಗಾಯಾಳು ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ೧೧ ಎಕೆ ರೈಫಲ್‌ಗಳು, ಪಿಸ್ತೂಲ್‌ಗಳು, ೨೯ ಗ್ರೆನೇಡ್‌ಗಳು ಮತ್ತು ಯುಬಿಜಿಎಲ್ ಗ್ರೆನೇಡ್‌ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಜಿಪಿ ಹೇಳಿದರು.

ಶುಕ್ರವಾರ, ಪ್ರಧಾನಿ ನರೇಂದ್ರ ಮೋದಿ ಅವರು, ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳು ಗುಂಪಿನ ನಾಲ್ಕು ಸದಸ್ಯರನ್ನು ಕೊಂದು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳುವ ಮೂಲಕ "ದೊಡ್ಡ ಹಾನಿ ಮತ್ತು ವಿನಾಶವನ್ನು ನಾಶಮಾಡುವ" ಜೆಇಎಂ ಯೋಜನೆಯನ್ನು ವಿಫಲಗೊಳಿಸಿದೆ ಎಂದು ಹೇಳಿದ್ದರು.

ನಾಗ್ರೋಟಾದಲ್ಲಿ ಭದ್ರತಾ ಪಡೆಗಳು "ದೊಡ್ಡ ಭಯೋತ್ಪಾದಕ ದಾಳಿಯನ್ನು" ತಡೆದವು ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ ಮತ್ತು ಪ್ರಾಥಮಿಕ ವರದಿಗಳು ದಾಳಿಕೋರರು "ವಿಶ್ವಸಂಸ್ಥೆ ಮತ್ತು ಹಲವಾರು ದೇಶಗಳಿಂದ ನಿಷೇಧಿಸಲ್ಪಟಿರುವ ಪಾಕಿಸ್ತಾನ ಮೂಲದ ಜೈಶ್--ಮೊಹಮ್ಮದ್ (ಕಿಎಂ) ಭಯೋತ್ಪಾದಕ ಸಂಘಟನೆಯ ಸದಸ್ಯರು ಎಂದು ತಿಳಿಸಿವೆ.

ಗುರುವಾರ ವಶಪಡಿಸಿಕೊಂಡ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಸ್ಫೋಟಕಗಳ ಬೃಹತ್ ಸಂಗ್ರಹವು "ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿನ ಶಾಂತಿ ಮತ್ತು ಸುರಕ್ಷತೆಯನ್ನು ಅಸ್ಥಿರಗೊಳಿಸುವ ಪ್ರಬಲ ದಾಳಿಯ ವಿವರವಾದ ಯೋಜನೆಯನ್ನು ಸೂಚಿಸಿದೆ, ನಿರ್ದಿಷ್ಟವಾಗಿ, ಸ್ಥಳೀಯ ಜಿಲ್ಲಾ ಅಭಿವೃದ್ಧಿ ಮಂಡಳಿಯ ಚುನಾವಣೆಯ ಪ್ರಜಾತಾಂತ್ರಿಕ ಕಸರತ್ತಿನ ಹಳಿ ತಪ್ಪಿಸುವ ಯತ್ನವಾಗಿದೆ ಎಂದು ಹೇಳಿಕೆ ತಿಳಿಸಿದೆ.

"ಭಾರತದ ವಿರುದ್ಧ ಜೆಇಎಂ ನಡೆಸುತ್ತಿರುವ ಭಯೋತ್ಪಾದಕ ದಾಳಿಯ ಬಗ್ಗೆ ಭಾರತ ಸರ್ಕಾರ ತನ್ನ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ" ಎಂದು ಹೇಳಿಕೆ ತಿಳಿಸಿದೆ.

ಪಾಕಿಸ್ತಾನವು "ತನ್ನ ನಿಯಂತ್ರಣದಲ್ಲಿರುವ ಯಾವುದೇ ಪ್ರದೇಶವನ್ನು ಭಾರತದ ವಿರುದ್ಧ ಭಯೋತ್ಪಾದನೆಗೆ ಯಾವುದೇ ರೀತಿಯಲ್ಲಿ ಬಳಸಲು ಅನುಮತಿ ನೀಡದಿರುವ ತನ್ನ ಅಂತಾರಾಷ್ಟ್ರೀಯ ಕಟ್ಟುಪಾಡುಗಳನ್ನು ಮತ್ತು ದ್ವಿಪಕ್ಷೀಯ ಬದ್ಧತೆಗಳನ್ನು ಪೂರೈಸಬೇಕು" ಎಂಬ ಭಾರತದ ದೀರ್ಘಕಾಲದ ಬೇಡಿಕೆಯನ್ನು ಪಾಕಿಸ್ತಾನದ ಚಾರ್ಜ್ ಡಿ ಅಫೈರ್‌ಗಳಿಗೆ ಮತ್ತೊಮ್ಮೆ ಸೂಚಿಸಲಾಯಿತು.

ಹಿಂದೆ ಜೆಇಎಂ ಭಾರತದಲ್ಲಿ ನಡೆದ ಹಲವಾರು ದಾಳಿಯಲ್ಲಿ ಶಾಮೀಲಾಗಿತ್ತು. ಇದರಲ್ಲಿ ೨೦೧೯ ಫೆಬ್ರ್ರುವರಿಯಲ್ಲಿ ಪುಲ್ವಾಮಾದಲ್ಲಿ ೪೦ ಮಂದಿ ಸಿಆರ್ ಪಿಎಫ್ ಯೋಧರನ್ನು ಹುತಾತ್ಮರನ್ನಾಗಿಸಿದ  ಆತ್ಮಾಹುತಿ ದಾಳಿಯೂ ಸೇರಿತ್ತು.  ದಾಳಿಗೆ ಪ್ರತೀಕಾರವಾಗಿ ಭಾರತ ಬಾಲಾಕೋಟ್‌ನ ಜೆಇಎಂ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು.

ಪಾಕಿಸ್ತಾನವು ಪ್ರಧಾನಿ ಮೋದಿ ಅವರ ಆರೋಪಗಳನ್ನು ಶುಕ್ರವಾರ ತಿರಸ್ಕರಿಸಿತು ಮತ್ತು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯಿಂದ "ಅಂತಾರಾಷ್ಟ್ರೀಯ ಗಮನವನ್ನು ಬೇರೆಡೆಗೆ ತಿರುಗಿಸುವ ಭಾರತದ ಹತಾಶ ಪ್ರಯತ್ನಗಳ" ಭಾಗ ಇದು ಎಂದು ವಾದಿಸಿತ್ತು. ಇಸ್ಲಾಮಾಬಾದಿನ ವಿದೇಶಾಂಗ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ಭಯೋತ್ಪಾದನೆಗೆ ಪ್ರಾಯೋಜಕತ್ವ ವಹಿಸಿದೆ ಎಂದು ಆಪಾದಿಸಲಾಗಿತ್ತು.

"ಭಯೋತ್ಪಾದನೆಗೆ ಭಾರv ಸರ್ಕಾರಿ ಪ್ರಾಯೋಜಕತ್ವ ಬಗ್ಗೆ ನಿರಾಕರಿಸಲಾಗದ ಪುರಾವೆಗಳನ್ನು ಪಾಕಿಸ್ತಾನವು ಪ್ರಸ್ತುತಪಡಿಸಿದ ನಂತರ ಪಾಕಿಸ್ತಾನ ವಿರೋಧಿ ಪ್ರಚಾರವನ್ನು ಭಾರತವು ಹೆಚ್ಚಿಸಿದೆ ಎಂಬುದು ಸ್ಪಷ್ಟವಾಗಿದೆ ಎಂದು ಪಾಕಿಸ್ತಾನದ ಹೇಳಿಕೆ ತಿಳಿಸಿತ್ತು.

No comments:

Advertisement