My Blog List

Friday, November 27, 2020

ಅರ್ನಬ್ ಮಧ್ಯಂತರ ಜಾಮೀನು ವಿಸ್ತರಿಸಿದ ಸುಪ್ರೀಂಕೋರ್ಟ್

 ಅರ್ನಬ್ ಮಧ್ಯಂತರ ಜಾಮೀನು ವಿಸ್ತರಿಸಿದ  ಸುಪ್ರೀಂಕೋರ್ಟ್

ನವದೆಹಲಿ: ಉದ್ಯಮಿಯೊಬ್ಬನ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಅರ್ನಬ್ ಗೋಸ್ವಾಮಿ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಪ್ರಕರಣಗಳು ಇಲ್ಲ ಎಂಬುದಾಗಿ 2020 ನವೆಂಬರ್ 27ರ ಶುಕ್ರವಾರ ಹೇಳಿರುವ ಸುಪ್ರೀಂಕೋರ್ಟ್, ಅವರಿಗೆ ನೀಡಲಾಗಿರುವ ಮಧ್ಯಂತರ ಜಾಮೀನು ಎಫ್ಐಆರ್ ರದ್ದು ಕೋರಿ ಸಲ್ಲಿಸಲಾಗಿರುವ ಮನವಿಯನ್ನು ಬಾಂಬೆ ಹೈಕೋರ್ಟ್ ಇತ್ಯರ್ಥ ಪಡಿಸಿದ ಬಳಿಕವೂ ವಾರಗಳವರೆಗೆ ಜಾರಿಯಲ್ಲಿ ಇರುತ್ತದೆ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರ ನ್ಯಾಯಪೀಠವು ವಿಷಯವನ್ನು ತಿಳಿಸಿದ್ದು, ನವೆಂಬರ್ ೧೧ ರಂದು ಗೋಸ್ವಾಮಿಗೆ ಮಧ್ಯಂತರ ಜಾಮೀನು ನೀಡಿದ್ದಕ್ಕೆ ಕಾರಣಗಳನ್ನು ತಿಳಿಸಿ ವಿವರವಾದ ತೀರ್ಪು ನೀಡಿದೆ.

ಅರ್ನಬ್ ಅವರು ತಮ್ಮ ವಿರುದ್ಧದ ಎಫ್ ಐಆರ್ ರದ್ದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತೀರ್ಮಾನಿಸುವವರೆಗೆ ಮಧ್ಯಂತರ ಜಾಮೀನು ಜಾರಿಯಲ್ಲಿರುತ್ತದೆ ಮತ್ತು ಗೋಸ್ವಾಮಿಗೆ ನ್ಯಾಯಾಲಯವನ್ನು ಸಂಪರ್ಕಿಸಲು ಅನುವು ಮಾಡಿಕೊಡುವ ಸಲುವಾಗಿ ಇನ್ನೂ ನಾಲ್ಕು ವಾರಗಳವರೆಗೆ ಜಾರಿಯಲ್ಲಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಬಾಂಬೆ ಹೈಕೋರ್ಟ್ ತನಗೆ ಜಾಮೀನು ನೀಡಲು ನಿರಾಕರಿಸಿದ ನಂತರ ಗೋಸ್ವಾಮಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಎಫ್ಐಆರ್ ಪ್ರಾಥಮಿಕ ಮೌಲ್ಯಮಾಪನವು ಆತ್ಮಹತ್ಯೆ ಆರೋಪಕ್ಕೆ ಯಾವುದೇ ಪ್ರಚೋದನೆಯನ್ನು ಸಾಬೀತುಪಡಿಲ್ಲ ಎಂದು ಸುಪ್ರೀಂಕೋರ್ಟ್ ಪೀಠವು ತನ್ನ ಪ್ರಾಥಮಿಕ ಅಭಿಪ್ರಾಯದಲ್ಲಿ ತಿಳಿಸಿತು.

ಎಫ್ಐಆರ್ನಲ್ಲಿ ಮಾಡಲಾದ ಆರೋಪಗಳ ಸ್ವರೂಪದ ಬಗ್ಗೆ ಪ್ರಾಥಮಿಕ ದೃಷ್ಟಿಕೋನವನ್ನು ಹೈಕೋರ್ಟ್ ತೆಗೆದುಕೊಳ್ಳಬೇಕಾಗಿತ್ತು ಎಂದು ಹೇಳಿದ ಸುಪ್ರೀಂಕೋರ್ಟ್  ಜಾಮೀನು ನೀಡದೇ ಇರುವಲ್ಲಿ ತಪ್ಪಾಗಿದೆ ಎಂಬ ದೃಢ ಅಭಿಪ್ರಾಯವನ್ನು ವ್ಯಕ್ತ ಪಡಿಸಿತು.

ರಾಜ್ಯವು ಗುರಿಯಿಟ್ಟುಕೊಂಡಿರುವ ನಾಗರಿಕರ ಸ್ವಾತಂತ್ರ್ಯವನ್ನು ಒಳಗೊಂಡ ಪ್ರಕರಣಗಳಲ್ಲಿ, ನ್ಯಾಯಾಲಯವು "ನಾಗರಿಕರ ಸ್ವಾತಂತ್ರ್ಯವನ್ನು ಕಿರುಕುಳ ಅಥವಾ ಅಪಾಯಕ್ಕೆ ತಳ್ಳುವ ಸಾಧನವಾಗಿ ಕ್ರಿಮಿನಲ್ ಕಾನೂನನ್ನು ಬಳಸುತ್ತಿಲ್ಲ ಎಂಬುದನ್ನು ನ್ಯಾಯಾಲಯಗಳು ಖಚಿತಪಡಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಪೀಠ ಹೇಳಿತು.

ವಿಭಿನ್ನವಾದ ಸಿದ್ಧಾಂತ ಅಥವಾ ದೃಷ್ಟಿಕೋನಗಳನ್ನು ಇಟ್ಟುಕೊಂಡದ್ದಕ್ಕಾಗಿ ರಾಜ್ಯವು ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಲು ಸಾಧ್ಯವಿಲ್ಲ ಮತ್ತು ನಾಗರಿಕರ ಸ್ವಾತಂತ್ರ್ಯವನ್ನು ರಕ್ಷಿಸಲು ಸಾಂವಿಧಾನಿಕ ನ್ಯಾಯಾಲಯಗಳು ಕರ್ತವ್ಯ ಬದ್ಧವಾಗಿವೆ ಎಂದು ನವೆಂಬರ್ ೧೧ರಂದು ಪೀಠವು ಹೇಳಿದೆ.

‘ನಾವು ವ್ಯಕ್ತಿಯ ಸ್ವಾತಂತ್ರ್ಯದೊಂದಿಗೆ ವ್ಯವಹರಿಸುತ್ತಿದ್ದೇವೆ. ದೇಶಾದ್ಯಂತ, ನ್ಯಾಯಾಲಯವು ಇಂದು ಹಸ್ತಕ್ಷೇಪ ಮಾಡದಿದ್ದರೆ, ನಾವು ಸ್ವಾತಂತ್ರ್ಯದ ವಿನಾಶದ ಹಾದಿಯಲ್ಲಿ ಸಾಗುತ್ತಿದ್ದೇವೆ .... ನೀವು ವ್ಯಕ್ತಿಯ ಸಿದ್ಧಾಂತವನ್ನು ಇಷ್ಟಪಡದಿರಬಹುದು ಮತ್ತು ಅದನ್ನು ಪ್ರಶ್ನಿಸಬಹುದು. ಆದರೆ ವ್ಯಕ್ತಿಗಳನ್ನು ಹಣಿಯಲು ರಾಜ್ಯಗಳು ಇದನ್ನು ಮಾಡುತ್ತಿದ್ದರೆ, ನಾಗರಿಕರ ಸ್ವಾತಂತ್ರ್ಯವನ್ನು ಕಾಪಾಡಬೇಕು ಎಂಬ ಸಂದೇಶವನ್ನು ಎಲ್ಲ  ಹೈಕೋರ್ಟ್ಗಳಿಗೆ ನಾವು ನೀಡಬೇಕಾಗಿದೆ ಪೀಠವು ಹೇಳಿದೆ.

ಗೋಸ್ವಾಮಿ ಪರ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ ದಿನ ತನ್ನ ಟಿವಿ ಚರ್ಚೆಗಳಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತು ರಾಜ್ಯ ಪೊಲೀಸರ ವಿರುದ್ಧ ಅಪ್ರಸ್ತುತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಅವರನ್ನು ಬಂಧಿಸಲು ಯೋಜಿಸಲಾಗಿದೆ ಎಂದು ವಾದಿಸಿದ್ದರು. ಮೃತ ಉದ್ಯಮಿ ಅನ್ವಯ್ ನಾಯಕ್ ಅವರು ಬರೆದಿಟ್ಟ ಆತ್ಮಹತ್ಯೆ ಟಿಪ್ಪಣಿಯಲ್ಲಿ ಗೋಸ್ವಾಮಿ ವಿರುದ್ಧ ಪಾವತಿಸದ ಬಾಕಿ ಎಂಬುದಾಗಿ ಕೇವಲ ೮೮ ಲಕ್ಷ ರೂ.ಗಳನ್ನು ಉಲ್ಲೇಖಿಸಲಾಗಿದೆ ಎಂದು  ಮಾತ್ರ ಉಲ್ಲೇಖಿಸಲಾಗಿದೆ ಎಂದು ಸಾಳ್ವೆ ಹೇಳಿದರು.

ಪ್ರಕರಣದ ಉಲ್ಲೇಖಿತ ಎಫ್ಐಆರ್ ಬಗ್ಗೆ ಕೂಡಾ ಪೀಠ ಪ್ರತಿಕ್ರಿಯಿಸಿದೆ. ‘ ರೀತಿಯ ವಿಷಯದಲ್ಲಿ ಈಗಾಗಲೇ ಸ್ವಲ್ಪ ಮೊತ್ತವನ್ನು ಪಾವತಿಸಲಾಗಿದೆ ಮತ್ತು ಆರ್ಥಿಕ ಒತ್ತಡದಿಂದಾಗಿ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ, ನೀವು ಆತ್ಮಹತ್ಯೆಗೆ ಪ್ರಚೋದನೆ ಆರೋಪಕ್ಕಾಗಿ ಕಂಪೆನಿಯ ಮುಖ್ಯಸ್ಥರನ್ನು ಹಿಡಿದಿಟ್ಟುಕೊಳ್ಳುತ್ತೀರಾ? ಹೆಚ್ಚಿನ ಕಂಪೆನಿಗಳಲ್ಲಿ, ಕೆಲಸದ ಆದೇಶಗಳನ್ನು ಕಾರ್ಮಿಕ ಒಪ್ಪಂದದಂತೆ ನೀಡಲಾಗುತ್ತದೆ .... ಅಂತಹ ವ್ಯಕ್ತಿಯನ್ನು ಎಫ್ಐಆರ್ ರದ್ದು ಕೋರಿಕೆ ಅರ್ಜಿ ಇತ್ಯರ್ಥಕ್ಕೆ ಬಾಕಿ ಇರುವಾಗ ಜಾಮೀನು ನಿರಾಕರಿಸುವುದು ವಿವೇಚನೆಯುಕತ್ತ ನ್ಯಾಯವಾಗುತ್ತದೆಯೇ?’ ಎಂದು ಪೀಠ ಪ್ರಶ್ನಿಸಿತು.

ನಾಯಕ್ ಅವರ ಪತ್ನಿ ಗೋಸ್ವಾಮಿ ಮತ್ತು ಇತರ ಇಬ್ಬರು ಗೋಸ್ವಾಮಿ ವಿರುದ್ಧ ದೂರಿನೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸಮಾಪ್ತಿ ವರದಿಯನ್ನು ಸಲ್ಲಿಸಲಾಗಿತ್ತು. ಆದರೆ ಆದರೆ ವರ್ಷದ ಆರಂಭದಲ್ಲಿ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದರು.

No comments:

Advertisement