My Blog List

Friday, November 27, 2020

ಕಂಗನಾ ರಣಾವತ್ : ಬಿಎಂಸಿ ಆದೇಶ ರದ್ದು ಪಡಿಸಿದ ಹೈಕೋರ್ಟ್

 ಕಂಗನಾ ರಣಾವತ್ : ಬಿಎಂಸಿ ಆದೇಶ ರದ್ದು ಪಡಿಸಿದ ಹೈಕೋರ್ಟ್

ಮುಂಬೈ:  ಚಿತ್ರನಟಿ ಕಂಗನಾ ರಣಾವತ್ ಬಂಗಲೆಯ ಒಂದು ಭಾಗವನ್ನು ನೆಲಸಮಗೊಳಿಸುವ ಬೃಹನ್ಮಂಬಯಿ ಮುನಿಸಿಪಲ್ ಕಾರ್ಪೋರೇಷನ್ (ಬಿಎಂಸಿ) ಕ್ರಮದ ಹಿಂದೆ ದುರುದ್ದೇಶದ ವಾಸನೆ ಬಡಿಯುತ್ತಿದೆ ಎಂದು 2020 ನವೆಂಬರ್ 27ರ ಶುಕ್ರವಾರ ಹೇಳಿದ ಬಾಂಬೆ ಹೈಕೋರ್ಟ್ ಕಟ್ಟಡ ಧ್ವಂಸಗೊಳುವ ಬಿಎಂಸಿ ಆದೇಶವನ್ನು ರದ್ದು ಪಡಿಸಿತು.

ಬಂಗಲೆಯ ಒಂದು ಭಾಗವನ್ನು ನೆಲಸಮಗೊಳಿಸುವ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಕ್ರಮವು ಚಿತ್ರನಟಿಗೆ ಸಾಕಷ್ಟು ನಷ್ಟವನ್ನುಂಟುಮಾಡುತ್ತದೆ ಎಂದು ಹೇಳಿದ ನ್ಯಾಯಾಲಯ ಕಟ್ಟಡ ನೆಲಸಮ ಆದೇಶವನ್ನು ರದ್ದುಪಡಿಸಿತು.

ಯಾವುದೇ ನಾಗರಿಕರ ವಿರುದ್ಧ ಅಧಿಕಾರಿಗಳು ತೋಳ್ಬಲ ಬಳಸುವುದನ್ನು ತಾನು ಅನುಮೋದಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿತು.

ನ್ಯಾಯಮೂರ್ತಿಗಳಾದ ಎಸ್ ಜೆ ಕಥವಲ್ಲಾ ಮತ್ತು ಆರ್ ಚಾಗ್ಲಾ ಅವರನ್ನು ಒಳಗೊಂಡ ವಿಭಾಗೀಯ ಪೀಠವುಕಟ್ಟಡವು ಅನಧಿಕೃತವಾಗಿದೆ ಎಂಬುದನ್ನು ತೋರಿಸುವ ಯಾವುದೇ ಸಾಕ್ಷ್ಯಾಧಾರವೂ ಅದರ ನಾಶಕ್ಕೆ ಕ್ರಮ ಕೈಗೊಂಡ ಬಿಎಂಸಿ ಬಳಿ ಇಲ್ಲ ಎಂದು ಹೇಳಿದೆ.

ಸೆಪ್ಟೆಂಬರ್ ರಂದು ಉಪನಗರ ಬಾಂದ್ರಾದ ಪಾಲಿ ಹಿಲ್ ಬಂಗಲೆಯ ಒಂದು ಭಾಗವನ್ನು ನೆಲಸಮಗೊಳಿಸಿದ  ಬಿಎಂಸಿ ಕ್ರಮವನ್ನು ಪ್ರಶ್ನಿಸಿ ಕಂಗನಾ ರಣಾವತ್ ಅವರು ಸಲ್ಲಿಸಿದ್ದ ಅರ್ಜಿಯ ವಿವಾರಣೆಯನ್ನು ಪೀಠ ನಡೆಸಿತು.

ನಾಗರಿಕರ ಹಕ್ಕುಗಳ ವಿರುದ್ಧ ಪೌರ ಸಂಸ್ಥೆಯು  ತಪ್ಪಾಗಿ ಮತ್ತು ಕಾನೂನುಬಾಹಿರವಾಗಿ ವರ್ತಿಸಲು ಮುಂದಾಗಿದೆಎಂದು ನ್ಯಾಯಪೀಠ ಹೇಳಿತು.

ಬಿಎಂಸಿಯಿಂದ ಎರಡು ಕೋಟಿ ರೂ. ನಷ್ಟ ಪರಿಹಾರವನ್ನೂ ಕೋರಿದ್ದ ರಣಾವತ್ ಅವರು ಬಿಎಂಸಿಯ ಕ್ರಮವನ್ನು ಕಾನೂನುಬಾಹಿರ ಎಂಬುದಾಗಿ ಘೋಷಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಪರಿಹಾರದ ವಿಷಯದಲ್ಲಿ, ಕಟ್ಟಡ ನೆಲಸಮದಿಂದ ಅವರಿಗೆ ಉಂಟಾಗಿರುವ ವಿತ್ತೀಯ ಹಾನಿಗಳ ಕುರಿತು ಅರ್ಜಿದಾರ ಮತ್ತು ಬಿಎಂಸಿಯನ್ನು ವಿಚಾರಿಸಲು ಮೌಲ್ಯಮಾಪಕರನ್ನು ನೇಮಿಸುವುದಾಗಿ ನ್ಯಾಯಪೀಠ ಹೇಳಿತು.

"ಮೌಲ್ಯಮಾಪಕರು ೨೦೨೧ರ ಮಾರ್ಚ್ ಒಳಗೆ ಪರಿಹಾರದ ಬಗ್ಗೆ ಸೂಕ್ತ ಆದೇಶಗಳನ್ನು ನೀಡಬೇಕು ಎಂದೂ ಎಂದು ನ್ಯಾಯಾಲಯ ಹೇಳಿತು.

ಬಿಎಂಸಿಯು ಮನವಿಯನ್ನು ವಿರೋಧಿಸಿತ್ತು ಮತ್ತು ನಟಿ ತನ್ನ ಅನುಮೋದಿತ ಯೋಜನೆಯನ್ನು ಉಲ್ಲಂಘಿಸಿ ಬಂಗಲೆಗೆ ವ್ಯಾಪಕವಾದ ಮಾರ್ಪಾಡುಗಳನ್ನು ಮತ್ತು ಸೇರ್ಪಡೆಗಳನ್ನು ನಿರ್ಲಕ್ಷ್ಯದಿಂದ ಮತ್ತು ಕಾನೂನುಬಾಹಿರವಾಗಿ ನಡೆಸಿದ್ದಾರೆ ಎಂದು ವಾದಿಸಿತ್ತು.

ಬಂಗಲೆಯ ಒಂದು ಭಾಗವನ್ನು ಉರುಳಿಸುವ ಪ್ರಕ್ರಿಯೆಯನ್ನು ಬಿಎಂಸಿ ಪ್ರಾರಂಭಿಸಿದಾಗ ರಣಾವತ್ ಅವರು  ಸೆಪ್ಟೆಂಬರ್ ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸೆಪ್ಟೆಂಬರ್ ರಂದು ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ ನೆಲಸಮಗೊಳಿಸುವ ಕೆಲಸವನ್ನು ತಡೆಹಿಡಿಯಿತು.

ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಕಂಗನಾ, "ವ್ಯಕ್ತಿಯು ಸರ್ಕಾರದ ವಿರುದ್ಧ ನಿಂತು ಗೆದ್ದಾಗ, ಅದು ವ್ಯಕ್ತಿಯ ವಿಜಯವಲ್ಲ, ಬದಲಿಗೆ ಅದು ಪ್ರಜಾಪ್ರಭುತ್ವದ ವಿಜಯವಾಗುತ್ತದೆ. ನನಗೆ ಧೈರ್ಯ ನೀಡಿದ ಎಲ್ಲರಿಗೂ ಧನ್ಯವಾದಗಳು ಮತ್ತು ನನ್ನ ನನ್ನ ಕನಸುಗಳನ್ನು ಭಗ್ನಗೊಳಿಸಿದ್ದಕ್ಕಾಗಿ ನಕ್ಕಿದ್ದವರಿಗೆ ಧನ್ಯವಾದಗಳು. ನೀವು ಖಳನಾಯಕನ ಪಾತ್ರ ವಹಿಸಿದ ಕಾರಣದಿಂದಾಗಿಯಷ್ಟೇ ನಾನು ನಾಯಕಿ (ಹೀರೋ) ಕ್ಕೆ ಕಾರಣವಾಗುವುದರಿಂದ ನಾನು ಹೀರೋ ಆಗಬಹುದು ಎಂದೂ ಕಂಗನಾ ರಣಾವತ್ ಹೇಳಿದರು.

No comments:

Advertisement