ಚೀನಾದಿಂದ ಭಾರತದ ವಿಶೇಷ ವಿಮಾನ ಹಾರಾಟ ಅಮಾನತು
ಬೀಜಿಂಗ್: ವಂದೇ ಭಾರತ ಮಿಷನ್ ಅಡಿಯಲ್ಲಿ ಚೀನಾಕ್ಕೆ ಬಂದ ಭಾರತೀಯರಲ್ಲಿ ಕೋವಿಡ್-೧೯ ಪತ್ತೆಯಾದ ಹಿನ್ನೆಲೆಯಲ್ಲಿ ಭಾರತದಿಂದ ಚೀನಾಕ್ಕೆ ವಿಶೇಷ ವಿಮಾನಗಳ ಹಾರಾಟವನ್ನು ಚೀನಾವು 2020 ನವೆಂಬರ್ 05ರ ಗುರುವಾರ ಅನಿರ್ದಿಷ್ಟ ಅವಧಿಯವರೆಗೆ ಅಮಾನತುಗೊಳಿಸಿತು.
ಇದರಿಂದಾಗಿ
ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತದಿಂದ ವಿಶೇಷ ವಿಮಾನಗಳ ಮೂಲಕ ಚೀನಾ ಪ್ರವೇಶಿಸುವುದಕ್ಕೆ ಅಡ್ಡಿ ಎದುರಾಗಿದೆ. ಚೀನೀಯರನ್ನು ಹೊರತು ಪಡಿಸಿ ಭಾರತದಿಂದ ಬೇರೆ ಯಾರಿಗೂ ಪ್ರವೇಶಕ್ಕೆ ಅನುಮತಿ ನೀಡದೇ ಇರಲು ಚೀನಾ ನಿರ್ಧರಿಸಿದೆ.
ಕಳೆದ
ವಾರ ವಂದೇ ಭಾರತ್ ಮಿಷನ್ ಅಡಿಯಲ್ಲಿ ಚೀನಾ ಪ್ರವೇಶಿಸಿರುವವರ ಪೈಕಿ ಹಲವು ಜನರಿಗೆ ಕೋವಿಡ್-೧೯ ದೃಢಪಟ್ಟಿದ್ದು, ಪ್ರಕರಣಗಳ
ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಅನಿರ್ದಿಷ್ಟಾವದಿವರೆಗೆ ಪ್ರವೇಶಕ್ಕೆ ಚೀನಾ ನಿರ್ಬಂಧ ಹೇರಿದೆ. ಭಾರತ ಮತ್ತು ಚೀನಾ ನಡುವೆ ಖಾಸಗಿ ವಿಮಾನಗಳ ಹಾರಾಟ ಪುನಾರಂಭಗೊಂಡಿಲ್ಲ. ಆದರೆ,
ಚೀನಾದ ವಿವಿಧ ನಗರಗಳಿಗೆ ವಂದೇ ಭಾರತ್ ಮಿಷನ್ ಅಡಿಯಲ್ಲಿ ’ಏರ್ ಇಂಡಿಯಾ’ ವಿಶೇಷ ವಿಮಾನಗಳ ಹಾರಾಟ ನಡೆಸಲಾಗುತ್ತಿದೆ.
ವಾಸ್ತವ್ಯ
ಕುರಿತು ಸೂಕ್ತ ಅನುಮತಿ ದಾಖಲೆಗಳನ್ನು ಹೊಂದಿರುವ ಎಲ್ಲ ವಿದೇಶಿಯರಿಗೆ ಚೀನಾ ಪ್ರವೇಶಿಸಲು ಬೀಜಿಂಗ್ ಆಡಳಿತವು ಸೆಪ್ಟೆಂಬರ್ ೨೮ರಂದು ಅವಕಾಶ ನೀಡಿತ್ತು. ಜಗತ್ತಿನಾದ್ಯಂತ ಕೊರೊನಾ ಸಾಂಕ್ರಾಮಿಕ ವ್ಯಾಪಿಸುತ್ತಿದ್ದಂತೆ ಮಾರ್ಚ್ ತಿಂಗಳಿನಿಂದ ವಿದೇಶಿಯರ ಪ್ರವೇಶವನ್ನು ಚೀನಾ ರದ್ದು ಪಡಿಸಿತ್ತು.
ಬೀಜಿಂಗಿನಲ್ಲಿ
ಇರುವ ಅಧಿಕಾರಿಗಳ ಪ್ರಕಾರ, ೧,೫೦೦ಕ್ಕೂ ಹೆಚ್ಚು
ಭಾರತೀಯರು ಚೀನಾಕ್ಕೆ ಮರಳಲು ನೋಂದಾಯಿಸಿಕೊಂಡಿದ್ದರು. ಆದರೆ, ಚೀನಾದ ಹೊಸ ಪ್ರಕಟಣೆಯಿಂದಾಗಿ ಅವರ ಪ್ರಯಾಣ ಅನಿಶ್ಚಿತಗೊಂಡಿದೆ. ’ಸಾಂಕ್ರಾಮಿಕ ನಿಯಂತ್ರಿಸುವ ನಿಟ್ಟಿನಲ್ಲಿ ಇದೊಂದು ಸೂಕ್ತ ನಿರ್ಧಾರವಾಗಿದೆ’ ಎಂದು
ಚೀನಾದ ವಿದೇಶಾಂಗ ಸಚಿವಾಲಯವು ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ನವೆಂಬರ್
೧೩ರಿಂದ ಪ್ರತಿ ವಾರ ಚೀನಾಕ್ಕೆ ಪ್ರಯಾಣಿಸಲು ನಿಗದಿಯಾಗಿದ್ದ ವಂದೇ ಭಾರತ್ ಮಿಷನ್ನಿನ ನಾಲ್ಕು ವಿಮಾನಗಳ ವೇಳಾ ಪಟ್ಟಿ ಇದೀಗ ಮರುನಿಗದಿ ಪಡಿಸಬೇಕಾಗುತ್ತದೆ.
’ಚೀನಾದ
ರಾಜತಾಂತ್ರಿಕ, ಸೇವೆಗಳು, ಸರ್ಕಾರದಿಂದ ನೀಡಲಾಗಿರುವ ವೀಸಾ ಹಾಗೂ ಸಿ ವೀಸಾಗಳನ್ನು ಹೊಂದಿರುವ
ವಿದೇಶಿಯರ ಪ್ರಯಾಣಕ್ಕೆ ಯಾವುದೇ ಅಡಚಣೆಯಾಗುವುದಿಲ್ಲ’ ಎಂದು
ಚೀನಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ತುರ್ತು ಕಾರಣಗಳಿಂದಾಗಿ ಚೀನಾ ಪ್ರವೇಶಿಸಲು ಬಯಸುವ ವಿದೇಶಿಯರು ಭಾರತದಲ್ಲಿನ ಚೀನಾ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಿಸಿರುವುದಾಗಿ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.
ಕಳೆದ
ಶುಕ್ರವಾರ ನವದೆಹಲಿಯಿಂದ ಚೀನಾದ ವುಹಾನಿನಲ್ಲಿ ಇಳಿದ ವಿಶೇಷ ವಿಮಾನದಲ್ಲಿದ್ದವರ ಪೈಕಿ ೨೩ ಮಂದಿಗೆ ಕೋವಿಡ್-೧೯ ದೃಢಪಟ್ಟಿದೆ. ಅವರಲ್ಲಿ
೧೯ ಮಂದಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ವರದಿ ತಿಳಿಸಿದೆ.
ಬ್ರಿಟನ್,
ಬೆಲ್ಜಿಯಂ ಹಾಗೂ ಫಿಲಿಪ್ಪೀನ್ಸಿನ ವಿದೇಶಿಯರ ಪ್ರವೇಶಕ್ಕೂ ಚೀನಾ ನಿರ್ಬಂಧ ವಿಧಿಸಿದೆ. ಅಮೆರಿಕ, ಫ್ರಾನ್ಸ್ ಹಾಗೂ ಜರ್ಮನಿಯಿಂದ ಪ್ರಯಾಣಿಸುವವರು ಹೆಚ್ಚುವರಿ ಆರೋಗ್ಯ ತಪಾಸಣೆ ವರದಿಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ.
No comments:
Post a Comment