My Blog List

Friday, November 6, 2020

ನೇಪಾಳ ಪ್ರಧಾನಿ ಒಲಿ, ಭಾರತದ ಸೇನಾ ಮುಖ್ಯಸ್ಥ ನರವಾಣೆ ಭೇಟಿ

 ನೇಪಾಳ ಪ್ರಧಾನಿ ಒಲಿ, ಭಾರತದ ಸೇನಾ ಮುಖ್ಯಸ್ಥ ನರವಾಣೆ ಭೇಟಿ

ಕಠ್ಮಂಡು: ನೇಪಾಳ ಮತ್ತು ಭಾರತ ದೀರ್ಘಕಾಲದ ವಿಶೇಷ ಸಂಬಂಧವನ್ನು ಹೊಂದಿವೆ ಎಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಒಲಿ ಅವರು 2020 ನವೆಂಬರ್ 06ರ ಶುಕ್ರವಾರ ಭಾರತದ ಸೇನಾ ಮುಖ್ಯಸ್ಥ ಮನೋಜ ಮುಕುಂದ ನರವಾಣೆ ಅವರೊಂದಿಗೆ ಸೌಜನ್ಯದ ಭೇಟಿ ಮಾಡಿದ ಸಂದರ್ಭದಲ್ಲಿ ಹೇಳಿದರು.

ಉಭಯ ದೇಶಗಳ ನಡುವಣ ಪ್ರಸ್ತುತ ಸಮಸ್ಯೆಗಳನ್ನು ಸಂವಾದದ ಮೂಲಕ ಪರಿಹರಿಸಲಾಗುವುದು ಎಂದು ಒಲಿ ವಿಶ್ವಾಸ ವ್ಯಕ್ತ ಪಡಿಸಿದರು.

ಉಭಯ ದೇಶಗಳ ಸೇನಾ ಮುಖ್ಯಸ್ಥರಿಗೆ ಗೌರವಾನ್ವಿತ ಮಹಾರಥಿ ಸ್ಥಾನಮಾನವನ್ನು ನೀಡುವ ಸಂಪ್ರದಾಯವಿದೆ ಎಂದು ಪ್ರಧಾನಿ ಹೇಳಿದರು.

ಸಭೆಯಲ್ಲಿ ಉಭಯ ದೇಶಗಳ ನಡುವಣ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಲಾಗುವುದು ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಕೆಪಿ ಶರ್ಮ ಒಲಿ ಅವರ ವಿದೇಶಾಂಗ ನೀತಿ ಸಲಹೆಗಾರ ರಾಜನ್ ಭಟ್ಟಾರಾಯ್ ಟ್ವೀಟ್ ಮಾಡಿದರು.

ಕಠ್ಮಂಡುವಿಗೆ ಮೂರು ದಿನಗಳ ಪ್ರವಾಸದಲ್ಲಿರುವ ಜನರಲ್ ನರವಾಣೆ ಅವರಿಗೆ ನೇಪಾಳಿ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ಗುರುವಾರ ನೇಪಾಳಿ ಸೇನೆಯ  ಗೌರವ ಜನರಲ್ ಹುದ್ದೆಯನ್ನು ಪ್ರದಾನ ಮಾಡಿದರು.

ನೇಪಾಳದ ಅಧ್ಯಕ್ಷರ ಅಧಿಕೃತ ಶೀತಲ್ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ನರವಾಣೆ ಅವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಜನರಲ್ ನರವಾಣೆ ಅವರಿಗೆ ಖಡ್ಗ ಮತ್ತು ಓಲೆಸುರುಳಿಯನ್ನು ನೀಡಲಾಯಿತು.

ಶುಕ್ರವಾರ, ನರವಾಣೆ ಮತ್ತು ನೇಪಾಳದ ರಕ್ಷಣಾ ಸಚಿವರಾಗಿರುವ ಓಲಿ ನಡುವಣ ಸಭೆ ಬಾಲುವತಾರ್‌ನಲ್ಲಿರುವ ಒಲಿ ಅವರ ಅಧಿಕೃತ ನಿವಾಸದಲ್ಲಿ ನಡೆಯಿತು ಎಂದು ನೇಪಾಳ ಸೇನೆಯ ಮೂಲಗಳು ತಿಳಿಸಿವೆ.

ವರ್ಷದ ಆರಂಭದಲ್ಲಿ ಕಹಿ ಬೆಳವಣಿಗೆಗಳ ಬಳಿಕ ಬಿಗಡಾಯಿಸಿದ್ದ  ದ್ವಿಪಕ್ಷೀಯ ಸಂಬಂಧಗಳನ್ನು ಮರುಹೊಂದಿಸುವ ಗುರಿಯನ್ನು ಭೇಟಿ ಹೊಂದಿದೆ.

ಮೇ ತಿಂಗಳಲ್ಲಿ, ನೇಪಾಳವು ಹೊಸ ವಿವಾದಾತ್ಮಕ ರಾಜಕೀಯ ನಕ್ಷೆ ಬಿಡುಗಡೆ ಮಾಡಿ, ಉತ್ತರಾಖಂಡದ ಹಲವಾರು ಪ್ರದೇಶಗಳನ್ನು ತನ್ನ ಪ್ರದೇಶದ ಭಾಗವೆಂದು ಹೇಳಿಕೊಂಡಿತ್ತು. ಮೇ ರಂದು ಉತ್ತರಾಖಂಡದ ಧಾರ್ಚುಲಾದೊಂದಿಗೆ ಲಿಪುಲೇಖ ಕಣಿವೆಯನ್ನು ಸಂಪರ್ಕಿಸುವ ೮೦ ಕಿ.ಮೀ ಉದ್ದದ ಆಯಕಟ್ಟಿನ ನಿರ್ಣಾಯಕ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ ನಂತರ ನೇಪಾಳ ಪ್ರತಿಭಟಿಸಿತ್ತು.

ನೇಪಾಳವು ನಕ್ಷೆಯನ್ನು ಬಿಡುಗಡೆ ಮಾಡಿದ ನಂತರ, ಭಾರತವು ಇದನ್ನು ತೀವ್ರವಾಗಿ ವಿರೋಧಿಸಿತ್ತು, ವಿವಾದಾತ್ಮಕ ನಕ್ಷೆ ಬಿಡುಗಡೆಯನ್ನು "ಏಕಪಕ್ಷೀಯ ಕ್ರಿಯೆ" ಎಂದು ಭಾರತ ಕರೆದಿತ್ತು ಮತ್ತು ಪ್ರಾದೇಶಿಕ ಹಕ್ಕುಗಳ "ಕೃತಕ ಹಿಗ್ಗುವಿಕೆ ಸ್ವೀಕಾರಾರ್ಹವಲ್ಲ ಎಂದು ಕಠ್ಮಂಡುವಿಗೆ ಎಚ್ಚರಿಕೆ ನೀಡಿತ್ತು.

No comments:

Advertisement