My Blog List

Wednesday, November 11, 2020

೧೦ ವಲಯಗಳಿಗೆ ೧.೪೬ ಲಕ್ಷ ಕೋಟಿ ರೂ.ಗಳ ಪಿಎಲ್‌ಐ ಯೋಜನೆ

 ೧೦ ವಲಯಗಳಿಗೆ .೪೬ ಲಕ್ಷ ಕೋಟಿ ರೂ.ಗಳ ಪಿಎಲ್‌ಐ ಯೋಜನೆ

ನವದೆಹಲಿ: ಭಾರತದ ಉತ್ಪಾದನಾ ಸಾಮರ್ಥ್ಯ ಮತ್ತು ರಫ್ತು ಸಾಮರ್ಥ್ಯವನ್ನು ಹೆಚ್ಚಿಸಲು ೧೦ ಪ್ರಮುಖ ವಲಯಗಳಿಗೆ .೪೬ ಲಕ್ಷ ಕೋಟಿ ರೂ. ಮೌಲ್ಯದ ಉತ್ಪಾದನೆ ಸಂಬಂಧಿತ ಪ್ರೋತ್ಸಾಹ ಧನ (ಪ್ರೊಡಕ್ಷನ್ ಲಿಂಕ್ಡ್ ಇನ್‌ಸೆಂಟಿವ್- ಪಿಎಲ್‌ಐ) ಯೋಜನೆಗೆ ಕೇಂದ್ರ ಸಚಿವ ಸಂಪುಟ 2020 ನವೆಂಬರ್ 11ರ ಬುಧವಾರ ಅನುಮೋದನೆ ನೀಡಿದೆ.

ಯೋಜನೆಯು ಭಾರತೀಯ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುತ್ತದೆ, ಹೂಡಿಕೆಯನ್ನು ಆಕರ್ಷಿಸುತ್ತದೆ ಮತ್ತು ರಫ್ತು ಹೆಚ್ಚಿಸುತ್ತದೆ.

ಸಚಿವ ಸಂಪುಟ ನಿರ್ಧಾರವನ್ನು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಭೆಯ ಬಳಿಕ ಪ್ರಕಟಿಸಿದರು.

ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಾವಡೇಕರ್, ಬಿಳಿ ಸರಕುಗಳ ಉತ್ಪಾದನೆ, ಔಷಧೀಯ, ವಿಶೇಷ ಉಕ್ಕು, ವಾಹನಗಳು, ಟೆಲಿಕಾಂ, ಜವಳಿ, ಆಹಾರ ಉತ್ಪನ್ನಗಳು, ಸೌರ ದ್ಯುತಿವಿದ್ಯುಜ್ಜನಕ ಮತ್ತು ಸೆಲ್ ಬ್ಯಾಟರಿ (ಸೋಲಾರ್ ಫೊಟೋವೋಲ್ಟಿಕ್ ಮತ್ತು ಸೆಲ್ ಬ್ಯಾಟರಿ) ಮತ್ತಿತರ ಕ್ಷೇತ್ರಗಳಿಗೆ ಉತ್ಪಾದನಾ-ಸಂಬಂಧಿತ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು.

ಪಿಎಲ್‌ಐನಲ್ಲಿ ತೆಗೆದುಕೊಳ್ಳುತ್ತಿರುವ ನೀತಿಯ ಮೂಲಕ ತಯಾರಕರು ಭಾರತಕ್ಕೆ ಬರಬೇಕೆಂದು ನಾವು ಬಯಸುತ್ತೇವೆ, ನಮ್ಮ ಶಕ್ತಿಯನ್ನು ನಿರ್ಮಿಸಲು ನಾವು ಬಯಸುತ್ತೇವೆ ಆದರೆ ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಪರ್ಕ ಹೊಂದಿದ್ದೇವೆ ಎಂದು ಸ್ಪಷ್ಟವಾಗಿ ಹೇಳುವುದು ಯೋಜನೆಯ ಉದ್ದೇಶವಾಗಿದೆಎಂದು ಅವರು ನುಡಿದರು.

ಭಾರತವು ಉತ್ಪಾದನಾ ಕೇಂದ್ರವಾಗಬೇಕು ಎಂಬುದು ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಯವರ ಕರೆಎಂದು  ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

೧೦ ವಲಯಗಳ ಪೈಕಿ ಆಟೋಮೊಬೈಲ್ಸ್ ಮತ್ತು ಆಟೋ ಭಾಗಗಳು ಗರಿಷ್ಠ ೫೭,೦೪೨ ಕೋಟಿ ರೂ. ಮೊತ್ತವನ್ನು ಪಡೆದಿದ್ದು, ಅಡ್ವಾನ್ಸ್ ಕೆಮಿಸ್ಟ್ರಿ ಸೆಲ್ (ಎಸಿಸಿ) ಬ್ಯಾಟರಿಯು ೧೮,೧೦೦ ಕೋಟಿ ರೂ.ಗಳ ಪ್ರೋತ್ಸಾಹವನ್ನು ಪಡೆದಿದೆ ಎಂದು ಸರ್ಕಾರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪಿಎಲ್‌ಐ ಅಡಿಯಲ್ಲಿ ಐದು ವರ್ಷಗಳಲ್ಲಿ ಸುಮಾರು .೪೬ ಲಕ್ಷ ಕೋಟಿ ರೂ.ಗಳ ಒಟ್ಟು ಹಂಚಿಕೆ ಮಾಡಲಾಗುವುದು. ಆಟೋ ಭಾಗಗಳು ಮತ್ತು ಆಟೋಮೊಬೈಲ್ ವಲಯಗಳಿಗೆ ಗರಿಷ್ಠ ೫೭,೦೦೦ ಕೋಟಿ ರೂ. ಮೀಸಲಿಡಲಾಗಿದೆ. ಇತರ ಕ್ಷೇತ್ರಗಳಲ್ಲಿ ಅಡ್ವಾನ್ಸ್ ಸೆಲ್ ಕೆಮೆಸ್ಟ್ರಿ ಬ್ಯಾಟರಿ, ಔಷಧಗಳು, ಆಹಾರ ಉತ್ಪನ್ನಗಳು ಮತ್ತು ಬಿಳಿ ಸರಕುಗಳು ಸೇರಿವೆ.

ಯೋಜನೆಯ ಪ್ರಕಾರ, ಕೇಂದ್ರವು ಹೆಚ್ಚುವರಿ ಉತ್ಪಾದನೆಗೆ ಪ್ರೋತ್ಸಾಹವನ್ನು ನೀಡುತ್ತದೆ ಮತ್ತು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ರಫ್ತು ಮಾಡಲು ಕಂಪನಿಗಳಿಗೆ ಅವಕಾಶ ನೀಡುತ್ತದೆ ಎಂದು ಸಚಿವರು ಹೇಳಿದರು.

No comments:

Advertisement