Friday, November 20, 2020

‘ಲವ್ ಜಿಹಾದ್’: ಬಿಜೆಪಿಗೆ ಅಶೋಕ ಗೆಹ್ಲೋಟ್ ತರಾಟೆ

 ಲವ್ ಜಿಹಾದ್: ಬಿಜೆಪಿಗೆ ಅಶೋಕ ಗೆಹ್ಲೋಟ್ ತರಾಟೆ

ಜೈಪುರ: ‘ಲವ್ ಜಿಹಾದ್ ಎಂಬುದು ದೇಶವನ್ನು ಒಡೆಯಲು ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಲು ಬಿಜೆಪಿ ಸೃಷ್ಟಿಸಿದ ಪದ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ 2020 ನವೆಂಬರ್ 20ರ ಶುಕ್ರವಾರ ಇಲ್ಲಿ ಟೀಕಿಸಿದರು.

ಮದುವೆಯೆಂಬುದು ವೈಯಕ್ತಿಕ ನಿರ್ಧಾರವಾಗಿದ್ದು ಬಿಜೆಪಿಯು ಅದಕ್ಕೂ ನಿರ್ಬಂಧ ವಿಧಿಸುತ್ತಿದೆ ಎಂದು ಅವರು ಆಪಾದಿಸಿದರು.

ದೇಶವನ್ನು ಒಡೆಯಲು ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಲು ಬಿಜೆಪಿ ಸೃಷ್ಟಿಸಿರುವ ಪದವೇಲವ್ ಜಿಹಾದ್. ಮದುವೆಯೆಂಬುದು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರ. ಅದಕ್ಕೆ ನಿರ್ಬಂಧ ವಿಧಿಸಲು ಕಾನೂನು ರೂಪಿಸುವುದು ಅಸಾಂವಿಧಾನಿಕ. ಇದು ಯಾವ ನ್ಯಾಯಾಲಯದಲ್ಲೂ ನಿಲ್ಲುವುದಿಲ್ಲ. ಪ್ರೀತಿಯಲ್ಲಿ ಜಿಹಾದ್ಗೆ ಎಂದು ಗೆಹ್ಲೋಟ್ ಟ್ವೀಟ್ ಮಾಡಿದರು.

ವಯಸ್ಕರ ನಡುವಣ ಸಮ್ಮತಿಗೆ ಸರ್ಕಾರದ ಅನುಮತಿ ಅಗತ್ಯ ಎನ್ನುವಂಥ ವಾತಾವರಣವನ್ನು ಅವರು (ಬಿಜೆಪಿ) ಸೃಷ್ಟಿಸುತ್ತಿದ್ದಾರೆ. ವೈಯಕ್ತಿಕ ನಿರ್ಧಾರವಾದ ಮದುವೆಯ ಮೇಲೆ ಅವರು ನಿರ್ಬಂಧ ವಿಧಿಸುತ್ತಿದ್ದಾರೆ. ಇದು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ ಎಂದು ಮತ್ತೊಂದು ಟ್ವೀಟಿನಲ್ಲಿ ಗೆಹ್ಲೋಟ್ ಬರೆದರು.

ಲವ್ ಜಿಹಾದ್ ತಡೆಗೆ ಕಠಿಣ ಕಾನೂನು ರೂಪಿಸುವುದಾಗಿ ಅಲಹಾಬಾದ್ ಹೈಕೋರ್ಟ್ ತೀರ್ಪು ಉಲ್ಲೇಖಿಸಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇತ್ತೀಚೆಗೆ ಹೇಳಿದ್ದರು. ಲವ್ ಜಿಹಾದ್ ತಡೆ ನಿಟ್ಟಿನಲ್ಲಿ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸುವುದಾಗಿ ಮಧ್ಯಪ್ರದೇಶ ಗೃಹಸಚಿವರೂ ಇತ್ತೀಚೆಗೆ ಹೇಳಿದ್ದರು.

ಲವ್ ಜಿಹಾದ್ನ್ನು ಕಾನೂನುಬಾಹಿರಗೊಳಿಸಲು ಬಿಜೆಪಿ ಆಡಳಿತದಲ್ಲಿರುವ ನಾಲ್ಕು ರಾಜ್ಯಗಳಾದ ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಕರ್ನಾಟಕದ ಯೋಜನೆಗಳ ಮಧ್ಯೆ ಗೆಹ್ಲೋಟ್ ಅವರ ಅಭಿಪ್ರಾಯಗಳು ಬಂದಿರುವುದು ಮಹತ್ವವಾಗಿದೆ.

ಗೆಹ್ಲೋಟ್ ಟ್ವೀಟಿಗೆ ಉತ್ತರಿಸಿರುವ ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಗಜೇಂದ್ರ ಸಿಂಗ್ ಶೆಖಾವತ್ ಅವರು "ಲವ್ ಜಿಹಾದ್"  ಒಂದು "ಬಲೆ ಎಂದು ಹೇಳಿದರು.

ಆತ್ಮೀಯ ಅಶೋಕ್ ಜಿ, ಲವ್ ಜಿಹಾದ್ ಒಂದು ಬಲೆ, ಮದುವೆಯನ್ನು ವೈಯಕ್ತಿಕ ವ್ಯವಹಾರವೆಂದು ನಂಬಿದ  ಸಾವಿರಾರು ಯುವತಿಯರು ಬಲೆಗೆ ಸಿಲುಕಿದ್ದಾರೆ, ನಂತರ ಅದು ವೈಯಕ್ತಿಕ ವ್ಯವಹಾರ ಅಲ್ಲ ಎಂದು ಅವರಿಗೆ ತಿಳಿಯುತ್ತದೆ. ಅಲ್ಲದೆ, ಇದು ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದ್ದರೆ, ಮಹಿಳೆಯರು ತಮ್ಮ ಮೊದಲ ಹೆಸರು ಅಥವಾ ಧರ್ಮವನ್ನು ಉಳಿಸಿಕೊಳ್ಳಲು ಏಕೆ ಮುಕ್ತರಾಗಿಲ್ಲ?’ ಎಂದು ಅವರು ಟ್ವೀಟ್ ಮೂಲಕ ಪ್ರಶ್ನಿಸಿದರು.

"ವೈಯಕ್ತಿಕ ಸ್ವಾತಂತ್ರ್ಯದ ಹೆಸರಿನ ಅಡಿಯಲ್ಲಿ ಕಾಂಗ್ರೆಸ್ ವಂಚನೆಯ ಕೃತ್ಯವನ್ನು ಬೆಂಬಲಿಸಲು ಬಯಸುತ್ತದೆಯಾದ್ದರಿಂದ, ಇದು ಅದರ ಕೋಮು ಕಾರ್ಯಸೂಚಿಯ ಸ್ಪಷ್ಟ ಪ್ರದರ್ಶನವಾಗಿದೆ ಎಂದು ಶೆಖಾವತ್ ಹೇಳಿದರು.

ಉತ್ತರ ಪ್ರದೇಶದಲ್ಲಿ, ಗೃಹ ಇಲಾಖೆಯುಲವ್ ಜಿಹಾದ್ ಶಾಸನಕ್ಕಾಗಿ ಕಾನೂನು ಇಲಾಖೆಗೆ ಪ್ರಸ್ತಾವನೆ ಕಳುಹಿಸಿದೆ. ಕಾನೂನು ಇಲಾಖೆಯು ಕಾನೂನು ವಿಧಾನಗಳನ್ನು ರೂಪಿಸುತ್ತದೆ ಮತ್ತು ಅದರ ನಂತರ ಸರ್ಕಾರವು ಸುಗ್ರೀವಾಜ್ಞೆಯನ್ನು ಹೊರಡಿಸಲಿದೆ.

ಅಕ್ಟೋಬರಿನಲ್ಲಿ ಜೌನ್ಪುರದಲ್ಲಿ ನಡೆದ ಉಪ ಚುನಾವಣಾ ಸಭೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರುಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ರೂಪಿಸಲು ತಮ್ಮ ಸರ್ಕಾರ ಯೋಜಿಸುತ್ತಿದೆ ಎಂದು ಹೇಳಿದ್ದರು.

ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಕೂಡ ಶೀಘ್ರದಲ್ಲೇಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಲಿದೆ ಎಂದು ಹೇಳಿದೆ. ಮಧ್ಯಪ್ರದೇಶದಲ್ಲಿಲವ್ ಜಿಹಾದ್ ಪ್ರಕರಣಗಳಲ್ಲಿ ಜಾಮೀನು ರಹಿತ ಶಿಕ್ಷೆಗಳು ಅನ್ವಯವಾಗುತ್ತವೆ ಎಂದು ಚೌಹಾಣ್ ಸಂಪುಟದ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

"ಮಧ್ಯಪ್ರದೇಶದ ಧರ್ಮ  ಸ್ವಾತಂತ್ರ್ಯ ಮಸೂದೆ, ೨೦೨೦ನ್ನು  ವಿಧಾನಸಭೆಯಲ್ಲಿ ಮಂಡಿಸಲು ನಾವು ಸಿದ್ಧತೆಗಳನ್ನು ನಡೆಸುತ್ತಿದ್ದೇವೆ. ಇದು ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಅವಕಾಶ ಕಲ್ಪಿಸುತ್ತದೆ. ಇಂತಹ ಅಪರಾಧಗಳನ್ನು ಜಾಮೀನು ರಹಿತ ಅಪರಾಧವೆಂದು ಘೋಷಿಸಲು ನಾವು ಪ್ರಸ್ತಾಪಿಸುತ್ತಿದ್ದೇವೆ" ಎಂದು ನರೋತ್ತಮ್ ಮಿಶ್ರಾ ಹೇಳಿದರು.

ಹರಿಯಾಣದಲ್ಲಿ ಗೃಹ ಸಚಿವ ಅನಿಲ್ ವಿಜ್ ಅವರು "ಲವ್ ಜಿಹಾದ್" ವಿರುದ್ಧ "ಕಠಿಣ" ಕಾನೂನನ್ನು ರೂಪಿಸಲು ಸಮಿತಿಯನ್ನು ರಚಿಸುವುದಾಗಿ ಘೋಷಿಸಿದ್ದರು. ಗೃಹ ಸಚಿವರ ಹೇಳಿಕೆಯ ಪ್ರಕಾರ, " ಕಾನೂನನ್ನು ಜಾರಿಗೊಳಿಸುವುದರೊಂದಿಗೆ, ಯಾವುದೇ ವ್ಯಕ್ತಿಯ ಮೇಲೆ ಒತ್ತಡ ಹೇರುವುದು, ಪ್ರಲೋಭ ನೀಡುವುದುಅಥವಾ ಯಾವುದೇ ರೀತಿಯ ಪಿತೂರಿಯಲ್ಲಿ ಭಾಗಿಯಾಗಿರುವುದು ಅಥವಾ ಪ್ರಯತ್ನಿಸುವ ಮೂಲಕ ಧಾರ್ಮಿಕ ಮತಾಂತರದಲ್ಲಿ ತೊಡಗಿರು ಹಾಗೂ ಪ್ರೀತಿಯ ಹೆಸರಿನಲ್ಲಿ ಪಿತೂರಿ ನಡೆಸುವ ವ್ಯಕ್ತಿಯ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ವಿವಾಕ್ಕಾಗಿ ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಕಾನೂನನ್ನು ರೂಪಿಸಲು ಈಗಾಗಲೇ ತಜ್ಞರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಹೇಳಿದ್ದಾರೆ.

No comments:

Advertisement