Friday, November 20, 2020

ನಾಗ್ರೋಟಾ ಮುಖಾಮುಖಿ: ಭದ್ರತಾ ಪಡೆಗಳಿಗೆ ಪ್ರಧಾನಿ ಧನ್ಯವಾದ

 ನಾಗ್ರೋಟಾ ಮುಖಾಮುಖಿ: ಭದ್ರತಾ ಪಡೆಗಳಿಗೆ ಪ್ರಧಾನಿ ಧನ್ಯವಾದ

ನವದೆಹಲಿ: ’ದೊಡ್ಡ ಹಾನಿ, ವಿನಾಶವನ್ನು ಮತ್ತೊಮ್ಮೆ ತಡೆಯಲಾಯಿತು ಎಂದು ನಾಗ್ರೋಟಾ ಮುಖಾಮುಖಿಯ ಒಂದು ದಿನದ ಬಳಿಕ 2020 ನವೆಂಬರ್ 20ರ ಶುಕ್ರವಾರ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ಪಡೆಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಜಮ್ಮು ಜಿಲ್ಲೆಯ ನಾಗ್ರೋಟಾ ಪ್ರದೇಶದಲ್ಲಿ ಭದ್ರತಾ ಪಡೆಗಳು ನಾಲ್ಕು ಭಯೋತ್ಪಾದಕರನ್ನು ಬಗ್ಗು ಬಡಿದ ಒಂದು ದಿನದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರುದೊಡ್ಡ ಹಾನಿ ಮತ್ತು ವಿನಾಶವನ್ನು ತಡೆದುದಕ್ಕಾಗಿ ಯೋಧರನ್ನು ಅಭಿನಂದಿಸಿದರು.

"ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್--ಮೊಹಮ್ಮದ್ಗೆ ಸೇರಿದ ನಾಲ್ಕು ಭಯೋತ್ಪಾದಕರನ್ನು ಮಟ್ಟಹಾಕಿದ್ದು ಮತ್ತು ಅವರ ಬಳಿಯಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿರುವುದು, ದೊಡ್ಡ ಹಾನಿ ಮತ್ತು ವಿನಾಶವನ್ನು ಉಂಟು ಮಾಡುವ ಉಗ್ರರ  ಪ್ರಯತ್ನಗಳನ್ನು ಮತ್ತೊಮ್ಮೆ ವಿಫಲಗೊಳಿಸಿದ್ದನ್ನು ಸೂಚಿಸಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದರು.

ಹತ ಭಯೋತ್ಪಾದಕರಿಂದ ೧೧ ಎಕೆ -೪೭ ರೈಫಲ್ಗಳು, ಮೂರು ಪಿಸ್ತೂಲ್ಗಳು ಮತ್ತು ೨೯ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶುಕ್ರವಾರ, ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್) ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಗ್ಲಾ ಮತ್ತು ಉನ್ನತ ಗುಪ್ತಚರ ಸಂಸ್ಥೆಗಳೊಂದಿಗೆ ನಾಗ್ರೋಟಾ ಎನ್ಕೌಂಟರ್ ಮತ್ತು ನಾಲ್ವರು ಭಯೋತ್ಪಾದಕರನ್ನು ಮಟ್ಟ ಹಾಕಿದ ಬಗ್ಗೆ ಸಮಾಲೋಚಿಸಿದ್ದಾರೆ.

ಸದರಿ ಪ್ರಕರಣವು ಮುಂಬೈ ಮೇಲಿನ ೨೬/೧೧ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದು ಭಯೋತ್ಪಾದಕರು "ದೊಡ್ಡ ದಾಳಿ" ನಡೆಸಲು ಯೋಜಿಸುತ್ತಿದ್ದರು ಎಂಬುದನ್ನು ಬಹಿರಂಗ ಪಡಿಸಿದೆ.

"ನಮ್ಮ ಭದ್ರತಾ ಪಡೆಗಳು ಮತ್ತೊಮ್ಮೆ ಅತ್ಯಂತ ಧೈರ್ಯ ಮತ್ತು ವೃತ್ತಿಪರತೆಯನ್ನು ಪ್ರದರ್ಶಿಸಿವೆ. ಅವರ ಜಾಗರೂಕತೆಗೆ ಧನ್ಯವಾದಗಳು, ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ತಳಮಟ್ಟದ ಪ್ರಜಾಪ್ರಭುತ್ವ ವ್ಯಾಯಾಮಗಳನ್ನು ಗುರಿಯಾಗಿಸುವ ಕೆಟ್ಟ ಹುನ್ನಾರವನ್ನು ಸೋಲಿಸಿದ್ದಾg’ ಎಂದು ಪ್ರಧಾನಿ ಮೋದಿ ಟ್ವೀಟಿನಲ್ಲಿ ಬರೆದರು.

ಗುರುವಾರ, ಜಮ್ಮು ಜಿಲ್ಲೆಯ ನಾಗ್ರೋಟಾ ಪ್ರದೇಶದ ಬಾನ್ ಟೋಲ್ ಪ್ಲಾಜಾ ಬಳಿ ಮುಂಜಾನೆ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಮುಖಾಮುಖಿ ಸಂಭವಿಸಿತ್ತು. ಗುಂಡಿನ ಘರ್ಷಣೆ ಮೂರು ಗಂಟೆಗಳ ಕಾಲ ನಡೆಯಿತು, ಇದರಲ್ಲಿ ನಾಲ್ವರು ಭಯೋತ್ಪಾದಕರು ಹತರಾದರು.

ಸತ್ತ ಭಯೋತ್ಪಾದಕರಿಂದ ವಶಪಡಿಸಿಕೊಳ್ಳಲಾಗಿರುವ ಭಾರೀ ಪ್ರಮಾಣದ ಮದ್ದುಗುಂಡು, ಶಸ್ತ್ರಾಸ್ತ್ರಗಳು ಅವರು ದೊಡ್ಡ ದಾಳಿಗೆ ಯೋಜನೆ ರೂಪಿಸಿದ್ದನ್ನು ಸೂಚಿಸಿವೆ ಎಂದು  ಜಮ್ಮು ವಲಯದ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಮುಖೇಶ್ ಸಿಂಗ್ ಹೇಳಿದ್ದರು.

No comments:

Advertisement