My Blog List

Saturday, December 5, 2020

ರೈತ ಚಳವಳಿ: ಮಾತುಕತೆ ಮತ್ತೆ ವಿಫಲ, ಡಿ.9ಕ್ಕೆ ಇನ್ನೊಮ್ಮೆ ಚರ್ಚೆ

 ರೈತ ಚಳವಳಿ: ಮಾತುಕತೆ ಮತ್ತೆ ವಿಫಲ, ಡಿ.9ಕ್ಕೆ ಇನ್ನೊಮ್ಮೆ ಚರ್ಚೆ

ನವದೆಹಲಿ: ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ಜಮಾಯಿಸಿ ಪ್ರತಿಭಟಿಸುತ್ತಿರುವ ರೈತ ಗುಂಪುಗಳು ಮತ್ತು ಕೇಂದ್ರ ಸರ್ಕಾರದ ನಡುವೆ 2020 ಡಿಸೆಂಬರ್ 05ರ ಶನಿವಾರ ನಡೆದ ೫ನೇ ಸುತ್ತಿನ ಮಾತುಕತೆಯೂ ಅನಿಶ್ಚಿತವಾಗಿದ್ದು, ಡಿಸೆಂಬರ್ ೯ರಂದು ಮುಂದಿನ ಸುತ್ತಿನ ಮಾತುಕತೆಗೆ ಉಭಯರು ಒಪ್ಪಿಕೊಂಡಿದ್ದಾರೆ.

ಹೊಸ ಕೃಷಿ ಕಾನೂನುಗಳ ಬಗೆಗಿನ ಗೊಂದಲಕ್ಕೆ ನಿವಾರಣೆಗಾಗಿ ಪ್ರತಿಭಟನಾ ನಿರತ ಕೃಷಿ ಒಕ್ಕೂಟದ ಮುಖಂಡರು ಮತ್ತು ಸರ್ಕಾರದ ನಡುವೆ ಐದನೇ ಸುತ್ತಿನ ಮಾತುಕತೆ ವಿಜ್ಞಾನ ಭವನದಲ್ಲಿ ಶನಿವಾರ ನಡೆಯಿತು.  ಸಂಧಾನ ಸಭೆಯಲ್ಲಿಯಸ್ ಆರ್ ನೋ. ನೋ ಚರ್ಚಾ (ಹೌದು ಅಥವಾ ಇಲ್ಲ, ಚರ್ಚೆ ಇಲ್ಲಎಂಬ ಪ್ಲೇಕಾರ್ಡ್ಗಳನ್ನು ಪ್ರದರ್ಶಿಸಿದ ರೈತ ಪ್ರತಿನಿಧಿಗಳು ‘ಮೌನ ಪ್ರತಿಭಟನೆ’ ನಡೆಸಿದರು.

ರೈತರ ಜೊತೆಗೆ ಮಾತುಕತೆ ಆರಂಭಕ್ಕೆ ಕೆಲವು ಗಂಟೆಗಳ ಮುನ್ನ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನರೇಂದ್ರ ಸಿಂಗ್ ತೋಮರ್ ಮತ್ತು ಪಿಯೂಷ್ ಗೋಯಲ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ನವದೆಹಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿದರು.

ಮೂವರು ಕೇಂದ್ರ ಸಚಿವರು ಮತ್ತು ರೈತರ ೪೦ಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳ ನಡುವೆ ಈವರೆಗೆ ನಡೆಸಿದ ನಾಲ್ಕು ಸುತ್ತಿನ ಮಾತುಕತೆಗಳು ಕಗ್ಗಂಟು ಬಿಡಿಸಲು ವಿಫಲವಾಗಿವೆ.

ಇತ್ತೀಚೆಗೆ ಜಾರಿಗೆ ಬಂದ ಶಾಸನವನ್ನು ಮರುಪರಿಶೀಲಿಸಲು ಮತ್ತು ರೈತರ ಬೇಡಿಕೆಗಳನ್ನು ಪರಿಹರಿಸಲು ಅಗತ್ಯವಿದ್ದರೆ ತಿದ್ದುಪಡಿ ತರಲು ಕೇಂದ್ರ ಒಪ್ಪಿದೆ. ಆದಾಗ್ಯೂ, ರೈತರು ಹೊಸ ಕಾನೂನುಗಳಿಗೆ ತಿದ್ದುಪಡಿಗಳನ್ನು ಬಯಸುವುದಿಲ್ಲ ಆದರೆ ಅವುಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕೆಂದು ರೈತರು ಪಟ್ಟು ಹಿಡಿದರು ಎಂದು ಸುದ್ದಿ ಮೂಲಗಳು ಹೇಳಿದವು.

ಎಲ್ಲ ಪಾಲುದಾರರ ಕೋರಿಕೆಯ ಮೇರೆಗೆ ಡಿಸೆಂಬರ್ ರಂದು ರೈತ ಮುಖಂಡರು ಮತ್ತು ಕೇಂದ್ರ ಸರ್ಕಾರದ ನಡುವೆ ಮುಂದಿನ ಸುತ್ತಿನ ಮಾತುಕತೆ ನಡೆಸಲು ಶನಿವಾರದ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಸುದ್ದಿ ಮೂಲ ತಿಳಿಸಿತು.

ಐದನೇ ಸುತ್ತಿನ ಮಾತುಕತೆಯ ಸಂದರ್ಭದಲ್ಲಿ ರೈತರ ಮುಖಂಡರು, ’ನಮಗೆ ಕಾರ್ಪೊರೇಟ್ ಕೃಷಿ ಬೇಡ. ಕಾನೂನಿನಿಂದ ಸರ್ಕಾರವು ಪ್ರಯೋಜನ ಪಡೆಯುತ್ತದೆ, ಆದರೆ ರೈತನಲ್ಲಎಂದು ವಾದಿಸಿದರು.

ಸಚಿವ ತೋಮರ್ ಮನವಿ

ಮಧ್ಯೆ, ಮಕ್ಕಳನ್ನು ಮತ್ತು ಹಿರಿಯ ನಾಗರಿಕರನ್ನು ಪ್ರತಿಭಟನಾ ತಾಣದಿಂದ ಮನೆಗೆ ಕಳುಹಿಸುವಂತೆ ಕೇಂದ್ರ ಸಚಿವ ತೋಮರ್ ರೈತರ ಮುಖಂಡರಿಗೆ ಮನವಿ ಮಾಡಿದರು.

ಪ್ರತಿಭಟನಾ ಸ್ಥಳದಲ್ಲಿ ಹಿರಿಯ ನಾಗರಿಕರು ಮತ್ತು ಮಕ್ಕಳನ್ನು ಮನೆಗೆ ಹೋಗುವಂತೆ ದಯವಿಟ್ಟು ಕೇಳುವಂತೆ ನಿಮ್ಮೆಲ್ಲರಿಗು ಮನವಿ ಮಾಡುವೆಎಂದು ಸಚಿವರು ಹೇಳಿದರು ಎಂದು ವಾರ್ತಾಸಂಸ್ಥೆಯ ವರದಿಯೊಂದು ತಿಳಿಸಿತು.

ಎತ್ತಿದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಿರ್ಧರಿಲು ಕೇಂದ್ರ ವಿಫಲವಾದರೆ ಸಭೆಯಿಂದ ಹೊರನಡೆಯುವುದಾಗಿ ರೈತರ ಮುಖಂಡರು ಒಂದು ಹಂತದಲ್ಲಿ ಬೆದರಿಕೆ ಹಾಕಿದರು.

ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ನಾವು ಸಭೆಯಿಂದ ಹೊರನಡೆಯುತ್ತೇವೆಎಂದು ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಸರ್ಕಾರದೊಂದಿಗೆ ಐದನೇ ಸುತ್ತಿನ ಮಾತುಕತೆಯಲ್ಲಿ ಭಾಗವಹಿಸಿದ ರೈತ ಮುಖಂಡರು ಹೇಳುತ್ತಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು.

ವಿಜ್ಞಾನ ಭವನದಲ್ಲಿ ಕೇಂದ್ರದೊಂದಿಗೆ ಐದನೇ ಸುತ್ತಿನ ಮಾತುಕತೆಯ ಸಂದರ್ಭದಲ್ಲಿ ರೈತರ ಸಂಘದ ಮುಖಂಡರು ಹೆಚ್ಚಿನ ಚರ್ಚೆಯನ್ನು ಬಯಸುವುದಿಲ್ಲ ಮತ್ತು ಬದಲಿಗೆ ಪರಿಹಾರ ಅಥವಾ ಬದ್ಧತೆಯ ಅಗತ್ಯವಿದೆ ಎಂದು ಹೇಳಿದರು.

 ಮೂವರು ಕೇಂದ್ರ ಸಚಿವರ ಜೊತೆಗೆ ನಡೆಸಿದ ಐದನೇ ಸುತ್ತಿನ ಮಾತುಕತೆಯಲ್ಲಿ  ರೈತ ಮುಖಂಡರು ಹೊಸ ಕೃಷಿ ಕಾನೂನುಗಳ ವಿವಾದಾತ್ಮಕ ನಿಬಂಧನೆಗಳನ್ನು ತಿದ್ದುಪಡಿ ಮಾಡುವ ಪ್ರಸ್ತಾಪವನ್ನು ತಿರಸ್ಕರಿಸಿದರು ಮತ್ತು ಹೆಚ್ಚಿನ ಸಂವಾದವನ್ನೂ ತಳ್ಳಿಹಾಕಿದರು ಎಂದು ವರದಿ ಹೇಳಿದೆ.

ಭಾರತ ಬಂದ್: ಕಾರ್ಮಿಕರ ಬೆಂಬಲ

ಏತನ್ಮಧ್ಯೆ, ೧೦ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯು ಡಿಸೆಂಬರ್ ರಂದು ರೈತ ಸಂಘಟನೆಗಳ  ಭಾರತ ಬಂದ್ಕರೆಗೆ ಬೆಂಬಲವನ್ನು ನೀಡಿದೆ.

ಪ್ರತಿಭಟನೆಯನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಧ್ವನಿ ಎತ್ತಿದ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಸಹ ಸಿಂಗು ತಲುಪಿ, ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ ಕೃಷಿ ಸಮುದಾಯದ ಬೇಡಿಕೆಗಳಿಗೆ ಕಿವಿಗೊಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಸಂಚಾರ ಅಸ್ತವ್ಯಸ್ತ

೧೦ ನೇ ದಿನ ಹರಿಯಾಣ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿ ಸಾವಿರಾರು ಪ್ರತಿಭಟನಾಕಾರ ರೈತರು ಪ್ರತಿಭಟನೆ ಮುಂದುವರೆಸಿದ್ದರಿಂದ ರಾಷ್ಟ್ರ ರಾಜಧಾನಿಯಲ್ಲಿನ ವಾಹನ ಸಂಚಾರ ಶನಿವಾರವೂ ಅಸ್ತವ್ಯಸ್ತಗೊಂಡಿತು.

ಮೂರು ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆಗೆ ರೈತ ಮುಖಂಡರು ಅಂಟಿಕೊಂಡಿದ್ದರಿಂದ ಕೇಂದ್ರ ಸಚಿವರು ಮತ್ತು ಸಾವಿರಾರು ಆಂದೋಲನದ ರೈತರ ಪ್ರತಿನಿಧಿ ಗುಂಪು ಗುರುವಾರ ಯಾವುದೇ ನಿರ್ಣಯವನ್ನು ನೀಡಲು ವಿಫಲವಾಗಿತ್ತು. ಸುಮಾರು ಎಂಟು ಗಂಟೆಗಳ ಕಾಲದ ತೀವ್ರವಾದ ಚರ್ಚೆಯ ವೇಳೆಯಲ್ಲಿ ರೈತರ ಗುಂಪುಗಳು ಸರ್ಕಾರ ಒದಗಿಸಿದ, ಚಹಾ ಮತ್ತು ನೀರನ್ನು ನಿರಾಕರಿಸಿದ್ದವು.

No comments:

Advertisement