Saturday, December 5, 2020

ಚಂದ್ರನ ಮೇಲೆ ಧ್ವಜ ನೆಟ್ಟ ಚೀನಾ

 ಚಂದ್ರನ ಮೇಲೆ ಧ್ವಜ ನೆಟ್ಟ ಚೀನಾ

ಬೀಜಿಂಗ್: ಚೀನಾ ಕೈಗೊಂಡಿದ್ದ ಚಂದ್ರಯಾನ ಯಶಸ್ವಿಯಾಗಿದ್ದು, ಚಂದ್ರ ಗ್ರಹದ ಮೇಲೆ ತನ್ನ ರಾಷ್ಟ್ರಧ್ವಜವಾದ ಕೆಂಬಾವುಟವನ್ನು ಅದು ನೆಟ್ಟಿದೆ. ಇದರೊಂದಿಗೆ ಚಂದ್ರನಲ್ಲಿ ಇಳಿದು ರಾಷ್ಟ್ರಧ್ವಜ ನೆಡುವ ಸಾಧನೆ ಮಾಡಿದ  ಜಗತ್ತಿನ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಯಿತು.

೫೦ ವರ್ಷಗಳ ಹಿಂದೆ ಅಮೆರಿಕ ಸಾಧನೆ ಮಾಡಿದ ಮೊದಲ ರಾಷ್ಟ್ರ ಎನಿಸಿತ್ತು.

ತೀವ್ರ ಕಸರತ್ತಿನ ಬಳಿಕ ಚೀನಾ ಚಂದ್ರನ ಅಧ್ಯಯನಕ್ಕೆ ನೌಕೆ ಕಳಿಸಿತ್ತು. ಅದರ ಸಾಹಸ ಯಾತ್ರೆ ಯಾವುದೇ ಅಡ್ಡಿ ಎದುರಾಗದೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಹೆಮ್ಮೆಯ ಸಂಕೇತವಾಗಿ ನೌಕೆ ಭೂಮಿಯತ್ತ ವಾಪಸಾಗುವ ಮುನ್ನ ಚಂದ್ರನ ಮೇಲೆ ಚೀನಾದ ರಾಷ್ಟ್ರಧ್ವಜವನ್ನು ನೆಟ್ಟಿದೆ.

ಚಾಂಗ್ - ನೌಕೆಗೆ ಅಳವಡಿಸಿದ್ದ ಕ್ಯಾಮರಾ ಮೂಲಕ ಧ್ವಜ ಹಾರಾಟದ ಚಿತ್ರಗಳನ್ನು ಸೆರೆಹಿಡಿಯಲಾಗಿದ್ದು, ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು 2020 ಡಿಸೆಂಬರ್ 05ರ ಶನಿವಾರ ಹಂಚಿಕೊಂಡಿತು.  ಚಂದ್ರನ ಮೇಲೆ ಹಾರಿಸಿರುವ ಚೀನಾ ಧ್ವಜವು ಮೀ. ಉದ್ದ ೯೦ ಸೆಂ.ಮೀ ಅಗಲ ಇದೆ.

 ಚಾಂಗ್- ನೌಕೆಯನ್ನು ನವೆಂಬರ್ ೨೩ರಂದು ಬಾನಿನತ್ತ ಕಳಿಸಲಾಗಿತ್ತು. ಡಿಸೆಂಬರ್ ೦೧ರ ಮಂಗಳವಾರ ಅದು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದ್ದು, ನಿರ್ದೇಶಿತ ಕಾರ್ಯ ಸಾಧನೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗೆ ಹಲವು ರಾಷ್ಟ್ರಗಳು ಚಂದ್ರಯಾನಕ್ಕೆ ಪ್ರಯತ್ನ ಮಾಡಿದ್ದು, ಅಮೆರಿಕ, ರಷ್ಯಾ ನಂತರ ಚೀನಾ ದೇಶವು ಚಂದ್ರನ ಮೇಲ್ಭಾಗದಿಂದ ಮಣ್ಣು ಸಂಗ್ರಹಿಸಿ ತಂದ ಮೂರನೇ ಯಶಸ್ವಿ ರಾಷ್ಟ್ರ ಎನಿಸಿತ್ತು.

No comments:

Advertisement