My Blog List

Sunday, December 27, 2020

ಪಿವಿಎನ್ ಆರ್ಥಿಕ ಸುಧಾರಣೆ ಫಲಿತಾಂಶಕ್ಕೂ ವರ್ಷಗಳು ಬೇಕಾಗಿದ್ದವು: ರಾಜನಾಥ್

 ಪಿವಿಎನ್ ಆರ್ಥಿಕ ಸುಧಾರಣೆ ಫಲಿತಾಂಶಕ್ಕೂ ವರ್ಷಗಳು ಬೇಕಾಗಿದ್ದವು: ರಾಜನಾಥ್

ನವದೆಹಲಿ: ರೈತರ ಹಿತಾಸಕ್ತಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕನಿಷ್ಠ ಬೆಂಬಲ ಬೆಲೆಯನ್ನು ರಕ್ಷಿಸುವ ಮೋದಿ ಸರ್ಕಾರದ ಬದ್ಧತೆಯನ್ನು 2020 ಡಿಸೆಂಬರ್ 27ರ ಭಾನುವಾರ ಪುನರುಚ್ಚರಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೃಷಿ ಸುಧಾರಣೆಗಳ ಪರಿಣಾಮ ತಿಳಿಯಲು ಸ್ವಲ್ಪ ಕಾಲ ಬೇಕಾಗುತ್ತದೆ ಎಂದು ಹೇಳಿದರು.

ಮುಂದಿನ ಒಂದೂವರೆ ವರ್ಷಗಳಲ್ಲಿ ಬದಲಾವಣೆಗಳನ್ನು ಕಾಣಬೇಕು ಎಂದು ನಾನು ರೈತರಿಗೆ ಮನವಿ ಮಾಡುತ್ತೇನೆ. ಇಲ್ಲದಿದ್ದರೆ, ನಾವು ಅವುಗಳನ್ನು ಮಾತುಕತೆಯ ಮೂಲಕ ಸುಧಾರಿಸಬಹುದುಎಂದು ರಾಜನಾಥ್ ಸಿಂಗ್ ಅವರು ಜೈ ರಾಮ್ ಠಾಕೂರ್ ನೇತೃತ್ವದ ಬಿಜೆಪಿ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಿಮಾಚಲ ಪ್ರದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

"೧೯೯೧ರಲ್ಲಿ ನರಸಿಂಹ ರಾವ್ ಸರ್ಕಾರ ಅಥವಾ ಬಳಿಕ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಆರ್ಥಿಕ ಸುಧಾರಣೆಗಳ ಸಕಾರಾತ್ಮಕ ಫಲಿತಾಂಶಗಳನ್ನು ನೋಡಲು ನಾಲ್ಕೈದು ವರ್ಷಗಳು ಬೇಕಾದವು. ನಾಲ್ಕೈದು ವರ್ಷಗಳವರೆಗೆ ಕಾಯಲು ಸಾಧ್ಯವಾಗದಿದ್ದರೆ, ನರೇಂದ್ರ ಮೋದಿ ಸರ್ಕಾರವು ಕೈಗೊಂಡ ಕೃಷಿ ಸುಧಾರಣೆಗಳ ಸಕಾರಾತ್ಮಕ ಫಲಿತಾಂಶಗಳಿಗೆ ಸಾಕ್ಷಿಯಾಗಲು ನಾವು ಕನಿಷ್ಟ ಎರಡು ವರ್ಷಗಳವರೆಗೆ ಕಾಯಬಹುದುಎಂದು ಸಿಂಗ್ ಹೇಳಿದರು.

ಇದಕ್ಕೆ ಮುನ್ನ ಕೂಡಾ, ದೆಹಲಿಯ ರೈತರನ್ನು ಉದ್ದೇಶಿಸಿ ಮಾತನಾಡಿದ್ದ ರಾಜನಾಥ್ ಸಿಂಗ್ ಅವರು ಕಾನೂನುಗಳನ್ನು ಜಾರಿಗೆ ತರಲು ಮತ್ತು ಕಾದು ನೋಡಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದರು.

"ಕೃಷಿ ಕಾನೂನುಗಳನ್ನು ಜಾರಿಗೊಳಿಸುವುದರಿಂದ ರೈತರ ಆದಾಯ ದ್ವಿಗುಣಗೊಳ್ಳುತ್ತದೆಎಂದು ರಾಜನಾಥ್ ಹೇಳಿದರು.

ರೈತರನ್ನು ದಾರಿ ತಪ್ಪಿಸಿದ್ದಕ್ಕಾಗಿ ವಿರೋಧ ಪಕ್ಷವನ್ನು ಕೆಣಕಿದ ಸಿಂಗ್, “ಕೃಷಿಯ ಬಗ್ಗೆ ಒಂದಷ್ಟೂ ತಿಳಿಯದವರು ಕೂಡಾ ಮುಗ್ಧ ರೈತರನ್ನು ದಾರಿ ತಪ್ಪಿಸುತ್ತಿರುವುದು ದುರದೃಷ್ಟಕರ. ಸರ್ಕಾರವು ಎಂದಿಗೂ ಎಂಎಸ್ಪಿಯನ್ನು ನಿಲ್ಲಿಸುವ ಉದ್ದೇಶವನ್ನು ಹೊಂದಿಲ್ಲ, ಭವಿಷ್ಯದಲ್ಲಿಯೂ ಆಗುವುದಿಲ್ಲ. ಮಂಡಿಗಳನ್ನು ಸಹ ನಿರ್ವಹಿಸಲಾಗುವುದು. ಯಾವುದೇಮೈ ಕಾ ಲಾಲ್ರೈತರಿಂದ ಭೂಮಿಯನ್ನು ಕಸಿದುಕೊಳ್ಳಲು ಸಾಧ್ಯವಿಲಎಂದು ನುಡಿದರು.

ಪ್ರತಿಭಟನಾ ನಿರತ ರೈತ ಸಂಘಗಳು ಶನಿವಾರ ಕೇಂದ್ರದೊಂದಿಗೆ ತಮ್ಮ ಸಂವಾದವನ್ನು ಪುನರಾರಂಭಿಸಲು ನಿರ್ಧರಿಸಿವೆ ಮತ್ತು ಹೊಸದಾಗಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳ ವಿರುದ್ಧದ ಚಳವಳಿಯಿಂದ ಉದ್ಭವಿಸಿದ ಬಿಕ್ಕಟ್ಟನ್ನು ಮುಕ್ತಾಯಗೊಳಿಸಲು  ಮುಂದಿನ ಸುತ್ತಿನ ಮಾತುಕತೆಗೆ ಡಿಸೆಂಬರ್ ೨೯ರ ದಿನಾಂಕವನ್ನು ಪ್ರಸ್ತಾಪಿಸಿವೆ. ಆದರೆ ಅದನ್ನು ರದ್ದುಗೊಳಿಸುವ ಮತ್ತು ಎಂಎಸ್ಪಿಗೆ ಖಾತರಿ ನೀಡುವ  ವಿಧಾನಗಳು ಸಭೆಯ ಕಾರ್ಯಸೂಚಿಯ ಭಾಗವಾಗಿರಬೇಕು ಎಂದು ಸ್ಪಷ್ಟಪಡಿಸಿದವು.

ಕೃಷಿ ಸಚಿವಾಲಯವು ಒಕ್ಕೂಟಗಳಿಗೆ ಬರೆದ ಕೊನೆಯ ಪತ್ರದಲ್ಲಿ, ಚರ್ಚೆಯಾಗುತ್ತಿರುವ ಮೂರು ಕಾನೂನುಗಳ ವ್ಯಾಪ್ತಿಗೆ ಎಂಎಸ್ಪಿ ಬರುವುದಿಲ್ಲವಾದ್ದರಿಂದ, ಇದನ್ನು ಕಾರ್ಯಸೂಚಿಯಲ್ಲಿ ಸೇರಿಸುವುದು ತಾರ್ಕಿಕವಲ್ಲ ಎಂದು ಸರ್ಕಾರ ತಿಳಿಸಿತ್ತು.

No comments:

Advertisement