My Blog List

Tuesday, December 22, 2020

ಗುಪ್ಕರ್ ಅಲಯನ್ಸ್‌ಗೆ ಮುನ್ನಡೆ, ೨ನೇ ಸ್ಥಾನದಲ್ಲಿ ಬಿಜೆಪಿ

 ಗುಪ್ಕರ್ ಅಲಯನ್ಸ್ಗೆ ಮುನ್ನಡೆ, ೨ನೇ ಸ್ಥಾನದಲ್ಲಿ ಬಿಜೆಪಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರ ಜಿಲ್ಲಾ ಅಭಿವೃದ್ಧಿ ಮಂಡಳಿಗೆ (ಡಿಡಿಸಿ) ನಡೆದ ಮೊದಲ ಚುನಾವಣೆಯಲ್ಲಿ ಫರೂಕ್ ಅಬ್ದುಲ್ಲ ನೇತೃತ್ವದ ಗುಪ್ಕರ್ ಮೈತ್ರಕೂಟ (ಗುಪ್ಕರ್ ಅಲಯನ್ಸ್ -ಪಿಎಜಿಡಿ) ಭಾರೀ ಮುನ್ನಡೆ ಗಳಿಸಿದ್ದು, ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಶ್ರೀನಗರದಲ್ಲಿ ಮೊದಲ ಎರಡು ವಿಜಯ ಸೇರಿ ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದ್ದರೆ, ಪಿಎಜಿಡಿ ೨೫ ಸ್ಥಾನಗಳನ್ನು ಗೆದ್ದಿದೆ.

ಗುಪ್ಕರ್ ಮೈತ್ರಿಕೂಟವು ೧೧೨, ಬಿಜೆಪಿ ೬೮ ಮತ್ತು ಕಾಂಗ್ರೆಸ್ ೨೩ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಗುಪ್ಕರ್ ಮೈತ್ರಿಕೂಟವು ೨೫ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ಕಾಂಗ್ರೆಸ್ ಕೇವಲ ಸ್ಥಾನಗಳನ್ನು ಗೆದ್ದಿದೆ. ಕೇಂದ್ರ ಅಭಿವೃದ್ಧಿ ಜಮ್ಮು ಮತ್ತು ಕಾಶ್ಮೀರ ಅಪ್ನಿ ಪಕ್ಷವು ತನ್ನ ಛಾಪು ಮೂಡಿಸುವಲ್ಲಿ ವಿಫಲವಾಗಿದೆ.

ಏತನ್ಮಧ್ಯೆ, ನಿರೀಕ್ಷೆಗಳಿಗೆ ಅನುಗುಣವಾಗಿ, ಜಮ್ಮು ವಿಭಾಗದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಪಕ್ಷವು ಕಾಶ್ಮೀರ ಕಣಿವೆಯಲ್ಲಿ ಎರಡು ಸ್ಥಾನಗಳನ್ನು ಗೆದ್ದಿದೆ. ಶ್ರೀನಗರದಲ್ಲಿ ಒಂದು ಮತ್ತು ಬಂಡೀಪೋರಾ ಜಿಲ್ಲೆಯ ತುಲೈಲ್ ಸ್ಥಾನದಲ್ಲಿ ಒಂದು ಸ್ಥಾವನ್ನು ಬಿಜೆಪಿ ತನ್ನ ಬಗಲಿಗೆ ಹಾಕಿಕೊಂಡಿದೆ..

ದಕ್ಷಿಣ ಕಾಶ್ಮೀರದಲ್ಲಿ, ಗುಪ್ಕರ್ ಅಲೈಯನ್ಸ್ ಅಭ್ಯರ್ಥಿಗಳು ಇಲ್ಲಿಯವರೆಗೆ ಘೋಷಿಸಲಾದ ೪೯ ಸ್ಥಾನಗಳಲ್ಲಿ ೩೪ (ಎನ್ಸಿ ೧೫, ಪಿಡಿಪಿ ೧೪, ಮತ್ತು ಸಿಪಿಐಎಂ ) ಸ್ಥಾನಗಳಲ್ಲಿ ಮುನ್ನಡೆ ಸಾದಿಸಿದ್ದಾರೆ. ಪಕ್ಷೇತರರು ೧೦ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಸಂವಿಧಾನದ ೩೭೦ನೇ ವಿಧಿಯ ಪುನಃಸ್ಥಾಪನೆಗಾಗಿ ರಚಿಸಲಾದ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ (ಪಿಎಜಿಡಿ) ಬ್ಯಾನರ್ ಅಡಿಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ ಸೇರಿದಂತೆ ಏಳು ರಾಜಕೀಯ ಪಕ್ಷಗಳು ಮೈತ್ರಿಕೂಟದಲ್ಲಿ ಸ್ಪರ್ಧಿಸಿವೆ.

ಕಾಂಗ್ರೆಸ್ ಆರಂಭದಲ್ಲಿ ಪಿಎಜಿಡಿಯ ಒಂದು ಭಾಗವಾಗಿತ್ತು ಆದರೆಗುಪ್ಕರ್ ಗ್ಯಾಂಗ್ನೊಂದಿಗೆ ಒಡನಾಟ ಹೊಂದಿದ್ದಕ್ಕಾಗಿ ಬಿಜೆಪಿ ವಿರೋಧ ಪಕ್ಷವನ್ನು ಗುರಿಯಾಗಿಸಿಕೊಂಡಾಗ ಕಾಂಗ್ರೆಸ್ ಮೈತ್ರಿಕೂಟದಿಂದ ದೂರವಾಗಿತ್ತು.

ಜಮ್ಮು ಮತ್ತು ಕಾಶ್ಮೀರದ ೨೮೦ ಡಿಡಿಸಿ ಸ್ಥಾನಗಳಿಗೆ ಸುಮಾರು ,೧೮೧ ಅಭ್ಯರ್ಥಿಗಳ ಭವಿಷ್ಯವನ್ನು ಚುನಾವಣೆ ನಿರ್ಧರಿಸುತ್ತದೆ. ಎಂಟು ಹಂತಗಳಲ್ಲಿ ನಡೆದ ಚುನಾವಣೆ ನವೆಂಬರ್ ೨೮ ರಂದು ಪ್ರಾರಂಭವಾಗಿ ಡಿಸೆಂಬರ್ ೧೯ ರಂದು ಕೊನೆಗೊಂಡಿತು.

ಶ್ರೀನಗರದಲ್ಲಿ ಬಿಜೆಪಿಗೆ ಮೊದಲ ಜಯ

ಖಾನೋಮೋಹ್- ಸ್ಥಾನವನ್ನು ಅಭ್ಯರ್ಥಿ ಐಜಾಜ್ ಹುಸೇನ್ ಗೆಲ್ಲುವುದರೊಂದಿಗೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಶ್ರೀನಗರದಲ್ಲಿ ಮೊದಲ ಜಯ ದಾಖಲಿಸಿತು.

ತಮ್ಮ ಯಶಸ್ಸಿನ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳು ಮತ್ತು ಪಕ್ಷದ ಕಾರ್ಯಕರ್ತರ ಕಠಿಣ ಪರಿಶ್ರಮಕ್ಕೆ ಸಲ್ಲುತ್ತದೆ. ಡಿಡಿಸಿ ಚುನಾವಣೆಯು ಬಿಜೆಪಿ ಮತ್ತು ಉಳಿದ ಪಕ್ಷಗಳ ನಡುವಿನ ಹೋರಾಟವಾಗಿದೆ ಎಂದು ವಿಜಯದ ಬಳಿಕ ಐಜಾನ್ ಹುಸೇನ್ ಹೇಳಿದರು.

ಇದು ಬಿಜೆಪಿಗೆ ದೊರೆತ ಜಯ. ಜನರು ಪ್ರಧಾನಿ ಮತ್ತು ಅವರ ನೀತಿಗಳ ಬಗ್ಗೆ ನಂಬಿಕೆ ತೋರಿಸಿದ್ದರಿಂದ ಅಪಪ್ರಚಾರವು ಠುಸ್ ಆಗಿದೆ. ಇದು ಕಾಶ್ಮೀರದಲ್ಲಿ ರಾಷ್ಟ್ರೀಯವಾದಿಗಳು ಅಭಿವೃದ್ಧಿ ಹೊಂದುತ್ತಿರುವುದರ ಸಂದೇಶವಾಗಿದೆಎಂದು ಅವರು ಶ್ರೀನಗರದ ಎಸ್ಕೆಐಸಿಸಿಯಲ್ಲಿರುವ ಎಣಿಕೆ ಕೇಂದ್ರದ ಹೊರಗೆ ಸುದ್ದಿಗಾರರ ಜೊತೆ ಮಾತನಾಡುತ್ತಾ ತಿಳಿಸಿದರು.

ಹಿರಿಯ ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಶ್ರೀನಗರ ಜಿಲ್ಲೆಯ ಪರಿಧಿಯಲ್ಲಿರುವ ಬಾಲಾಹಾಮಾದ ಶಿಯಾ ಪ್ರಾಬಲ್ಯದ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು.

ಅವರೆಲ್ಲರೂ ಬಿಜೆಪಿಗೆ ಹೆದರುತ್ತಿದ್ದರು ಹೀಗಾಗಿ ಬಿಜೆಪಿ ವಿರುದ್ಧ ಒಂದಾದರು. ಆದರೆ, ಬಿಜೆಪಿ ಕಣಿವೆಯಲ್ಲಿ ಇನ್ನೂ ಹಲವು ಸ್ಥಾನಗಳನ್ನು ಗೆದ್ದಿದೆ. ಈಗ, ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನರು ಅಭಿವೃದ್ಧಿಯನ್ನು ಬಯಸುತ್ತಾರೆ ಮತ್ತು ಇದು ಅಭಿವೃದ್ಧಿಯ ಮತವಾಗಿz’ ಎಂದು ಹುಸೇನ್ ಹೇಳಿದರು.

ಶ್ರೀನಗರದಲ್ಲಿ ಡಿಡಿಸಿ ಚುನಾವಣೆಯ ಎಣಿಕೆ ಪೂರ್ಣಗೊಂಡಿದ್ದು, ಸ್ವತಂತ್ರ ಅಭ್ಯರ್ಥಿಗಳು ಅರ್ಧ ಸ್ಥಾನಗಳನ್ನು ಗೆದ್ದಿದ್ದಾರೆ.

ಆರು ಪಕ್ಷಗಳು, ಅದರಲ್ಲೂ ಎರಡು ದೊಡ್ಡ ಪ್ರಾದೇಶಿಕ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಗೆಲುವು ಅಡೆತಡೆಗಳನ್ನು ಸೃಷ್ಟಿಸಿದ ಹಿನ್ನೆಲೆಯಲ್ಲಿ  ಕಾಶ್ಮೀರದಲ್ಲಿ ಕೇವಲ ಎರಡು ಅಂಕೆಗಳನ್ನು ತಲುಪುವ ನಿರೀಕ್ಷೆಯನ್ನು ಬಿಜೆಪಿ ಇಟ್ಟುಕೊಂಡಿತ್ತು.

ಆದರೂ ೨೦೧೮ ರಲ್ಲಿ ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡ ಪರಿಣಾಮವಾಗಿ ಸಮ್ಮಿಶ್ರ ಸರ್ಕಾರ ಕುಸಿದ ಬಳಿಕ ಬಿಜೆಪಿ ಕಣಿವೆಯಲ್ಲಿ ಅತ್ಯಂತ ಹೆಚ್ಚು ಸಕ್ರಿಯವಾಗಿತ್ತು.

ಬಿಜೆಪಿಯ ರಾಜ್ಯ ಘಟಕದ ವಕ್ತಾರ ಅಲ್ತಾಫ್ ಠಾಕೂರ್ ಅವರು ಡಿಡಿಸಿ ಚುನಾವಣೆಯಲ್ಲಿ ತ್ರಾಲ್  ದಾದಸರಾ ವಿಭಾಗದಲ್ಲಿ ಸೋತಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗೆ ಸ್ಪರ್ಧೆಯಲ್ಲಿರುವ ,೧೭೮ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಮತಗಳ ಎಣಿಕೆ ಬೆಳಗ್ಗೆ ಪ್ರಾರಂಭವಾಯಿತು. ಇದರೊಂದಿಗೆ  ೨೫ ದಿನಗಳವರೆಗೆ ಹರಡಿದ್ದ ಎಂಟು ಹಂತದ ಚುನಾವಣಾ ಪ್ರಕ್ರಿಯೆಯನ್ನು ಕೊನೆಗೊಳ್ಳಲಿದೆ.

ಕೇಂದ್ರಾಡಳಿತ ಪ್ರದೇಶದ ೨೦ ಜಿಲ್ಲೆಗಳಲ್ಲಿ ತಲಾ ೧೪ ಸ್ಥಾನಗಳು ಸೇರಿ ಒಟ್ಟು ೨೮೦ ಡಿಡಿಸಿ ಸ್ಥಾನಗಳಿವೆ. ಮತದಾನವು ನವೆಂಬರ್ ೨೮ ರಿಂದ ಎಂಟು ಹಂತಗಳಲ್ಲಿ ನಡೆಯಿತು ಮತ್ತು ಡಿಸೆಂಬರ್ ೧೯ ರಂದು ಕೊನೆಗೊಂಡಿತ್ತು. ೫೭ ಲಕ್ಷ ಅರ್ಹ ಮತದಾರರಲ್ಲಿ ಶೇಕಡಾ ೫೧ ರಷ್ಟು ಜನರು ಚುನಾವಣೆಯಲ್ಲಿ ತಮ್ಮ ಮತದಾನವನ್ನು ಚಲಾಯಿಸಿದರು, ಚುನಾವಣೆ ಬಹುತೇಕ ಹೆಚ್ಚಾಗಿ ಶಾಂತಿಯುತವಾಗಿತ್ತು.

ಡಿಡಿಸಿ ಚುನಾವಣೆಯನ್ನು ಬಿಜೆಪಿ ಮತ್ತು ಪ್ರದೇಶದ ಇತರ ರಾಜಕೀಯ ಪಕ್ಷಗಳ ನಡುವಿನ ಹೋರಾಟವೆಂದು ಪರಿಗಣಿಸಲಾಗಿದೆ. ೨೦೧೯ ಆಗಸ್ಟ್ನಲ್ಲಿ ೩೭೦ ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆದ ಮೊದಲ ಸಾಮೂಹಿಕ ಚುನಾವಣೆ ಇದಾಗಿದ್ದು ಪಂಚಾಯತಿ ರಾಜ್ ವ್ಯವಸ್ಥೆಯ ಮೂರನೇ ಹಂತದ ಚುನಾವಣೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ನಡೆದವು.

No comments:

Advertisement