My Blog List

Tuesday, December 22, 2020

ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ ಉದ್ಘಾಟಿಸಿದ ಪ್ರಧಾನಿ ಮೋದಿ

 ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ: ಭಾರತವನ್ನು ವೈಜ್ಞಾನಿಕ ಕಲಿಕೆಗೆ ಅತ್ಯಂತ ವಿಶ್ವಾಸಾರ್ಹ ಕೇಂದ್ರವನ್ನಾಗಿ ಮಾಡಲು ತಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಡಿಸೆಂಬರ್ 22ರ ಮಂಗಳವಾರ ಹೇಳಿದರು.

ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವದ (ಐಐಎಸ್ಎಫ್) ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ವರ್ಚುವಲ್ ಭಾಷಣ ಮಾಡಿದ ಪ್ರಧಾನಿ, ’ಭಾರತವು ತನ್ನ ವೈಜ್ಞಾನಿಕ ಸಮುದಾಯವನ್ನು ಅತ್ಯುತ್ತಮ ಜಾಗತಿಕ ಪ್ರತಿಭೆಗಳೊಂದಿಗೆ ಹಂಚಿಕೊಳ್ಳಲು ಮತ್ತು ಬೆಳೆಯಲು ಬಯಸಿದೆಎಂದು ಹೇಳಿದರು.

ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಭಾರತವು ಶ್ರೀಮಂತ ಪರಂಪರೆಯನ್ನು ಹೊಂದಿದೆ. ನಮ್ಮ ವಿಜ್ಞಾನಿಗಳು ಮಾರ್ಗವನ್ನು ಮುರಿಯುವ ಸಂಶೋಧನೆ ಮಾಡಿದ್ದಾರೆ. ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಮ್ಮ ಟೆಕ್ ಉದ್ಯಮ ಮುಂಚೂಣಿಯಲ್ಲಿದೆ ಆದರೆ ಭಾರತ ಹೆಚ್ಚಿನದನ್ನು ಮಾಡಲು ಬಯಸಿದೆಎಂದು ಪ್ರಧಾನಿ ಮೋದಿ ನುಡಿದರು.

ಯಾವುದೇ ಸವಾಲನ್ನು ಎದುರಿಸಲು ಮತ್ತು ಸಂಶೋಧನಾ ಪರಿಸರವನ್ನು ಸುಧಾರಿಸಲು ಭಾರತ ಸರ್ಕಾರ ಸಿದ್ಧವಾಗಿದೆಎಂದು ಅವರು ಗಮನಸೆಳೆದರು.

ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಿದ ರೀತಿಯಲ್ಲಿಯೇ ಆಳವಾದ ಸಮುದ್ರದ ಪ್ರದೇಶದಲ್ಲಿ ಯಶಸ್ಸನ್ನು ಸಾಧಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದರು. " ದಿಕ್ಕಿನಲ್ಲಿ, ಭಾರತವು ಡೀಪ್ ಓಷನ್ ಮಿಷನ್ನ್ನು ನಡೆಸುತ್ತಿದೆಎಂದು ಅವರು ಹೇಳಿದರು.

೨೦೧೫ ರಲ್ಲಿ ಪ್ರಾರಂಭವಾದ ಐಐಎಸ್ಎಫ್, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸಾರ್ವಜನಿಕರಿಗೆ ವಿಜ್ಞಾನದೊಂದಿಗೆ ತೊಡಗಿಸಿಕೊಳ್ಳುವುದು, ವಿಜ್ಞಾನದ ಸಂತೋಷವನ್ನು ಆಚರಿಸುವುದು ಮತ್ತು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಎಸ್ಟಿಇಎಂ) ಜೀವನವನ್ನು ಸುಧಾರಿಸಲು ಹೇಗೆ ಪರಿಹಾರಗಳನ್ನು ಒದಗಿಸುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ನರೇಂದ್ರಮೋದಿ.ಇನ್ ವೆಬ್ಸೈಟ್ ತಿಳಿಸಿದೆ.

ವೈಜ್ಞಾನಿಕ ಜ್ಞಾನ, ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ನಿವಾರಣೆ ಮತ್ತು ತಂಡದ ಕೆಲಸಗಳನ್ನು ಕೇಂದ್ರೀಕರಿಸಿ ೨೧ ನೇ ಶತಮಾನದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಯುವಕರಿಗೆ ಸಹಾಯ ಮಾಡುವ ಉದ್ದೇಶವೂ ಉತ್ಸವದಲ್ಲಿದೆ.

ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ಸೋಮವಾರ ಉತ್ಸವವು ಮಂಗಳವಾರ ಪ್ರಾರಂಭವಾಗಲಿದ್ದು ಶುಕ್ರವಾರದವರೆಗೆ ನಡೆಯಲಿದೆ ಎಂದು ಹೇಳಿದ್ದರು. ’ಸ್ವಾವಲಂಬಿ ಭಾರತ ಮತ್ತು ಜಾಗತಿಕ ಕಲ್ಯಾಣಕ್ಕಾಗಿ ವಿಜ್ಞಾನ (ಸೈನ್ಸ್ ಫಾರ್ ಸೆಲ್ಫ್ ರಿಲಯಂಟ್ ಇಂಡಿಯಾ ಮತ್ತು ಗ್ಲೋಬಲ್ ವೆಲ್ಫೇರ್) ಎಂಬುದು ವರ್ಷದ ಉತ್ಸವದ ವಿಷಯವಾಗಿದೆ.

"ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ -೨೦೨೦ ಡಿಸೆಂಬರ್ ೨೨ ರಂದು ರಾಮಾನುಜನ್ ಅವರ ಜನ್ಮ ದಿನಾಚರಣೆಯಂದು ಪ್ರಾರಂಭವಾಗಲಿದೆ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ ೨೫ ರಂದು ಮುಕ್ತಾಯಗೊಳ್ಳಲಿದೆ" ಎಂದು ಹರ್ಷವರ್ಧನ್ ಹೇಳಿದ್ದರು.

No comments:

Advertisement