Wednesday, December 2, 2020

ಚೀನಾದಿಂದ ವಿಶ್ವಸಂಸ್ಥೆಯ ನಾಶ: ಕ್ರಮಕ್ಕೆ ಅಮೆರಿಕ ಆಯೋಗ ಶಿಫಾರಸು

 ಚೀನಾದಿಂದ ವಿಶ್ವಸಂಸ್ಥೆಯ ನಾಶ: ಕ್ರಮಕ್ಕೆ ಅಮೆರಿಕ ಆಯೋಗ ಶಿಫಾರಸು

ವಾಷಿಂಗ್ಟನ್: ವಿಶ್ವಸಂಸ್ಥೆಯನ್ನು ನಾಶಪಡಿಸುವ ಚೀನಾದ ಹುನ್ನಾರವನ್ನು ಎದುರಿಸಲು ಅಮೆರಿಕ ಕಾರ್‍ಯ ನಿರ್ವಹಿಸಬೇಕು ಎಂದು ಅಮೆರಿಕ-ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗವು ಕಾಂಗ್ರೆಸ್ಸಿಗೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ.

ವಿಶ್ವಸಂಸ್ಥೆಯ ಸದಸ್ಯರ ಮತಗಳ ಮೇಲೆ ಪ್ರಭಾವ ಬೀರಲು ಬೀಜಿಂಗ್‌ನ ಕ್ರಮಗಳ ಬಗ್ಗೆ ವರದಿಯನ್ನು ಸಿದ್ಧಪಡಿಸುವುದು ಸೇರಿದಂತೆ ವಿಶ್ವಸಂಸ್ಥೆ ಮತ್ತು ಅದರ ಆಧೀನ ಸಂಸ್ಥೆಗಳ ತತ್ವಗಳನ್ನು ತಗ್ಗಿಸುವ ಚೀನಾ ಪ್ರಯತ್ನಗಳನ್ನು ಎದುರಿಸಲು ಅಮೆರಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವರದಿ ಹೇಳಿದೆ.

ವಿಶ್ವಸಂಸ್ಥೆಯ ಆಧೀನ ಸಂಸ್ಥೆಗಳಲ್ಲಿ ಸುಧಾರಣೆಯ ಯತ್ನಗಳು ಅಲ್ಪ ಮುನ್ನಡೆ ಸಾಧಿಸಿರುವ ವೇಳೆಯಲ್ಲಿ ಸಂಸ್ಥೆಗಳ ಮೇಲೆ ಚೀನಾ ಬೀರುತ್ತಿರುವ ಪ್ರಭಾವದ ಬಗ್ಗೆ ನವದೆಹಲಿ ಸೇರಿದಂತೆ ವಿಶ್ವದ ಇತರ ಅನೇಕ ದೇಶಗಳ ರಾಜಧಾನಿಗಳಲ್ಲಿ ಕಳವಳ ವ್ಯಕ್ತವಾಗುತ್ತಿರುವ ವೇಳೆಯಲ್ಲೇ ಅಮೆರಿಕದ ಆಯೋಗ ವರದಿಯನ್ನು ಸಲ್ಲಿಸಿದೆ.

"ವಿಶ್ವಸಂಸ್ಥೆಯ ತತ್ವಗಳು ಮತ್ತು ಉದ್ದೇಶಗಳನ್ನು ಬುಡಮೇಲು ಮಾಡುವ ಚೀನಾದ ಕ್ರಮಗಳನ್ನು ವಿವರಿಸುವ ವಾರ್ಷಿಕ ವರದಿಗಳನ್ನು ತಯಾರಿಸುವಂತೆ ಅಮೆರಿಕದ ರಾಜ್ಯಾಂಗ ಇಲಾಖೆಗೆ ಕಾಂಗ್ರೆಸ್ ನಿರ್ದೇಶಿಸಬೇಕು ಎಂದು ಆಯೋಗದ ವರದಿ ಲಹೆ ಮಾಡಿದೆ.

ರಾಜ್ಯಾಂಗ ಇಲಾಖೆಯು ತಯಾರಿಸುವ ಇಂತಹ ವರದಿಗಳು ವಿಶ್ವಸಂಸ್ಥೆ ಒಪ್ಪಂದಗಳನ್ನು ಉಲ್ಲಂಘಿಸುವ ಮತ್ತು ವಿಶ್ವಸಂಸ್ಥೆಯ ಸದಸ್ಯರ ಮತಗಳ ಮೇಲೆ ಪ್ರಭಾವ ಬೀರುವ ಬಲವಂತದ ವಿಧಾನ ಸಹಿತವಾಗಿ ಚೀನಾದ ಕ್ರಮಗಳನ್ನು ದಾಖಲಿಸಬೇಕು ಎಂದು ವರದಿ ಹೇಳಿದೆ.

ವಿಶ್ವಸಂಸ್ಥೆಯ ನಾಯಕತ್ವದ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡುವಲ್ಲಿ ಅಥವಾ ಬೆಂಬಲಿಸುವಲ್ಲಿ ನಿಷ್ಪಕ್ಷಪಾತತೆಗಾಗಿ ವಿಶ್ವಸಂಸ್ಥೆ ರೂಪಿಸಿದ ಮಾನದಂಡಗಳಿಗೆ ಬದ್ಧವಾಗಿರದ ಅಥವಾ ಚೀನಾದ ಸರ್ಕಾರದ ಪ್ರಭಾವಕ್ಕೆ ಒಳಪಟ್ಟಿರುವ " ಚೀನೀ ಕ್ರಮಗಳನ್ನು ವರದಿಗಳು ಪಟ್ಟಿ ಮಾಡಬೇಕು ಎಂದೂ ವರದಿ ಸೂಚಿಸಿದೆ.

"ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ತೊಡಗಿರುವ ಚೀನಾದ ಮಿಲಿಟರಿ ಪೀಪಲ್ಸ್ ಲಿಬರೇಶನ್ ಆರ್ಮಿ ಮತ್ತು ಬೆಂಬಲ ಸಿಬ್ಬಂದಿ ಕಾರ್ಯಗಳನ್ನು ನಿಯಂತ್ರಿಸುವ ತತ್ವಗಳಿಗೆ ಹೊಂದಿಕೆಯಾಗುವುದಿಲ್ಲ, ಚೀನಾ ತನ್ನ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಅಧಿಕಾರ ಸಾಮರ್ಥ್ಯಗಳನ್ನು ಸುಧಾರಿಸಲು ಸಿಬ್ಬಂದಿಯನ್ನು ನಿಯೋಜಿಸುವುದು ಸೇರಿದಂತೆ ಚೀನಾ ಕೈಗೊಳ್ಳುವ ಕ್ರಮಗಳು ವರದಿಗಳಲ್ಲಿ ದಾಖಲಾಗಬೇಕು ಎಂದು ಆಯೋಗದ ಶಿಫಾರಸು ಸೂಚಿಸಿದೆ.

ವಿಶ್ವಸಂಸ್ಥೆಯಲ್ಲಿ ಚೀನಾದ ಪಾತ್ರದ ವಿಶ್ಲೇಷu ಬಗ್ಗೆ ಆಯೋಗವು ತೀವ್ರವಾಗಿ ಪ್ರತಿಕ್ರಿಯಿಸಿದೆ. ‘ಜಾಗತಿಕ ಆಡಳಿತವನ್ನು ಪರಿವರ್ತಿಸುವ ಬೀಜಿಂಗ್‌ನ ಪ್ರಯತ್ನಗಳು ನಿಜವಾಗಿಯೂ ಬೀಜಿಂಗ್‌ನ ತತ್ವಗಳಿಗೆ ಅನುಗುಣವಾಗಿ ವಿಶ್ವಸಂಸ್ಥೆ ವ್ಯವಸ್ಥೆಯನ್ನು ಬದಲಾಯಿಸುವ ಕರೆಯಾಗಿದೆ ಎಂದು ಆಯೋಗ ಹೇಳಿದೆ.

"ಬೀಜಿಂಗ್ ವೈಯಕ್ತಿಕ ಹಕ್ಕುಗಳಿಗೆ ಒತ್ತು ನೀಡುವುದರ ಮೂಲಕ ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆ ಮಾನವ ಹಕ್ಕುಗಳ ವ್ಯಾಖ್ಯಾನವನ್ನು ತನ್ನ ಸ್ವಂತ ಹಿತಾಸಕ್ತಿಗಳಿಗೆ ಅನುಗುಣವಾಗಿ ತರಲು ಪ್ರಯತ್ನಿಸಿದೆ. ವಿಶ್ವಸಂಸ್ಥೆಯಲ್ಲಿ ಅಮೆರಿಕದ ಬಳಿಕ  ಚೀನಾ ಎರಡನೇ ಅತಿದೊಡ್ಡ ದಾನಿಯಾಗಿದೆ: ಇದು ವಿಶ್ವಸಂಸ್ಥೆಯ ಒಟ್ಟು ಬಜೆಟ್‌ನ ಶೇಕಡಾ ೧೨ರಷ್ಟನ್ನು ಒದಗಿಸುತ್ತದೆ. ಇದು ೨೦ ವರ್ಷಗಳ ಶೇಕಡಾ ೧ರಷ್ಟು ಇತ್ತು. ಸಿ.ಸಿ.ಪಿ [ಚೀನೀ ಕಮ್ಯುನಿಸ್ಟ್ ಪಾರ್ಟಿ] ಇದನ್ನು ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಮಾನವ ಹಕ್ಕುಗಳ ಅಧಿಕಾರಿಗಳಂತಹ ಮಾನವ ಹಕ್ಕು-ಸಂಬಂಧಿತ ಕಾರ್ಯಗಳ ಮೇಲೆ ಹತೋಟಿ ಇಟ್ಟು ಅವುಗಳಿಗೆ ಧನಸಹಾಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಳಸಲು ಪ್ರಯತ್ನಿಸುತ್ತದೆ ಎಂದು ವರದಿ ತಿಳಿಸಿದೆ.

ಇದಲ್ಲದೆ, ಚೀನಾವು ವಿಶ್ವಸಂಸ್ಥೆ ಕಾನೂನು ಸಾಧನಗಳಾದ ಯುಎನ್ ಕನ್ವೆನ್ಷನ್ ಆಫ್ ದಿ ಸೀ ಇತ್ಯಾದಿಯನ್ನು  ತನ್ನ ಸ್ವಂತ ಲಾಭಕ್ಕಾಗಿ ಬಳಸಲು ಪ್ರಯತ್ನಿಸಿದೆ, ಮತ್ತು ವಿಶ್ವಸಂಸ್ಥೆ ಸಂಘಟನೆಗಳ ಮೇಲೆ ತನ್ನ ಪ್ರಭಾವವನ್ನುನಿರ್ದಿಷ್ಟ ಚೀನಾದ ವಿದೇಶಾಂಗ ನೀತಿ ಉದ್ದೇಶಗಳನ್ನು ಉತ್ತೇಜಿಸಲು ಬಳಸಿಕೊಳ್ಳುತ್ತದೆ ಎಂದು ಆಯೋಗ ಹೇಳಿದೆ.

ಆಹಾರ ಮತ್ತು ಕೃಷಿ ಸಂಸ್ಥೆ, ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ, ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ಮತ್ತು ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ - ಯುಎನ್‌ನ ೧೫ ವಿಶೇಷ ಸಂಸ್ಥೆಗಳಲ್ಲಿ ನಾಲ್ಕರಲ್ಲಿ ಡೈರೆಕ್ಟರ್ ಜನರಲ್ ಹುದ್ದೆಯನ್ನು ಚೀನಾದ ಅಧಿಕಾರಿಗಳು ಹೊಂದಿದ್ದಾರೆ. ಅಧಿಕಾರಿಗಳುವಿಶ್ವಸಂಸ್ಥೆ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ. ತೈವಾನ್‌ಗೆ ಸಂಬಂಧಿಸಿದ ನೀತಿಗಳಂತಹ ಚೀನಾದ ರಾಜಕೀಯ ಉದ್ದೇಶಗಳನ್ನು ಉತ್ತೇಜಿಸಲು ಅವರು ಮುನ್ನಡೆಸುವ ಸಂಸ್ಥೆಗಳನ್ನು ನಡೆಸುವುದು ಮತ್ತು ಹತೋಟಿಯಲ್ಲಿಡುವುದು ಇತ್ಯಾದಿಗಳಲ್ಲಿ ಮಗ್ನರಾಗಿದ್ದಾರೆ ಎಂದು ವರದಿ ಹೇಳಿದೆ.

ಅಕ್ಟೋಬರಿನಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ನಡೆದ ಚುನಾವಣೆಯಲ್ಲಿ ೨೦೧೬ ಕ್ಕಿಂತ ಕಡಿಮೆ ಮತಗಳನ್ನು ಹೊಂದಿದ್ದರೂ ಚೀನಾ ಗಳಿಸಿದ ಗೆಲುವು ದಕ್ಷಿಣ ಚೀನಾ ಸಮುದ್ರದಲ್ಲಿ ತೈವಾನ್‌ನಿಂದ ಲಡಾಖ್ ವರೆಗಿನ ಪ್ರದೇಶಗಳಲ್ಲಿ ಚೀನಾವು ನಡೆಸುತ್ತಿರುವ ಚಟುವಟಿಕೆಗಳ ಹಿನ್ನೆಲೆಯಲ್ಲಿ ಆತಂಕವನ್ನು ಸೃಷ್ಟಿಸಿತ್ತು.

ನವದೆಹಲಿಯಲ್ಲಿ, ಚೀನಾವನ್ನು ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿಯ ಸುಧಾರಣೆಗಳನ್ನು ತಡೆಯುವ ಪ್ರಮುಖ ಶಕ್ತಿಯಾಗಿ ಚೀನಾವನ್ನು ಪರಿಗಣಿಸಲಾಗುತ್ತಿದೆ. ಭದ್ರತಾ ಮಂಡಳಿಯಲ್ಲಿ ಭಾರತದಂತಹ ರಾಷ್ಟ್ರಗಳು ಕಾಯಂ ಸದಸ್ಯತ್ವವನ್ನು ಬೆಂಬಲಿಸದ ಏಕೈಕ ಕಾಯಂ ಸದಸ್ಯ ಚೀನಾವಾಗಿದೆ.

No comments:

Advertisement