My Blog List

Wednesday, December 23, 2020

ಜಮ್ಮು –ಕಾಶ್ಮೀರ ಮತದಾರರಿಗೆ ಶಾ ಧನ್ಯವಾದ

 ಜಮ್ಮು –ಕಾಶ್ಮೀರ ಮತದಾರರಿಗೆ ಶಾ ಧನ್ಯವಾದ

ನವದೆಹಲಿ: ಚೊಚ್ಚಲ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮತ ಚಲಾಯಿಸಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಜನರನ್ನು 2020 ಡಿಸೆಂಬರ್ 23ರ ಬುಧವಾರ ಅಭಿನಂದಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಚುನಾವಣೆಯಲ್ಲಿ ಬಿಜೆಪಿಯನ್ನು ಏಕೈಕ ದೊಡ್ಡ ಪಕ್ಷವಾಗಿ ಆಯ್ಕೆ ಮಾಡಿದ್ದಕ್ಕಾಗಿ ಜನರಿಗೆಹೃತ್ಪೂರ್ವಕ ಧನ್ಯವಾದ ಅರ್ಪಿಸಿದರು.

"ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಬಿಜೆಪಿಯನ್ನು ಏಕೈಕ ಅತಿದೊಡ್ಡ ಪಕ್ಷವಾಗಿ ಗೆಲ್ಲಿಸಿರುವುದಕ್ಕಾಗಿ ಜಮ್ಮು ಮತ್ತು ಕಾಶ್ಮೀರ ನಮ್ಮ ಸಹೋದರಿಯರು ಮತ್ತು ಸಹೋದರರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಜಿ ಅವರ ನೇತೃತ್ವದಲ್ಲಿ ಬಿಜೆಪಿ ಜಮ್ಮು-ಕಾಶ್ಮೀರ ಪ್ರದೇಶದ ಏಳಿಗೆ ಮತ್ತು ಅಭಿವೃದ್ಧಿಗೆ ಪಟ್ಟುಬಿಡದೆ ಕೆಲಸ ಮಾಡುವುದನ್ನು ಮುಂದುವರೆಸಲಿದೆ ಎಂದು ಶಾ ಬುಧವಾರ ಟ್ವೀಟ್ ಮಾಡಿದರು.

"ಡಿಡಿಸಿ ಚುನಾವಣೆಯಲ್ಲಿ ಇಂತಹ ದೊಡ್ಡ ಮತದಾನಕ್ಕಾಗಿ ಜಮ್ಮು-ಕಾಶ್ಮೀರದ ಜನರಿಗೆ ಅಭಿನಂದನೆಗಳು. ಬಹು-ಹಂತದ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸುವಲ್ಲಿನ ನಮ್ಮ ಭದ್ರತಾ ಪಡೆ ಮತ್ತು ಸ್ಥಳೀಯ ಆಡಳಿತದ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ. ಇದು ಪ್ರಜಾಪ್ರಭುತ್ವದಲ್ಲಿ ಜೆ ಮತ್ತು ಕೆ ಜನರ ಮನೋಸ್ಥೈರ್ಯ ಮತ್ತು ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ತಳಮಟ್ಟದ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಮೋದಿ ಸರ್ಕಾರ ಎಲ್ಲವನ್ನು ಮಾಡುತ್ತಿದೆ. ಜೆ ಮತ್ತು  ಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಇತ್ತೀಚೆಗೆ ನಡೆದ ಡಿಡಿಸಿ ಚುನಾವಣೆಗಳು ಇದಕ್ಕೆ ಸಾಕ್ಷಿಯಾಗಿದೆ. ಚುನಾವಣೆಗಳಲ್ಲಿ ಸಾಮೂಹಿಕ ಭಾಗವಹಿಸುವಿಕೆಯು ಪ್ರಜಾಪ್ರಭುತ್ವದ ಬಗ್ಗೆ ಜನರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆಎಂದು ಶಾ ಇನ್ನೊಂದು ಟ್ವೀಟಿನಲ್ಲಿ ಬರೆದರು.

2020 ಡಿಸೆಂಬರ್ 12ರ ಬುಧವಾರ ಸಂಜೆ : ೩೦ ಹೊತ್ತಿಗೆ, ೨೮೦ ಡಿಡಿಸಿ ಸ್ಥಾನಗಳಲ್ಲಿ ೭೫ ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ೬೭ ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ೨೭ ಸ್ಥಾನಗಳನ್ನು ಪಡೆದಿದೆ. ಕಾಂಗ್ರೆಸ್ ೨೬ ಸ್ಥಾನಗಳಲ್ಲಿ ಜಯಗಳಿಸಿತು. ಪಕ್ಷೇತರ ಅಭ್ಯರ್ಥಿಗಳು ೫೦ ಸ್ಥಾನಗಳಲ್ಲಿ ಗೆದ್ದರು. ಬಿಜೆಪಿ ಮೊದಲ ಬಾರಿಗೆ ಕಾಶ್ಮೀರದಲ್ಲಿ ಬೇರು ಬಿಟ್ಟಿತು, ಕಾಶ್ಮೀರ ಪ್ರದೇಶದಲ್ಲಿ ಬಿಜೆಪಿಗೆ ಮೂರು ಸ್ಥಾನಗಳು ಬಂದರೆ, ಅದರ ಹೆಚ್ಚಿನ ಸ್ಥಾನಗಳು ಜಮ್ಮು ಪ್ರದೇಶದಿಂದ ಬಂದವು.

No comments:

Advertisement