Monday, December 28, 2020

ಭಾರತದ ಮೊದಲ ಚಾಲಕರಹಿತ ರೈಲು: ಪ್ರಧಾನಿ ಹಸಿರು ನಿಶಾನೆ

 ಭಾರತದ ಮೊದಲ ಚಾಲಕರಹಿತ ರೈಲು: ಪ್ರಧಾನಿ ಹಸಿರು ನಿಶಾನೆ

ನವದೆಹಲಿ: ದೆಹಲಿ ಮೆಟ್ರೊದ ಮೆಜೆಂಟಾ ಮಾರ್ಗದಲ್ಲಿ ಭಾರತದ ಮೊತ್ತ ಮೊದಲ ಚಾಲಕ ರಹಿತ ರೈಲುಗಾಡಿಗೆ ಪ್ರಧಾನಿ ನರೇಂದ್ರ ಮೋದಿ ಅವರು  2020 ಡಿಸೆಂಬರ್  28ರ ಸೋಮವಾರ ಹಸಿರು ನಿಶಾನೆ ತೋರಿಸಿದರು. ಇದೇ ವೇಳೆಗೆ ರಾಷ್ಟ್ರೀಯ ಸಾಮಾನ್ಯ ಸಂಚಾರ ಕಾರ್ಡ್ನ್ನು ಪ್ರಧಾನಿ ಉದ್ಘಾಟಿಸಿದರು.

ರಾಷ್ಟ್ರೀಯ ಸಾಮಾನ್ಯ ಸಂಚಾರ ಕಾರ್ಡ್ ನ್ಯಾಷನಲ್ ಮೊಬಿಲಿಟಿ ಕಾಮನ್ ಮೊಬಿಲಿಟಿ ಕಾರ್ಡ್ ಆಂತರಿಕವಾಗಿ  ಬಳಸಬಹುದಾದ ಸಂಚಾರ ಸೌಲಭ್ಯವಾಗಿದ್ದು, ಬಳಕೆದಾರರಿಗೆ ಪ್ರಯಾಣ, ಟೋಲ್ ಡ್ಯೂಟಿ, ಚಿಲ್ಲರೆ ಶಾಪಿಂಗ್ ಮತ್ತು ಒಂದು ಕಾರ್ಡ್ ಬಳಸಿ ಹಣ ಹಿಂಪಡೆಯುವ ಅವಕಾಶವನ್ನು ನೀಡುತ್ತದೆ.

ಚಾಲಕರಹಿತ ರೈಲುಗಳು ಸಂಪೂರ್ಣ ಸ್ವಯಂಚಾಲಿತವಾಗಿರುತ್ತವೆ, ಇವು ಮಾನವ ದೋಷದ ಸಾಧ್ಯತೆಯನ್ನು ನಿವಾರಿಸುತ್ತವೆ ಎಂದು ಅಧಿಕಾರಿಗಳು ಹೇಳುತ್ತಾರೆ. ದೆಹಲಿ ಮೆಟ್ರೊದ ಮೆಜೆಂಟಾ ಲೈನ್ನಲ್ಲಿ ಸೇವೆ ಲಭ್ಯವಾಗಲಿದ್ದು, ಇದು ಪಶ್ಚಿಮ ದೆಹಲಿಯ ಜನಕ್ಪುರಿ ಪಶ್ಚಿಮವನ್ನು ನೋಯ್ಡಾದ ಬಟಾನಿಕಲ್ ಗಾರ್ಡನ್ಗೆ ಸಂಪರ್ಕಿಸುತ್ತದೆ. ಇದನ್ನು ದೆಹಲಿ ಮೆಟ್ರೊದ ಪಿಂಕ್ ಲೈನಿಗೆ (ಮಜ್ಲಿಸ್ ಪಾರ್ಕ್-ಶಿವ ವಿಹಾರ್) ೨೦೨೧ ಮಧ್ಯದ ವೇಳೆಗೆ ವಿಸ್ತರಿಸಲಾಗುವುದು.

"ಮೊದಲ ಚಾಲಕ-ರಹಿತ ಮೆಟ್ರೋ ರೈಲಿನ ಉದ್ಘಾಟನೆಯು ಭಾರತವು ಸ್ಮಾರ್ಟ್ ವ್ಯವಸ್ಥೆಗಳತ್ತ ಎಷ್ಟು ವೇಗವಾಗಿ ಚಲಿಸುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ವರ್ಚುವಲ್ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

"ದೆಹಲಿಯಲ್ಲಿ ಮೊದಲ ಮೆಟ್ರೋವನ್ನು ಅಟಲ್ (ಬಿಹಾರಿ ವಾಜಪೇಯಿ) ಜಿ ಅವರ ಪ್ರಯತ್ನದಿಂದ ಪ್ರಾರಂಭಿಸಲಾಯಿತು. ೨೦೧೪ ರಲ್ಲಿ ನಮ್ಮ ಸರ್ಕಾರ ರಚನೆಯಾದಾಗ ಕೇವಲ ಐದು ನಗರಗಳು ಮಾತ್ರ ಮೆಟ್ರೋ ಸೇವೆಗಳನ್ನು ಹೊಂದಿದ್ದವು ಮತ್ತು ಇಂದು ೧೮ ನಗರಗಳು ಮೆಟ್ರೋ ರೈಲು ಸೇವೆಯನ್ನು ಹೊಂದಿವೆ. ೨೦೨೫ ಹೊತ್ತಿಗೆ ನಾವು ಸೇವೆಯನ್ನು ೨೫ ಕ್ಕೂ ಹೆಚ್ಚು ನಗರಗಳಿU ವಿಸ್ತರಿಸುತ್ತೇವೆ ಎಂದು ಪ್ರಧಾನಿ ನುಡಿದರು.

೨೦೧೪ ರಲ್ಲಿ ದೇಶದಲ್ಲಿ ಕೇವಲ ೨೪೮ ಕಿಲೋಮೀಟರ್ ಮೆಟ್ರೊ ಮಾರ್ಗಗಳು ಕಾರ್ಯನಿರ್ವಹಿಸುತ್ತಿದ್ದರೆ, ಇಂದು ಅದು ಮೂರು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

೨೦೨೫ ವೇಳೆಗೆ ಇದನ್ನು ೧೭೦೦ ಕಿಲೋಮೀಟರ್ಗೆ ವಿಸ್ತರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

ಹೊಸ ಚಾಲಕ ರಹಿತ ರೈಲುಗಳೊಂದಿಗೆ, ದೆಹಲಿ ಮೆಟ್ರೋ ರೈಲು ನಿಗಮವು ವಿಶ್ವದ ಶೇಕಡಾ ರಷ್ಟು ಮೆಟ್ರೊ ನೆಟ್ವರ್ಕ್ಗಳ ಎಲೈಟ್ ಲೀಗ್ನ್ನು ಪ್ರವೇಶಿಸಲಿದೆ. ರೈಲುಗಳ ಚಾಲಕರಿಲ್ಲದೆಯೇ ಚಲಿಸಲಿವೆ ಎಂದು  ಅಧಿಕೃತ ಪ್ರಕಟಣೆ ತಿಳಿಸಿತು.

No comments:

Advertisement