Tuesday, January 19, 2021

ಸಂಸತ್ತು ಕ್ಯಾಂಟೀನ್ ಆಹಾರಕ್ಕೆ ಇನ್ನಿಲ್ಲ ಸಬ್ಸಿಡಿ

 ಸಂಸತ್ತು ಕ್ಯಾಂಟೀನ್ ಆಹಾರಕ್ಕೆ ಇನ್ನಿಲ್ಲ ಸಬ್ಸಿಡಿ

ನವದೆಹಲಿ: ಸಂಸತ್ ಸದಸ್ಯರು  ಮತ್ತು ಇತರರಿಗೆ ಸಂಸತ್ತು ಕ್ಯಾಂಟೀನ್ಗಳಲ್ಲಿ ನೀಡಲಾಗುವ ಆಹಾರದ ಸಬ್ಸಿಡಿಯನ್ನು ನಿಲ್ಲಿಸಲಾಗಿದೆ. ಹೀಗಾಗಿ ಇಲ್ಲಿನ ಆಹಾರ ದುಬಾರಿಯಾಗಲಿದೆ ಎಂದು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ 2021 ಜನವರಿ 19ರ ಮಂಗಳವಾರ ತಿಳಿಸಿದ್ದಾರೆ.

ಬಿರ್ಲಾ ಅವರು ಈ ಕ್ರಮದ ಆರ್ಥಿಕ ಪರಿಣಾಮಗಳನ್ನು ನಿರ್ದಿಷ್ಟಪಡಿಸದಿದ್ದರೂ, ಸಬ್ಸಿಡಿ ಕೊನೆಗೊಳ್ಳುವುದರಿಂದ ಲೋಕಸಭಾ ಸಚಿವಾಲಯವು ವಾರ್ಷಿಕವಾಗಿ ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಉಳಿಸಬಹುದು ಎಂದು ಅಂದಾಜು ಮಾಡಲಾಗಿದೆ.

ಜನವರಿ ೨೯ ರಂದು ಆರಂಭವಾಗಲಿರುವ ಮುಂದಿನ ಸಂಸತ್ತಿನ ಅಧಿವೇಶನದ ಸಿದ್ಧತೆಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿರ್ಲಾ, ಉತ್ತರ ರೈಲ್ವೆಯ ಬದಲಿಗೆ ಸಂಸತ್ತು ಕ್ಯಾಂಟೀನುಗಳನ್ನು ಇನ್ನು ಐಟಿಡಿಸಿ ನಡೆಸಲಿದೆ ಎಂದು ಹೇಳಿದರು. ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು ಕೋವಿಡ್-೧೯ ಪರೀಕ್ಷೆಗೆ ಒಳಪಡುವಂತೆ ಎಲ್ಲ ಎಲ್ಲಾ ಸಂಸತ್ ಸದಸ್ಯರನ್ನು  ಕೋರಲಾಗುವುದು ಎಂದು ಬಿರ್ಲಾ ಹೇಳಿದರು.

ರಾಜ್ಯಸಭೆಯು ಬೆಳಿಗ್ಗೆ ರಿಂದ ಮಧ್ಯಾಹ್ನ ರವರೆಗೆ ಸಮಾವೇಶಗೊಳ್ಳಲಿದ್ದು, ಲೋಕಸಭೆಯು ಉತ್ತರಾರ್ಧದಲ್ಲಿ ಸಂಜೆ - ಗಂಟೆಗಳ ನಡುವಣ ಅವಧಿಯಲ್ಲಿ ಕಾರ್ಯನಿರ್ವಹಿಸಲಿದೆ. ಅಧಿವೇಶನದಲ್ಲಿ ಈಗಾಗಲೇ ನಿಗದಿಪಡಿಸಲಾದ ಸಮಯದಲ್ಲಿ ಒಂದು ಗಂಟೆ ಪ್ರಶ್ನೋತ್ತರ ವೇಳೆಗೆ ಅನುಮತಿ ನೀಡಲಾಗಿದೆ. ಸಂಸದರ ಆರ್ಟಿಪಿಸಿಆರ್ ಕೋವಿಡ್ -೧೯ ಪರೀಕ್ಷೆಗಳಿಗೆ ಅವರ ನಿವಾಸದ ಬಳಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಓಂ ಬಿರ್ಲಾ ಹೇಳಿದರು.

ಸಂಸತ್ತಿನ ಆವರಣದಲ್ಲಿ, ಜನವರಿ ೨೭-೨೮ರಂದು ಆರ್ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುವುದು. ಕುಟುಂಬಗಳು ಮತ್ತು ಸಂಸದರ ಸಿಬ್ಬಂದಿ ಸದಸ್ಯರ ಕೋವಿಡ್ ಪರೀಕ್ಷೆಗಳಿಗೆ ಸಹ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯಗಳು ಅಂತಿಮಗೊಳಿಸಿದ ಲಸಿಕೆ ಅಭಿಯಾನ (ವ್ಯಾಕ್ಸಿನೇಷನ್ ಡ್ರೈವ್) ನೀತಿ ಸಂಸದರಿಗೂ ಅನ್ವಯಿಸುತ್ತದೆ ಎಂದು ಬಿರ್ಲಾ ಹೇಳಿದರು.

Subsidy on Canteen Food Served in Parliament Comesto an EndLok Sabha May Save over Rs 8 Crore

No comments:

Advertisement