My Blog List

Thursday, January 21, 2021

ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಬೆಂಕಿ: ೫ ಸಾವು

 ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ನಲ್ಲಿ ಬೆಂಕಿ: ಸಾವು

ನವದೆಹಲಿ: ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕಟ್ಟಡದಲ್ಲಿ 2021 ಜನವರಿ 21ರ ಗುರುವಾರ ಎರಡು ಬಾರಿ ಅಗ್ನಿಅನಾಹುತ ಸಂಭವಿಸಿದ್ದು, ಮೊದಲಿಗೆ ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿಯಲ್ಲಿ ಐವರು ಸಾವನ್ನಪ್ಪಿದ್ದಾರೆ.

ಬೆಂಕಿಯನ್ನು ನಿಯಂತ್ರಣಕ್ಕೆ ತಂದ ನಂತರ ಐದು ಸುಟ್ಟ ಶವಗಳು ಪತ್ತೆಯಾಗಿವೆ ಎಂದು ಪುಣೆಯ ಮೇಯರ್ ಮುರಳೀಧರ್ ಮೊಹೋಲ್ ಹೇಳಿದರು.

ಕಟ್ಟಡದಲ್ಲಿ ಸಿಕ್ಕಿಬಿದ್ದ ಇತರ ಕೆಲವರನ್ನು ರಕ್ಷಿಸಲಾಗಿದೆ. ಬೆಂಕಿಯ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೆ ವೆಲ್ಡಿಂಗ್ ಕೆಲಸವು ಬೆಂಕಿಗೆ ಕಾರಣವಾಗಿದೆ ಎಂದು ಊಹಿಸಲಾಗಿದೆ ಎಂದು ಅವರು ಹೇಳಿದರು.

ಕಂಪೆನಿಯ ಸಿಇಒ ಮೊದಲಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿದರು, ಆದರೆ ಸಾವುಗಳು ದೃಢಪಟ್ಟ ನಂತರ ತಮ್ಮ ಹೇಳಿಕೆಯನ್ನು ಪರಿಷ್ಕರಿಸಿದರು.

ಬೆಂಕಿ ದುರಂತವು ಕೊರೋನಾವಿರೋಧಿ  ಲಸಿಕೆಗಳನ್ನು ತಯಾರಿಸುವ ಸೌಲಭ್ಯವಿರುವ ಸ್ಥಳದಿಂದ ದೂರದಲ್ಲಿ ಇರುವುದರಿಂದ ಕೋವಿಶೀಲ್ಡ್ ಲಸಿಕೆ ತಯಾರಿಕೆಯ ಪ್ರಕ್ರಿಯೆಯ ಮೇಲೆ ಯಾವುದೇ ಪರಿಣಾಮವಾಗಿಲ್ಲ ಎಂದು ಅವರು ಹೇಳಿದರು.

 ಸೀರಮ್ ಇನ್ಸ್ಟಿಟ್ಯೂಟ್ ಆವರಣದಲ್ಲಿರುವ ಎಸ್ ಝಡ್ 3 ಕಟ್ಟಡದ ನಾಲ್ಕನೇ ಮತ್ತು ಐದನೇ ಮಹಡಿಯಲ್ಲಿ ಮಧ್ಯಾಹ್ನ .೪೫ ಕ್ಕೆ ಮೊದಲ ಬೆಂಕಿ ಕಾಣಿಸಿಕೊಂಡಿತು ಎಂದು ಉಪ ಪೊಲೀಸ್ ಕಮೀಷನರ್ ನಮ್ರತಾ ಪಾಟೀಲ್ ತಿಳಿಸಿದರು.

No comments:

Advertisement