Wednesday, August 10, 2022

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಆರ್ಥಿಕ ಸುಸ್ಥಿರತೆ ಪ್ರಶ್ನೆಯೇ ಅಲ್ಲ

 ಭವಿಷ್ಯನಿಧಿ ಪಿಂಚಣಿ ಪ್ರಕರಣ: ಆರ್ಥಿಕ ಸುಸ್ಥಿರತೆ ಪ್ರಶ್ನೆಯೇ ಅಲ್ಲ


ಸುಪ್ರೀಂ ಕೋರ್ಟಿಗೆ ಪಿಂಚಣಿದಾರರ ವಿವರಣೆ

ಬೆಂಗಳೂರು: ಭವಿಷ್ಯನಿಧಿ ಪಿಂಚಣಿಗೆ ಸಂಬಂಧಿಸಿದಂತೆ ಭಾರತದ ಸುಪ್ರೀಂಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆಗೆ ಸಂಬಂಧಿಸಿದಂತೆ 2022 ಆಗಸ್ಟ್‌ 05ರಂದು ನಡೆದ ಕಲಾಪಗಳ ವಿವರವನ್ನು ಬಿಕೆಎನ್‌ ಕೆ ಸಂಘದ ಪ್ರಧಾನ ಕಾರ್ಯದರ್ಶಿ  ಜೆ.ಎಸ್‌. ದುಗ್ಗಲ್‌ ಅವರು ಕಳುಹಿಸಿದ್ದು, ಅದರ ಮುಖ್ಯಾಂಶಗಳು ಈ ಕೆಳಕಂಡಂತಿವೆ.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಯು.ಯು. ಲಲಿತ್‌, ಅನಿರುದ್ಧ ಬೋಸ್‌ ಮತ್ತು ಸುಧಾಂಶು ಧುಲಿಯಾ ಅವರನ್ನು ಒಳಗೊಂಡಿರುವ ತ್ರಿಸದಸ್ಯ ಪೀಠದ ಮುಂದೆ, ಆಗಸ್ಟ್‌ 05ರಂದು ಮಧ್ಯಾಹ್ನ ವಿಚಾರಣೆಯ ಸಮಯದಲ್ಲಿ ಪಿಂಚಣಿದಾರರ ಪರವಾಗಿ ವಾದಿಸಿದ ಹಿರಿಯ ಮಹಿಳಾ ವಕೀಲರು ಇಪಿಎಫ್‌ಒ ಹೊಂದಿರುವ ಕ್ರೋಡೀಕೃತ ಪಿಂಚಣಿ ನಿಧಿ ಬಗ್ಗೆ ವಿವರಿಸಿದರು. “2017-2018 ರ ಅಂಕಿ ಅಂಶಗಳ ಪ್ರಕಾರ ಇಪಿಎಫ್‌ ಒ ಪಿಂಚಣಿ ನಿಧಿಯು 3.93 ಲಕ್ಷ ಕೋಟಿ ರೂಪಾಯಿಗಳಷ್ಟು ಇದ್ದು ಸಂಸ್ಥೆಯು ಅದರಿಂದ ಸುಮಾರು 30,000 ಕೋಟಿ ರೂಪಾಯಿಗಳನ್ನು ಗಳಿಸುತ್ತಿದೆ. ಈ ಮೊತ್ತವು ಕ್ರಮೇಣ ಮತ್ತಷ್ಟು ಹೆಚ್ಚುತ್ತಿದೆ. ಇದಲ್ಲದೆ ಹೈಕೋರ್ಟ್‌ ಆದೇಶದಂತೆ ಪೂರ್ವಾನ್ವಯವಾಗಿ ಪಿಂಚಣಿದಾರರು ಎಲ್ಲ ಮೊತ್ತವನ್ನು ಬಡ್ಡಿ ಸಹಿತವಾಗಿ ಭವಿಷ್ಯನಿಧಿ ಸಂಸ್ಥೆಗೆ ಮರುಪಾವತಿ ಮಾಡುತ್ತಾರೆ” ಎಂಬುದಾಗಿ ಅವರು ಪರಿಣಾಮಕಾರಿಯಾಗಿ ವಿವರಿಸಿದರು.

ಇಪಿಎಫ್‌ಒ ಕೇವಲ ಸಂಚಿತ ನಿಧಿಯ ಬಡ್ಡಿಯಿಂದ ಮಾತ್ರ ಪಿಂಚಣಿ ಪಾವತಿ ಮಾಡುತ್ತಿದೆ ಮತ್ತು ಇಪಿಎಫ್‌ಒ ತನ್ನ ಸಂಚಿತ ನಿಧಿಯನ್ನು ಮುಟ್ಟುತ್ತಿಲ್ಲ. ಮೇಲಾಗಿ ಪಿಂಚಣಿದಾರರು ತಾವು ಪಾವತಿ ಮಾಡಿದ ತಮ್ಮ ಸಂಚಿತ ನಿಧಿಯನ್ನು ವಾಪಸ್‌ ಪಡೆಯುವುದಿಲ್ಲ. ಸುಮಾರು 18 ವರ್ಷಗಳ ಸೇವೆ ಸಲ್ಲಿಸಿದ ಪಿಂಚಣಿದಾರರ ಉದಾಹರಣೆ ನೀಡುವುದಾದರೆ,  ಅವರ ಪಾಲಿನಲ್ಲಿ ಅವರ ಉದ್ಯೋಗದಾತರು ಸುಮಾರು 1,09,000 ರೂಪಾಯಿಗಳನ್ನು ಠೇವಣಿ ಮಾಡುತ್ತಾರೆ ಎಂದಿಷ್ಟುಕೊಳ್ಳಿ. ಅದು ಪಿಎಫ್‌  ನಿಧಿಯಾಗಿರುತ್ತಿದ್ದರೆ ಅದು ಬಡ್ಡಿಯನ್ನು ಸಹ ಗಳಿಸುತ್ತಿತ್ತು ಮತ್ತು ಈ ಖಾತೆಯಲ್ಲಿ ಅದು ಕ್ರಮೇಣ ಹೆಚ್ಚುತ್ತಿತ್ತು. ಹೀಗಾಗಿ ಆರ್ಥಿಕ ಸುಸ್ಥಿರತೆಯ ಪ್ರಶ್ನೆಯು ತಿದ್ದುಪಡಿ ಮಾಡಿದ ಪಿಂಚಣಿಯನ್ನು ನಿರಾಕರಿಸಲು ಕಾರಣವಾಗಲಾರದು” ಎಂದು ಅವರು ಹೇಳಿದರು.

“ಮಾನ್ಯ ನ್ಯಾಯಾಲಯವು ಗೌರವಾನ್ವಿತ ಸುಪ್ರೀಂ ಕೋರ್ಟ್‌ ಸ್ವತಃ ತಿರಸ್ಕರಿಸಿದ ವಿಶೇಷ ಅರ್ಜಿಯನ್ನು (ಎಸ್‌ ಎಲ್‌ ಪಿ) ಕೂಡಾ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಹಿರಿಯ ವಕೀಲ ಶಂಕರ ನಾರಾಯಣ್‌ ಅವರು ಮಾತನಾಡಿ “ವಿನಾಯಿತಿ ಪಡೆದ ಮತ್ತು ವಿನಾಯಿತಿ ಇಲ್ಲದ ಟ್ರಸ್ಟ್‌ಗಳ ನಡುವಣ ವ್ಯತ್ಯಾಸವು ಸಂಪೂರ್ಣವಾಗಿ ಅಪ್ರಸ್ತುತಎಂದು ವಾದಿಸಿದರು.

ಒಮ್ಮೆ ಆರ್‌ಸಿ ಗುಪ್ತಾ ಪ್ರಕರಣದ ತೀರ್ಪನ್ನು ಇಪಿಎಫ್‌ಒ ಒಪ್ಪಿಕೊಂಡು, ಅದಕ್ಕೆ ಸಿಬಿಟಿಎಸ್ ಅನುಮೋದಿಸಿದ ನಂತರ ಮತ್ತೆ ಈ ವಿಚಾರವನ್ನು ಪ್ರಸ್ತಾಪಿಸಲು ಅದಕ್ಕೆ ಯಾವುದೇ ಸ್ಥಾನೀಯ ಅಧಿಕಾರ ವ್ಯಾಪ್ತಿ ಇಲ್ಲ” ಎಂದೂ ಅವರು ಹೇಳಿದರು.

ಮುಂದಿನ ವಿಚಾರಣೆಯು 2022 ಆಗಸ್ಟ್‌ 10ರಂದು ಮುಂದುವರೆಯಲಿವೆ.

ಪ್ರಕರಣಇಪಿಎಫ್‌ ಒ ವಿರುದ್ಧ  ಸುನಿಲ್ ಕುಮಾರ್ ಮತ್ತು ಇತರರು.

ಹಿಂದಿನ ವಿಚಾರಣೆಗಳ ವರದಿಗಳಿಗೆ ಕೆಳಗೆ  ಕ್ಲಿಕ್‌  ಮಾಡಿರಿ

ಇಪಿಎಫ್ ಪಿಂಚಣಿ ಪ್ರಕರಣ: ಭವಿಷ್ಯ ನಿಧಿಸದಸ್ಯರು ಇಪಿಎಸ್ ಅಡಿಯಲ್ಲಿ ಸ್ವಯಂಚಾಲಿತವಾಗಿ ಅರ್ಹರಾಗುವುದಿಲ್ಲ

 ಸಬ್ಸಿಡಿಹಣಕಾಸಿನ ಹೊರೆಯ ವಿವರ ತೋರಿಸಿ: ಕೇಂದ್ರಇಪಿಎಫ್‌ಒಗೆ ಸುಪ್ರಿಂ ಕೋರ್ಟ್ ನಿರ್ದೇಶನ

ಇಪಿಎಫ್ ಪಿಂಚಣಿ ಪ್ರಕರಣ : 'ಪಿಂಚಣಿ ನಿಧಿಯಲ್ಲಿ ಕೊರತೆ ಇಲ್ಲ'

ಭವಿಷ್ಯ ನಿಧಿ ಪಿಂಚಣಿ ಪ್ರಕರಣ: ಆಗಸ್ಟ್‌ 10ಕ್ಕೆ ಮುಂದಿನ ವಿಚಾರಣೆ

No comments:

Advertisement