Thursday, August 11, 2022

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಪಿಂಚಣಿ ಮೂಲನಿಧಿ ಸ್ಥಿರ

 ಭವಿಷ್ಯನಿಧಿ ಪಿಂಚಣಿ ಪ್ರಕರಣ: ಪಿಂಚಣಿ ಮೂಲನಿಧಿ ಸ್ಥಿರ

ಬಡ್ಡಿಯಿಂದಷ್ಟೇ ಪಾವತಿ: ಸುಪ್ರೀಂಗೆ ಪಿಂಚಣಿದಾರರು

 [5ನೇ ದಿನದ ವಿಚಾರಣೆ]

ನವದೆಹಲಿ: ಆರ್.ಸಿ. ಗುಪ್ತ ವಿರುದ್ಧ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಪಿಂಚಣಿ ಆಯ್ಕೆಗೆ ಯಾವುದೇ ಕಟ್-ಆಫ್ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಪ್ರಸ್ತುತ ಪ್ರಕರಣದಲ್ಲಿ ತಮಗೆ ಇದು ಅನ್ವಯಿಸುತ್ತದೆ ಎಂದು ಪಿಂಚಣಿದಾರರು ಇಪಿಎಫ್ ಪಿಂಚಣಿ ಪ್ರಕರಣದ ವಿಚಾರಣೆಯ ಐದನೇ ದಿನವಾದ 2022 ಆಗಸ್ಟ್‌ 10ರ ಬುಧವಾರ ಸುಪ್ರೀಂಕೋರ್ಟಿನ ಮುಂದೆ ವಾದ ಮಂಡಿಸಿದ್ದಾರೆ.

ನ್ಯಾಯಮೂರ್ತಿಗಳಾದ ಯುಯು ಲಲಿತ್, ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ 3 ನ್ಯಾಯಾಧೀಶರ ಪೀಠದ ಮುಂದೆ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ವಾದ ಮಂಡಿಸಿದರು.

2014ರ ತಿದ್ದುಪಡಿ ಯೋಜನೆಯನ್ನು ರದ್ದುಗೊಳಿಸಿದ ಕೇರಳ, ರಾಜಸ್ಥಾನ ಮತ್ತು ದೆಹಲಿ ಹೈಕೋರ್ಟ್ ತೀರ್ಪುಗಳನ್ನು ಪ್ರಶ್ನಿಸಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಸಲ್ಲಿಸಿದ ಮೇಲ್ಮನವಿಗಳನ್ನು ಪೀಠವು ಪರಿಶೀಲಿಸುತ್ತಿದೆ.

2018 ರಲ್ಲಿ, ಕೇರಳ ಹೈಕೋರ್ಟ್, ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) ಯೋಜನೆ, 2014 [2014 ತಿದ್ದುಪಡಿ ಯೋಜನೆ] ಇದನ್ನು ರದ್ದುಗೊಳಿಸುವಾಗ, ತಿಂಗಳಿಗೆ ರೂ 15,000 ಮಿತಿ ಮಿತಿಗಿಂತ ಹೆಚ್ಚಿನ ಸಂಬಳಕ್ಕೆ ಅನುಗುಣವಾಗಿ ಪಿಂಚಣಿ ಪಾವತಿಸಲು ಅವಕಾಶ ಮಾಡಿಕೊಟ್ಟಿತ್ತು.

2021ಫೆಬ್ರವರಿ 25ರಂದು, ನ್ಯಾಯಮೂರ್ತಿ ಯುಯು ಲಲಿತ್ ಮತ್ತು ನ್ಯಾಯಮೂರ್ತಿ ಕೆಎಂ ಜೋಸೆಫ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಕೇರಳ, ದೆಹಲಿ ಮತ್ತು ರಾಜಸ್ಥಾನದ ಹೈಕೋರ್ಟಿಗೆ ಹೈಕೋರ್ಟ್ ತೀರ್ಪಿನ ಅನುಷ್ಠಾನಗೊಳಿಸದೇ ಇರುವುದಕ್ಕಾಗಿ ಕೇಂದ್ರ ಸರ್ಕಾರ ಮತ್ತು ಇಪಿಎಫ್‌ಒ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸದಂತೆ ನಿರ್ಬಂಧಿಸಿತ್ತು.

2021ಆಗಸ್ಟ್ ತಿಂಗಳಲ್ಲಿ ಸುಪ್ರೀಂ ಕೋರ್ಟಿನ ಇಬ್ಬರು ನ್ಯಾಯಮೂರ್ತಿಗಳ ಪೀಠವು ಈ ಕೆಳಗಿನ ಸಮಸ್ಯೆಗಳನ್ನು ಪರಿಗಣಿಸುವಂತೆ ಕೋರಿ ತ್ರಿಸದಸ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಮೇಲ್ಮನವಿಗಳನ್ನು ವಹಿಸಿತ್ತು.

1. ಉದ್ಯೋಗಿಗಳ ಪಿಂಚಣಿ ಯೋಜನೆಯ ಪ್ಯಾರಾ 11(3) ಅಡಿಯಲ್ಲಿ ಕಟ್-ಆಫ್ ದಿನಾಂಕ ಇರುವುದೇ ಮತ್ತು

2. ಈ ಎಲ್ಲ ವಿಷಯಗಳನ್ನು ಇತ್ಯರ್ಥಗೊಳಿಸಲು ಆರ್.ಸಿ. ಗುಪ್ತ ವಿರುದ್ಧ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಪ್ರಕರಣ(2016) ತೀರ್ಪು ಆಧಾರವಾಗಬೇಕೆ??

ಬುಧವಾರ ನ್ಯಾಯಾಲಯ ಕಲಾಪದ ಮುಖ್ಯಾಂಶಗಳು ಇಲ್ಲಿವೆ:

ಆರ್ ಸಿ ಗುಪ್ತ

ಕೇರಳ ಹೈಕೋರ್ಟ್, ತನ್ನ 2018 ರ ತೀರ್ಪಿನ ಮೂಲಕ 2014 ರ ತಿದ್ದುಪಡಿಗಳನ್ನು ರದ್ದುಗೊಳಿಸುವಾಗ, ಎಲ್ಲ ಉದ್ಯೋಗಿಗಳು ದಿನಾಂಕದ ನಿರ್ಬಂಧವಿಲ್ಲದೆ ಇಪಿಎಫ್ ಯೋಜನೆಯ ಪ್ಯಾರಾ  26 ರಲ್ಲಿ ನಿಗದಿಪಡಿಸಿದ ಆಯ್ಕೆಯನ್ನು ಚಲಾಯಿಸಲು ಅರ್ಹರಾಗಿರುತ್ತಾರೆ ಎಂದು ಘೋಷಿಸಿತು.

ಇಪಿಎಫ್‌ಒ ಮತ್ತು ಕೇಂದ್ರ ಸರ್ಕಾರ ಇದನ್ನು ನಿರಾಕರಿಸಿವೆ. ಇಪಿಎಫ್‌ನ ಪ್ಯಾರಾ 26 ರ ಅಡಿಯಲ್ಲಿ ಆಯ್ಕೆಯನ್ನು ಪೂರ್ವಾನ್ವಯವಾಗಿ ಚಲಾಯಿಸಲು ಸಾಧ್ಯವಿಲ್ಲ ಎಂದು ಅವು ಪ್ರತಿಪಾದಿಸಿವೆ. ಪ್ರತಿವಾದಿಗಳು, ಅಂದರೆ ವಿವಿಧ ಸಂಸ್ಥೆಗಳ ಪಿಂಚಣಿದಾರರ ಪರವಾಗಿ ಹಾಜರಾದ ವಕೀಲರು ಬೇರೆ ಇದಕ್ಕೆ ವಿರುದ್ಧವಾಗಿ ವಾದಿಸಿದರು. ಶಂಕರನಾರಾಯಣ ಅವರು ಕೂಡ ಇದೇ ವಾದವನ್ನು ಮಂಡಿಸಿದರು.

ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ಪಿಂಚಣಿ ಒಂದೇ ನಿಧಿಯಿಂದ  ಬರುತ್ತದೆ ಮತ್ತು ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿದೆ ಎಂದು ಅವರು ವಾದಿಸಿದರು. ನಿಧಿಯು A ಇಂದ B ಗೆ ಮಾತ್ರ ಹೇಗೆ ಸಾಗಬೇಕು ಎಂದು ಅವರು ಹೇಳಿದರು.

ಇದನ್ನು ಆಲಿಸಿದ ಪೀಠವು, ಆನಂತರ,

"ಆರ್‌ಸಿ ಗುಪ್ತಾ ಪ್ರಕರಣದಲ್ಲಿ ನ್ಯಾಯಮೂರ್ತಿ ಗೊಗೊಯ್ ಅವರ ಅವಲೋಕನ ಪ್ರಕಾರ ಒಂದು ನಿಧಿಯಿಂದ ಇನ್ನೊಂದಕ್ಕೆ (ಹಣದ ಹರಿವು) ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ. ಆದ್ದರಿಂದ, ಇದು ನಿಜವಾಗಿಯೂ ವ್ಯತ್ಯಾಸವನ್ನುಂಟು ಮಾಡುತ್ತದೆಯೇ ಅಥವಾ ಯಾವುದೇ ವ್ಯತ್ಯಾಸವಿಲ್ಲ ಎಂದು ವರ್ಗೀಕರಿಸಬಹುದಾದ ವಿಷಯವೇ? ......  ನಿಧಿಗೆ ಅಗತ್ಯವಿರುವ ಹೂಡಿಕೆಗಳೊಂದಿಗೆ ವ್ಯತ್ಯಾಸವು 52 ಮತ್ತು 26 ಕ್ಕೆಗುರುತಿಸಬಹುದಾದಷ್ಟು ಗುಣಾತ್ಮಕವಾಗಿ ಭಿನ್ನವಾಗಿರುವುದಿಲ್ಲ. ಅದರ ಒಂದೇ ನಿಧಿ, ಅದೇ ಭದ್ರತೆಗಳು, ಅದೇ ರೀತಿಯ ಅನ್ವಯ, ಅದೇ ಬಡ್ಡಿ ಹೊಂದಿರುವ ಭದ್ರತೆಗಳು. ನೀವು ವಿಭಿನ್ನ ಪ್ರಭಾವದ ಸಿದ್ಧಾಂತದಿಂದ ಪ್ರಭಾವಿತರಾಗಬೇಕಾಗಿಲ್ಲ. ಗೊಗೋಯ್ ಅವರ ಅಭಿಪ್ರಾಯದ ಅನ್ವಯ.. .ಎ ಯಿಂದ ಬಿ ವರೆಗೆ ಸಾಗಲು ಮಾಡಲು ಯಾರೋ ನಿರಾಕರಿಸಿದ್ದಾರೆ. ಆ ವರ್ಗದಲ್ಲಿ ಹೆಚ್ಚಿನ ಸಂಖ್ಯೆಯ ಜನರಿದ್ದಾರೆ, ಅಲ್ಲಿದ್ದವರ ಮೇಲೆ ಅದು ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ಹೊರೆಯಾಗುತ್ತದೆ ಎಂಬುವವರ ಹಾಡು. ಆದ್ದರಿಂದ, ವಿಭಿನ್ನ ನೋಟದಿಂದ ನೋಡುವ ಪ್ರಶ್ನೆ ಎಲ್ಲಿದೆ ಅಲ್ಲವೇ?” ಎಂದು ನ್ಯಾಯಾಲಯ ಹೇಳಿತು.

ಆರ್‌ಸಿ ಗುಪ್ತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಲ್ಪ ಹಿನ್ನೆಲೆಯನ್ನು ಉಲ್ಲೇಖಿಸಿದ ನ್ಯಾಯಾಲಯವು, “ಮೊದಲು ಆರ್‌ಸಿ ಗುಪ್ತ ಪ್ರಕರಣ ಬರುತ್ತದೆ. ಅದು ವಿವಿಧ ನ್ಯಾಯಾಲಯಗಳ ತೀರ್ಪುಗಳನ್ನು ಅವಲಂಬಿಸಿದೆ. ಕೇರಳ ಹೈಕೋರ್ಟ್‌ನಿಂದ ವಿಷಯವು ಈ ನ್ಯಾಯಾಲಯದ ಮುಂದೆ ಬಂದಾಗ, ಮೂವರು ನ್ಯಾಯಮೂರ್ತಿಗಳ ಪೀಠವು ಎಸ್‌ಎಲ್‌ಪಿಯನ್ನು ವಜಾಗೊಳಿಸಿತು. ಆದ್ದರಿಂದ ಅವರು ಅದು ಆರ್‌ಸಿ ಗುಪ್ತ ಪ್ರಕರಣದಲ್ಲಿನ ತತ್ವಗಳನ್ನು ದೃಢಪಡಿಸಿತು. ನಂತರ ಮತ್ತೊಂದು ಅವತಾರ. ನ್ಯಾಯಾಲಯವು ಇತರ ವಿಷಯಗಳ ಜೊತೆಗೆ ಮರುಪರಿಶೀಲನಾ ಅರ್ಜಿಯನ್ನು ಪಟ್ಟಿ ಮಾಡಲು ಹೇಳುತ್ತದೆ.. ಯಾವುದೇ ಆದೇಶ ಇಲ್ಲ. ಆದ್ದರಿಂದ, ಇದರ ಪರಿಣಾಮವು ಉದ್ಯೋಗಿಗಳಿಗೆ ಪ್ರಯೋಜನವನ್ನು ನಿರಾಕರಿಸುವ ತೀವ್ರ ಸ್ವರೂಪವನ್ನು ಹೊಂದಿದೆಯೇ? ಎಂಬುದನ್ನು ಈ ವಿಷಯವು ಪರೀಕ್ಷಿಸಬೇಕಾಗಿದೆ. ಪರಿಣಾಮವು ನಗಣ್ಯ. ಇತರರಿಗೂ ಅದೇ ಪ್ರಯೋಜನವನ್ನು ನೀಡಬೇಕು ಎಂಬುದಾಗಿ ನೀವು ಹೇಳುತ್ತಿದ್ದೀರಿ” ಎಂದು ಹೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ವಕೀಲರು, "ಈ ವಾಸ್ತವಿಕ ಅಂಶವು ಪರಿಣಾಮ ಅಷ್ಟೆ. ನಮಗೆ ಸಂಬಂಧಪಟ್ಟಂತೆ, ಆರ್‌ಸಿ ಗುಪ್ತ ಪ್ರಕರಣದ ತೀರ್ಪು ಸರಿಯಾಗಿದೆ ಮತ್ತು ನಮಗೂ ಅನ್ವಯಿಸುತ್ತದೆಎಂದು ಉತ್ತರಿಸಿದರು.

"ಎಂದಿಗೂ ಅರ್ಜಿ ಸಲ್ಲಿಸದ ಯಾರಿಗಾದರೂ ಈಗ ಅವಕಾಶ ಸಿಗುತ್ತದೆ ಎಂದು ಅರ್ಥಮಾಡಿಕೊಳ್ಳಲು ನಮಗೆ ತಿಳಿಸಲಾಗಿದೆ. ಆದ್ದರಿಂದ, ಎಲ್ಲವೂ ಪೂರ್ವಾನ್ವಯವಾಗುತ್ತದೆ.  ಹಿಂದೆ ಯಾವುದೇ ಆಯ್ಕೆಯನ್ನು ಬಳಸಎಷ್ಟು ಉದ್ಯೋಗಿಗಳು ಅವಕಾಶ ಪಡೆಯಲಿದ್ದಾರೆ ಎಂದು ತಿಳಿಯಲು ನಾವು ಬಯಸುತ್ತೇವೆ, ಇವರಲ್ಲಿ ಎಷ್ಟು ಉದ್ಯೋಗಿಗಳ ಈ ವಿನಾಯಿತಿ ಪಡೆದ ವರ್ಗಗಳು. ಈ ಎರಡು ಕೂಡಾ ಅಂಶಗಳು”  ಎಂದೂ  ನ್ಯಾಯಾಲಯವು ಹೇಳಿತು.

"ಆರ್‌ಸಿ ಗುಪ್ತ ಪ್ರಕರಣವು ಸರಿಯಾಗಿದ್ದರೆ, ಆರ್‌ ಸಿ ಗುಪ್ತ ಪ್ರಕರಣವನ್ನು ಅನುಸರಿಸಬೇಕು, ಅದು ಕಾನೂನುಬದ್ಧವಾಗಿದೆ ಎಂಬುದಕ್ಕಾಗಿ ಮಾತ್ರವೇ ಅಲ್ಲ, ಅದನ್ನು ಕಾರ್ಯಗತಗೊಳಿಸಲಾಗಿರುವ ಕಾರಣಕ್ಕಾಗಿ ಕೂಡಾ” ಎಂದು ಶಂಕರನಾರಾಯಣ್‌ ಹೇಳಿದರು..

ಆಯ್ಕೆಯ ಅಂಶ

ಇದಲ್ಲದೆ, ಆರ್‌ಸಿ ಗುಪ್ತ ಪ್ರಕರಣವನ್ನು ಪರಿಗಣಿಸದಿದ್ದರೆ, ಕಾಯಿದೆಯ ಪ್ರಕಾರ ಪಿಂಚಣಿದಾರರು ಆಯ್ಕೆಯನ್ನು ಒಂದು ಹಂತದಲ್ಲಿ ಮಾತ್ರ ಮಾಡಬೇಕಾಗಿತ್ತು. ಅದು ಭವಿಷ್ಯನಿಧಿಗೆ ಸಂಬಂಧಿಸಿದಂತೆ ಮಾತ್ರ ಎಂದು ಅವರು ವಾದಿಸಿದರು.

"ಆರ್‌ಸಿ ಗುಪ್ತ ಪ್ರಕರಣವನ್ನು ಅವಲಂಬಿಸದೆ,  ಸ್ವತಂತ್ರವಾಗಿ, ನಿಲ್ಲುವುದಾದರೆ, ಶಾಸನದ ಅಡಿಯಲ್ಲಿ ನಾವು ಮಾಡಬೇಕಾದ  ಆಯ್ಕೆಯು ಇರುವುದು ಒಂದು ಹಂತದಲ್ಲಿ ಮಾತ್ರ, ಅದು ಭವಿಷ್ಯ ನಿಧಿಗೆ ಸಂಬಂಧಿಸಿದೆ. 11 (3), 11 (4) [ತಿದ್ದುಪಡಿ ತಿದ್ದುಪಡಿ ಯೋಜನಯ ಹಿನ್ನೆಲೆಯಲ್ಲಿ ಇದೆಲ್ಲವನ್ನೂ ಓದಬೇಕುಎಂದು ಅವರು ಹೇಳಿದರು.

"ಹಾಗಾದರೆ, ನೀವು ಹೇಳುವ ಪ್ರಕಾರ ಒಂದು ಹಂತದಲ್ಲಿ ಮಾತ್ರ ಆಯ್ಕೆಯ ಅವಕಾಶ ಇದೆ?” ಪೀಠವು ವಕೀಲರ ವಾದವನ್ನು ಮರುಪ್ರಶ್ನಿಸಿತು.

"26 (6) ಆಯ್ಕೆ. ನಂತರ, ಇದು ʼA ನಿಂದ B ಗೆ ಹಣವನ್ನು ರವಾನೆ ಮಾಡುವ ಪ್ರಶ್ನೆ ಅಷ್ಟೆ”  ಎಂದು ಹಿರಿಯ ವಕೀಲರು ಸ್ಪಷ್ಟಪಡಿಸಿದರು.

"ಎರಡನೇ ಆಯ್ಕೆಯನ್ನು ಕೇಳುವುದು ಮಾನ್ಯವಾಗಿದ್ದರೆ, ಅದರ ಪರಿಣಾಮಗಳು ವೈಪರೀತ್ಯಗಳನ್ನು ಸೃಷ್ಟಿಸುತ್ತವೆ" ಎಂದು ಅವರು ಹೇಳಿದರು.

ಇದರ ಹೊರತಾಗಿ, ಪಿಂಚಣಿದಾರರು ನಿಧಿಗೆ ಕೊಡುಗೆ ನೀಡಿಲ್ಲ ಅಥವಾ ಆಯ್ಕೆಯನ್ನು ಚಲಾಯಿಸಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಶಂಕರನಾರಾಯಣನ್  ವಾದಿಸಿದರು.

"ಇಲ್ಲಿ ನಾವೆಲ್ಲರೂ ಭವಿಷ್ಯನಿಧಿಗೆ ಕೊಡುಗೆ ನೀಡಿದ್ದೇವೆ. ಆದ್ದರಿಂದ,  ನೋಡಿ, ಇಲ್ಲಿ ಬಹಳಷ್ಟು ಜನರು ಕೊಡುಗೆ ನೀಡಿಲ್ಲ ಮತ್ತು ಅವರು ತಮ್ಮ ಆಯ್ಕೆಯನ್ನು ಚಲಾಯಿಸಿಲ್ಲ. ಇಲ್ಲಿ ನಾವು ಆಯ್ಕೆಯನ್ನು ಚಲಾಯಿಸಿದ್ದೇವೆ, ನಾವು ವಾಸ್ತವವಾಗಿ ಕೊಡುಗೆ ನೀಡಿದ್ದೇವೆ. ನಮಗೆ ಸಂಬಂಧಪಟ್ಟಂತೆ ನಾವು ಹಣ ಪಾವತಿ ವಿಚಾರದಲ್ಲಿ ಮಾತ್ರವೇ ವ್ಯವರಿಸುತ್ತಿದ್ದೇವೆ” ಎಂದು ಹೇಳುವುದು ಮೋಸ (ಬೋಗಸ್‌) ಆಗುತ್ತದೆ ಎಂದು ವಕೀಲರು ನುಡಿದರು.

ಪಿಂಚಣಿ ಮೂಲನಿಧಿ ಮುಟ್ಟಿಲ್ಲ

ಇದಕ್ಕೆ ಮುನ್ನ, ಇಪಿಎಫ್‌ಒ ಮಿತಿಗಿಂತ ಹೆಚ್ಚಿನ ಸಂಬಳಕ್ಕೆ ಅನುಗುಣವಾಗಿ ಪಿಂಚಣಿಗೆ ಅವಕಾಶ ನೀಡುವುದು ಸಂಸ್ಥೆಯ ಮೇಲೆ ಹಣಕಾಸಿನ ಹೊರೆಯನ್ನು ಉಂಟು ಮಾಡುತ್ತದೆ ಎಂದು ಹೇಳಿತ್ತು. ನಂತರ, ಸುಪ್ರೀಂ ಕೋರ್ಟ್ ಈ ಬಗ್ಗೆ  ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಿತ್ತು ಮತ್ತು ಹೈಕೋರ್ಟ್ ತೀರ್ಪುಗಳ ಅನುಷ್ಠಾನದ ಮೇಲೆ ಉಂಟಾಗುವ ಆರ್ಥಿಕ ಹೊರೆಯನ್ನು ತೋರಿಸಲು ಸಾಕ್ಷ್ಯ ಸಾಮಗ್ರಿಗಳನ್ನು ನೀಡುವಂತೆ ನಿರ್ದೇಶಿಸಿತ್ತು.

ಇದನ್ನು ಹಿರಿಯ ವಕೀಲರು ವಿರೋಧಿಸಿದರು.

"30 ವರ್ಷಗಳ ನಂತರವೂ ಪಿಂಚಣಿ ಮೂಲನಿಧಿ ಹಾಗೇ ಉಳಿದಿರುವುದಕ್ಕೆ ಕಾರಣ ಏನೆಂದರೆ, ಒಂದನೆಯದಾಗಿ ಹಲವಾರು  ಜನರು ಮೃತರಾಗಿರುವುದು ಮತ್ತು ಎರಡನೆಯದಾಗಿ ಖಾತೆಗಳು ಮತ್ತು ಹಣದ ಮೊತ್ತ ಮೂಲನಿಧಿಗೆ ಬಂದು ಸೇರ್ಪಡೆಯಾಗುತ್ತಲೇ ಇರುವುದು. ಹೀಗಾಗಿಯೇ ನೀವು ಇಂದು ಭವ್ಯವಾದ ಮೂಲನಿಧಿಯನ್ನು ಹೊಂದಿದ್ದೀರಿ. ಆದ್ದರಿಂದ ಇಪಿಎಫ್‌ಒಗೆ ಕೆಲವು ನಿಧಿ ಸಮಸ್ಯೆಗಳಿವೆ ಎಂದು ವಾದಿಸುವುದು ಆಘಾತಕಾರಿ. ಇದು ರಿಲಯನ್ಸ್ನವರು ಬಂದು ನಾವು ಚಿಂದಿಯಾಗಿದ್ದೇವೆ (ಸ್ಕ್ರಾಪ್) ಎಂದು ಹೇಳುವಂತಿದೆ. ದೇಶದ ಎಲ್ಲ ಜನರಲ್ಲಿ ವಾಸ್ತವವನ್ನು ಹೇಳೋಣ.  ಆದರೆ, ಇಪಿಎಫ್‌ಒ ಬಂದು ನಮ್ಮ ಬಳಿ ಹಣವಿಲ್ಲ ಎಂದು ಹೇಳುತ್ತದೆ” ಎಂದು ಶಂಕರನಾರಾಯಣ ನುಡಿದರು.

ಅವರು ಒಮ್ಮೆ ಕೂಡಾ ಮೂಲನಿಧಿಯನ್ನು ಮುಟ್ಟಿಲ್ಲ, ಈ ಎಲ್ಲ ವರ್ಷಗಳಲ್ಲಿ ಎಲ್ಲರಿಗೂ ಸಂಪೂರ್ಣ ಪಾವತಿಯು ನಿಧಿಯ ಮೇಲಿನ ಬಡ್ಡಿಯಿಂದ ಬರುತ್ತಿತ್ತು. ಬಡ್ಡಿಯ ಒಂದು ಭಾಗದಿಂದ. ನೋಡಿ, ವರ್ಷಕ್ಕೆ 6000 ಕೋಟಿ ರೂಪಾಯಿ ಬಡ್ಡಿ ಬರುತ್ತದೆ. ಕೇಂದ್ರೀಯ ಟ್ರಸ್ಟಿಗಳ ಮಂಡಳಿಗೆ ಈ ಪರಿಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ಅರಿವು ಇದ್ದರೂ, ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಂಡಿದೆಎಂದು ಅವರು ಹೇಳಿದರು.

ಶಂಕರನಾರಾಯಣ ಅವರ ಹೊರತಾಗಿ, ಪಿಂಚಣಿದಾರರ ಕಲ್ಯಾಣ ಸೊಸೈಟಿ ಸೇರಿದಂತೆ ಮೂರು ಸಂಘಗಳನ್ನು ಪ್ರತಿನಿಧಿಸುವ ಇನ್ನೊಬ್ಬ ವಕೀಲರು ಪ್ರಾಥಮಿಕವಾಗಿ 2014 ರ ತಿದ್ದುಪಡಿ ಯೋಜನೆ ಮತ್ತು 1952 ರ ಇಪಿಎಫ್ ಯೋಜನೆ 26 (6) ರ ಅಡಿಯಲ್ಲಿ 11 (3) ಗೆ ನಿಬಂಧನೆಗಳ ಬಗ್ಗೆ ಅಹವಾಲು ಸಲ್ಲಿಸಿದರು.

"ನೀವು ಇಪಿಎಫ್ ಸ್ಕೀಮ್, 1952 ರ 26 (6) ಅಡಿಯಲ್ಲಿ ಆಯ್ಕೆಯನ್ನು ಚಲಾಯಿಸಿದರೆ, ನಂತರ 2014 ರ ತಿದ್ದುಪಡಿ ಯೋಜನೆಯ 11 (3) ರ ನಿಬಂಧನೆಯ ಅಡಿಯಲ್ಲಿ ಯಾವುದೇ ಹೆಚ್ಚಿನ ಆಯ್ಕೆಯನ್ನು ಚಲಾಯಿಸುವ ಅಗತ್ಯವಿಲ್ಲ. 26 (6) ಅಡಿಯಲ್ಲಿ ಒಬ್ಬರು ಮಾಡುವ ಆಯ್ಕೆಯ ಅಡಿಯಲ್ಲಿ  11 (3) ರ ಅಡಿಯಲ್ಲಿ ಆಯ್ಕೆಯನ್ನು ಉಪಕ್ರಮಿಸಲಾಗುತ್ತದೆಎಂದು ವಕೀಲರು ಹೇಳಿದರು.

ಇಪಿಎಫ್‌ಒ ಮತ್ತು ಕೇಂದ್ರ ಸರ್ಕಾರ ಮರುಪ್ರತಿವಾದ ಸಲ್ಲಿಸಿದ ಬಳಿಕ ನ್ಯಾಯಾಲಯವು 2022 ಆಗಸ್ಟ್‌ 11ರ ಗುರುವಾರ ವಿಚಾರಣೆಯನ್ನು ಮುಂದುವರೆಸುವುದು.

ಪ್ರಕರಣಇಪಿಎಫ್‌ ಒ ವಿರುದ್ಧ  ಸುನಿಲ್ ಕುಮಾರ್ ಮತ್ತು ಇತರರು.

ಹಿಂದಿನ ವಿಚಾರಣೆಗಳ ವರದಿಗಳಿಗೆ ಕೆಳಗೆ  ಕ್ಲಿಕ್‌  ಮಾಡಿರಿ

ಇಪಿಎಫ್ ಪಿಂಚಣಿ ಪ್ರಕರಣ: ಭವಿಷ್ಯ ನಿಧಿಸದಸ್ಯರು ಇಪಿಎಸ್ ಅಡಿಯಲ್ಲಿ ಸ್ವಯಂಚಾಲಿತವಾಗಿ ಅರ್ಹರಾಗುವುದಿಲ್ಲ

 ಸಬ್ಸಿಡಿಹಣಕಾಸಿನ ಹೊರೆಯ ವಿವರ ತೋರಿಸಿ: ಕೇಂದ್ರಇಪಿಎಫ್‌ಒಗೆ ಸುಪ್ರಿಂ ಕೋರ್ಟ್ ನಿರ್ದೇಶನ

ಇಪಿಎಫ್ ಪಿಂಚಣಿ ಪ್ರಕರಣ : 'ಪಿಂಚಣಿ ನಿಧಿಯಲ್ಲಿ ಕೊರತೆ ಇಲ್ಲ'

ಭವಿಷ್ಯ ನಿಧಿ ಪಿಂಚಣಿ ಪ್ರಕರಣ: ಆಗಸ್ಟ್‌ 10ಕ್ಕೆ ಮುಂದಿನ ವಿಚಾರಣೆ

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಆರ್ಥಿಕ ಸುಸ್ಥಿರತೆ ಪ್ರಶ್ನೆಯೇ ಅಲ್ಲ

No comments:

Advertisement