Sunday, August 14, 2022

ಇಂದಿನ ಇತಿಹಾಸ History Today ಆಗಸ್ಟ್‌ 14

 ಇಂದಿನ ಇತಿಹಾಸ History Today ಆಗಸ್ಟ್‌ 14

2022: ಮುಂಬೈ: ಭಾರತದ ಕೋಟ್ಯಧಿಪತಿ, ‘ಆಕಾಸಾ ಏರ್‌’ವಿಮಾನಯಾನ ಕಂಪೆನಿ ಸ್ಥಾಪಕ, ಷೇರುಪೇಟೆಯ ಹೂಡಿಕೆದಾರ ರಾಕೇಶ್ ಜುಂಝನ್‌ವಾಲಾ ಅವರು 2022 ಆಗಸ್ಟ್‌ 14ರ ಭಾನುವಾರ ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು. ಭಾರತದ ವಾರೆನ್‌ ಬಫೆಟ್‌ ಎಂದೇ ಖ್ಯಾತರಾಗಿದ್ದ ಜುಂಝನ್‌ವಾಲಾ ಅವರು ಭಾರತೀಯ ಮಾರುಕಟ್ಟೆಗಳಲ್ಲಿ ಬಿಗ್‌ ಬುಲ್‌ ಎಂದೂ ಕರೆಯಿಸಿಕೊಳ್ಳುತ್ತಿದ್ದರು. ಫೋರ್ಬ್ಸ್‌ ಪ್ರಕಾರ ಜುಂಝನ್‌ವಾಲಾ ಅವರ ಆಸ್ತಿಯ ಮೌಲ್ಯ ಸುಮಾರು 46 ಸಾವಿರ ಕೋಟಿ ರೂಪಾಯಿಗಳು. 1985ರಲ್ಲಿ ಜುಂಝನ್‌ವಾಲಾ ಅವರು ಕಾಲೇಜು ದಿನಗಳಲ್ಲಿ ಕೇವಲ 5 ಸಾವಿರ ರೂಪಾಯಿ ಬಂಡವಾಳ ಹೂಡುವ ಮೂಲಕ ಷೇರುಪೇಟೆಯ ಪಯಣ ಆರಂಭಿಸಿದ್ದರು. 2018ರ ವೇಳೆಗೆ ಜುಂಝನ್‌ವಾಲಾ ಅವರ ಬಂಡವಾಳವು 11 ಸಾವಿರ ಕೋಟಿ ರೂಪಾಯಿಗಳಿಗೆ ಹಿಗ್ಗಿತ್ತು. ಪ್ರಸ್ತುತ ರಾಷ್ಟ್ರದ 48ನೇ ಶ್ರೀಮಂತ ವ್ಯಕ್ತಿ ಎಂದೆನಿಸಿಕೊಂಡಿದ್ದರು.  ಜೆಟ್‌ ಏರ್‌ವೇಸ್‌ ಮಾಜಿ ಸಿಇಒ ವಿನಯ್‌ ದುಬೆ ಮತ್ತು ಇಂಡಿಗೋ ವಿಮಾನಯಾನ ಸಂಸ್ಥೆ ಮಾಜಿ ಮುಖ್ಯಸ್ಥ ಆದಿತ್ಯ ಘೋಷ್‌ ಅವರ ಜೊತೆ ಸೇರಿ ಆಕಾಸಾ ಏರ್‌ ಆರಂಭಿಸಿದ್ದರು. 2022 ಆಗಸ್ಟ್‌ 7ರಂದು, ಆಕಾಸಾ ಏರ್ ವಿಮಾನಯಾನ ಕಂಪೆನಿಯ ಮೊದಲ ಸೇವೆಯು ಮುಂಬೈ–ಅಹಮದಾಬಾದ್‌ ನಡುವೆ ಆರಂಭವಾಗಿತ್ತು. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ವಿಮಾನ ಸೇವೆಗೆ ವರ್ಚುವಲ್‌ ಆಗಿ ಚಾಲನೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ ಟ್ವೀಟ್‌ ಮಾಡಿ, 'ರಾಕೇಶ್‌ ಜುಂಝನ್‌ವಾಲಾ ಅವರು ಅದಮ್ಯ ವ್ಯಕ್ತಿ. ಅವರ ಸಂಪೂರ್ಣ ಬದುಕು ವಿನೋದ ಮತ್ತು ಗಾಂಭೀರ್ಯತೆ ಕೂಡಿದ್ದು, ಆರ್ಥಿಕ ವಲಯಕ್ಕೆ ಅಳಿಸಲಾಗದ ಕೊಡುಗೆಯನ್ನು ಕೊಟ್ಟು ಹೋಗಿದ್ದಾರೆ. ಭಾರತದ ಪ್ರಗತಿಗೆ ಸದಾ ದೃಢ ಸಂಕಲ್ಪ ಹೊಂದಿದ್ದರು . ಅವರ ಅಗಲಿಕೆ ಬೇಸರವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ಮತ್ತು ಹಿತೈಷಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ' ಎಂದು ಹೇಳಿದರು.

2022: ಮೇವಿಲ್‌(ಅಮೆರಿಕ): ಲೇಖಕ ಸಲ್ಮಾನ್ ರಶ್ದಿ ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್‌ ತೆಗೆಯಲಾಗಿದೆ. ಅವರು ಈಗ ಮಾತನಾಡುತ್ತಿದ್ದಾರೆ ಎಂದು ಷಟೌಕ್ವಾ ಸಂಸ್ಥೆಯ ಅಧ್ಯಕ್ಷರು ಈದಿನ ಹೇಳಿರು. ಪಶ್ಚಿಮ ನ್ಯೂಯಾರ್ಕ್‌ನ ಷಟೌಕ್ವಾ ಸಂಸ್ಥೆಯಲ್ಲಿ 2022 ಆಗಸ್ಟ 12ರ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ದಾಳಿ ನಡೆಸಲಾಗಿತ್ತು. ಅವರನ್ನು ಚಾಕುವಿನಿಂದ ಹಲವು ಬಾರಿ ಇರಿಯಲಾಗಿತ್ತು. ರಕ್ತದ ಮಡುವಿನಲ್ಲಿದ್ದ ರಶ್ದಿ ಅವರನ್ನು ವಾಯುವ್ಯ ಪೆನ್ಸಿಲ್ವೇನಿಯಾದ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಗಿತ್ತು. ನ್ಯೂಜೆರ್ಸಿಯ ಫೇರ್‌ಫೀಲ್ಡ್‌ನ ಹಾದಿ ಮಟರ್‌ (24) ಎಂಬಾತ ನಡೆಸಿದ್ದ ದಾಳಿಯಲ್ಲಿ ರಶ್ದಿ ಅವರ ತೋಳಿನ ನರಗಳು, ಪಿತ್ತಜನಕಾಂಗ ಹಾನಿಗೊಂಡಿತ್ತು. ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರ ಏಜೆಂಟ್‌ ಆ್ಯಂಡ್ರ್ಯೂ ವೈಲಿ ಶುಕ್ರವಾರ ತಿಳಿಸಿದ್ದರು. ಆದರೆ, ಸದ್ಯ ಅವರು ಚೇತರಿಕೆ ಕಂಡಿದ್ದಾರೆ ಎಂದು ಷಟೌಕ್ವಾ ಸಂಸ್ಥೆಯ ಅಧ್ಯಕ್ಷರು ಹೇಳಿದರು. ‘ಸಲ್ಮಾನ್ ರಶ್ದಿ ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ತೆಗೆಯಲಾಗಿದೆ. ಮತ್ತು, ಅವರು ಮಾತನಾಡುತ್ತಿದ್ದಾರೆ! ಅವರು ಗುಣಮುಖರಾಗಲೆಂದು ಷಟೌಕ್ವಾದ ಎಲ್ಲರು ನಿರಂತರವಾಗಿ ಪ್ರಾರ್ಥಿಸುತ್ತಿದ್ದಾರೆ’ ಎಂದು ಸಂಸ್ಥೆಯ ಅಧ್ಯಕ್ಷ ಮೈಕೆಲ್ ಹಿಲ್ ಶನಿವಾರ ರಾತ್ರಿ ಟ್ವೀಟ್‌ ಮಾಡಿ ತಿಳಿಸಿದರು. ರಶ್ದಿ ಅವರ ಏಜೆಂಟ್ ಆಂಡ್ರ್ಯೂ ವೈಲಿ ಕೂಡ ಈ ಮಾಹಿತಿ ಖಚಿತಪಡಿಸಿದರು. ಆದರೆ, ರಶ್ದಿ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದರು. ಇನ್ನೊಂದೆಡೆ, ಸಲ್ಮಾನ್ ರಶ್ದಿ ಅವರ ಮೇಲಿನ ದಾಳಿ ಪೂರ್ವಯೋಜಿತವಾಗಿದೆ. ಅವರ ಮೇಲೆ 10 ಬಾರಿ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದೇನೆ ಎಂದು ವಿಚಾರಣೆ ವೇಳೆ ಆರೋಪಿ ಹಾದಿ ಮಟರ್‌ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದರು. ಸಲ್ಮಾನ್‌ ರಶ್ದಿ ಅವರು ಬರೆದಿದ್ದ ʼಸಟಾನಿಕ್‌ ವರ್ಸಸ್‌ʼ ಕೃತಿ ವಿರುದ್ಧ ಸಿಟ್ಟಿಗೆದ್ದಿದ್ದ ಕಟ್ಟರ್ ಮುಸ್ಲಿಮ್‌ ಮುಖಂಡರು ರಶ್ದಿ ಹತ್ಯೆಗಾಗಿ ದಶಕಗಳ ಹಿಂದೆ ಫತ್ವಾ ಹೊರಡಿಸಿದ್ದರು.

2020: ಜೈಪುರತಮ್ಮ ಪಕ್ಷದ ೧೯ ಭಿನ್ನಮತೀಯ ಶಾಸಕರು ಬಂಡಾಯವೆದ್ದು ಸರ್ಕಾರದ ಉಳಿವಿಗೇ ಹಾಕಿದ್ದ ಬೆದರಿಕೆಯ ಒಂದು ತಿಂಗಳ ನಂತರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು 2020 ಆಗಸ್ಟ್ 14ರ ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದರು. ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಂಡಾಯ ನಾಯಕ ಸಚಿನ್ ಪೈಲಟ್ ಅವರು ಮುಖ್ಯಮಂತ್ರಿ ಗೆಹ್ಲೋಟ್ ಅವರ ನಿವಾಸದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು "ರಾಜಸ್ಥಾನದ ಜನರ ಹಿತದೃಷ್ಟಿಯಿಂದ ಮತ್ತು ಜನರಿಗೆ ನೀಡಿದ ಭರವಸೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿದ್ದೇವೆ ಎಂಬುದಾಗಿ ಘೋಷಿಸಿದ ಒಂದು ದಿನದ ಬಳಿಕ ಸದನದಲ್ಲಿ  ಬಲಾಬಲ ಪರೀಕ್ಷೆ ನಡೆಯಿತುಸದನದಲ್ಲಿ ಪಡೆದಿರುವ  ಗೆಲುವು ಮುಖ್ಯಮಂತ್ರಿ ಗೆಹ್ಲೋಟ್ ಅವರಿಗೆ ಮನೆಗೆ ಮರಳಿದ ಬಂಡುಕೋರರ ಜೊತೆ ಸಂಬಂಧ ಸುಧಾರಣೆಗೆ ಆರು ತಿಂಗಳ ಕಾಲಾವಕಾಶವನ್ನು ನೀಡಿತು. ಗೊತ್ತುವಳಿ ಕುರಿತು ಚರ್ಚೆಯನ್ನು ಪ್ರಾರಂಭಿಸಿದ ಧಾರಿವಾಲ್ಮಧ್ಯಪ್ರದೇಶಮಣಿಪುರ ಮತ್ತು ಗೋವಾ ಸರ್ಕಾರಗಳನ್ನು ಹಣ ಮತ್ತು ಅಧಿಕಾರವನ್ನು ಬಳಸಿಕೊಂಡು "ಉರುಳಿಸಲುಪ್ರಯತ್ನಿಸಕಾಗಿದೆ ಎಂದು ದೂಷಿಸಿದರುಆದರೆ ರಾಜಸ್ಥಾನದಲ್ಲಿ ಇದೇ ರೀತಿಯ ಪ್ರಯತ್ನವು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರುಅಕ್ಬರನನ್ನು ಉಲ್ಲೇಖಿಸಿಮೊಘಲ್ ಚಕ್ರವರ್ತಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಅನ್ವೇಷಣೆಯಲ್ಲಿ ರಾಜಸ್ಥಾನದ ಮೇವಾರದಲ್ಲಿ ಸೋಲನ್ನು ಅನುಭವಿಸಬೇಕಾಯಿತು ಎಂದು ಹೇಳಿದರುಅಂತೆಯೇಅಶೋಕ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿಯ ಪ್ರಯತ್ನಗಳು ಸೋಲಲ್ಪಟ್ಟವು ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿನ್ಯಾಯಾಂಗದ ವಿರುದ್ಧ ನಿರ್ದಿಷ್ಟವಾಗಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐಶರತ್ ಅರವಿಂದ ಬೋಬ್ಡೆ ವಿರುದ್ಧ ಪ್ರಕಟಿಸಿದ ಎರಡು ಅವಹೇಳನಕಾರಿ ಟ್ವೀಟ್ಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತವಕೀಲ ಪ್ರಶಾಂತ್ ಭೂಷಣ್ ಅವರು ಅಪರಾಧಿ ಎಂಬುದಾಗಿ ಸುಪ್ರೀಂ ಕೋರ್ಟ್ 2020 ಆಗಸ್ಟ್ 14ರ ಶುಕ್ರವಾರ ತೀರ್ಪು ನೀಡಿತುನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು  ಅಪರಾಧಕ್ಕಾಗಿ ಭೂಷಣ್ ಅವರಿಗೆ ನೀಡಬೇಕಾದ ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ ೨೦ ರಂದು ನಿರ್ಧರಿಸುವುದಾಗಿ ಹೇಳಿತುನ್ಯಾಯಾಂಗದ ಅವಹೇಳನ ಅಪರಾಧಕ್ಕೆ ಸಮಕಾಲೀನ ವ್ಯಕ್ತಿಗೆ ಆರು ತಿಂಗಳವರೆಗೆ ವಿಸ್ತರಿಸಬಹುದಾದ ಸರಳ ಸೆರೆವಾಸದ ಶಿಕ್ಷೆ ಅಥವಾ ,೦೦೦ ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದುತಮ್ಮ ಟ್ವೀಟ್ಗಳು ನ್ಯಾಯಮೂರ್ತಿಗಳ ವೈಯಕ್ತಿಕ ವರ್ತನೆಗೆ ವಿರುದ್ಧವಾಗಿವೆ ಮತ್ತು ಅವು ನ್ಯಾಯದಾನಕ್ಕೆ ಅಡ್ಡಿ ಉಂಟು ಮಾಡುವುದಿಲ್ಲ ಎಂಬುದಾಗಿ ಪ್ರಶಾಂತ ಭೂಷಣ್ ಅವರು ಸಮರ್ಥಿಸಿಕೊಂಡ ಬಳಿಕ ಆಗಸ್ಟ್ ೫ರಂದು ಪೀಠವು ವಿಷಯಕ್ಕೆ ಸಂಬಂಧಿಸಿದಂತೆ ತನ್ನ ತೀರ್ಪನ್ನು ಕಾಯ್ದಿರಿಸಿತ್ತುಭೂಷಣ್ ಅವರ ಟ್ವೀಟ್ ಗಳ ಬಗ್ಗೆ ಉಲ್ಲೇಖಿಸಿದ್ದ ಸುಪ್ರೀಂಕೋರ್ಟ್ ಇದಕ್ಕೆ ಮುನ್ನ  ಹೇಳಿಕೆಗಳು ಸಾಮಾನ್ಯವಾಗಿ ಸುಪ್ರೀಂಕೋರ್ಟಿನ ಮತ್ತು ನಿರ್ದಿಷ್ಟವಾಗಿ ಮುಖ್ಯ ನ್ಯಾಯಮೂರ್ತಿಯ ಘನತೆ ಮತ್ತು ಅಧಿಕಾರವನ್ನು ಜನರ ಕಣ್ಣಿನಲ್ಲಿ ಕುಗ್ಗಿಸುವುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ ಎಂದು ಹೇಳಿತ್ತು.ವಿಷಯದಲ್ಲಿ ಭೂಷಣ್ ಪರ ಹಾಜರಾಗಿದ್ದ ಹಿರಿಯ ವಕೀಲ ದುಷ್ಯಂತ್ ದವೆ ಅವರು ಎರಡು ಟ್ವೀಟ್ ಗಳು ಸಂಸ್ಥೆಯ ವಿರುದ್ಧವಲ್ಲ ಎಂದು ವಾದಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿಜಗತ್ತನ್ನು ಬಾಧಿಸಿರುವ ಕೊರೋನಾ ಸಂಕಷ್ಟವನ್ನು ಎದುರಿಸಲು ಅರ್ಥ (ಹಣಕಾಸುಕೇಂದ್ರಿತ ಸಹಯೋಗಕ್ಕಿಂತ ಮಾನವ ಕೇಂದ್ರಿತ ಸಹಯೋಗ ಅತ್ಯಂತ ಮುಖ್ಯ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 2020 ಆಗಸ್ಟ್ 14ರ ಶುಕ್ರವಾರ ಹೇಳಿದರು೭೪ನೇ ಸ್ವಾತಂತ್ರ್ಯ ದಿನೋತ್ಸವದ ಮುನ್ನಾದಿನ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ಪ್ರಕೃತಿಯು ಮಾನವರಿಗೆ ಆಧೀನವಾಗಿದೆ ಎಂಬ ಮಿಥ್ಯೆಯನ್ನು ಕಣ್ಣಿಗೆ ಕಾಣದ ವೈರಸ್ ಒಡೆದಿದೆಪ್ರಕೃತಿಯೊಂದಿಗೆ ಸೌಹಾರ್ದವನ್ನು ಆಧರಿಸಿದ ಬದುಕಿನ ಶೈಲಿ ಅಳವಡಿಸಿಕೊಳ್ಳುವ ಮೂಲಕ ಸಮರ್ಪಕ ದಾರಿಯಲ್ಲಿ ಸಾಗಲು ಮನುಷ್ಯರಿಗೆ ಈಗಲೂ ಅವಕಾಶವಿದೆ ಎಂಬುದು ನನ್ನ ನಂಬಿಕೆ ಎಂದು ನುಡಿದರು೨೦೨೦ನೇ ವರ್ಷದಲ್ಲಿ ನಾವೆಲ್ಲರೂ ಅತ್ಯಂತ ಮಹತ್ವದ ಪಾಠಗಳನ್ನು ಕಲಿತಿದ್ದೇವೆಹವಾಮಾನ ಬದಲಾವಣೆಯಂತೆಯೇವಿಶ್ವ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯ ಹಣೆಬರಹವೂ ಪರಸ್ಪರ ಜೋಡಿಕೊಂಡಿದೆ ಎಂಬ ಪ್ರಜ್ಞೆಯನ್ನು  ಸಾಂಕ್ರಾಮಿಕವು ಮೂಡಿಸಿದೆಆದ್ದರಿಂದ ಹಣಕಾಸು ಕೇಂದ್ರಿತ ಸಹಯೋಗಕ್ಕಿಂತ ಮಾನವ ಕೇಂದ್ರಿತ ಸಹಯೋಗ ಮುಖ್ಯ ಎಂದು ನನ್ನ ನಂಬಿಕೆ ಎಂದು ಅವರು ಹೇಳಿದರುಕೊರೋನಾವೈರಸ್ ವಿರುದ್ಧದ ಹೋರಾಟದ ವೇಳೆಯಲ್ಲಿ ಜೀವ ಮತ್ತು ಜೀವನ ಎರಡನ್ನೂ ರಕ್ಷಿಸುವ ಅಗತ್ಯದ ಬಗ್ಗೆ ಗಮನ ಹರಿಸುವುದು ಮುಖ್ಯಹಾಲಿ ಬಿಕ್ಕಟ್ಟುಪ್ರತಿಯೊಬ್ಬನ ಹಿತಾಸಕ್ತಿಮುಖ್ಯವಾಗಿ ರೈತರು ಮತ್ತು ಸಣ್ಣ ಉದ್ಯಮಿಗಳ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಆರ್ಥಿಕತೆಗೆ ಪುನಶ್ಚೇತನ ನೀಡುವ ಸಮರ್ಪಕ ಸುಧಾರಣೆಗಳನ್ನು ತರುವ ಅವಕಾಶವನ್ನು ಒದಗಿಸಿದೆ ಎಂದು ಕೋವಿಂದ್ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಚೆನ್ನೈಕೊರೋನಾವೈರಸ್ ಸೋಂಕಿನ ಬಾಧೆಗೆ ಒಳಗಾಗಿರುವ ಖ್ಯಾತ ಗಾಯಕ  ಎಸ್.ಪಿಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದುಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದ ವರದಿಗಳು 2020 ಆಗಸ್ಟ್ 14ರ ಶುಕ್ರವಾರ ತಿಳಿಸಿದವು. ಬಾಲಸುಬ್ರಹ್ಮಣ್ಯಂ ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯುದಾಖಲಿಸಲಾಗಿದ್ದುಜೀವ ರಕ್ಷಕ ಉಪಕರಣಗಳ ನೆರವಿನಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ಹೇಳಿದವು. ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಚೆನ್ನೈ ಎಂಜಿಎಂ ಆಸ್ಪತ್ರೆಯು ತನ್ನ ಬುಲೆಟಿನ್ನಲ್ಲಿ ತಿಳಿಸಿತು. ‘ಆಗಸ್ಟ್ ೧೩ರ ತಡರಾತ್ರಿ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತುತಜ್ಞ ವೈದ್ಯರ ತಂಡದ ಸಲಹೆ ಮೇರೆಗೆ ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯುಸ್ಥಳಾಂತರಿಸಿ ಚಿಕಿತ್ಸೆ ಮುಂದುವರಿಸಲಾಗಿದೆಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿದೆತಜ್ಞ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಎಂಜಿಎಂ ಬುಲೆಟಿನ್ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 14 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Advertisement