ಮೋದಿ 3.0 ಆಡಳಿತ ಆರಂಭ: ನೆರೆ ರಾಷ್ಟ್ರಗಳಿಂದ ಯಾರು ಬರ್ತಿದ್ದಾರೆ?
ನವದೆಹಲಿ: ಸತತ ಮೂರನೇ ಅವಧಿಗೆ ಪ್ರಧಾನಿಯಾಗಲಿರುವ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನೆರೆಯ ರಾಷ್ಟ್ರಗಳ ಹಲವಾರು ನಾಯಕರನ್ನು ಭಾರತ ಆಹ್ವಾನಿಸಿದೆ. ಸಮಾರಂಭವು 2024 ಭಾನುವಾರ, ಜೂನ್ 9 ರಂದು ಸಂಜೆ 7:15 ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ.
ಇದೇ ವೇಳೆಯಲ್ಲಿ ಮೋದಿಯವರೊಂದಿಗೆ
ಸಚಿವ ಸಂಪುಟದ ಸದಸ್ಯರೂ ತಮ್ಮ ತಮ್ಮ ಅಧಿಕಾರ ಮತ್ತು ಗೌಪ್ಯತೆಯ
ಪ್ರಮಾಣವಚನವನ್ನು ತೆಗೆದುಕೊಳ್ಳಲಿದ್ದಾರೆ.
ವಿದೇಶಾಂಗ ವ್ಯವಹಾರಗಳ
ಸಚಿವಾಲಯದ ಮೂಲಗಳ ಪ್ರಕಾರ, ನೆರೆಯ ರಾಷ್ಟ್ರಗಳ ಹಲವಾರು ನಾಯಕರು ಆಹ್ವಾನವನ್ನು ಸ್ವೀಕರಿಸಿದ್ದಾರೆ ಮತ್ತು
ಸಮಾರಂಭದಲ್ಲಿ ಭಾಗವಹಿಸಲು ಭಾನುವಾರ ನವದೆಹಲಿಗೆ ಆಗಮಿಸಲಿದ್ದಾರೆ.
ಹಾಜರಾತಿ ಖಚಿತಪಡಿಸಿದ
ಮುಖಂಡರು:
ಶ್ರೀಲಂಕಾದ ಅಧ್ಯಕ್ಷ
ಎಚ್.ಇ. ಶ್ರೀ ರಾನಿಲ್
ವಿಕ್ರಮಸಿಂಘೆ
ಮಾಲ್ಡೀವ್ಸ್ ಅಧ್ಯಕ್ಷ
ಎಚ್.ಇ. ಡಾ ಮೊಹಮ್ಮದ್ ಮುಯಿಝು
ಸೆಶೆಲ್ಸ್‌ನ ಉಪಾಧ್ಯಕ್ಷ
ಎಚ್.ಇ. ಶ್ರೀ ಅಹ್ಮದ್ ಅಫೀಫ್
ಬಾಂಗ್ಲಾದೇಶದ ಪ್ರಧಾನಿ
ಎಚ್.ಇ. ಶೇಖ್ ಹಸೀನಾ
ಮಾರಿಷಸ್ ನ ಪ್ರಧಾನ
ಮಂತ್ರಿ ಎಚ್.ಇ. ಶ್ರೀ ಪ್ರವಿಂದ್ ಕುಮಾರ್ ಜುಗ್ನಾಥ್
ನೇಪಾಳದ ಪ್ರಧಾನಿ ಎಚ್.ಇ.
ಶ್ರೀ. ಪುಷ್ಪ ಕಮಲ್ ದಹಾಲ್ ‘ಪ್ರಚಂಡ’
ಭೂತಾನ್ ಪ್ರಧಾನಿ ಎಚ್.ಇ.
ಶ್ರೀ ತ್ಶೆರಿಂಗ್ ಟೋಬ್ಗೇ
ರಾಜಧಾನಿಯಲ್ಲಿ ಕಾರ್ಯಕ್ರಮದ ಸಲುವಾಗಿ
ವ್ಯಾಪಕ ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕಾಂಗ್ರೆಸ್ ಸಂಸದೀಯ ನಾಯಕಿಯಾಗಿ
ಸೋನಿಯಾ
ಈ ಮಧ್ಯೆ, ಶನಿವಾರ ನಡೆದ ಕಾಂಗ್ರೆಸ್
ಪಕ್ಷದ ಸಂಸದೀಯ ಸಭೆಯಲ್ಲಿ ಸೋನಿಯಾ ಗಾಂಧಿ ಅವರನ್ನು ಪಕ್ಷದ ಸಂಸದೀಯ ನಾಯಕಿಯಾಗಿ ಸೋನಿಯಾ ಗಾಂಧಿ ಅವರನ್ನು
ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಇವುಗಳನ್ನೂ ಓದಿ:
No comments:
Post a Comment